ಮಂಗಳೂರು ಹತ್ಯೆ ಪ್ರಕರಣ ದುರಾದೃಷ್ಟಕರ; ಮಾಧುಸ್ವಾಮಿ ಪ್ರತಿಕ್ರಿಯೆ

By Gowthami K  |  First Published Jul 30, 2022, 4:09 PM IST

ಜನಗಳ ಮಧ್ಯೆ ಒಂದು ತಪ್ಪು ಸಂದೇಶ ಇದೆ ಇದನ್ನು ಕೂತು ಸರಿ ಮಾಡಬೇಕು ಮನಸ್ಸುಗಳನ್ನು ತಿಳಿಮಾಡದೇ ಇದ್ದರೆ ಸಾಕಷ್ಟು ತಾಪತ್ರಯಗಳಾಗುತ್ತವೆ ಎಂದು ಮಂಗಳೂರು ಹತ್ಯೆ ಬಗ್ಗೆ ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ.


ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಜುಲೈ 30): ಮಂಗಳೂರು ಹತ್ಯೆ ಪ್ರಕರಣ ದುರಾದೃಷ್ಟಕರ ಘಟನೆ ಎಂದು ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು ಜನಗಳ ಮಧ್ಯೆ ಒಂದು ತಪ್ಪು ಸಂದೇಶ ಇದೆ ಇದನ್ನು ಕೂತು ಸರಿ ಮಾಡಬೇಕು ಮನಸ್ಸುಗಳನ್ನು ತಿಳಿಮಾಡದೇ ಇದ್ದರೆ ಸಾಕಷ್ಟು ತಾಪತ್ರಯಗಳಾಗುತ್ತವೆ. ಈ ವರ್ಷ ಚುನಾವಣೆ ಇರೋದರಿಂದ ಪ್ರವೋಕೇಶನ್ ಜಾಸ್ತಿ ಇದೆ. ಯಾರ್ಯಾರು ಬರ್ತಾರೋ ಏನೆನ್ನೇ ಕಾರಣಕ್ಕೆ ಎತ್ತಿಕಟ್ಟೋತ್ತರೋ ಅದನ್ನು ಸರಿ ಮಾಡೋದಕ್ಕೆ ಸಮಯಬೇಕಾಗಿದೆ. ಬಹಳ ಕೆಟ್ಟದಾಗಿ ಕೊಲೆಗಳು ನಡೆದಿವೆ ನಾವು ಮನವಿ ಮಾಡುತ್ತಿದ್ದೇವೆ. ಯಾರು ಸಾವನ್ನಪ್ಪಿದರು ಯಾರಿಗು ಪ್ರಯೋಜನವಿಲ್ಲ ಎಂದರು. ಪಿಎಪ್ ಐ ಸಂಘಟನೆ ಎಸ್ ಡಿಪಿಐ ಸಂಘಟನೆಗಳ ನಿಷೇಧಕ್ಕೆ ಕಾಂಕ್ರೀಟ್ ಪ್ರೂಪ್ ಬೇಕಾಗುತ್ತದೆ. ಜನಗಳು ಮಾತ‌ನಾಡುತ್ತಾರೆ ಎಂದಾಕ್ಷಣ ಕೋರ್ಟ್ ಮುಂದೆ ಸಾಕ್ಷಿಗಳು ಬೇಕಾಗುತ್ತದೆ. ಎಸ್ ಡಿಪಿಐ, ಪಿಎಪ್ ಐ ಮಾಡಿದ್ದರೆ ಅನುಭವಿಸುತ್ತಾರೆ ಅದರಲ್ಲಿ ದಾಕ್ಷಣ್ಯ ಏನು ಇಲ್ಲ. ಅವರ ವಿಷಯದಲ್ಲಿ ಕಾಂಗ್ರೆಸ್ ಗೂ ಬಿಜೆಪಿ ಪಕ್ಷಕ್ಕೂ  ದಾಕ್ಷಣ್ಯ ಇಲ್ಲ. ಏಕಾಏಕಿ ಯಾರ ಮೇಲು ಆಪಾದನೆ ಮಾಡೋದಕ್ಕೆ ಆಗೋಲ್ಲ. ಈಗಾಗಲೇ ಎನ್ಐಎ  ತನಿಖೆ ವಹಿಸಿದ್ದೇವೆ ಆ ಭಾಗದಲ್ಲಿ ಇಂಟೆಲೆಜನ್ಸಿ ,ಸೆಕ್ಯುರಿಟಿನಾ ಜಾಸ್ತಿ ಮಾಡುತ್ತೇವೆ. ಸರ್ಕಾರದ ನಿರ್ಲಕ್ಷ್ಯದ ಪ್ರಶ್ನೆಯೇ ಇಲ್ಲ ಎಂದರು.

