ಸ್ಟೈಲೀಶ್, ಸೂಪರ್ ಕಲರ್- ಎಪ್ರಿಲಿಯಾ SR 150 ಸ್ಕೂಟರ್ ಬಿಡುಗಡೆ

Published : Sep 18, 2018, 05:42 PM ISTUpdated : Sep 19, 2018, 09:29 AM IST
ಸ್ಟೈಲೀಶ್, ಸೂಪರ್ ಕಲರ್- ಎಪ್ರಿಲಿಯಾ SR 150 ಸ್ಕೂಟರ್ ಬಿಡುಗಡೆ

ಸಾರಾಂಶ

ಸ್ಕೂಟರ್ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿರುವ ಎಪ್ರಿಲಿಯಾ ಇದೀಗ ಮೂರು ವೆರಿಯೆಂಟ್‌ಗಳಲ್ಲಿ ಬೈಕ್ ಬಿಡುಗಡೆ ಮಾಡಿದೆ. ವಿನ್ಯಾಸ, ಕಲರ್ ಹಾಗೂ ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಿರುವ ಎಪ್ರಿಲಿಯಾ ಹೆಚ್ಚಿನ ವಿವರ ಇಲ್ಲಿದೆ.

ನವದೆಹಲಿ(ಸೆ.18):  ಪಿಯಾಗೋ ಇಂಡಿಯಾ 2019ರ ಎಪ್ರಿಲಿಯಾ ಸ್ಕೂಟರ್ ಬಿಡುಗಡೆ ಮಾಡಿದೆ. ಈ ಬಾರಿ 3 ವೇರಿಯೆಂಟ್‌ಗಳಲ್ಲಿ ಎಪ್ರಿಲಿಯಾ ಸ್ಕೂಟರ್ ಬಿಡುಗಡೆಯಾಗಿದೆ. ಎಪ್ರಿಲಿಯಾ SR 150, ಎಪ್ರಿಲಿಯಾ SR 150 ಕಾರ್ಬನ್ ಹಾಗೂ ಎಪ್ರಿಲಿಯಾ SR 150 ರೇಸ್  ಬಿಡುಗಡೆಯಾಗಿದೆ.

ಎಪ್ರಿಲಿಯಾ SR 150 ಬೆಲೆ 70,031(ದೆಹಲಿ ಎಕ್ಸ್ ಶೋ ರೂಂ), ಎಪ್ರಿಲಿಯಾ SR 150 ಕಾರ್ಬನ್ ಸ್ಕೂಟರ್‌ಗೆ 73,500 ಹಾಗೂ ಎಪ್ರಿಲಿಯಾ SR 150 ರೇಸ್ ಸ್ಕೂಟರ್ ಬೆಲೆ 80,211 ರೂಪಾಯಿ. 

ಅಡ್ಜಸ್ಟ್ ಶಾಕಾಬ್ಸರ್, ಸೆಮಿ ಡಿಜಿಟಲ್ ಕನ್ಸೋಲ್ ಜೊತೆಗೆ ಆಕರ್ಷಕ ಬಣ್ಣಗಳಲ್ಲಿ ನೂತನ ಎಪ್ರಿಲಿಯಾ ಮಾರುಕಟ್ಟೆ ಪ್ರವೇಶಿಸಿದೆ. ಇಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. 154.8 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್‌ಡ್ ಇಂಜಿನ್ 10.4 ಬಿಹೆಚ್‌ಪಿ ಹಾಗೂ 11.4 ಎಂ ಟಾರ್ಕ್ ಉತ್ವಾದಿಸಲಿದೆ.

PREV
click me!