ಮಲೇಷ್ಯಾ ಓಪನ್‌: ವಿಶ್ವ ಚಾಂಪಿಯನ್‌ ಜೋಡಿಯನ್ನು ಮಣಿಸಿ ಸಾತ್ವಿಕ್‌-ಚಿರಾಗ್‌ ಫೈನಲ್‌ಗೆ ಲಗ್ಗೆ

By Kannadaprabha News  |  First Published Jan 14, 2024, 10:39 AM IST

ಶನಿವಾರ ನಡೆದ ಪುರುಷರ ಡಬಲ್ಸ್‌ ಸೆಮಿಫೈನಲ್‌ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌, ಕೊರಿಯಾದ ಸಿಯೊ ಸೆಯುಂಗ್‌-ಕಾಂಗ್‌ ಮಿನ್‌ ವಿರುದ್ಧ 21-18, 22-20ರಲ್ಲಿ ಗೆಲುವು ಸಾಧಿಸಿದರು. ಆರಂಭದಿಂದಲೇ ಮೇಲುಗೈ ಸಾಧಿಸಿದ್ದ ವಿಶ್ವ ನಂ.2 ಭಾರತೀಯ ಜೋಡಿ ಕೊನೆವರೆಗೂ ಮುನ್ನಡೆ ಕಾಯ್ದುಕೊಂಡು, ಗೆಲುವು ತನ್ನದಾಗಿಸಿಕೊಂಡಿತು.


ಕೌಲಾಲಂಪುರ(ಜ.14): ಮಲೇಷ್ಯಾ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಡಬಲ್ಸ್‌ ಜೋಡಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಫೈನಲ್‌ ತಲುಪಿದ್ದಾರೆ. ಈ ಮೂಲಕ ಮಲೇಷ್ಯಾ ಓಪನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಜೋಡಿ ಎನ್ನುವ ಹಿರಿಮೆಗೆ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಪಾತ್ರವಾಗಿದೆ.

ಶನಿವಾರ ನಡೆದ ಪುರುಷರ ಡಬಲ್ಸ್‌ ಸೆಮಿಫೈನಲ್‌ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌, ಕೊರಿಯಾದ ಸಿಯೊ ಸೆಯುಂಗ್‌-ಕಾಂಗ್‌ ಮಿನ್‌ ವಿರುದ್ಧ 21-18, 22-20ರಲ್ಲಿ ಗೆಲುವು ಸಾಧಿಸಿದರು. ಆರಂಭದಿಂದಲೇ ಮೇಲುಗೈ ಸಾಧಿಸಿದ್ದ ವಿಶ್ವ ನಂ.2 ಭಾರತೀಯ ಜೋಡಿ ಕೊನೆವರೆಗೂ ಮುನ್ನಡೆ ಕಾಯ್ದುಕೊಂಡು, ಗೆಲುವು ತನ್ನದಾಗಿಸಿಕೊಂಡಿತು.

Tap to resize

Latest Videos

undefined

ಇಂದಿನಿಂದ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌

ಕಳೆದ ವರ್ಷ ಸ್ವಿಸ್‌, ಇಂಡೋನೆಷ್ಯಾ ಹಾಗೂ ಕೊರಿಯಾ ಓಪನ್‌ ಟೂರ್ನಿ ಗೆದ್ದಿದ್ದ ಸಾತ್ವಿಕ್‌-ಚಿರಾಗ್‌ ಈ ವರ್ಷವನ್ನು ಪ್ರಶಸ್ತಿಯೊಂದಿಗೆ ಆರಂಭಿಸುವ ನಿರೀಕ್ಷೆಯಲ್ಲಿದ್ದಾರೆ. ಭಾನುವಾರ ಫೈನಲ್‌ನಲ್ಲಿ ವಿಶ್ವ ನಂ.1, ಚೀನಾದ ಲಿಯಾಂಗ್‌ ವೈ ಕೆಂಗ್‌ ಮತ್ತು ವಾಂಗ್‌ ಚಾಂಗ್‌ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.

𝐅𝐢𝐧𝐚𝐥𝐬 𝐂𝐚𝐥𝐥𝐢𝐧𝐠 😍😍

First Indians to enter Malaysia Open final, well done boys! 👏

📸: pic.twitter.com/TDJZSbN9WT

— BAI Media (@BAI_Media)