Tap to resize

Latest Videos

ರಾಜಕೀಯಕ್ಕೆ ಕೊಲೆಗಳಾಗುತ್ತಿವೆ ಇದನ್ನ ನಾವು ಹತೋಟಿಗೆ ತಗೆದು ಕೊಳ್ಳಲೇಬೇಕು. ಇದು ನಮ್ಮ ದೌರ್ಭಾಗ್ಯ, ಏನು ಹೇಳ್ಬೇಕೋ ಗೊತ್ತಾಗ್ತ ಇಲ್ಲಾ. ಯಾವ ಸರ್ಕಾರನೂ ಈ ಘಟನೆಯನ್ನ ಸಹಿಸುವುದಿಲ್ಲ. ಜನರ ಮದ್ಯೆ ಕುಳಿತು ಮಾತನಾಡಬೇಕಿದೆ. ಚುನಾವಣೆ ಹತ್ತಿರ ಇರುವುದರಿಂದ ಪ್ರವೊಕೇಷನ್ ಜಾಸ್ತಿ ಇರುತ್ತೆ. ಪ್ರವೀಣ್ ಹತ್ಯೆ ಮಾಡಿದ್ದು ಆತನ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದವರು ಅಂತಾನು ಹೇಳ್ತಾರೆ.

ಬಿಜೆಪಿ ಯುವ ಮೋರ್ಚಾದಿಂದ ಸಾಲು ಸಾಲು ರಾಜೀನಾಮೆ: ನಮಿಗೂ ಬೇಸರವಿದೆ ಆದ್ರೆ ರಾಜ್ಯ ಸರ್ಕಾರದವರಾದ ನಾವು ಎಲ್ಲವನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಸಾದ್ಯವಿಲ್ಲ. ನಾವು ಎಲ್ಲರಿಗೂ ರಕ್ಷಣೆ ಕೊಡ್ಬೇಕು ಎಲ್ರೂ ರಾಜ್ಯದ ಪ್ರಜೆಗಳೆ. ನಮಗೂ ಭಾವನೆಗಳಿವೆ ಆದ್ರೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಲು ಸಾದ್ಯವಿಲ್ಲ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿಲ್ಲ ಮಾಧುಸ್ವಾಮಿ ಸ್ಪಷ್ಟನೆ:
ಕೊಲೆಗಳಾಗಿದ್ದಕ್ಕೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಅಂತ ಹೇಳಲು ಸಾದ್ಯವಿಲ್ಲ ಸಿದ್ದರಾಮಯ್ಯನವರ ಕಾಲದಲ್ಲಿಯೂ 38 ಕೊಲೆಯಾಗಿತ್ತು. ಕೆಲವೇ ಘಟನೆ ಹೊರತುಪಡಿಸಿದ್ರೆ ಕಾಂಗ್ರೆಸ್ ಕಾಲದಲ್ಲಿ ನಡೆದ ಪ್ರತಿಭಟನೆ ಹೋರಾಟ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿಲ್ಲ. ಕೌಂಟರ್ ಮರ್ಡರ್ ಆಗಿದ್ದು ನಾವು ಒಪ್ಪುತ್ತೇವೇ ಕೌಂಟರ್ ಅಟ್ಯಾಕ್ ಆಗಿದ್ದನ್ನು  ತಡೆಗಟ್ಟ ಬಹುದಿತ್ತು. ಯಾರೋ ಏನೋ ಮಾಡಿದ್ರು ಅಂತಾ ಬೇರೆಯವರಿಗೆ ಮಾಡಬಾರದು. ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಅಂತಾ ಬೀಳುವುದು ಒಳ್ಳೆಯದಲ್ಲ. ಸಿದ್ದರಾಮಯ್ಯ ನವರ ಕಾಲದಲ್ಲಿ 38 ಕೊಲೆ ಯಾಗಿತ್ತು ಹಾಗಂತ ಕಾನೂನು ಸುವ್ಯವಸ್ಥೆ ಕುಸಿದಿತ್ತು ಎಂದು ಹೇಳೋಕಾಗುತ್ತಾ. ಸೊಸ್ಯಾಯಿಟಿ ಅಂದ ಮೇಲೆ ಇದೆಲ್ಲಾ ಇರುತ್ತೇ ಆದ್ರೆ 

