ಭಾರತೀಯ ಆಧ್ಯಾತ್ಮಿಕ ಗುರುಗಳಾದ ಗುರುದೇವ್ ಶ್ರೀ ಶ್ರೀ ರವಿಶಂಕರರಿಗೆ ಗಾಂಧಿ ಪೀಸ್ ಪಿಲಿಗ್ರಿಮ್ ಪ್ರಶಸ್ತಿಯನ್ನು ಖ್ಯಾತ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಸೆಂಟರ್ ಫಾರ್ ನಾನ್ ವೈಯೋಲೆಂಟ್ ಚೇಂಜ್‌ನಲ್ಲಿ ಪ್ರದಾನ ಮಾಡಲಾಯಿತು. ಗುರುದೇವರ ಭಾವಚಿತ್ರವನ್ನು, ಅಮೆರಿಕದ ನಾಗರಿಕ ಹಕ್ಕುಗಳ ಚಳುವಳಿಯ ಕೇಂದ್ರವಾದ, ಮೂರ್ ಹೌಸ್ ಕಾಲೇಜಿನಲ್ಲಿರುವ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಛಾಪೆಲ್ ಹಾಲ್ ಫೇಮ್‌ನಲ್ಲಿ ಫೇಮ್ ಹಾಕಲಾಯಿತು.
ಬೆಂಗಳೂರು (ನ.12): ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಸೆಂಟರ್ ಫಾರ್ ನಾನ್ ವೈಯೊಲೆಂಟ್ ಚೇಂಜ್‌ನ ಗಾಂಧಿ ಪ್ರತಿಷ್ಠಾನವು, ಜಾಗತಿಕ ಮಾನವತಾವಾದಿಯಾದ, ಆಧ್ಯಾತ್ಮಿಕ ಗುರುಗಳಾದ ಗುರುದೇವ್ ಶ್ರೀ ಶ್ರೀ ರವಿಶಂಕರರು ಶಾಂತಿ ಹಾಗೂ ಅಹಿಂಸೆಗಾಗಿ ಹೊಂದಿರುವ ಬದ್ಧತೆಯನ್ನು ಗುರುತಿಸಿ, ಅವರಿಗೆ 'ಗಾಂಧಿ ಪೀಸ್ ಪಿಲಿಗ್ರಿಮ್' ಪ್ರಶಸ್ತಿಯನ್ನು ಪ್ರದಾನ ಮಾಡಿತು.
ಈ ಸಮಾರಂಭದಲ್ಲಿ ಗುರುದೇವರನ್ನು ಎಂಎಲ್‌ಕೆ ಕೇಂದ್ರದ ಸೀನಿಯರ್ ಫೆಲೋ ಹಾಗೂ ಡಾ. ಮಾರ್ಟಿನ್ ಲೂಥರ್ ಕಿಂಗ್ ರವರ ಸೋದರಳಿಯರಾದ ಡಾ ಐಸಾಕ್ ನ್ಯೂಟನ್ ಫಾರಿಸ್ ಮತ್ತು ಭಾರತದ ಕಾನ್ಸುಲೇಟ್ ಜೆನರಲ್ ಶ್ರೀಮತಿ ಸ್ವಾತಿ ಕುಲ್ಕಕರ್ಣಿಯವರು ಸ್ವಾಗಿತಿಸಿದರು. ಇದೀಗ ಗುರುದೇವ್ ಶ್ರೀ ಶ್ರೀ ರವಿಶಂಕರರು 'ಐ ಸ್ಟಾಂಡ್ ಫಾರ್ ಪೀಸ್' ಎಂಬ ತಮ್ಮ ಜಾಗತಿಕ ಚಳುವಳಿಯನ್ನು ಯುನೈಟೆಡ್ ಸ್ಟೇಸ್ಟ್ಸ್‌ಗೆ ಹರಡಿದ್ದಾರೆ. ಈಗಾಗಲೇ ಯೂರೋಪ್, ಕೇಂದ್ರ ಅಮೆರಿಕ ಹಾಗೂ ಯುನೈಟೆಡ್ ಸ್ಟೇಸ್ಟ್ಸ್ ನ ಅನೇಕ ಮಿಲಿಯನ್ ಜನರು ಈ ಚಳುವಳಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ಕ್ರೀಡೆಗಳನ್ನು ಯುದ್ಧದ ರೀತಿಯಲ್ಲಿ ಬಿಂಬಿಸಲಾಗುತ್ತದೆ: ರವಿಶಂಕರ್ ಗುರೂಜಿ ಬೇಸರ
