ಮತ್ತೆ ರೋಡಿಗಿಳಿಯುತ್ತಾ ನೆಚ್ಚಿನ ಯಮಹಾ RX100?

Published : Jul 16, 2018, 10:08 PM IST
ಮತ್ತೆ ರೋಡಿಗಿಳಿಯುತ್ತಾ ನೆಚ್ಚಿನ ಯಮಹಾ RX100?

ಸಾರಾಂಶ

ಯುವಕರ ನೆಚ್ಚಿನ ಯಮಹ RX100 ಬೈಕ್ ಮತ್ತೆ ರೋಡಿಗಿಳಿಯುತ್ತಾ? ಭಾರತದಲ್ಲಿ ಮತ್ತೆ ಮೋಡಿ ಮಾಡಲು ಯಮಹ ಮೋಟಾರು ಸಂಸ್ಥೆ ತಯಾರಿ ಮಾಡಿಕೊಂಡಿದೆಯಾ? ಇಂತಹ  ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಬೆಂಗಳೂರು(ಜು.16): ಯಮಹಾ RX100 ಈ ಬೈಕ್ ಭಾರತದಲ್ಲಿ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಈಗಲೂ RX100 ಸೌಂಡ್ ಕೇಳಿದರೆ ಸಾಕು ಬೈಕ್ ಪ್ರೀಯರ ಕಿವಿ ನೆಟ್ಟಗಾಗುತ್ತೆ. ಹಲವು ಮೋಟಾರು ಸಂಸ್ಥೆಗಳು ತಮ್ಮ ಹಳೇ ಜನಪ್ರೀಯ ಬೈಕ್ ಹಾಗೂ ಕಾರುಗಳನ್ನ ಆಧುನಿಕ ತಂತ್ರಜ್ಞಾನದೊಂದಿಗೆ ಮತ್ತೆ ಬಿಡುಗಡೆ ಮಾಡಿದೆ. ಆದರೆ ಯಮಹ ಮಾತ್ರ RX100 ಬೈಕ್ ಬಿಡುಗಡೆ ಮಾಡಲೇ ಇಲ್ಲ.

ನೂತನ ಯಮಹ RX100 ಬೈಕ್ ಮತ್ತೆ ರೋಡಿಗಿಳಿಯಲಿದೆ ಅನ್ನೋ ಮಾತುಗಳು ಹಲವು ಬಾರಿ ಕೇಳಿಬಂದಿತ್ತು. ಆದರೆ RX100 ಮಾತ್ರ ಬರಲೇ ಇಲ್ಲ. ಅಷ್ಟಕ್ಕೂ ಯಮಹ ಸಂಸ್ಥೆ RX100 ಬೈಕ್‌ನ್ನ ಮತ್ತೆ ತಯಾರಿಸುತ್ತಾ? ಅನ್ನೋ ಕುತೂಹಲ ಮಾತ್ರ ನಿಲ್ಲಲೇ ಇಲ್ಲ.

ಯಮಹ RX100 ಬೈಕ್ 2 ಸ್ಟ್ರೋಕ್ ಇಂಜಿನ್. ಭಾರತದಲ್ಲಿ 2 ಸ್ಟ್ರೋಕ್ ಇಂಜಿನ್ ಬೈಕ್ ಮಾರಾಟ ನಿಷೇಧಿಸಿದೆ. ಇನ್ನು ಇದೇ ಬೈಕ್‌ನ್ನ 4 ಸ್ಟ್ರೋಕ್ ಇಂಜಿನ್ ಆಗಿ ಪರಿವರ್ತಿಸಲು ಸಾಧ್ಯವಿಲ್ಲ. ಒಂದು ವೇಳೆ 4 ಸ್ಟ್ರೋಕ್ ಇಂಜಿನ್‌ನಲ್ಲಿ ಯಮಹ RX100 ಬೈಕ್ ಬಿಡುಗಡೆ ಮಾಡಿದರೆ, ಮುಖ್ಯವಾಗಿ ಹಳೇ RX100 ಬೈಕ್ ಸೌಂಡ್ ಇರೋದಿಲ್ಲ. 

ಇಂಜಿನ ಗಾತ್ರದಲ್ಲಿ ಬದಲಾವಣೆಯಾಗಲಿದೆ. ವಿನ್ಯಾಸ ಬದಲಾಗಲಿದೆ. RX100 ಇಂಜಿನ್ ಪವರ್ ಬೇಕು ಎಂದರೆ 4 ಸ್ಟ್ರೋಕ್ ಬೈಕ್ ಬೆಲೆ ದುಬಾರಿಯಾಗಲಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಇತರ ಬೈಕ್ ಜೊತೆ ಪೈಪೋಟಿ ನೀಡಲು ಕಷ್ಟವಾಗಲಿದೆ.

ಹಲವು ಕಾರಣಗಳಿಂದ ಯಮಹ RX100 ಬೈಕ್ ಮರು ನಿರ್ಮಾಣ ಸಾಧ್ಯವಿಲ್ಲ.ಹೀಗಾಗಿ ಯಮಹ ಸಂಸ್ಥೆ ಜನಪ್ರೀಯ RX100 ಬೈಕ್ ಮತ್ತೆ ಬಿಡುಗಡೆ ಮಾಡೋ ಚಿಂತನೆ ನಡೆಸಿಲ್ಲ.
 

PREV
click me!