ಇಸ್ರೋ ಯೋಜನೆಗೆ ಮೂಗಿನ ಮೇಲೆ ಬೆರಳಿಟ್ಟ ಇತರ ಬಾಹ್ಯಾಕಾಶ ಸಂಸ್ಥೆಗಳು| ಕಸದಿಂದ ರಸ ತೆಗೆಯಲಿರುವ ಇಸ್ರೋ ಯೋಜನೆಗೆ ವಿಶ್ವದ ಮೆಚ್ಚುಗೆ| ಸತ್ತ ರಾಕೆಟ್ ಗಳಿಗೆ ಮರುಜೀವ ನೀಡಲಿರುವ ಇಸ್ರೋ ಯೋಜನೆಗೆ ಮೆಚ್ಚುಗೆ| ನಿರ್ಜಿವ ರಾಕೆಟ್ ಗಳಿಗೆ ಜೀವ ಕೊಡಲು ಇಸ್ರೋ ಸಜ್ಜು| ಹೊಸ ಇತಿಹಾಸ ನಿರ್ಮಿಸಲು ಮುಂದಾದ ಇಸ್ರೋ ಸಂಸ್ಥೆ
ನವದೆಹಲಿ(ಡಿ.13): ವಿಶ್ವದಲ್ಲಿ ಅನೇಕ ಬಾಹ್ಯಾಕಾಶ ಸಂಸ್ಥೆಗಳಿವೆ. ಅವುಗಳಲ್ಲಿ ಅಮೆರಿಕದ ನಾಸಾ ಬಾಹ್ಯಾಕಾಶ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ ಎಂಬುದು ನಿರ್ವಿವಾದ. ಅದರಂತೆ ಯೂರೋಪಿಯನ್ ಸ್ಪೇಸ್ ಏಜೆನ್ಸಿ, ರಷ್ಯನ್ ಸ್ಪೇಸ್ ಏಜೆನ್ಸಿ, ಚೀನಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳೂ ಕೂಡ ಗಮನಾರ್ಹ ಸಾಧನೆ ಮಾಡುತ್ತಿವೆ.
ಆದರೆ ಇವೆಲ್ಲವುಗಳಿಗಿಂತ ಭಾರತದ ಇಸ್ರೋ ಒಂದು ಹೆಜ್ಜೆ ಮುಂದೆ ಇರುತ್ತದೆ. ಮೌನವಾಗಿಯೇ ತನ್ನ ಬಾಹ್ಯಾಕಾಶ ಯೋಜನೆಗಳ ಕುರಿತು ಇಸ್ರೋ ಕಾರ್ಯನಿರತವಾಗಿರುತ್ತದೆ. ವಿಶ್ವದ ಇತರ ಬಾಹ್ಯಾಕಾಶ ಸಂಶೋಧನೆಗಳು ಯೋಚಿಸಲಾರದಂತ ಹಲವು ಹೊಸ ಯೋಜನೆಗಳನ್ನು ಇಸ್ರೋ ಸದಾ ತನ್ನ ಒಡಲಲ್ಲಿ ಇಟ್ಟುಕೊಂಡಿರುತ್ತದೆ.
undefined
ಬಾಹ್ಯಾಕಾಶದ ಕಸ ಎಂದೇ ಪರಿಗಣಿಸಲಾಗುವ ನಿರ್ಜಿವ ರಾಕೆಟ್ ಗಳಿಗೆ ಜೀವ ಕೊಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಧೆ ಮುಂದಾಗಿದ್ದು, ಈ ಮೂಲಕ ಇತಿಹಾಸ ನಿರ್ಮಿಸಲು ಸಜ್ಜಾಗಿದೆ.
ಬಾಹ್ಯಾಕಾಶದ ಕಸವಾಗಿ ಉಳಿಯುವ ಈ ರಾಕೆಟ್ ಭಾಗಕ್ಕೆ ಮರುಜೀವ ಕೊಟ್ಟು ಅದನ್ನು ಪುನಃ ಬಳಸುವ ಹೊಸ ಯೋಜನೆಯೊಂದನ್ನು ಇಸ್ರೋ ಕೈಗೆತ್ತಿಕೊಂಡಿದ್ದು, ಇದರಲ್ಲಿ ಯಶಸ್ವಿಯಾಗುವ ಭರವಸೆ ವ್ಯಕ್ತಪಡಿಸಿದೆ.
ಪ್ರಪಂಚದ ಇತರ ಯಾವುದೇ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಈ ಕುರಿತು ಸಂಶೋಧನೆ ನಡೆಸುತ್ತಿಲ್ಲ. ಆದರೆ ಇಸ್ರೋ ಈ ಕುರಿತು ಯೋಜನೆ ಸಿದ್ದಪಡಿಸುತ್ತಿದೆ ಎಂದು ಅಧ್ಯಕ್ಷ ಕೆ. ಶಿವನ್ ಮಾಹಿತಿ ನೀಡಿದ್ದಾರೆ.
ಪಿಎಸ್ಎಲ್ ವಿ-4 ರಾಕೆಟ್ ಉಡಾವಣೆ ಮಾಡಿದ ನಂತರ ಕೊನೆಯಲ್ಲಿ ಉಳಿಯುವ ಭಾಗವನ್ನು ಪಿಎಸ್4 ಎಂದು ಕರೆಯುತ್ತಾರೆ. ಉಪಗ್ರಹವನ್ನು ಕಕ್ಷೆಯಲ್ಲಿ ಬಿಟ್ಟು ನಂತರ ಈ ಭಾಗವು ಅದೇ ಕಕ್ಷೆಯಲ್ಲಿ ಸಕ್ರಿಯವಾಗಿರುತ್ತದೆ.
ಈ ಭಾಗಕ್ಕೆ ಬ್ಯಾಟರಿ ಹಾಗೂ ಸೋಲಾರ್ ಪ್ಯಾನಲ್ ಗಳನ್ನು ಸೇರಿಸಿ ಮತ್ತೆ ಕಾರ್ಯ ನಿರ್ವಹಿಸುವಂತೆ ಮಾಡುವುದು ಇಸ್ರೋದ ಯೋಜನೆಯಾಗಿದೆ. ರಾಕೆಟ್ ಉಡಾವಣೆಗೆ ತಗಲುವ ವೆಚ್ಛವನ್ನು ಇದರಿಂದ ಕಡಿಮೆ ಮಾಡಬಹುದು ಎಂಬುದು ಇಸ್ರೋ ವಾದವಾಗಿದೆ.
ಒಡಲಲ್ಲಿದೆ ಬೆಂಕಿ, ದಿಗಂತದಲ್ಲಿ ಇಸ್ರೊ ‘ಹಕ್ಕಿ’: ನಭಕ್ಕೆ ಚಿಮ್ಮಿದ ಜಿಸ್ಯಾಟ್-11
ಭಾರತದ ಮೇಲೆ ಕಣ್ಣಿಡಲಿದೆ ‘ಹೈಸಿಸ್’
ಇಸ್ರೋದಿಂದ 9 ದೇಶಗಳ 31 ಉಪಗ್ರಹ ಏಕಕಾಲಕ್ಕೆ ಉಡಾವಣೆ
ಶುಕ್ರನತ್ತ ಇಸ್ರೋ ಚಿತ್ತ: ಪ್ರಯೋಗ ಆಹ್ವಾನ ನೀಡಿದ ಸಂಸ್ಥೆ!