ಬೆಂಗಳೂರಿನಲ್ಲಿ ವಿಶ್ವದರ್ಜೆಯ ಲಕ್ಷ್ಯನ್ ಅಕಾಡೆಮಿ ಕಾರ್ಯಾರಂಭ: ಏನಿದರ ವಿಶೇಷತೆ..?

By Kannadaprabha News  |  First Published Jul 16, 2024, 2:32 PM IST

ಮಾಜಿ ಬಾಸ್ಕೆಟ್‌ಬಾಲ್‌ ಆಟಗಾರ್ತಿ ಯಶಿಕಾ ಹಾಗೂ ವೃತ್ತಿಯಲ್ಲಿ ಎಂಜಿನಿಯರ್‌ ಆಗಿರುವ ಜೀವನ್‌ ಮಹದೇವ್‌ ದಂಪತಿ ಈ ಅಕಾಡೆಮಿಯ ಸ್ಥಾಪಕರು. ಕರ್ನಾಟಕದಲ್ಲಿ ಸೂಕ್ತ ಕ್ರೀಡಾ ಅಕಾಡೆಮಿಯ ಕೊರತೆ ಎದುರಿಸುತ್ತಿರುವುದರನ್ನು ಮನಗಂಡ ದಂಪತಿ ಅತ್ಯಾಧುನಿಕ ಶೈಲಿಯ ಕ್ರೀಡಾ ಕೇಂದ್ರವನ್ನು ನಿರ್ಮಿಸಿದ್ದಾರೆ.


ನಾಸಿರ್ ಸಜಿಪ, ಕನ್ನಡಪ್ರಭ

ಬೆಂಗಳೂರು: ವಿಶ್ವದರ್ಜೆಯ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ನೂತನ ಕ್ರೀಡಾ ಅಕಾಡೆಮಿಯೊಂದು ಬೆಂಗಳೂರಿನಲ್ಲಿ ಕಾರ್ಯಾರಂಭಿಸಿದೆ. ದೇಶದಲ್ಲೇ ಶ್ರೇಷ್ಠ ಅಕಾಡೆಮಿಗಳಲ್ಲಿ ಒಂದು ಎನಿಸಿಕೊಂಡಿರುವ ಲಕ್ಷ್ಯನ್‌ ಸ್ಪೋರ್ಟ್ಸ್‌ ಅಕಾಡೆಮಿ ನಗರದ ಸರ್ಜಾಪುರ ಸಮೀಪ ತಲೆ ಎತ್ತಿದ್ದು, ಯುವ ಪ್ರತಿಭೆಗಳನ್ನು ಶ್ರೇಷ್ಠ ಕ್ರೀಡಾಪಟುಗಳನ್ನಾಗಿ ರೂಪಿಸುವ ಗುರಿ ಇಟ್ಟುಕೊಂಡಿದೆ.

Tap to resize

Latest Videos

undefined

2019ರಲ್ಲಿ ಆರಂಭಗೊಂಡಿದ್ದ ಅಕಾಡೆಮಿ ಕಾಮಗಾರಿ ಕಳೆದ ವರ್ಷ ಪೂರ್ಣಗೊಂಡಿದ್ದು, ಡಿಸೆಂಬರ್‌ನಲ್ಲಿ ಅಂದಿನ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಉದ್ಘಾಟಿಸಿದ್ದರು. ವಿಶ್ವದರ್ಜೆಯ ಸೌಲಭ್ಯಗಳನ್ನು ನೀಡುವ ಮೂಲಕ ದೇಶದಲ್ಲೇ ಪ್ರಮುಖ ಕ್ರೀಡಾ ಅಕಾಡೆಮಿ ಎನಿಸಿಕೊಂಡಿದೆ. ಖೇಲೋ ಇಂಡಿಯಾ ಅಂಗೀಕಾರವನ್ನೂ ಪಡೆದುಕೊಂಡಿದೆ. 5 ಅಂತಸ್ತಿನ ಅಕಾಡೆಮಿಯು 10 ಕ್ರೀಡಾ ತರಬೇತಿ ಕೇಂದ್ರಗಳನ್ನು ಒಳಗೊಂಡಿವೆ.