ಸಿದ್ದರಾಮೋತ್ಸವದ ಬಗ್ಗೆ ಮಾಧುಸ್ವಾಮಿ ಪ್ರತಿಕ್ರಿಯೆ:
ಪಾಲಿಟಿಕ್ಸ್ ನಲ್ಲಿ ರನ್ನಿಂಗ್ ರೇಸ್ ನಲ್ಲಿ ಗೆಲ್ತೀವಿ ಅಂತಾನೆ ಒಡೋದು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅನ್ನೋದು ಅಷ್ಟೇ. ಬದುಕಿರೋರು ನಾವೆಲ್ಲ ನಾಳೆ ಒಳ್ಳೆ ದಿನ ಬರುತ್ತೆ ಅಂತಾನೇ ಕಾಯ್ತ ಇರ್ತೀವಿ. ಕಾಂಗ್ರೆಸ್ ನವರು ಅಧಿಕಾರಕ್ಕೆ ಬರುತ್ತಿವಿ ಅಂತ ಅನ್ಕೊಂಡಿದ್ದಾರೆ.
ಬಿಜೆಪಿಯವರು ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಅಂದು ಕೊಂಡಿದ್ದೀವಿ. ಏನು ಇಲ್ದೇ ಇರೋರು ನಾವು ಅಧಿಕಾರಕ್ಕೆ ಬರುತ್ತೇವೆ ಅಂತ ಅಂದುಕೊಂಡಿದ್ದಾರೆ. ಎಲ್ಲವನ್ನ ಜನ ತೀರ್ಮಾನ ಮಾಡುತ್ತಾರೆ. ನಮ್ಮ ಕೈಯಲ್ಲಿ ಏನು ಇಲ್ಲಾ. ಇದೇ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಷ್ಟೊಂದು ಕೆಲಸ ಮಾಡಿದ್ರು 30 ಸಾವಿರ ಅಂತರದಿಂದ ಸೋತರು ಚಾಮುಂಡೇಶ್ವರಿಯಲ್ಲಿ ನಾವೆಲ್ಲ ಸಾರ್ವಜನಿಕ ವಲಯದಲ್ಲಿ ಇದ್ದೇವೆ. ಸಾರ್ವಜನಿಕರ ಕೈಯಲ್ಲಿ ನಾವು ನೇಕೆಡ್ ಸಿನಿಮಾದವರು ರಾಜಕೀಯದವರು ಜನರು ಹೇಗೆ ತಗೋತಾರೆ ಹಾಗೇ ಹೋಗ್ತೀವಿ

ಏ ನೋಡಪ್ಪ ಈ ಪಾಲಿಟಿಕ್ಸ್ ನಲ್ಲಿ ಎರೆಡು ಮೂರು ಲಕ್ಷ ಜನ ಸೇರಿಸಿ ಬಿಟ್ರೆ ಏನೋ ಆಗ್ಬಿಡುತ್ತೆ ಅನ್ನೋ ಕಾಲ ಹೋಯ್ತು. ಉತ್ಸವಗಳು ಜನ ಸೇರಿಸೋದು ಎಲ್ಲಾ ಕಾಮನ್. ಕೆಜೆಪಿಗೆ ಹೋದವರು ನಾವೆಲ್ಲ, ಯಡಿಯೂರಪ್ಪನವರ ಜೊತೆ ಹಾವೇರಿಯಲ್ಲಿ ಸಮಾವೇಶ ಮಾಡಿದ್ವಿ ಆಗ ಬಂದ ಜನರನ್ನ ನೋಡಿ ನಾವು ಖುಷಿಯಾಗಿದ್ವಿ. ಇನ್ನು ನಮ್ಮ ಎದುರು ಯಾರು ಇಲ್ವೇ ಇಲ್ಲ ಅಂತ ಅನ್ಕೊಂಡಿದ್ವಿ. 11 ಲಕ್ಷ ಜನ ಹಾವೇರಿ ಸಮಾವೇಶದಲ್ಲಿ ಭಾಗಿಯಾಗಿದ್ರು.  ಸಣ್ಣದಾಗಿ ಪಕ್ಷ ಕಟ್ಟೋಕೆ ಹೋದವರು ಆ ಜನ ನೋಡಿ 224 ಕ್ಷೇತ್ರದಲ್ಲಿಯೂ ನಿಲ್ಲೊದಕ್ಕೆ ತಯಾರಾದ್ವಿ ಆದ್ರೆ ಗೆದ್ದಿದ್ದು ಎಷ್ಟು ಸ್ಥಾನ..? ಜನಾ ಆಗ ಸಮಾವೇಶ ಮಾಡಿದ ಹಾವೇರಿಯಲ್ಲೇ ನಮ್ಮನ್ನ ಸೋಲಿಸಿದ್ರು.