ಜಗತ್ತಿನಾದ್ಯಂತ ವಿಭಜಕ ಶಕ್ತಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅನೇಕ ಮಿಲಿಯನ್ ಜನರು ಶಾಂತಿ ಹಾಗೂ ಅಹಿಂಸೆಯ ಪರವಾಗಿ ತಮ್ಮ ದನಿಗೂಡಿಸಿದ್ದಾರೆ. 'ಐ ಸ್ಟಾಂಡ್ ಫಾರ್ ಪೀಸ್'ನ ಪ್ರವಾಸದಲ್ಲಿ ಗುರುದೇವರು ನ್ಯೂ ಜರ್ಸಿ, ನಾರ್ಫ್ಲಾಕ್/ ವರ್ಜೀನಿಯ ಬೀಚ್ ಹಾಗೂ ಮೆಂಫಿಸ್ ಗೆ ತೆರಳಿ ಅನೇಕ ಸಾರ್ವಜನಿಕ ಸಭೆಗಳಲ್ಲಿ ಸಾವಿರಕ್ಕಿಂತಲೂ ಹೆಚ್ಚು ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮೆಂಫಿಸ್‌ನ ರಾಷ್ಟ್ರೀಯ ಸಿವಿಲ್ ರೈಟ್ಸ್ ಸಂಗ್ರಹಾಲಯಕ್ಕೆ ಗುರುದೇವರು ಭೇಟಿ ನೀಡಲಿದ್ದಾರೆ. ಈ ಸಂಗ್ರಹಾಲಯವು ಅಮೆರಿಕದ ಅಹಿಂಸಾತ್ಮಕ ಹಾಗೂ ಸಾಮಾಜಿಕ ಪರಿವರ್ತನೆಯ ಇತಿಹಾಸದ ಪ್ರಮುಖ ಹೆಗ್ಗುರುತಾಗಿದೆ. ಗುರುದೇವರ ಜಾಎತಿಕ 'ಐ ಸ್ಟಾಂಡ್ ಫಾರ್ ಪೀಸ್' ಪ್ರವಾಸವು, ಮುಂದಿನ ವರ್ಷವು , ಖ್ಯಾತ ನ್ಯಾಷನಲ್ ಮಾಲ್ ಆಫ್ ಇನ್ ವಾಷಿಂಗ್ಟನ್ ನಲ್ಲಿ, ಮಾನವತೆಯ ಭವ್ಯ ಉತ್ಸವದೊಡನೆ ಮುಕ್ತಾಯಗೊಳ್ಳಲಿದೆ. ಇದರ ಸ್ಥಳದಲ್ಲಿ 60 ವರ್ಷಗಳ ಹಿಂದೆ ಡಾ. ಕಿಂಗ್‌ರವರು ತಮ್ಮ ಪ್ರಸಿದ್ಧ 'ಐ ಡ್ರೀಮ್' ಭಾಷಣವನ್ನು ನೀಡಿದ್ದರು.
ಶ್ರೀ ಶ್ರೀಗೆ ಅಮೆರಿಕದ ‘ಗ್ಲೋಬಲ್ ಸಿಟಿಜನ್‌ಶಿಪ್ ಅಂಬಾಸಿಡರ್’ ಗೌರವ!
ಗುರುದೇವರು ಮತ್ತೊಮ್ಮೆ ಅದೇ ಸ್ಥಳದಿಂದ ಜಾಗತಿಕ ಶಾಂತಿ ಹಾಗೂ ವೈವಿಧ್ಯತೆಯಲ್ಲಿ ಸಾಮರಸ್ಯದ ಸಂದೇಶವನ್ನು ಕಳುಹಿಸಲಿದ್ದಾರೆ. ಸಮಾಜವು ಹೆಚ್ಚಾಗಿ ವಿಭಜಕವಾಗುತ್ತಿರುವ ಈ ಸಮಯದಲ್ಲಿ, ನಮ್ಮ ವ್ಯತ್ಯಾಸಗಳನ್ನು ಕೇವಲ ಸ್ವೀಕರಿಸುವುದು ಮಾತ್ರವಲ್ಲದೆ, ಅದರ ಉತ್ಸವವನ್ನು ಆಚರಿಸಬೇಕೆಂದು ಎಲ್ಲರಿಗೂ ನೆನಪಿಸುತ್ತಿದ್ದಾರೆ. 'ವೈವಿಧ್ಯತೆಯು ಈ ಸೃಷ್ಟಿಯ ಸೌಂದರ್ಯ ಅದನ್ನು ಸನ್ಮಾನಿಸಬೇಕು, ಮನ್ನಿಸಬೇಕು ಮತ್ತು ಅದನ್ನು ಕೊಂಡಾಡಬೇಕು ಎಂದರು ಗುರುದೇವ್.