ಮಾಜಿ ಬಾಸ್ಕೆಟ್‌ಬಾಲ್‌ ಆಟಗಾರ್ತಿ ಯಶಿಕಾ ಹಾಗೂ ವೃತ್ತಿಯಲ್ಲಿ ಎಂಜಿನಿಯರ್‌ ಆಗಿರುವ ಜೀವನ್‌ ಮಹದೇವ್‌ ದಂಪತಿ ಈ ಅಕಾಡೆಮಿಯ ಸ್ಥಾಪಕರು. ಕರ್ನಾಟಕದಲ್ಲಿ ಸೂಕ್ತ ಕ್ರೀಡಾ ಅಕಾಡೆಮಿಯ ಕೊರತೆ ಎದುರಿಸುತ್ತಿರುವುದರನ್ನು ಮನಗಂಡ ದಂಪತಿ ಅತ್ಯಾಧುನಿಕ ಶೈಲಿಯ ಕ್ರೀಡಾ ಕೇಂದ್ರವನ್ನು ನಿರ್ಮಿಸಿದ್ದಾರೆ.

ನಮ್ಮನ್ನು ಹಾವಾಡಿಗರು & ಆನೆಗಳ ನಾಡು ಎಂದು ನೋಡುತ್ತಿದ್ದರು; ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಿದ ಕೊಹ್ಲಿ

ಅಕಾಡೆಮಿಯಲ್ಲಿ ಬಾಸ್ಕೆಟ್‌ಬಾಲ್‌, ಈಜು, ಬ್ಯಾಡ್ಮಿಂಟನ್‌, ಶೂಟಿಂಗ್‌, ಸ್ಕ್ವ್ಯಾಶ್‌, ಕಬಡ್ಡಿ, ಫುಟ್ಬಾಲ್‌, ಚೆಸ್‌, ಟೇಬಲ್‌ ಟೆನಿಸ್‌ ಹಾಗೂ ಜಿಮ್ನಾಸ್ಟಿಕ್‌ ತರಬೇತಿ ಕೇಂದ್ರಗಳಿವೆ. ಒಲಿಂಪಿಕ್‌ ದರ್ಜೆಯ, 5 ಲೇನ್‌ಗಳಿರುವ ಈಜು ಕೇಂದ್ರ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ಬ್ಯಾಡ್ಮಿಂಟನ್‌, ಸ್ಕ್ವ್ಯಾಶ್‌, ಟೇಬಲ್‌ ಟೆನಿಸ್‌ ಕೇಂದ್ರಗಳನ್ನೂ ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಿಸಲಾಗಿದೆ. ಭಾರತೀಯ ಅಥ್ಲೆಟಿಕ್ಸ್‌ ಸಂಸ್ಥೆಯ ಮಾನದಂಡದಂತೆ ಎಲ್ಲಾ ಕ್ರೀಡಾ ಕೇಂದ್ರಗಳನ್ನು ನಿರ್ಮಾಣ ಮಾಡಲಾಗಿದೆ. ಯೋಗ, ಫಿಸಿಯೋಥೆರಫಿ, ಪುನಶ್ಚೇತನ ಕೇಂದ್ರಗಳೂ ಅಕಾಡೆಮಿಯಲ್ಲಿದೆ.

ಪ್ರತಿ ಕೇಂದ್ರದಲ್ಲೂ ಅಥ್ಲೀಟ್‌ಗಳಿಗೆ ಅಗತ್ಯವಾಗಿ ಬೇಕಾದ ಡ್ರೆಸ್ಸಿಂಗ್‌ ಕೋಣೆ, ಶೌಚಾಲಯ, ವಿಶ್ರಾಂತಿ ಕೋಣೆಗಳಿವೆ. ಕೋಚ್‌ಗಳಿಗೂ ವಿಶೇಷ ಕೋಣೆಗಳನ್ನು ನಿರ್ಮಿಸಲಾಗಿದ್ದು, ತರಬೇತಿಗೆ ಸಂಬಂಧಿಸಿದಂತೆ ರೂಪುರೇಷೆ ತಯಾರಿಸಲು ವಿಶೇಷ ಸೌಲಭ್ಯಗಳಿವೆ. ಪ್ಯಾರಾ ಅಥ್ಲೀಟ್‌ಗಳು ಎಲ್ಲಾ 4 ಮಹಡಿಗಳಿಗೂ ಸಂಚರಿಸಲು ಬೇಕಾದ ವ್ಯವಸ್ಥೆ ಮಾಡಿದ್ದು ಅಕಾಡೆಮಿಯ ಪ್ರಮುಖ ಆಕರ್ಷಣೆ.

