Praveen Nettaru Murder Case; ಕೇರಳದಲ್ಲಿ ಮೂರನೇ ವ್ಯಕ್ತಿ ಬಂಧನ
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಮೂರನೇ ವ್ಯಕ್ತಿಯನ್ನು ಬಂಧಿಸಲಾಗಿದೆ. ಈಗಾಗಲೇ ಘಟನೆಗೆ ಸಂಬಂಧಿಸಿ ಝಾಕಿರ್ ಮತ್ತು ಶಫೀಕ್ ಎಂಬ ಇಬ್ಬರನ್ನು ಬಂಧಿಸಲಾಗಿದೆ.
ಬೆಂಗಳೂರು (ಜು.30): ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವನನ್ನು ಬಂಧಿಸಲಾಗಿದೆ. ಕೇರಳದ ಕಣ್ಣೂರಿನ ತಲಸೇರಿಯಲ್ಲಿ ಓರ್ವ ವ್ಯಕ್ತಿಯನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರವೀಣ್ ಹತ್ಯೆಯಲ್ಲಿ ಭಾಗಿಯಾಗಿರುವ ಅನುಮಾನದ ಮೇಲೆ ವಶಕ್ಕೆ ಪಡೆಯಲಾಗಿದೆ. ಶಂಕಿತ ವ್ಯಕ್ತಿ ತಲಸೇರಿಯಲ್ಲಿ ಚಿಕಿನ್ ಸೆಂಟರ್ ಅಂಗಡಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಸದ್ಯ ಶಂಕಿತ ವ್ಯಕ್ತಿಯನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಸಂಬಂಧಿಸಿ ಈಗಾಗಲೇ ಝಾಕಿರ್ ಮತ್ತು ಶಫೀಕ್ ಎಂಬವರನ್ನು ಬಂಧಿಸಲಾಗಿದ್ದು, ಕೇರಳ ನಂಟು ಹೊಂದಿರುವ ಬಗ್ಗೆ ವಿಚಾರಣೆ ನಡೆಸಲಾಗಿತ್ತು. ಈವರೆಗೆ ಮೂರು ಜನರ ಬಂಧನವಾದಂತಾಗಿದೆ. ಇನ್ನು ಬಂಧಿತ ಝಾಕಿರ್ ಮತ್ತು ಶಫೀಕ್ ಅವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಹಂತಕರನ್ನು ಪೊಲೀಸ್ ಕಸ್ಟಡಿಗೆ ವಹಿಸಿದೆ. ಇನ್ನು ಹತ್ಯೆ ಪ್ರಕರಣವನ್ನು ಸರಕಾರ ಮತ್ತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, 20 ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಲಾಗಿದೆ. ಜೊತೆಗೆ ಬೆಳ್ಳಾರೆ ಸಮೀಪದಲ್ಲರುವ ಎಲ್ಲಾ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿ ಶಂಕಿತರ ಚಲನವಲನಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದೆ.
ಎರಡು ತಿಂಗಳಿಂದ ಪ್ರವೀಣ್ ಹತ್ಯೆಗೆ ಪ್ಲಾನ್? ಇನ್ನು ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಝಾಕಿರ್ ಹಾಗೂ ಶಫಿಕ್ ಕಳೆದ ಎರಡು ತಿಂಗಳು ಕೆವಲ ವಾಟ್ಸ್ ಪ್ ಕಾಲ್ ನಲ್ಲೆ ಮಾತನಾಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಬೆಳ್ಳಾರೆ ಪೊಲೀಸರು ವಾಟ್ಸಾಪ್ ಕಾಲ್ ಹಿಂದೆ ಬಿದ್ದಿದ್ದು, ಕಾಲ್ ಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ವಾಟ್ಸಾಪ್ ನಂಬರ್ ಗಳು ಯಾವುವು? ವಾಟ್ಸಾಪ್ ಕಾಲ್ ಗಳು ಎಲ್ಲಿಂದ ಬಂದಿವೆ? ವಾಟ್ಸಾಪ್ ಕಾಲ್ ಗಳನ್ನು ಯಾರು ಮಾಡಿದ್ದು? ಎಂದೆಲ್ಲ ಟವರ್ ಲೋಕೇಶನ್ ಆಧಾರಿಸಿ ನಂಬರ್ ಹಾಗೂ ಸ್ಥಳಗಳನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಇವೆಲ್ಲದರ ನಡುವೆ ಎರಡು ತಿಂಗಳಿಂದ ಪ್ರವೀಣ್ ಹತ್ಯೆಗೆ ಪ್ಲಾನ್ ಮಾಡಿದ್ರಾ ಹಂತಕರು ಎಂಬ ಶಂಕೆ ವ್ಯಕ್ತವಾಗಿದೆ.
ಬೆದರಿಕೆ ಕರೆ ಬಂದಿದ್ದ ಬಗ್ಗೆ ಹೇಳಿಕೊಂಡಿದ್ದ ಪ್ರವೀಣ್: ಒಂದು ತಿಂಗಳಿಂದ ಬೆದರಿಕೆ ಕರೆ ಬಂದಿತ್ತು ಎಂದು ಬೆಳ್ಳಾರೆ ಠಾಣೆ ಸಿಬ್ಬಂದಿ ಒಬ್ಬರಿಗೆ ಮೌಖಿಕವಾಗಿ ಪ್ರವೀಣ್ ಹೇಳಿದ್ದರು ಈ ಹಿನ್ನೆಲೆಯಲ್ಲಿ ಪ್ರವೀಣ್. ಅವರ ಡಿವಿಆರ್ ಕೂಡ ಪರಿಶೀಲನೆ ನಡೆಸಲಾಗುತ್ತಿದ್ದು, ಆ ಸಿಬ್ಬಂದಿ ಯಾರು? ಪ್ರವೀಣ್ ಏನು ಹೇಳಿದ್ರೂ ಅನ್ನೋದನ್ನ ಖಾಕಿ ಪಡೆ ಕಂಡು ಹಿಡಿಯುತ್ತಿದೆ. ಅಲ್ಲದೇ ಕರೆ ಬಂದಿದ್ದ ನಂಬರ್ ಐಡೆಂಟಿಫಿಕೇಶನ್ ಗೆ ಪೊಲೀಸರು ಮುಂದಾಗಿದ್ದಾರೆ.