ಮೃತ್ ಭಾರತ್ ಯೋಜನೆಯಡಿ ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ 6 ಹಾಗೂ ಮೈಸೂರು ವಿಭಾಗದ 2 ರೈಲು ನಿಲ್ದಾಣಗಳೀಗ ಮೇಲ್ದರ್ಜೆಯ ರೈಲು ನಿಲ್ದಾಣಗಳನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆ. 6ರಂದು ದೇಶಾದ್ಯಂತ 508 ರೈಲ್ವೆ ನಿಲ್ದಾಣಗಳಿಗೆ ವಿಡಿಯೋ ಕಾನ್ಫರೆ®್ಸ… ಮೂಲಕ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಹುಬ್ಬಳ್ಳಿ (ಆ.4) ಅಮೃತ್ ಭಾರತ್ ಯೋಜನೆಯಡಿ ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ 6 ಹಾಗೂ ಮೈಸೂರು ವಿಭಾಗದ 2 ರೈಲು ನಿಲ್ದಾಣಗಳೀಗ ಮೇಲ್ದರ್ಜೆಯ ರೈಲು ನಿಲ್ದಾಣಗಳನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆ. 6ರಂದು ದೇಶಾದ್ಯಂತ 508 ರೈಲ್ವೆ ನಿಲ್ದಾಣಗಳಿಗೆ ವಿಡಿಯೋ ಕಾನ್ಫರೆ®್ಸ… ಮೂಲಕ ಶಿಲಾನ್ಯಾಸ ನೆರವೇರಿಸಲಿದ್ದಾರೆ.
2023ರ ಬಜೆಟ್‌ಲ್ಲಿ ಅಮೃತ್ ಭಾರತ್ ನಿಲ್ದಾಣ ಯೋಜನೆಯ ಅಡಿಯಲ್ಲಿ ದೇಶದಾದ್ಯಂತ 1,275 ನಿಲ್ದಾಣಗಳನ್ನು ಪುನರ್ ಅಭಿವೃದ್ಧಿಗೊಳಿಸಲಾಗುವುದು ಎಂದು ಘೋಷಿಸಲಾಗಿತ್ತು. ಈ ಯೋಜನೆಯ ಅಡಿ ಕರ್ನಾಟಕದಲ್ಲಿ 55 ನಿಲ್ದಾಣಗಳನ್ನು ಪುನರಾಭಿವೃದ್ಧಿ ಪಡಿಸಲು ಯೋಜಿಸಲಾಗಿದೆ. ಇವುಗಳಲ್ಲಿ ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಅಳ್ನಾವರ .17.2ಕೋಟಿ, ಘಟಪ್ರಭಾ .18.02 ಕೋ., ಗೋಕಾಕ್ ರೋಡ್ .17ಕೋ., ಗದಗ-. 23.2 ಕೋ.,ಕೊಪ್ಪಳ-. 21.1ಕೋ.ಮತ್ತು ಬಳ್ಳಾರಿ .16.7 ಕೋಟಿ ಹಾಗೂ ಮೈಸೂರು ವಿಭಾಗದ ಅರಸೀಕೆರೆ .34.1ಕೋ. ಮತ್ತು ಹರಿಹರ .25.2ಕೋಟಿ ಸೇರಿದಂತೆ ಒಟ್ಟು 8 ರೈಲು ನಿಲ್ದಾಣಗಳನ್ನು .172.52 ಕೋಟಿ ವೆಚ್ಚಗಳಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.