1400+ ವಿದ್ಯಾರ್ಥಿಗಳು: ಅಕಾಡೆಮಿಯಲ್ಲಿ ಸದ್ಯ ಪ್ರತಿನಿತ್ಯ 1400ರಷ್ಟು ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. 600ರಷ್ಟು ವಿದ್ಯಾರ್ಥಿಗಳು ಈಜು ತರಬೇತಿ ಪಡೆಯುತ್ತಿದ್ದು, ಬಾಸ್ಕೆಟ್‌ಬಾಲ್‌ ಕಲಿಯಲು 120ರಷ್ಟು ವಿದ್ಯಾರ್ಥಿಗಳು ಪ್ರತಿನಿತ್ಯ ಆಗಮಿಸುತ್ತಿದ್ದಾರೆ. 100ರಷ್ಟು ವಿದ್ಯಾರ್ಥಿಗಳು ಫುಟ್ಬಾಲ್‌, 70ರಷ್ಟು ಚೆಸ್‌ ವಿದ್ಯಾರ್ಥಿಗಳು ಪ್ರತಿನಿತ್ಯ ಅಕಾಡೆಮಿಯಲ್ಲಿ ಕಲಿಯುತ್ತಿದ್ದಾರೆ. ತಿಂಗಳಿಗೆ 2 ಸಾವಿರದಷ್ಟು ವಿದ್ಯಾರ್ಥಿಗಳು ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಅಕಾಡೆಮಿ ಸಿಇಒ ಜೀವನ್‌ ತಿಳಿಸಿದ್ದಾರೆ.

ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ತಂಡ ಅಯ್ಕೆ ಮಾಡಿದ ಯುವರಾಜ್ ಸಿಂಗ್..! ಸ್ನೇಹಿತನಿಗೆ ಗೇಟ್‌ಪಾಸ್, ಕೆಣಕಿದವನಿಗೆ ಮಣೆ ಹಾಕಿದ ಯುವಿ

ಅಮೆರಿಕ, ಜರ್ಮನಿ ಸೇರಿ 10 ದೇಶಗಳ ಸಾಮಗ್ರಿ ಬಳಕೆ

ಅಕಾಡೆಮಿಗೆ ಭಾರತ ಮಾತ್ರವಲ್ಲದೇ ಜರ್ಮನಿ, ಪೋಲೆಂಡ್‌, ಇಟಲಿ, ಅಮೆರಿಕ, ಯುರೋಪ್‌ ಸೇರಿದಂತೆ 12 ದೇಶಗಳಿಂದಲೂ ಸಾಮಗ್ರಿಗಳನ್ನು ಆಮದು ಮಾಡಲಾಗಿದೆ. ಜಿಮ್‌ ಸಲಕರಣೆಗಳು, ಟರ್ಫ್‌, ಶೂಟಿಂಗ್‌, ಸ್ಕ್ವ್ಯಾಶ್‌, ಬ್ಯಾಡ್ಮಿಂಟನ್‌, ಈಜು ಕೇಂದ್ರಗಳಿಗೆ ಅತ್ಯುತ್ತಮ ದರ್ಜೆಯ ವಸ್ತುಗಳನ್ನೇ ಬಳಸಲಾಗಿದೆ ಎಂದು ಅಕಾಡೆಮಿ ನಿರ್ದೇಶಕ ಧನರಾಜ್‌ ಪಿಳ್ಳೈ ಮಾಹಿತಿ ನೀಡಿದ್ದಾರೆ.

