ಸಿಂಗಾಪೂರ ಓಪನ್: ಎರಡನೇ ಸುತ್ತಿನಲ್ಲೇ ಮರೀನ್‌ಗೆ ಶರಣಾದ ಪಿ ವಿ ಸಿಂಧು

By Kannadaprabha News  |  First Published May 30, 2024, 3:36 PM IST

ಮಾಜಿ ವಿಶ್ವ ಚಾಂಪಿಯನ್ ಸಿಂಧು, ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನಲ್ಲೇ ಡೆನ್ಮಾರ್ಕ್‌ನ ಲಿನ್ ಹೊಜ್ಮಾರ್ಕ್‌ ವಿರುದ್ಧ 21-12, 22-20ರಲ್ಲಿ ಗೆದ್ದರೆ, ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್ ಬೆಲ್ಜಿಯಂನ ಜೂಲಿಯನ್ ಕರಾಗಿ ವಿರುದ್ಧ 2ಮೊದಲ ಸುತ್ತಿನಲ್ಲೇ ಡೆನ್ಮಾರ್ಕ್‌ನ ಲಿನ್ ಹೊಜ್ಮಾರ್ಕ್‌ ವಿರುದ್ಧ ಶುಭಾರಂಭ ಮಾಡಿದ್ದ ಸಿಂಧುಗೆ ಎರಡನೇ ಸುತ್ತಿನಲ್ಲೇ ವಿಶ್ವ ನಂ.3 ಶ್ರೇಯಾಂಕಿತೆ ಮರೀನ್ ಎದುರಾದರು. ಸಿಂಧು 21-13, 11-21, 20-22 ಗೇಮ್‌ಗಳಲ್ಲಿ ಸಿಂಧು ಸೋಲು ಕಾಣುವ ಮೂಲಕ ಅಭಿಯಾನ ಮುಗಿಸಿದರು.1-09, 18-21, 21-19 ಗೇಮ್‌ಗಳಲ್ಲಿ ಜಯಿಸಿದರು.


ಸಿಂಗಾಪೂರ: ಸಿಂಗಾಪೂರ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪಿವಿ ಸಿಂಧು ಎರಡನೇ ಸುತ್ತಿನಲ್ಲೇ ಆಘಾತಕಾರಿ ಸೋಲು ಅನುಭವಿಸುವ ಮೂಲಕ ಹೊರಬಿದ್ದಿದ್ದಾರೆ. ಸ್ಪೇನ್‌ನ ಬದ್ದ ಎದುರಾಳಿ ಕರೋಲಿನಾ ಮರೀನ್ ಎದುರು ಸಿಂಧು ಹೋರಾಡಿ ಸೋಲು ಅನುಭವಿಸಿದ್ದಾರೆ.

ಮೊದಲ ಸುತ್ತಿನಲ್ಲೇ ಡೆನ್ಮಾರ್ಕ್‌ನ ಲಿನ್ ಹೊಜ್ಮಾರ್ಕ್‌ ವಿರುದ್ಧ ಶುಭಾರಂಭ ಮಾಡಿದ್ದ ಸಿಂಧುಗೆ ಎರಡನೇ ಸುತ್ತಿನಲ್ಲೇ ವಿಶ್ವ ನಂ.3 ಶ್ರೇಯಾಂಕಿತೆ ಮರೀನ್ ಎದುರಾದರು. ಸಿಂಧು 21-13, 11-21, 20-22 ಗೇಮ್‌ಗಳಲ್ಲಿ ಸಿಂಧು ಸೋಲು ಕಾಣುವ ಮೂಲಕ ಅಭಿಯಾನ ಮುಗಿಸಿದರು. ಮೊದಲ ಗೇಮ್‌ನಲ್ಲಿ ಭರ್ಜರಿ ಆಟ ಪ್ರದರ್ಶಿಸುವ ಮೂಲಕ ಶುಭಾರಂಭ ಮಾಡಿದ ಸಿಂಧು, ಆ ಬಳಿಕ ಅದೇ ಹಿಡಿತ ಸಾಧಿಸಲು ವಿಫಲವಾದರು

Tap to resize

Latest Videos

undefined

ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್ ಬೆಲ್ಜಿಯಂನ ಜೂಲಿಯನ್ ಕರಾಗಿ ವಿರುದ್ಧ 21-09, 18-21, 21-19 ಗೇಮ್‌ಗಳಲ್ಲಿ ಜಯಿಸಿದರು. ಇನ್ನು ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ ಜಾಲಿ- ಗಾಯತ್ರಿ ಗೋಪಿಚಂದ್ ಕೂಡಾ 2ನೇ ಸುತ್ತು ಪ್ರವೇಶಿಸಿದರು.