ಮಂಗಳೂರು-ಪುತ್ತೂರು ವಿದ್ಯುತ್ ಚಾಲಿತ ರೈಲು ಎಂಜಿನ್ ಪ್ರಾಯೋಗಿಕ ಸಂಚಾರ
ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿಯಲ್ಲಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ರೈಲ್ವೆ ನಿಲ್ದಾಣದ ನಿರಂತರ ಅಭಿವೃದ್ಧಿಗೆ ನಾಂದಿ ಹಾಡುತ್ತದೆ. ನಿಲ್ದಾಣದ ಪ್ರವೇಶ ದ್ವಾರ, ಸಂಚಾರ ಪ್ರದೇಶ, ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಶೌಚಾಲಯ, ದಿವ್ಯಾಂಗ ಪ್ರಯಾಣಿಕರಿಗೆ ಅನುಕೂಲವಾಗುವ ಲಿ¶್ಟ… ಮತ್ತು ಎಸ್‌್ಕಲೇಟರ್, ನಿಲ್ದಾಣದ ಸ್ವಚ್ಛತೆ, ಉಚಿತ ವೈ-ಫೈ, ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು ಒಂದು ನಿಲ್ದಾಣ ಒಂದು ಉತ್ಪನ್ನ ಮಳಿಗೆ ಮೂಲಕ ಪ್ರಯಾಣಿಕರಿಗೆ ತಲುಪಿಸುವ ವ್ಯವಸ್ಥೆ, ಎಕ್ಸಿಕ್ಯೂಟಿವ್ ಲಾಂಜ್,ರಿಟೈಲ್ ಮಳಿಗೆಗಳಿಗೆ ಸ್ಥಳ, ನಿಲ್ದಾಣದ ವಿನ್ಯಾಸ ಸೇರಿದಂತೆ ಅನೇಕ ಸೌಕರ್ಯಗಳನ್ನು ಒದಗಿಸಲಾಗುವುದು. ಈ ಯೋಜನೆಯು ನಿಲ್ದಾಣದ ಕಟ್ಟಡವನ್ನು ಆಧುನಿಕ ವಾಸ್ತು ವಿನ್ಯಾಸದೊಂದಿಗೆ ಸುಧಾರಣೆ, ನಿಲ್ದಾಣದ ಎರಡೂ ಬದಿಗಳನ್ನು ನಗರದೊಂದಿಗೆ ಸಂಪರ್ಕಿಸುವ ವ್ಯವಸ್ಥೆ, ಸುಸ್ಥಿರ ಮತ್ತು ಪರಿಸರಸ್ನೇಹಿ ಅಭಿವೃದ್ಧಿ, ಜೆಲ್ಲಿಕಲ್ಲು ರಹಿತ ಟ್ರ್ಯಾಕರ್‌ಗಳ ನಿರ್ಮಾಣ,‘ರೂಫ್ ಪ್ಲಾಜಾಗಳು’ಮತ್ತು ನಿಲ್ದಾಣಗಳನ್ನು ನಗರ ಕೇಂದ್ರಗಳನ್ನಾಗಿ (ಸಿಟಿ ಸೆಂಟರ್) ರೂಪಿಸುವ ಗುರಿ ಹೊಂದಿದೆ.
ಮಂಗಳೂರು: ಕಡಲ್ಕೊರೆತ ಶಾಶ್ವತ ಪರಿಹಾರಕ್ಕೆ ನೈಸರ್ಗಿಕ ತಂತ್ರಜ್ಞಾನಕ್ಕೆ ಮೊರೆ
ನಾಗರಿಕರೂ ಸಲಹೆ ನೀಡಿ:
ಭಾರತೀಯ ರೈಲ್ವೆಯು ನಿಲ್ದಾಣಗಳ ಪುನರಾಭಿವೃದ್ಧಿಗಾಗಿ ನಾಗರಿಕರಿಂದಲೂ ಸಲಹೆಗಳನ್ನು ಆಹ್ವಾನಿಸಿದೆ.ಸಾರ್ವಜನಿಕರು ನೇರವಾಗಿ ಆನ್‌ಲೈನ್ ಲಿಂಕ್ hಠಿಠಿps://ಜ್ಞಿdಜಿa್ಞ್ಟaಜ್ಝಿಡಿays.ಜಟv.ಜ್ಞಿ/್ಟaಜ್ಝಿಡಿayಚಿಟa್ಟd/ಊಛಿಛಿdಆa್ಚkಊಟ್ಟಞ/ಜ್ಞಿdಛ್ಡಿ.್ಜsp ಮೂಲಕ ಮಾಹಿತಿ ನೀಡುವುದರ ಜತೆಗೆ ತಮ್ಮ ಅಭಿಪ್ರಾಯ ತಿಳಿಸಬಹುದು.