ಗೋಪಿಚಂದ್‌, ಶರತ್‌ ಮೆಂಟರ್ಸ್‌

ಖ್ಯಾತ ಬ್ಯಾಡ್ಮಿಂಟನ್‌ ಕೋಚ್‌ ಪುಲ್ಲೇಲಾ ಗೋಪಿಚಂದ್‌, ಹಿರಿಯ ಟೇಬಲ್‌ ಟೆನಿಸ್ ಆಟಗಾರ ಶರತ್‌ ಕಮಾಲ್‌, ತಾರಾ ಚೆಸ್‌ ಪಟು ರಾಮ್‌ಚರಣ್‌ ರಮೇಶ್‌ ಸೇರಿದಂತೆ ಪ್ರಮುಖರು ಅಕಾಡೆಮಿಯ ಅಥ್ಲೀಟ್‌ಗಳಿಗೆ ಮಾರ್ಗದರ್ಶಕರಾಗಿದ್ದಾರೆ. ದಿಗ್ಗಜ ಹಾಕಿ ಪಟು, ಭಾರತದ ಮಾಜಿ ನಾಯಕ ಧನರಾಜ್‌ ಪಿಳ್ಳೈ ಹಾಗೂ ಭಾರತದ ಮಾಜಿ ಹಾಕಿ ಆಟಗಾರ ಅರ್ಜುನ್‌ ಹಾಲಪ್ಪ ನಿರ್ದೇಶಕರಾಗಿದ್ದಾರೆ.

ಅಕಾಡೆಮಿಯ ವಿಶೇಷತೆಗಳು

- ಖೇಲೋ ಇಂಡಿಯಾ ಅಂಗೀಕೃತ ಅಕಾಡೆಮಿ

- ವಿಶ್ವದರ್ಜೆಯ, ಅತ್ಯಾಧುನಿಕ ಸೌಲಭ್ಯಗಳು

- ಪ್ಯಾರಾ ಅಥ್ಲೀಟ್‌ಗಳಿಗೂ ತರಬೇತಿ ಅವಕಾಶ

- 10ಕ್ಕಿಂತ ಹೆಚ್ಚು ಕ್ರೀಡೆಗಳ ತರಬೇತಿ ಕೇಂದ್ರ

- ಒಲಿಂಪಿಕ್‌ ದರ್ಜೆಯ 50 ಮೀ. ಈಜುಕೊಳ

- ಪುಲ್ಲೇಲಾ ಗೋಪಿಚಂದ್‌, ಶರತ್‌ ಮಾರ್ಗದರ್ಶನ

- ನಿರ್ದೇಶಕರಾಗಿ ಧನರಾಜ್ ಪಿಳ್ಳೈ, ಅರ್ಜುನ್‌ ಹಾಲಪ್ಪ

- 35ರಷ್ಟು ನುರಿತ ಕೋಚ್‌ಗಳು

ದೇಶದಲ್ಲೇ ಮೊದಲು

ಇಂತಹ ವಿಶ್ವದರ್ಜೆಯ ಸೌಕರ್ಯಗಳಿರುವ, ವಿನ್ಯಾಸದ ಮತ್ತೊಂದು ಅಕಾಡೆಮಿ ದೇಶದಲ್ಲಿ ಬೇರೆ ಇಲ್ಲ. ಪ್ರತಿ ದಿನ 1400ರಷ್ಟು ಮಕ್ಕಳು ಇಲ್ಲಿ ವಿವಿಧ ಕ್ರೀಡೆಗಳ ತರಬೇತಿ ಪಡೆಯುತ್ತಿದ್ದಾರೆ. ಇದರಲ್ಲಿ ಶೇ.75ರಷ್ಟು ಮಂದಿ 4ರಿಂದ 12 ವರ್ಷದ ಒಳಗಿನವರು. ತಳಮಟ್ಟದಿಂದಲೇ ಬೆಳೆಸಿ ಮಕ್ಕಳನ್ನು ಶ್ರೇಷ್ಠ ಅಥ್ಲೀಟ್‌ಗಳನ್ನಾಗಿ ಮಾಡುವುದು ನಮ್ಮ ಗುರಿ.

-ಯಶಿಕಾ, ಸಹ ಸಂಸ್ಥಾಪಕರು, ಲಕ್ಷ್ಯನ್‌ ಅಕಾಡೆಮಿ

click me!