ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಕ್ರೀಡಾಳುಗಳಿಗೆ ನಗದು ಬಹುಮಾನ ಸಿಗಲಿದೆ. ಉದಾಹರಣೆಗೆ ಭಾರತದ ನೀರಜ್ ಚೋಪ್ರಾ, ಪ್ಯಾರಿಸ್‌ನಲ್ಲೂ ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದರೆ ಅವರಿಗೆ 50,000 ಅಮೆರಿಕನ್ ಡಾಲರ್ ಬಹುಮಾನ ದೊರೆಯಲಿದೆ.
ಮೊನಾಕೊ: ಈ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆಲ್ಲುವ ಅಥ್ಲೀಟ್‌ಗಳಿಗೆ 50,000 ಅಮೆರಿಕನ್ ಡಾಲರ್ (ಅಂದಾಜು 41.6 ಲಕ್ಷ ರು.) ಬಹುಮಾನ ನೀಡುವುದಾಗಿ, ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ಘೋಷಿಸಿದೆ.
ಇದೊಂದು ಐತಿಹಾಸಿಕ ಘೋಷಣೆಯಾಗಿದ್ದು, ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಕ್ರೀಡಾಳುಗಳಿಗೆ ನಗದು ಬಹುಮಾನ ಸಿಗಲಿದೆ. ಉದಾಹರಣೆಗೆ ಭಾರತದ ನೀರಜ್ ಚೋಪ್ರಾ, ಪ್ಯಾರಿಸ್‌ನಲ್ಲೂ ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದರೆ ಅವರಿಗೆ 50,000 ಅಮೆರಿಕನ್ ಡಾಲರ್ ಬಹುಮಾನ ದೊರೆಯಲಿದೆ.
undefined
UEFA Champions League: 'ಫುಟ್ಬಾಲ್ ಸ್ಟೇಡಿಯಂಗೆ ಬರುವ ಎಲ್ಲರನ್ನೂ ಕೊಲ್ಲಿ' ISIS ಉಗ್ರರ ಬೆದರಿಕೆ
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಜೊತೆ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆಲ್ಲುವ ಅಥ್ಲೀಟ್‌ಗಳಿಗೂ ನಗದು ಬಹುಮಾನ ನೀಡುವುದಾಗಿ ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ತಿಳಿಸಿದೆ.
ಅಂತಾರಾಷ್ಟ್ರೀಯ ಕ್ರೀಡಾ ಫೆಡರೇಶನ್‌ವೊಂದು ಒಲಿಂಪಿಕ್ಸ್ ಪದಕಕ್ಕೆ ಪ್ರತ್ಯೇಕವಾಗಿ ನಗದು ಬಹುಮಾನ ಘೋಷಿಸಿರುವುದು ಇದೇ ಮೊದಲು. ಈ ಘೋಷಣೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ) ಇನ್ನೂ ಒಪ್ಪಿಗೆ ಸೂಚಿಸಬೇಕಿದೆ.
ಕೊಹ್ಲಿ, ರೋಹಿತ್ ಶರ್ಮ ಅಲ್ಲ, ಭಾರತದ ಈ ಸ್ಟಾರ್ ಜಗತ್ತಿನ 'Most Valuable Cricketer' ಎಂದ ದಿನೇಶ್ ಕಾರ್ತಿಕ್!
ಇನ್ನು ಈ ಐತಿಹಾಸಿಕ ತೀರ್ಮಾನದ ಕುರಿತಂತೆ ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ ಅಧ್ಯಕ್ಷ ಅದಿಲ್ಲೇ ಸುಮರಿವಾಲಾ ಏಷ್ಯಾನೆಟ್ ನ್ಯೂಸ್ ಜತೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, "ಇದೊಂದು ಮಹತ್ವದ ನಿರ್ಧಾರವಾಗಿದೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಗದು ಬಹುಮಾನ ಪಡೆಯುವುದು ಒಳ್ಳೆಯ ಕ್ರಮವಾಗಿದೆ. ಡೈಮಂಡ್ ಲೀಗ್, ಕಾಂಟಿನೆಂಟಲ್ ಕಪ್‌ಗಳಲ್ಲಿ ಪದಕ ಗೆದ್ದಾಗ ನಗದು ಬಹುಮಾನ ಇರುತ್ತಿತ್ತು. ಆದರೆ ಒಲಿಂಪಿಕ್ಸ್ ಬಹುಮಾನದಲ್ಲಿ ಈ ಸೌಕರ್ಯ ಇರಲಿಲ್ಲ. ವಿಶ್ವ ಅಥ್ಲೆಟಿಕ್ಸ್ ಫೆಡರೇಷನ್, ಮೊದಲ ಅಂತಾರಾಷ್ಟ್ರೀಯ ಫೆಡರೇಷನ್ ಆಗಿ ಈ ರೀತಿಯ ಪ್ರಸ್ತಾಪವನ್ನು ಇಟ್ಟಿದೆ. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು ಯಾವುದೇ ನಗದು ಬಹುಮಾನಕ್ಕಿಂತ ದೊಡ್ಡದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದೊಂದು ಪ್ರೋತ್ಸಾಹದ ಒಂದು ಸಣ್ಣ ನಡೆಯಷ್ಟೇ. ನಮ್ಮ ಅಥ್ಲೀಟ್ಸ್‌ಗಳ ಮೇಲೆ ತೋರುವ ಪ್ರೀತಿ ಹಾಗೂ ಕಾಳಜಿಯಷ್ಟೇ" ಎಂದು ವಿಶ್ವ ಅಥ್ಲೆಟಿಕ್ಸ್ ಫೆಡರೇಷನ್ ಉಪಾಧ್ಯಕ್ಷರೂ ಆಗಿರುವ ಸುಮರಿವಾಲಾ ಹೇಳಿದ್ದಾರೆ.