Jain monk murder case: ಎದೆ ಬಡಿದುಕೊಂಡು ಅತ್ತಿದ್ದ ಮುನಿ ಹಂತಕ ಮಾಳಿ!

By Kannadaprabha News  |  First Published Jul 17, 2023, 4:39 AM IST

ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದ ಆರೋಪಿ ಹತ್ಯೆ ಗೈದಿದ್ದಲ್ಲದೇ ಪ್ರಕರಣದ ಹಾಗೂ ಪೊಲೀಸರ ದಾರಿ ತಪ್ಪಿಸಲು ತಾನೇ ಕಥೆ ಕಟ್ಟಿದ್ದ. ಕೊನೆಗೆ ಪೊಲೀಸರ ಚಾಣಾಕ್ಷ ಕಾರ್ಯಾಚರಣೆಯಿಂದಾಗಿ ಖಾಕಿ ಖೆಡ್ಡಾಗೆ ಬಿದ್ದಿದ್ದಾನೆ.


ಜಗದೀಶ ವಿರಕ್ತಮಠ

 ಬೆಳಗಾವಿ (ಜು.17) :  ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದ ಆರೋಪಿ ಹತ್ಯೆ ಗೈದಿದ್ದಲ್ಲದೇ ಪ್ರಕರಣದ ಹಾಗೂ ಪೊಲೀಸರ ದಾರಿ ತಪ್ಪಿಸಲು ತಾನೇ ಕಥೆ ಕಟ್ಟಿದ್ದ. ಕೊನೆಗೆ ಪೊಲೀಸರ ಚಾಣಾಕ್ಷ ಕಾರ್ಯಾಚರಣೆಯಿಂದಾಗಿ ಖಾಕಿ ಖೆಡ್ಡಾಗೆ ಬಿದ್ದಿದ್ದಾನೆ.

Tap to resize

Latest Videos

ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಗೈದ ಪ್ರಮುಖ ಆರೋಪಿ ನಾರಾಯಣ ಮಾಳಿ ಪೊಲೀಸರ ಹಾಗೂ ಭಕ್ತರ ದಾರಿ ತಪ್ಪಿಸಲೆಂದು ಮುಗ್ಧನಂತೆ ವರ್ತಿಸಿದ್ದ. ಪ್ರಕರಣದ ಬಗ್ಗೆ ತನೆಗೇನೂ ಗೊತ್ತಿಲ್ಲ ಎಂಬಂತೆ ಆಶ್ರಮಕ್ಕೆ ಬಂದ ಭಕ್ತರು, ಪೊಲೀಸರೆದುರೇ ಯಾರಿಗೂ ಅನುಮಾನ ಬಾರದಂತೆ ಓಡಾಡಿಕೊಂಡಿದ್ದ.

ಜೈನ ಮುನಿ ಹಂತಕರಿಗೆ ಪೊಲೀಸರಿಂದ ಫುಲ್‌ ಗ್ರಿಲ್‌: ವಿಚಾರಣೆ ವೇಳೆ ಖಾಕಿ ದಿಕ್ಕು ತಪ್ಪಿಸಲು ಯತ್ನ!

ನಂದಿ ಮಹಾರಾಜರು ನಾಪತ್ತೆಯಾಗಿದ್ದಾರೆ ಎಂಬ ಭಾವನೆ ಭಕ್ತರಲ್ಲಿ ಇತ್ತು. ಆದರೆ, ಪೊಲೀಸರು ತಕ್ಷಣವೇ ತನಿಖೆ ಚುರುಕುಗೊಳಿಸಿ ಜೈನಮುನಿ ಹುಡುಕಾಟದಲ್ಲಿ ತೋಡಗಿದ್ದರು. ಆಶ್ರಮ ಮತ್ತು ಕಾಮಕುಮಾರರೊಂದಿಗೆ ಹೆಚ್ಚು ಒಡನಾಟ ಹೊಂದಿದ್ದವರನ್ನು, ಆಪ್ತರ ವಿಚಾರಣೆ ನಡೆಸತೊಡಗಿದ್ದರು.

