ಸುರಕ್ಷತಾ ಪರೀಕ್ಷೆಯಲ್ಲಿ ರೆನಾಲ್ಡ್ ಕ್ವಿಡ್ ಕಾರಿಗೆ ಸಿಕ್ಕಿದ ಅಂಕ ಎಷ್ಟು ?

First Published Jul 11, 2018, 8:57 PM IST
Highlights

ನೂತನ ಕಾರು ಮಾರುಕಟ್ಟೆ ಪ್ರವೇಶಿಸೋ ಮೊದಲು ಸುರಕ್ಷತಾ ಪರೀಕ್ಷೆ ನಡೆಸಲಾಗುತ್ತೆ. ಈ ಪರೀಕ್ಷೆ ಕಾರಿನ ಸೇಫ್ಟಿ ಕುರಿತು ಸಂಪೂರ್ಣ ಮಾಹಿತಿ ಹೇಳಲಿದೆ. ಭಾರತದಲ್ಲಿ ತಯಾರಿಸಲಾದ ನೂತನ ರೆನಾಲ್ಟ್ ಕ್ವಿಡ್ ಕಾರು, ಸುರಕ್ಷತಾ ಪರೀಕ್ಷೆಯಲ್ಲಿ ಪಡೆದ ಅಂಕವೆಷ್ಟು? ಇಲ್ಲಿದೆ ವಿವರ.

ಬೆಂಗಳೂರು(ಜು.11): ಕಡಿಮೆ ಬೆಲೆ ಹಾಗೂ ಸಣ್ಣ ಕಾರು ವಿಭಾಗದಲ್ಲಿ ರೆನಾಲ್ಟ್ ಕ್ವಿಡ್ ಭಾರತದಲ್ಲಿ ಭಾರಿ ಜನಪ್ರೀಯಗಳಿಸಿದೆ. ಕ್ವಿಡ್ ಕಾರು ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ, ಹಲವು ಭಾರತೀಯರ ಕಾರು ಕನಸು ನನಸಾಗಿತ್ತು.

ಭಾರತದಲ್ಲೇ ತಯಾರಾದ ನೂತನ ರೆನಾಲ್ಟ್ ಕ್ವಿಡ್ ಕಾರು ಇಂಡೋನೇಷಿಯಾ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ಆದರೆ ಮಾರುಕಟ್ಟೆ ಬಿಡುಗಡೆಗೂ ಮುನ್ನ ಇಂಡೋನೇಷಿಯಾದಲ್ಲಿ ರೆನಾಲ್ಟ್ ಕ್ವಿಡ್ ಕಾರನ್ನ ಸುರತಕ್ಷಾ ಪರೀಕ್ಷೆಗೆ ಒಳಪಡಿಸಲಾಗಿದೆ.  ಆದರೆ ಸುರಕ್ಷತೆಯಲ್ಲಿ ರೆನಾಲ್ಟ್ ಕ್ವಿಡ್ ಕಾರು ಶೂನ್ಯ(0) ಸ್ಟಾರ್ ಪಡೆದಿದೆ.

ಸುರಕ್ಷತಾ ಪರೀಕ್ಷೆಯಲ್ಲಿ ಕ್ವಿಡ್ ಪಡೆದಿರೋ ಅಂಕ 24.68. ಈ ಅಂಕ ಹೇಳೋದು ಇಷ್ಟೆ, ಸುರಕ್ಷತೆಯಲ್ಲಿ ರೆನಾಲ್ಟ್ ಕ್ವಿಡ್ ಸಂಪೂರ್ಣ ವಿಫಲ. ಭಾರತದ ರೆನಾಲ್ಟ್ ಕ್ವಿಡ್ ಕಾರಿನಲ್ಲಿ ಯಾವುದೇ ಸುರಕ್ಷತೆ ಇಲ್ಲ ಎಂದು ಕ್ರಾಶ್ ಟೆಸ್ಟ್‌ ಫಲಿತಾಂಶದಿಂದ ಬಹಿರಂಗವಾಗಿದೆ.


 

click me!