ಕೊರೋನಾ ವೈರಸ್ ಭೀತಿ: ಬೆಂಗಳೂರಿನಲ್ಲಿ ಮಾಸ್ಕ್ ಮಾರಾಟ ಜೋರು!

By Suvarna News  |  First Published Feb 2, 2020, 6:03 PM IST

ಬೆಂಗಳೂರಿನಲ್ಲಿ ಮನೆ ಮಾಡಿದ ಕೊರೋನಾ ವೈರಸ್ ಭೀತಿ| ಹಾಟ್ ಕೇಕ್’ನಂತೆ ಮಾರಾಟವಾಗುತ್ತಿರುವ ಮಾಸ್ಕ್| ಮಾಸ್ಕ್ ಖರೀದಿಸಲು ಮೆಡಿಕಲ್ ಸ್ಟೋರ್’ಗೆ ಮುಗಿಬಿದ್ದ ಜನತೆ| ನಗರದಲ್ಲಿ ಕೊರೋನಾ ವೈರಸ್’ನ ಯಾವುದೇ ಕುರುಹು ಇಲ್ಲ|


ಬೆಂಗಳೂರು(ಫೆ.02): ಕೊರೋನಾ ವೈರಸ್ ಭೀತಿ ಬೆಂಗಳೂರಿಗೂ ಕಾಲಿಟ್ಟಿದ್ದು, ವೈರಸ್ ದಾಳಿಯಿಂದ ತಪ್ಪಿಸಿಕೊಳ್ಳಲು ಜನ ಮಾಸ್ಕ್ ಮೊರೆ ಹೋಗುತ್ತಿದ್ದಾರೆ.

ಕೊರೋನಾ ವೈರಸ್ ಭೀತಿಯಿಂದಾಗಿ ನಗರದಲ್ಲಿ ಮಾಸ್ಕ್’ಗಳ ಮಾರಾಟ ಜೋರಾಗಿದ್ದು, ಜನ ಮೆಡಿಕಲ್ ಸ್ಟೋರ್’ನಲ್ಲಿ ಮಾಸ್ಕ್ ಖರಿದೀಸಲು ಮುಗಿ ಬೀಳುತ್ತಿದ್ದಾರೆ.

Tap to resize

Latest Videos

ಚೀನಿ ನಾಗರಿಕರಿಗೆ ತಾತ್ಕಾಲಿಕವಾಗಿ ಆನ್‌ಲೈನ್ ವೀಸಾ ನಿರಾಕರಿಸಿದ ಭಾರತ!

ನಗರದಲ್ಲಿ ಕೊರೋನಾ ವೈರಸ್’ನ ಯಾವುದೇ ಕುರುಹು ಇರದಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಜನ ಮಾಸ್ಕ್ ಖರೀದಿಸುತ್ತಿದ್ದಾರೆ ಎಂದು ಔಷಧ ಮಾರಾಟಗಾರರು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ರೆಸಿಡೆನ್ಸಿ ರೋಡ್’ನಲ್ಲಿ ಮೆಡಿಕಲ್ ಸ್ಟೋರ್ ಇಟ್ಟಿರುವ ಮಹೇಶ್ ಜಿ., ಕೊರೋನಾ ವೈರಸ್ ಭೀತಿಯಿಂದ ಜನ ಹೆಚ್ಚಿನ ಸಂಖ್ಯೆಯಲ್ಲಿ ಮಾಸ್ಕ್ ಖರೀದಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ವುಹಾನ್‌ನಿಂದ ಬಂದ ಭಾರತೀಯರಿಂದ ಆರೋಗ್ಯ ಶಿಬಿರದಲ್ಲಿ ಡ್ಯಾನ್ಸ್!

ಈ ಹಿಂದೆ ಹೆಚ್1ಎನ್1 ವೈರಸ್ ಭೀತಿಯಿಂದ ಬೆಂಗಳೂರಿನ ಜನ ಹೀಗೆ ಹೆಚ್ಚಿನ ಸಂಖ್ಯೆಯಲ್ಲಿ ಮಾಸ್ಕ್ ಖರೀದಿಸಿದ್ದರು ಎನ್ನಲಾಗಿದೆ. 

click me!