ಇತ್ತ, ಆರೋಪಿ ನಾರಾಯಣ ಮಾಳಿ ಭಕ್ತರೊಂದಿಗೆ ಸೇರಿ ತಾನೂ ಮೊಸಳೆ ಕಣ್ಣೀರು ಇಡತೊಡಗಿದ್ದ. ಅಲ್ಲದೇ, ಎದೆ ಬಡಿದುಕೊಂಡು ಗೋಳಾಡತೊಡಗಿದ್ದ. ಕೆಲವರು ಈತನನ್ನು ಸಂತೈಸುವುದರಲ್ಲೇ ಹೈರಾಣಾಗಿದ್ದರು. ಮಹಾರಾಜದೊಂದಿಗೆ ಹೆಚ್ಚಿನ ಒಡನಾಟ ಹೊಂದಿದ್ದರಿಂದ ಸಹಜವಾಗಿ ದುಃಖಿತನಾಗಿದ್ದಾನೆ ಎಂದು ಯಾರಿಗೂ ಈತನ ಮೇಲೆ ಅನುಮಾನ ಮೂಡಲೇ ಇಲ್ಲ.

ಹೀಗೆ ಆಕ್ರಂದನದಲ್ಲಿ ತೊಡಗಿದ್ದಾಗ ತನಗೇ ಗೊತ್ತಿಲ್ಲದಂತೆ ಮಹಾರಾಜರ ಹತ್ಯೆ ಹಾಗೂ ನಾಪತ್ತೆ ಬಗ್ಗೆ ತನ್ನ ಮಾತುಗಳಲ್ಲೇ ಕೆಲ ಸುಳಿವು ಬಿಟ್ಟು ಕೊಡುತ್ತಲೇ ಹೋಗಿದ್ದ. ಇದಕ್ಕೆ ಪೂರಕ ಎಂಬಂತೆ ನಾರಾಯಣ ಮಾಳಿ, ಹಸನಸಾಬ್‌ ದಲಾಯತ್‌ ಸಂಜೆ ವೇಳೆ ಆಶ್ರಮಕ್ಕೆ ಬಂದಿದ್ದರ ಬಗ್ಗೆ ಆಶ್ರಮದ ಸೇವಕಿ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಆದರೆ, ಏಕಾಏಕಿ ಆಶ್ರಮದೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿ ಮೇಲೆ ಅನುಮಾನ ಪಡಬಾರದು ಎಂದುಕೊಂಡ ಪೊಲೀಸರು ಹಂತಕನೇ ಕೊಟ್ಟಸುಳಿವಿನಿಂದ ತಕ್ಷಣ ಭಕ್ತರಿಗೂ ಗೊತ್ತಾಗದಂತೆ ಆತನನ್ನು ವಶಕ್ಕೆ ಪಡೆದು ತಮ್ಮದೇ ರೀತಿಯಲ್ಲಿ ಡ್ರಿಲ್‌ ಮಾಡಿದ್ದಾರೆ.

ವಿಚಾರಣೆ ವೇಳೆ, ಜೈನಮುನಿ ಹತ್ಯೆ ಬಾಯ್ಬಿಟ್ಟಿದ್ದಾನೆ ನಾರಾಯಣ ಮಾಳಿ. ಹತ್ಯೆಗೆ ಹಸನಸಾಬ್‌ ದಲಾಯತ ಸಹಕಾರ ನೀಡಿರುವುದು ಬೆಳಕಿಗೆ ಬಂದಿದೆ. ಆತ ಲಾರಿ ಮೇಲೆ ಹೋಗಿದ್ದನ್ನು ತಿಳಿದು ಮರಳಿ ಬರುವವರೆಗೂ ಖೆಡ್ಡಾ ತೋಡಿ ಕಾದು ಕುಳಿತ ಪೊಲೀಸರು, ಕೊನೆಗೆ ಆತನನ್ನೂ ವಶಕ್ಕೆ ಪಡೆದು ವಿಚಾರಣೆ ಶುರು ಮಾಡಿದ್ದಾರೆ. ಈ ವೇಳೆ ಜೈನಮುನಿ ಮೃತದೇಹವನ್ನು ತುಂಡರಿಸಿ ಬೋರವೆಲ್‌ನಲ್ಲಿ ಹಾಕಿದ್ದಾಗಿ ಮಾಹಿತಿ ನೀಡಿದ್ದಾರೆ.

ಪ್ರಕರಣದ ಹಿಂದೆ ಆಗಿದ್ದೇನು?

