ಲಿಮಿಟೆಡ್ ಎಡಿಶನ್ ಮಾರುತಿ ಸುಜುಕಿ ಬಲೇನೋ ಕಾರು ಬಿಡುಗಡೆ!

By Web DeskFirst Published Sep 25, 2018, 8:01 PM IST
Highlights

ಸಾಲು ಸಾಲು ಹಬ್ಬಕ್ಕೆ ಮಾರುತಿ ಸುಜುಕಿ ಸಂಸ್ಥೆ ತಯಾರಾಗಿದೆ. ಇದಕ್ಕಾಗಿ ಲಿಮಿಟೆಡ್ ಎಡಿಶನ್ ಬಲೇನೋ ಕಾರು ಬಿಡುಗಡೆ ಮಾಡಿದೆ. ಈ ನೂತನ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.

ಬೆಂಗಳೂರು(ಸೆ.25): ಮಾರುತಿ ಸುಜುಕಿ ಸಂಸ್ಥೆಯ ಬಲೇನೋ ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆಗೊಂಡಿದೆ. ಹೆಚ್ಚುವರಿ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಬಲೇನೋ ಮತ್ತೆ ಗ್ರಾಹಕರನ್ನ ಮೋಡಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಲೇನೋ ಕಾರು ಈಗಾಗಲೇ ಜನರ ನೆಚ್ಚಿನ ಹ್ಯಾಚ್‌ಬ್ಯಾಕ್ ಕಾರು ಎಂದೇ ಗುರುತಿಸಿಕೊಂಡಿದೆ. ಮುಂಬರುವ ಹಬ್ಬದ ಪ್ರಯುಕ್ತ ಮಾರುತಿ ಸುಜುಕಿ ಬಲೇನೋ ಲಿಮಿಟೆಡ್ ಎಡಿಶನ್ ಕಾರನ್ನ ಬಿಡುಗಡೆಗೊಳಿಸಿದೆ.

ಲಿಮಿಟೆಡ್ ಎಡಿಶನ್ ಬಲೇನೋ ಕಾರಿನಲ್ಲಿ ಗ್ರೇ ಬಾಡಿ ಕಿಟ್, 3ಡಿ ಫ್ಲೋರ್ ಮ್ಯಾಟ್, ಡ್ಯುಯೆಲ್ ಟೋನ್ ಸೀಟ್ ಕವರ್, ಸ್ಮಾರ್ಟ್ ಕೀ ಫೈಂಡರ್ ಸೇರಿದಂತೆ ಹಲವು ಫೀಚರ್‌ಗಳನ್ನ ಸೇರಿಸಲಾಗಿದೆ.

ಕಾರಿನ ಇಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. 1.2 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಇಂಜಿನ್ ಹಾಗೇ ಮುಂದುವರಿಯಲಿದೆ. 5 ಸ್ವೀಡ್ ಗೇರ್ ಬಾಕ್ಸ್, ಪೆಟ್ರೋಲ್ ವೆರಿಯೆಂಟ್ ಕಾರಿನಲ್ಲಿ ಸಿವಿಟಿ ಆಟೋಮ್ಯಾಟಿಕ್ ಕೂಡ ಲಭ್ಯವಿದೆ.  

ನೂತನ ಲಿಮಿಟೆಡ್ ಎಡಿಶನ್ ಕಾರಿನ ಬೆಲೆ ಮಾತ್ರ ಬಹಿರಂಗ ಪಡಿಸಿಲ್ಲ. ಬಲೇನೋ ಕಾರಿನ ಬೆಲೆ 5.39 ಲಕ್ಷದಿಂದ 8.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ವೆರೆಗಿದೆ.

click me!