ಪ್ರವೀಣ್‌ ನೆಟ್ಟಾರು ಹತ್ಯೆಯಿಂದ ಭುಗಿಲೆದ್ದ ಆಕ್ರೋಶ; ಬಿಜೆಪಿ ಕಾರ್ಯಕರ್ತರು ಬೇರೆ ಪಕ್ಷಗಳಿಗೆ ಶಿಫ್ಟ್ ಆಗ್ತಾರಾ?

ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಮಾಡಿದ್ರೆ ಗೆಲ್ಲೊಕೆ ಸಾದ್ಯಾನ?
ನಾವು ದೊಡ್ಡಬಳ್ಳಾಪುರದಲ್ಲಿ ನಾವೇಕೆ ಸಮಾವೇಶ ಮಾಡೋಕೆ ಹೊರಟಿದ್ದು ಹೇಳಿ ಪಕ್ಷ ಸಂಘಟನೆ ಮಾಡುವ ಸಲುವಾಗಿಯೇ ನಾವು ಅಲ್ಲಿ ಕಾರ್ಯಕ್ರಮ ಹಮ್ಮಿ ಕೊಂಡಿದ್ವಿ. ಚುನಾವಣೆಯ ಹಿಂದಿನ ಮೂರು ದಿನವೇ ಅಂತಿಮ ಮತದಾನದ ಮೂರು ದಿನ ಹಿಂದೆ ಇರೋದೆ ನಿಜವಾದ ಆಟವಷ್ಟೇ. ಚುನಾವಣೆನಾ ಸುಧಾರಣೆ ಮಾಡೋಕೆ ಸಾದ್ಯನೇ ಇಲ್ಲಾ ಎಂದು ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

PRAVEEN NETTARU MURDER CASE; ಕೇರಳದಲ್ಲಿ ಮೂರನೇ ವ್ಯಕ್ತಿ ಬಂಧನ

ಮುಖ್ಯಮಂತ್ರಿ ಗಳು ಯುಪಿ ಮಾದರಿ ಬಗ್ಗೆ ಮಾತನಾಡಿದಾಗ ನಾನು ಇದ್ದೆ ಅವರ ತಲೆಯಲ್ಲಿ ಯುಪಿ ಮಾದರಿ ಬಗ್ಗೆ ಯಾವುದು ಇರಲಿಲ್ಲ. ಯುಪಿನೇ ಬೇರೆ ಕರ್ನಾಟಕ ಬೇರೆ ಎಂದು ಸಿಎಂ ಹೇಳಿದ್ದರು. ಅನಿವಾರ್ಯ ಆದ್ರೆ ಅದನ್ನು ಮಾಡಬೇಕಾಗುತ್ತದೆ ಎಂದು ಹೇಳಿದ್ದರು. ನೀವು ಎಲ್ಲದನ್ನು ಬಿಟ್ಟು ಅದೊಂದನ್ನೆ ಹೈಲೆಟ್ ಮಾಡಿದ್ರಿ. ಪಾಸಿಲ್ ಹತ್ಯೆಯಾದಾಗ ಸಿಎಂ ಹೋಗಲಿಲ್ಲ ಎಂಬ ಬಗ್ಗೆ ವಿರೋಧ ಪಕ್ಷದ ನಾಯಕರು ಮಾತನಾಡಿದ್ದಾರೆ ಚೀಪ್ ಮಿನಿಸ್ಟರ್  ಮಂಗಳೂರು ಏರ್ ಪೋರ್ಟ್ ನಲ್ಲಿದ್ದಾಗ ಪಾಸಿಲ್ ಹತ್ಯೆ ಘಟನೆ ಮಾಹಿತಿ ಬಂದಿದೆ. ಮಂಗಳೂರಿನಿಂದ 25 ಕಿ ಮೀ ದೂರದಲ್ಲಿ ಇದ್ದರು  ಆ ಕಾರಣದಿಂದ ಚೀಪ್ ಮಿನಿಸ್ಟರ್ ಹೋಗಲಿಲ್ಲ ಚೀಪ್ ಮಿನಿಸ್ಟರ್  ಇದ್ದು ಹೋಗದಿರುವುದಕ್ಕೆ ಇದು ಕಾರಣ.

click me!