ಜು.5ರಂದು ಸಂಜೆ ನಾರಾಯಣ ಮಾಳಿ ನಂದಿ ಪರ್ವತ ಆಶ್ರಮಕ್ಕೆ ಆಗಮಿಸಿದ್ದಾನೆ. ಈ ವೇಳೆ ಆಶ್ರಮದ ಪಕ್ಕದಲ್ಲಿರುವ ಜಮೀನಿನಲ್ಲಿ ಪೈಪ್‌ ಜೋಡಿಸುವುದಾಗಿ ಮಹಾರಾಜರ ಸೇವಕಿಗೆ ಹೇಳಿ, ಕೆಲಸ ಮಾಡಿದಂತೆ ನಾಟಕವಾಡಿದ್ದಾನೆ. ಅಷ್ಟರಲ್ಲಿ ಸಮಯವಾಗಿದ್ದರಿಂದ ಸೇವಕಿ ಆಶ್ರಮದಿಂದ ಮನೆಗೆ ಹೋಗಿದ್ದಾಳೆ.

ಮೊದಲೇ ಪ್ಲ್ಯಾನ್‌ ಮಾಡಿಕೊಂಡು ಆಶ್ರಮಕ್ಕೆ ಬಂದಿದ್ದ ನಾರಾಯಣ ಮಾಳಿ, ಆಶ್ರಮದ ಒಳಗೆ ಹೋಗಿ ಮುನಿ ಕಾಮಕುಮಾರ ನಂದಿ ಮಹಾರಾಜರು ವಿದ್ಯುತ್‌ ತಗುಲಿ ಮೃತಪಟ್ಟಿದ್ದಾರೆಂದು ಬಿಂಬಿಸಲು ಮೊದಲಿಗೆ ಕರೆಂಟ್‌ ಕೊಟ್ಟಿದ್ದಾನೆ. ಕರೆಂಟ್‌ ಶಾಕ್‌ಗೆ ಮಹಾರಾಜರು ಮೃತಪಡದಿದ್ದರಿಂದ ಟವೆಲ್‌ನಿಂದ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿದ್ದಾನೆ.

News Hour: ಸದನದಲ್ಲಿ ಪ್ರತಿಧ್ವನಿಸಿದ ಜೈನಮುನಿ ಹತ್ಯೆ ಕೇಸ್‌!

ಇಷ್ಟಕ್ಕೇ ಸುಮ್ಮನಾಗದ ಹಂತಕ ನಾರಾಯಣ ಮಾಳಿ, ಲಾರಿ ಚಾಲಕ ಹಸನಸಾಬ್‌ ದಲಾಯತ್‌ನನ್ನು ಕರೆದುಕೊಂಡು ಬಂದಿದ್ದಾನೆ. ಮೃತದೇಹವನ್ನು ರಾಯಬಾಗ ತಾಲೂಕಿನ ಖಟಕಬಾವಿ ಗ್ರಾಮದಲ್ಲಿರುವ ಸ್ವಂತ ಜಮೀನಿನಲ್ಲಿರುವ ಬೋರವೆಲ್‌ನಲ್ಲಿ ಹಾಕಲು ಆರೋಪಿ ಮೊದಲೇ ಪ್ಲ್ಯಾನ್‌ ಮಾಡಿದ್ದನು. ಅದರಂತೆ ಬೈಕ್‌ ಮೇಲೆ ಹಸನಸಾಬ್‌ ದಲಾಯತ್‌ ನೆರವಿನಲ್ಲಿ 35 ಕಿ.ಮೀ ದೂರದಲ್ಲಿರುವ ಖಟಕಬಾವಿ ಗ್ರಾಮದಲ್ಲಿರುವ ತಮ್ಮ ಜಮೀನಿಗೆ ಶವ ಸಾಗಿಸಿದ್ದಾರೆ.

ಮೊದಲಿಗೆ ಶವವನ್ನು ಹಾಗೇ ಬೋರವೆಲ್‌ನಲ್ಲಿ ಹಾಕಲು ಯತ್ನಿಸಿದ್ದು, ಹೋಗಲಿಲ್ಲ. ಹೀಗಾಗಿ, ಹಂತಕರು ಕೊನೆಗೆ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಬೋರವೆಲ್‌ನಲ್ಲಿ ಹಾಕಿದ್ದಾರೆ.

click me!