ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ಜೋಕೋವಿಚ್‌, ಇಗಾಗೆ ಅಗ್ರ ಶ್ರೇಯಾಂಕ

By Kannadaprabha NewsFirst Published Jan 11, 2024, 11:53 AM IST
Highlights

ಜೋಕೋವಿಚ್‌ ಪುರುಷರ ಸಿಂಗಲ್ಸ್‌ನ ಹಾಲಿ ಚಾಂಪಿಯನ್‌ ಆಗಿದ್ದು, ಮಹಿಳಾ ಸಿಂಗಲ್ಸ್‌ನ ಹಾಲಿ ಚಾಂಪಿಯನ್‌ ಅರೈನಾ ಸಬಲೆಂಕಾ, 2ನೇ ಶ್ರೇಯಾಂಕ ಪಡೆದಿದ್ದಾರೆ.

ಮೆಲ್ಬರ್ನ್‌(ಜ.11): ಇದೇ ಜನವರಿ 14ರಿಂದ ಆರಂಭಗೊಳ್ಳಲಿರುವ 2024ರ ಮೊದಲ ಗ್ರ್ಯಾನ್‌ ಸ್ಲಾಂ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ನೋವಾಕ್‌ ಜೋಕೋವಿಚ್‌ ಹಾಗೂ ಇಗಾ ಸ್ವಿಯಾಟೆಕ್‌ ಕ್ರಮವಾಗಿ ಪುರುಷ, ಮಹಿಳಾ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತರಾಗಿ ಕಣಕ್ಕಿಳಿಯಲಿದ್ದಾರೆ. ಜೋಕೋವಿಚ್‌ ಪುರುಷರ ಸಿಂಗಲ್ಸ್‌ನ ಹಾಲಿ ಚಾಂಪಿಯನ್‌ ಆಗಿದ್ದು, ಮಹಿಳಾ ಸಿಂಗಲ್ಸ್‌ನ ಹಾಲಿ ಚಾಂಪಿಯನ್‌ ಅರೈನಾ ಸಬಲೆಂಕಾ, 2ನೇ ಶ್ರೇಯಾಂಕ ಪಡೆದಿದ್ದಾರೆ.

ಮಲೇಷ್ಯಾ ಓಪನ್‌:ಪ್ರಣಯ್‌, ಲಕ್ಷ್ಯ ಸೇನ್‌ ಸವಾಲು ಅಂತ್ಯ

ಕೌಲಾಲಂಪುರ: ಮಲೇಷ್ಯಾ ಓಪನ್‌ ಸೂಪರ್‌ 1000 ಬ್ಯಾಡ್ಮಿಟನ್‌ ಪಂದ್ಯಾವಳಿಯಲ್ಲಿ ಭಾರತದ ಎಚ್‌.ಎಸ್‌ ಪ್ರಣಯ್‌ ಮತ್ತು ಲಕ್ಷ್ಯ ಸೇನ್‌ ಸವಾಲು ಅಂತ್ಯಗೊಂಡಿದ್ದು, ಡಬಲ್ಸ್‌ನಲ್ಲಿ ಶುಭಾರಂಭ ಮಾಡಿರುವ ಸಾತ್ವಿಕ್‌ ಸಾಯಿರಾಜ್‌ ಮತ್ತು ಚಿರಾಗ್‌ ಶೆಟ್ಟಿ 2ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಪ್ರಣಯ್‌ 2ನೇ ಸುತ್ತಿನಲ್ಲಿ ಡೆನ್ಮಾರ್ಕ್‌ನ ಆ್ಯಂಡರ್ಸ್‌ ಆ್ಯಂಟೋನ್ಸನ್‌ ವಿರುದ್ಧ 14-21, 11-21ರಲ್ಲಿ ಸೋಲನುಭವಿಸಿದರೆ, ಲಕ್ಷ್ಯ ಚೀನಾದ ವೆನ್‌ ಹಾಂಗ್ ಯಾಂಗ್‌ಗೆ 15-21, 16-21ರಿಂದ ಶರಣಾದರು. ಡಬಲ್ಸ್‌ನಲ್ಲಿ ಸಾತ್ವಿಕ್‌- ಚಿರಾಗ್‌ ಜೋಡಿಯು ಇಂಡೋನೆಷ್ಯಾದ ಮುಹಮ್ಮದ್‌ ಫಿಕ್ರಿ- ಬಗಾಸ್ ಮೌಲಾಮ್ವು ವಿರುದ್ಧ 21-19, 21-18 ಗೇಮ್‌ಗಳಲ್ಲಿ ಜಯಿಸಿತು.

ರೆಸ್ಟ್‌ ಬೇಕೆಂದು ಕಾರಣ ಹೇಳಿ ದುಬೈನಲ್ಲಿ ಪಾರ್ಟಿ ಮಾಡಿದ ಇಶಾನ್ ಕಿಶನ್‌ಗೆ BCCI ಶಾಕ್!

ಲೈಂಗಿಕ ಕಿರುಕುಳ: ಭಾರತ ತಂಡದಿಂದ ಶೂಟರ್‌ ಹೊರಕ್ಕೆ!