ಇಂದಿನಿಂದ ಒಲಿಂಪಿಕ್ಸ್‌ ಅರ್ಹತಾ ವನಿತಾ ಹಾಕಿ

ರಾಂಚಿ: ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಭಾರತ ಮಹಿಳಾ ಹಾಕಿ ತಂಡ, ಶನಿವಾರದಿಂದ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. ಆರಂಭಿಕ ಪಂದ್ಯದಲ್ಲಿ ಶನಿವಾರ ಭಾರತಕ್ಕೆ ಅಮೆರಿಕ ಸವಾಲು ಎದುರಾಗಲಿದೆ. ಟೂರ್ನಿಯಲ್ಲಿ 8 ತಂಡಗಳು ಪಾಲ್ಗೊಳ್ಳಲಿದ್ದು, ಅಗ್ರ-3 ತಂಡಗಳು ಒಲಿಂಪಿಕ್ಸ್‌ ಟಿಕೆಟ್‌ ಪಡೆದುಕೊಳ್ಳಲಿದೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 6ನೇ ಸ್ಥಾನದಲ್ಲಿರುವ ಭಾರತ ‘ಬಿ’ ಗುಂಪಿನಲ್ಲಿದ್ದು, ಜ.14ರಂದು ನ್ಯೂಜಿಲೆಂಡ್‌, ಜ.16ರಂದು ಇಟಲಿ ವಿರುದ್ಧ ಸೆಣಸಾಡಲಿವೆ. ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಜ.18ಕ್ಕೆ ಸೆಮೀಸ್‌, ಜ.19ಕ್ಕೆ ಫೈನಲ್‌ ಪಂದ್ಯ ನಡೆಯಲಿದೆ.

ಶೂಟರ್‌ ವಿಜಯ್‌ವೀರ್‌ ಒಲಿಂಪಿಕ್ಸ್‌ಗೆ ಅರ್ಹತೆ

ಜಕಾರ್ತ: ವಿಜಯ್‌ವೀರ್‌ ಸಿಧು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ 17ನೇ ಶೂಟರ್‌ ಎನಿಸಿದ್ದಾರೆ. 21 ವರ್ಷದ ವಿಜಯ್‌ವೀರ್‌, ಇಲ್ಲಿ ನಡೆಯುತ್ತಿರುವ ಏಷ್ಯನ್‌ ಅರ್ಹತಾ ಟೂರ್ನಿಯ 25 ಮೀ. ರ್‍ಯಾಪಿಡ್‌ ಫೈಯರ್‌ ವಿಭಾಗದಲ್ಲಿ ಶನಿವಾರ ಕಂಚಿನ ಪದಕ ಪಡೆದು, ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದರು. ವಿಜಯ್‌, ಗುವಾಂಗ್‌ಝೋ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಪಡೆದಿದ್ದರು.

ರಿಂಕು ಸಿಂಗ್ ಆರ್ಭಟದ ಹಿಂದೆ ಧೋನಿ ಮಾಸ್ಟರ್ ಮೈಂಡ್..!

ಕಬಡ್ಡಿ: ಬೆಂಗಾಲ್‌, ಜೈಪುರಕ್ಕೆ ಜಯ

ಜೈಪುರ: 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಶನಿವಾರ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಹಾಗೂ ಬೆಂಗಾಲ್‌ ವಾರಿಯರ್ಸ್‌ ತಂಡಗಳು ಗೆಲುವು ಸಾಧಿಸಿದೆ.

ಆರಂಭಿಕ ಪಂದ್ಯದಲ್ಲಿ ಜೈಪುರಕ್ಕೆ ಪುಣೇರಿ ಪಲ್ಟನ್‌ ವಿರುದ್ಧ 36-34 ಅಂಕಗಳ ರೋಚಕ ಗೆಲುವು ಲಭಿಸಿತು. ಜೈಪುರ 12 ಪಂದ್ಯಗಳಲ್ಲಿ 8ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಉಳಿದಿದೆ. ಅತ್ತ ಪುಣೆ 12 ಪಂದ್ಯಗಳಲ್ಲಿ 2ನೇ ಸೋಲುಂಡರೂ, ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಜೈಪುರದ ಅರ್ಜುನ್‌ ದೇಶ್ವಾಲ್‌ 16 ಅಂಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮತ್ತೊಂದು ಪಂದ್ಯದಲ್ಲಿ ಯುಪಿ ಯೋಧಾಸ್‌ ವಿರುದ್ಧ ಬೆಂಗಾಲ್‌ಗೆ 42-37 ಅಂಕಗಳ ಗೆಲುವು ಲಭಿಸಿತು. ಪರ್ದೀಪ್‌ ನರ್ವಾಲ್‌ 16 ಅಂಕ ಸಂಪಾದಿಸಿದರೂ ತಂಡಕ್ಕೆ ಗೆಲುವು ಲಭಿಸದಲಿಲ್ಲ. ಬೆಂಗಾಲ್‌ನ ಮಣೀಂದರ್‌ ಸಿಂಗ್‌ 14 ಅಂಕ ಗಳಿಸಿದರು. ಯೋಧಾಸ್‌ 13 ಪಂದ್ಯಗಳಲ್ಲಿ 9ನೇ ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಅತ್ತ ಬೆಂಗಾಲ್‌ 12 ಪಂದ್ಯಗಳಲ್ಲಿ 5 ಜಯದೊಂದಿಗೆ 7ನೇ ಸ್ಥಾನದಲ್ಲಿದೆ.

ಇಂದಿನ ಪಂದ್ಯಗಳು

ಹರ್ಯಾಣ ಸ್ಟೀಲರ್ಸ್‌-ತಮಿಳ್‌ ತಲೈವಾಸ್‌, ರಾತ್ರಿ 8ಕ್ಕೆ

ದಬಾಂಗ್‌ ಡೆಲ್ಲಿ-ಪಾಟ್ನಾ ಪೈರೇಟ್ಸ್‌, ರಾತ್ರಿ 9ಕ್ಕೆ
 

click me!