ರಾಂಗ್ ಸೈಡ್‌ನಲ್ಲಿ ವಾಹನ ಚಲಾಯಿಸಿದರೆ 6 ತಿಂಗಳು ಜೈಲು!

By Web DeskFirst Published Sep 15, 2018, 3:48 PM IST
Highlights

ಸಂಚಾರ ನಿಯಮ ಉಲ್ಲಂಘಟನೆ ತಡೆಗಟ್ಟಲು ಇದೀಗ ಕಠಿಣ ಶಿಕ್ಷೆ ಜಾರಿಗೊಳಿಸಲಾಗಿದೆ. ರಾಂಗ್ ಸೈಡ್ ಮೂಲಕ ಸವಾರಿ ಮಾಡಿದ 6 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಲಿದ್ದೀರಿ. ಇಲ್ಲಿದೆ ನೂತನ ನಿಯಮದ ಮಾಹಿತಿ.

ಪುಣೆ(ಸೆ.15): ಸಂಚಾರ ನಿಯಮ ಉಲ್ಲಂಘನೆಯನ್ನ ತಡೆಗಟ್ಟಲು ಈಗಾಗಲೇ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನ ಕೈಗೊಳ್ಳಲಾಗಿದೆ. ಇದೀಗ ನಿಯಮ ಉಲ್ಲಂಘಿಸಿ ವಿರುದ್ಧ ದಿಕ್ಕು, ಒನ್ ವೇ ಸೇರಿದಂತೆ ರಾಂಗ್ ಸೈಡ್‌ನಲ್ಲಿ ಚಲಾಯಿಸೋ ಸವಾರರ ಮೇಲೆ ಕ್ರಿಮಿನಲ್ ಕೇಸ್ ಹಾಗೂ 6 ತಿಂಗಳು ಜೈಲು ಶಿಕ್ಷೆ ವಿಧಿಸಲು ಪುಣೆ ಪೊಲೀಸರು ಮುಂದಾಗಿದ್ದಾರೆ.

ಪುಣೆ ಪೊಲೀಸ್ ಕಮೀಶನರ್ ಆರ್.ಕೆ ಪದ್ಮನಾಭನ್ ಇದೀಗ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಪುಣೆಯ ಪಿಂಪ್ರಿ ಹಾಗೂ ಚಿಂಚ್‌ವಾಡ್ ಜಂಕ್ಷನ್‌ಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಸವಾರರು ಸಂಚರಿಸೋ ಕಾರಣ ಅಪಘಾತಗಳು ಸಂಭವಿಸುತ್ತಿದೆ. ಇದನ್ನ ತಡೆಗಟ್ಟಲು ಇದೀಗ ಪುಣೆ ಪೊಲೀಸರು ಮುಂದಾಗಿದ್ದಾರೆ.

ರಾಂಗ್ ಸೈಡ್ ಮೂಲಕ ವಾಹನ ಚಲಾಯಿಸೋ ಸವಾರರ ಮೇಲೆ ಕ್ರಿಮಿನಲ್ ಕೇಸ್ ಹಾಗೂ 6 ತಿಂಗಳು ಜೈಲು ಶಿಕ್ಷೆ ವಿಧಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ರಾಂಗ್ ಸೈಡ್ ಮೂಲಕ ವಾಹನ ಚಲಾಯಿಸೋ ಸವಾರರಿಗೆ ಮೊದಲು ದಂಡ ಹಾಗೂ ಎಚ್ಚರಿಕೆ ನೀಡಲಾಗುತ್ತೆ. ಮತ್ತದೇ ತಪ್ಪು ಮಾಡಿದರೇ ಕ್ರಿಮಿನಲ್ ಕೇಸ್ ಹಾಗೂ ಜೈಲು ಶಿಕ್ಷೆ ಖಚಿತ ಎಂದು ಆರ್.ಕೆ. ಪದ್ಮನಾಭನ್ ಹೇಳಿದ್ದಾರೆ.

ಪಿಂಪ್ರಿ ಹಾಗೂ ಚಿಂಚ್‌ವಾಡ್ ಜಂಕ್ಷನ್‌ಗಳಲ್ಲಿ ಹೆಚ್ಚುವರಿ ಟ್ರಾಫಿಕ್ ಪೊಲೀಸ್ ನಿಯೋಜಿಸಲಾಗಿದೆ. ಈಗಾಗಲೇ ಈ ಭಾಗಗಲ್ಲೇ ಸಂಚಾರ ನಿಯಮ ಉಲ್ಲಂಘನೆ ಕುರಿತು ಮಾಹಿತಿ ಕೂಡ ನೀಡಲಾಗಿದೆ. ಹೀಗಾಗಿ ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆಗೆ ಗುರಿಯಾಬೇಕಾಗುತ್ತೆ ಎಂದು ಪುಣೆ ಪೊಲೀಸ್ ಇಲಾಖೆ ಹೇಳಿದೆ.

click me!