ಟಿ20 ವಿಶ್ವಕಪ್‌ಗೆ ಭಾರತದ ತಯಾರಿ ಶುರು: ಬಿಸಿಲಿನಲ್ಲೇ ಆಟಗಾರರ ಅಭ್ಯಾಸ

ಆದರೆ ಲಕ್ಷ್ಯ ಸೆನ್, ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸನ್ ವಿರುದ್ಧ 13-21, 21-16, 13-21ರಲ್ಲಿ ಸೋತರೆ, ಮಾಜಿ ವಿಶ್ವ ನಂ.1 ಶ್ರೀಕಾಂತ್ ಅವರು ಜಪಾನ್‌ನ ಕೊಡಾಯಿ ನರೋಕಾ ವಿರುದ್ಧ 14-21, 3-11ರಲ್ಲಿ ಹಿನ್ನಡೆಯಲ್ಲಿದ್ದಾಗ ಗಾಯಗೊಂಡು ಹೊರನಡೆದರು. ಇನ್ನು ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ತನಿಶಾ, ಸಿಮ್ರಾನ್-ರಿಶಿಕಾ, ಮಿಶ್ರ ಡಬಲ್ಸ್‌ನಲ್ಲಿ ಸುಮಿತ್ ರೆಡ್ಡಿ-ಸಿಕ್ಕಿ ರೆಡ್ಡಿ ಸೋತು ಹೊರಬಿದ್ದರು.

ಬಾಕ್ಸಿಂಗ್‌ ಒಲಿಂಪಿಕ್‌ ಅರ್ಹತಾ ಪಂದ್ಯಾವಳಿ: ನಿಶಾಂತ್‌ ಕ್ವಾರ್ಟರ್‌ಗೆ

ಬ್ಯಾಂಕಾಕ್‌: ಬಾಕ್ಸಿಂಗ್‌ ವಿಶ್ವ ಒಲಿಂಪಿಕ್‌ ಅರ್ಹತಾ ಟೂರ್ನಿಯಲ್ಲಿ ಭಾರತದ ನಿಶಾಂತ್‌ ದೇವ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಒಲಿಂಪಿಕ್ಸ್‌ಗೇರಲು ನಿಶಾಂತ್‌ಗೆ ಇನ್ನೊಂದೇ ಗೆಲುವು ಅಗತ್ಯವಿದೆ. ಬುಧವಾರ 71 ಕೆ.ಜಿ. ವಿಭಾಗದ ಪ್ರಿ ಕ್ವಾರ್ಟರ್‌ನಲ್ಲಿ ನಿಶಾಂತ್, ಥಾಯ್ಲೆಂಡ್‌ನ ಯೀಸುಂಗ್ನಿಯೆನ್ ವಿರುದ್ಧ 5-0 ಅಂತರದಲ್ಲಿ ಗೆದ್ದರು. ಕ್ವಾರ್ಟರ್‌ನಲ್ಲಿ ಗೆದ್ದರೆ ನಿಶಾಂತ್‌ ಒಲಿಂಪಿಕ್ಸ್‌ಗೇರಲಿದ್ದಾರೆ. ಇದೇ ವೇಳೆ ಅರುಂಧತಿ ಚೌಧರಿ (66 ಕೆ.ಜಿ.) ಅವರು ಪ್ಯುರ್ಟೊ ರಿಕೋದ ಸ್ಟೆಫಾನಿ ಪೀನೆರಿಯೊ ವಿರುದ್ಧ 5-0 ಅಂತರದಲ್ಲಿ ಗೆದ್ದು ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಪುರುಷರ +92 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲೇ ನರೇಂದರ್‌ಗೆ ಸೋಲು ಎದುರಾಯಿತು.

ನಾರ್ವೆ ಚೆಸ್: ವಿಶ್ವ ನಂ.1 ಮ್ಯಾಗ್ನಸ್ ಕಾರ್ಲ್‌ಸನ್ ಎದುರು ಭಾರತದ ಆರ್ ಪ್ರಜ್ಞಾನಂದಗೆ ಐತಿಹಾಸಿಕ ಜಯ

ಚಾಲೆಂಜ್‌ ಕಪ್‌: ಭಾರತ ಮಹಿಳಾ ವಾಲಿಬಾಲ್‌ ತಂಡಕ್ಕೆ ಐದನೇ ಸ್ಥಾನ

ಮಾನಿಲಾ(ಫಿಲಿಪ್ಪೀನ್ಸ್‌): ಇಲ್ಲಿ ಬುಧವಾರ ಕೊನೆಗೊಂಡ ಎವಿಸಿ ಮಹಿಳಾ ಚಾಲೆಂಜ್‌ ಕಪ್‌ ವಾಲಿಬಾಲ್‌ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಮೇ 22ರಿಂದ ಶುರುವಾದ ಕೂಟದ ಕೊನೆ ದಿನವಾದ ಬುಧವಾರ ಭಾರತ ತಂಡ ಇರಾನ್‌ ವಿರುದ್ಧ 3-0 ಅಂತರದಲ್ಲಿ ಜಯಭೇರಿ ಬಾರಿಸಿತು. ನಾಯಕಿ ಜಿನಿ, ಬ್ಲಾಕರ್‌ ಸೂರ್ಯ, ಅನುಶ್ರೀ ಹಾಗೂ ಶಿಲ್ಪಾ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 2022ರಲ್ಲಿ ಭಾರತ ಕಂಚಿನ ಪದಕ ಗೆದ್ದಿತ್ತು.
 

click me!