ನಹದೆಹಲಿ: ಲೈಂಗಿಕ ಕಿರುಕುಳ ಆರೋಪದ ಮೇಲೆ ಭಾರತ ತಂಡದಿಂದ ಶೂಟರ್‌ ಒಬ್ಬರನ್ನು ಹೊರಹಾಕಲಾಗಿದೆ. ಸದ್ಯ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್‌ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿದ್ದ ಶೂಟರ್‌ ಬದಲಿಗೆ ಬೇರೊಬ್ಬರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಕರಣ ನಡೆದಿರುವುದು ನಿಜ ಎಂದಿರುವ ಭಾರತೀಯ ರೈಫಲ್‌ ಶೂಟಿಂಗ್ ಸಂಸ್ಥೆಯು, ಶೂಟರ್‌ ಹೆಸರನ್ನು ಬಹಿರಂಗಪಡಿಸಿಲ್ಲ.

ರೇಪ್‌ ಕೇಸ್‌: ಕ್ರಿಕೆಟಿಗ ಸಂದೀಪ್‌ಗೆ 8 ವರ್ಷ ಜೈಲು

ಕಾಠ್ಮಂಡು: ಯುವತಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ದೋಷಿಯಾಗಿರುವ ನೇಪಾಳ ಕ್ರಿಕೆಟ್‌ ತಂಡದ ಮಾಜಿ ನಾಯಕ ಸಂದೀಪ್‌ ಲಾಮಿಚ್ಚಾನೆಗೆ ಕಾಠ್ಮಂಡು ಜಿಲ್ಲಾ ನ್ಯಾಯಾಲಯ 8 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, 3 ಲಕ್ಷ ನೇಪಾಳಿ ರು. ದಂಡ ಹಾಕಿದೆ. ಕಳೆದ ಆಗಸ್ಟ್‌ನಲ್ಲಿ ಯುವತಿಯಿಂದ ಅತ್ಯಾಚಾರ ಆರೋಪ ಕೇಳಿಬಂದ ಬಳಿಕ ಬಂಧನಕ್ಕೆ ಒಳಗಾಗಿದ್ದ ಸಂದೀಪ್‌, ಜಾಮೀನಿನ ಮೇಲೆ ಹೊರಬಂದಿದ್ದರು. ತೀರ್ಪಿನ ವಿರುದ್ಧ ಹೈಕೋರ್ಟಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಸಂದೀಪ್‌ ಪರ ವಕೀಲರು ತಿಳಿಸಿದ್ದಾರೆ.

IPL 2024 ಟೂರ್ನಿಗೆ ವೇಳಾಪಟ್ಟಿ ಫಿಕ್ಸ್..! ಗುಡ್ ನ್ಯೂಸ್ ಕೊಟ್ಟ BCCI

ಏಕದಿನ: ಮಿಜೋರಾಮ್‌ ವಿರುದ್ಧ ಗೆದ್ದ ಕರ್ನಾಟಕ

ಗುವಾಹಟಿ: ರಾಷ್ಟ್ರೀಯ ಮಹಿಳಾ ಏಕದಿನ ಟೂರ್ನಿಯಲ್ಲಿ 2 ಸೋಲುಗಳಿಂದ ಕಂಗೆಟ್ಟಿದ್ದ ಕರ್ನಾಟಕ ತಂಡ ಗೆಲುವಿನ ಹಳಿಗೆ ಮರಳಿದೆ. ಬುಧವಾರ ನಡೆದ ಮಿಜೋರಾಮ್‌ ವಿರುದ್ಧದ ಪಂದ್ಯದಲ್ಲಿ ರಾಜ್ಯಕ್ಕೆ 6 ವಿಕೆಟ್‌ ಜಯ ದೊರೆಯಿತು. ಮೊದಲು ಬ್ಯಾಟ್‌ ಮಾಡಿದ ಮಿಜೋರಾಮ್‌ 31 ಓವರಲ್ಲಿ 68 ರನ್‌ಗೆ ಆಲೌಟ್‌ ಆಯಿತು. ಮಿಥಿಲಾ ಹಾಗೂ ಚಂದು ತಲಾ 4 ವಿಕೆಟ್‌ ಕಿತ್ತರು. ಕರ್ನಾಟಕ 15.4 ಓವರಲ್ಲಿ 4 ವಿಕೆಟ್‌ ನಷ್ಟಕ್ಕೆ 72 ರನ್‌ ಗಳಿಸಿತು. 16ಕ್ಕೆ 3 ವಿಕೆಟ್‌ ಕಳೆದುಕೊಂಡಿದ್ದ ರಾಜ್ಯಕ್ಕೆ ನಾಯಕಿ ವೇದಾ (28*) ಆಸರೆಯಾದರು. ಕರ್ನಾಟಕ 4 ಪಂದ್ಯಗಳಲ್ಲಿ ತಲಾ 2 ಜಯ, 2 ಸೋಲು ಕಂಡಿದೆ.
 

click me!