Latest Videos

ಡೋಪಿಂಗ್ ಸುಳಿಯಲ್ಲಿ ರಾಜ್ಯದ ಮನು: ಪ್ಯಾರಿಸ್ ಒಲಿಂಪಿಕ್ಸ್‌ ಕನಸು ಭಗ್ನ?

By Kannadaprabha NewsFirst Published Jun 29, 2024, 11:06 AM IST
Highlights

ಸದ್ಯ ನಡೆಯುತ್ತಿರುವ ರಾಷ್ಟ್ರೀಯ ಅಂತರ್ - ‌ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸದಂತೆ ನಾಡಾ ಸೂಚಿಸಿದೆ. ಕಳೆದ ಏಪ್ರಿಲ್‌ನಲ್ಲಿ ನಡೆದಿದ್ದ ಇಂಡಿಯನ್ ಗ್ಯಾನ್ ಪ್ರಿ ಚಾಂಪಿಯನ್‌ಶಿಪ್ ವೇಳೆ ನಡೆಸಿದ ಉದ್ದೀಪನ ಪರೀಕ್ಷೆಯಲ್ಲಿ ಮನು ಸ್ಟೆರಾಯ್ಡ್ ತೆಗೆದುಕೊಂಡಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. 

ಪಂಚಕುಲ(ಹರ್ಯಾಣ): ಭಾರತದ ತಾರಾ ಜಾವೆಲಿನ್ ಎಸೆತಗಾರ, ಕರ್ನಾಟಕದ ಡಿ.ಪಿ.ಮನು ಡೋಪಿಂಗ್ ಸುಳಿಯಲ್ಲಿಸಿಲುಕಿದ್ದಾರೆ. ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ(ನಾಡಾ) ಮನು ಅವರನ್ನು ತಾತ್ಕಾಲಿಕ ಅಮಾನತುಗೊಳಿಸಿದೆ. ಮನು, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳುವುದು ಬಹುತೇಕ ಖಚಿತವೆನಿಸಿದೆ. 

ಸದ್ಯ ನಡೆಯುತ್ತಿರುವ ರಾಷ್ಟ್ರೀಯ ಅಂತರ್ - ‌ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸದಂತೆ ನಾಡಾ ಸೂಚಿಸಿದೆ. ಕಳೆದ ಏಪ್ರಿಲ್‌ನಲ್ಲಿ ನಡೆದಿದ್ದ ಇಂಡಿಯನ್ ಗ್ಯಾನ್ ಪ್ರಿ ಚಾಂಪಿಯನ್‌ಶಿಪ್ ವೇಳೆ ನಡೆಸಿದ ಉದ್ದೀಪನ ಪರೀಕ್ಷೆಯಲ್ಲಿ ಮನು ಸ್ಟೆರಾಯ್ಡ್ ತೆಗೆದುಕೊಂಡಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. 

ಮನು ಇನ್ನೂ ಒಲಿಂಪಿಕ್ಸ್ ಅರ್ಹತೆಗೆ ಬೇಕಿರುವ ಗುರಿ ತಲುಪಿಲ್ಲವಾದರೂ, ವಿಶ್ವ ರ‍್ಯಾಂಕಿಂಗ್‌ ಆಧಾರದಲ್ಲಿ ಅವರಿಗೆ ಅವಕಾಶ ಸಿಗುವುದು ಖಚಿತವಾ ಗಿತ್ತು. ಆರಂಭದಲ್ಲಿ ಅವರ ಹೆಸರು ಅಂತರ್‌-ರಾಜ್ಯ ಅಥ್ಲೆಟಿಕ್ಸ್‌ನ ಸ್ಪರ್ಧಿಗಳ ಪಟ್ಟಿಯಲ್ಲಿದ್ದರೂ ಹೊಸದಾಗಿ ತಯಾರಿಸಿದ ಪಟ್ಟಿಯಿಂದ ಹೆಸರು ಕೈಬಿಡಲಾಗಿದೆ.
 
ವಿಂಬಲ್ಡನ್‌ನ ಮೊದಲ ಸುತ್ತಿನಲ್ಲಿ ಸುಮಿತ್‌ಗೆ ಮಿಯೋಮಿರ್‌ ಸವಾಲು

ಲಂಡನ್‌: ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ನ ಸಿಂಗಲ್ಸ್ ಪ್ರಧಾನ ಸುತ್ತಿನಲ್ಲಿ ಮೊದಲ ಬಾರಿ ಆಡಲು ಸಜ್ಜಾಗಿರುವ ಭಾರತದ ಸುಮಿತ್‌ ನಗಾಲ್‌ಗೆ ಮೊದಲ ಸುತ್ತಿನಲ್ಲೇ ಕಠಿಣ ಸವಾಲು ಎದುರಾಗಲಿದೆ. ಜು.1ರಿಂದ ಆರಂಭಗೊಳ್ಳಲಿರುವ ಟೂರ್ನಿಯಲ್ಲಿ ವಿಶ್ವ ನಂ.72 ನಗಾಲ್‌ ಅವರು ವಿಶ್ವ ನಂ.53 ಸರ್ಬಿಯಾದ ಮಿಯೋಮಿರ್‌ ಕೆಕ್‌ಮನೋವಿಚ್‌ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ. 

