ವಿಶ್ವ ಮೋಟಾರ್ ಬೈಕ್ ಚಾಂಪಿಯನ್‌ಶಿಪ್ ಗೆದ್ದ ಮಹಿಳಾ ಬೈಕ್ ರೇಸರ್!

By Web DeskFirst Published Oct 2, 2018, 9:36 PM IST
Highlights

ಬೈಕ್ ರೇಸ್‌ಗಳಲ್ಲಿ ಮಹಿಳೆಯರು ಪಾಲ್ಗೊಳ್ಳುವುದೇ ಕಡಿಮೆ. ಆದರೆ ಸ್ಪೇನ್ ಅನಾ ಕರಾಸ್ಕೋ ದಾಖಲೆ ಬರೆದಿದ್ದಾರೆ. ವಿಶ್ವಮೋಟಾರ್ ಚಾಂಪಿಯನ್‌ಶಿಪ್‌ನಲ್ಲಿ ಅನಾ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ.

ಪೋರ್ಚುಗಲ್(ಅ.02): ಮೋಟಾರು ರೇಸ್ ಸ್ಪರ್ಧೆಯಲ್ಲಿ ಸ್ಪೇನ್‌ನ ಅನಾ ಕರಾಸ್ಕೋ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿಶ್ವಚಾಂಪಿಯನ್‌ಶಿಪ್ ಮೋಟಾರ್ ಬೈಕ್ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ವಿಶ್ವದ ಮೊದಲ ಮಹಿಳೆ ಅನ್ನೋ ಹೆಗ್ಗಳಿಕೆಗೆ ಅನಾ ಪಾತ್ರರಾಗಿದ್ದಾರೆ.

 

What a final lap!!!!! 🏆 becomes the 1st woman to win a motorcyle racing World Championship pic.twitter.com/gylvEsFH5L

— WorldSBK (@WorldSBK)

 

ಶ್ವಚಾಂಪಿಯನ್‌ಶಿಪ್ ಮೋಟಾರುಬೈಕ್ ಸ್ಪರ್ಧೆಯಲ್ಲಿ  21 ವರ್ಷದ ಅನಾ ಸಾಧನೆಗೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪುರುಷರ ಪ್ರಾಬಲ್ಯದ ಈ ಮೋಟಾರ್ ರೇಸ್ ಸ್ಪರ್ಧೆಯಲ್ಲಿ ಇದೀಗ ಮಹಿಳೆಯರು ಕೂಡ ಪಾಲ್ಗೊಳ್ಳುತ್ತಿರುವುದೇ ಸಂತಸ ವಿಚಾರ ಎಂದು ಟ್ವಿಟರಿಗರು ಪ್ರಶಂಸಿದ್ದಾರೆ.

ಅಂತಿಮ ಸುತ್ತಿನಲ್ಲಿ ರೇಸ್‌‌ನಲ್ಲಿ 25ನೇ ಸ್ಥಾನದಲ್ಲಿದ್ದ ಅನಾ, 13ನೇ ಸ್ಥಾನಿಯಾಗಿ ಅಂತ್ಯಗೊಳಿಸಿದರು. ಈ ಮೂಲಕ ಪ್ರಶಸ್ತಿ ಗೆದ್ದುಕೊಂಡರು. ತಮ್ಮ ಸಾಧನೆಗೆ ಕುಟುಂಬದಲ ಪ್ರೋತ್ಸಾಹವೇ ಕಾರಣ ಎಂದು ಅನಾ ಹೇಳಿದ್ದಾರೆ.

 

How everyone is asking me for the celebration shirts I leave you here the link where you can get it! Limited edition!😍 https://t.co/N4Q0p3QjYZ pic.twitter.com/agoPCa3xi2

— Ana Carrasco (@AnaCarrasco_22)

 

click me!