ಮಾ.25-ಏ.2ರ ವರೆಗೂ ಚೈನೀಸ್ ತೈಪೆಯಲ್ಲಿ ನಡೆಯಲಿರುವ ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್‌ನಲ್ಲಿ ನು ಭಾಕರ್ ಹಾಗೂ ವಿಜಯ್‌ವೀರ್ ಸಿಧು ಪಾಲ್ಗೊಳ್ಳಲಿದ್ದಾರೆ. ಆದರೆ ಇದೇ ವೇಳೆ CBSE ಪರೀಕ್ಷೆ ನಡೆಯಲಿದೆ. ಹೀಗಾಗಿ ಪರೀಕ್ಷೆ ಮುಂದೂಡಲು ಮನವಿ ಮಾಡಲಾಗಿದೆ.
ನವದೆಹಲಿ(ಫೆ.17): ಭಾರತದ ಯುವ ಶೂಟರ್‌ಗಳಾದ ಮನು ಭಾಕರ್ ಹಾಗೂ ವಿಜಯ್‌ವೀರ್ ಸಿಧು ಅವರ 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಿ ಎಂದು ಸ್ಪೋರ್ಟ್ಸ್ ಇಂಡಿಯಾ(ಸಾಯ್) ಸಿಬಿಎಸ್‌ಇಗೆ ಮನವಿ ಮಾಡಿದೆ. ಮಾ.25-ಏ.2ರ ವರೆಗೂ ಚೈನೀಸ್ ತೈಪೆಯಲ್ಲಿ ನಡೆಯಲಿರುವ ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್‌ನಲ್ಲಿ ನು ಭಾಕರ್ ಹಾಗೂ ವಿಜಯ್‌ವೀರ್ ಸಿಧು ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ರಾಷ್ಟ್ರೀಯ ಬ್ಯಾಡ್ಮಿಂಟನ್: ಸೈನಾ ನೆಹ್ವಾಲ್, ಸೌರಭ್ ಚಾಂಪಿಯನ್
ಇದೇ ಸಮಯದಲ್ಲಿ 12ನೇ ತರಗತಿ ಸಿಬಿಎಸ್‌ಇ ಪರೀಕ್ಷೆಗಳು ನಡೆಯಲಿವೆ. ಕಳೆದ ವರ್ಷವೂ ಶೂಟರ್ ಅನೀಶ್ ಭನವಾಲಾಗೆ ಅನುಕೂಲವಾಗಲು ಸಾಯ್, ಸಿಬಿಎಸ್‌ಇಗೆ ಮನವಿ ಸಲ್ಲಿಸತ್ತು. ಸಾಯ್ ಮನವಿ ಸ್ವೀಕರಿಸಿದ್ದ ಸಿಬಿಎಸ್‌ಸಿ, ಪರೀಕ್ಷೆಗಳನ್ನು ಮುಂದೂಡಿತ್ತು.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ ದಾಳಿ: ಉಗ್ರರ ಕೃತ್ಯಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರ ಆಕ್ರೋಶ!