ಪುರುಷರ ಡಬಲ್ಸ್‌ ಮೊದಲ ಸುತ್ತಿನಲ್ಲಿ ರೋಹನ್‌ ಬೋಪಣ್ಣ-ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೋಡಿಗೆ ಫ್ರಾನ್ಸ್‌ನ ಆ್ಯಡ್ರಿಯನ್‌ ಮನ್ನಾರಿನೊ-ಗೊವನ್ನಿ ಪೆರಿಕಾರ್ಡ್‌ ವಿರುದ್ಧ ಆಡಲಿದ್ದಾರೆ. ಶ್ರೀರಾಂ ಬಾಲಾಜಿ ಬ್ರಿಟನ್‌ನ ಲ್ಯೂಕ್‌ ಜಾನ್ಸನ್‌ ಜೊತೆಗೂಡಿ, ಯೂಕಿ ಭಾಂಬ್ರಿ ಫ್ರಾನ್ಸ್‌ನ ಅಲ್ಬಾನೊ ಒಲಿವೆಟ್ಟಿ ಜೊತೆಗೂಡಿ ಕಣಕ್ಕಿಳಿಯಲಿದ್ದಾರೆ. ನಗಾಲ್‌ ಡಬಲ್ಸ್‌ನಲ್ಲಿ ಸರ್ಬಿಯಾದ ಡುಸಾನ್‌ ಲಜೋವಿಚ್‌ ಜೊತೆಗೂಡಿ ಆಡಲಿದ್ದಾರೆ.

ಅಥ್ಲೆಟಿಕ್ಸ್: 2 ಚಿನ್ನ ಸೇರಿ 4 ಮೆಡಲ್ ಗೆದ್ದ ಕರ್ನಾಟಕ

ಪಂಚಕುಲಾ(ಹರ್ಯಾಣ): 63ನೇ ರಾಷ್ಟ್ರೀಯ ಅಂತರ್‌-ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ 2ನೇ ದಿನ ಕರ್ನಾಟಕ 2 ಚಿನ್ನದ ಪದಕ ಗೆದ್ದಿದೆ. ಶುಕ್ರವಾರ ಮಹಿಳೆಯರ 100 ಮೀ.ನಲ್ಲಿ ಸ್ನೇಹಾ 11.62 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನಕ್ಕೆ ಕೊರಳೊಡ್ಡಿದರು. 

ಅಕ್ಷರ್ ಪಟೇಲ್ ಯಶಸ್ಸಿನ ಹಿಂದಿದ್ದಾರೆ ಪತ್ನಿ ಮೆಹಾ ಪಟೇಲ್‌..! ಈಕೆಯ ವೃತ್ತಿ...?

4x100 ರಿಲೇ ಸ್ಪರ್ಧೆಯಲ್ಲಿ ಕಾವೇರಿ ಪಾಟೀಲ್, ಸ್ನೇಹಾ, ಸಿಮಿ ಸ್ನೇಹಾ ಎಸ್.ಎಸ್‌. ಹಾಗೂ ಧಾನೇಶ್ವರಿ ಅವರನ್ನೊಳಗೊಂಡ ತಂಡ 45.38 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಜಯಿಸಿತು. ಮಹಿಳೆಯರ ಜಾವೆಲಿನ್ ಎಸೆತದಲ್ಲಿ ರಮ್ಯಶ್ರೀ ಜೈನ್ (53.14 ಮೀ.) ಬೆಳ್ಳಿ, ಟ್ರಿಪಲ್ ಜಂಪ್‌ನಲ್ಲಿ ಪವಿತ್ರಾ (13.20 ಮೀ.) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಜೋಕೋವಿಚ್, ಮರ್ರೆ ವಿಂಬಲ್ಡನ್ ಸ್ಪರ್ಧೆ ಖಚಿತ

ವಿಂಬಲ್ಡನ್(ಇಂಗ್ಲೆಂಡ್): 24 ಗ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ನೋವಾಕ್ ಜೋಕೋವಿಚ್ ಹಾಗೂ 3 ಬಾರಿ ಗ್ಯಾನ್‌ಸ್ಲಾಂ ವಿಜೇತ ಆ್ಯಂಡಿ ಮರ್ರೆ ಈ ಬಾರಿ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಇಬ್ಬರೂ ಗಾಯದಿಂದ ಬಳಲುತ್ತಿದ್ದ ಕಾರಣ ಈ ಸಲ ವಿಂಬಲ್ಡನ್ ನಲ್ಲಿ ಆಡುವ ಅನುಮಾನವಿತ್ತು. 

ಫೈನಲ್‌ ಪ್ರವೇಶಿಸುತ್ತಿದ್ದಂತೆಯೇ ಆನಂದಭಾಷ್ಪ ಸುರಿಸಿದ ರೋಹಿತ್ ಶರ್ಮಾ..! ಆಗ ಕೊಹ್ಲಿ ಪ್ರತಿಕ್ರಿಯೆ ಹೇಗಿತ್ತು ನೋಡಿ

ಆದರೆ ಶುಕ್ರವಾರ ಟೂರ್ನಿಯ ಡ್ರಾ ಪ್ರಕಟಗೊಂಡಿದ್ದು, ಇಬ್ಬರ ಹೆಸರೂ ಪಟ್ಟಿಯಲ್ಲಿದೆ. 7 ಬಾರಿ ವಿಂಬಲ್ಡನ್ ಗೆದ್ದಿರುವ ಜೋಕೋ ಇತ್ತೀಚೆಗಷ್ಟೇ ಫ್ರೆಂಚ್ ಓಪನ್‌ನ ಕ್ವಾರ್ಟರ್ ಫೈನಲ್‌ಗೂ ಮುನ್ನ ಮಂಡಿ ಗಾಯದಿಂದಾಗಿ ಟೂರ್ನಿಯಿಂದ ನಿರ್ಗಮಿಸಿದ್ದರು. ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಕೆಲ ದಿನಗಳ ಹಿಂದಷ್ಟೇ ಅಭ್ಯಾಸ ಆರಂಭಿಸಿದ್ದರು.
 

click me!