ಇಂದಿನಿಂದ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌

ಪುರುಷರ ಸಿಂಗಲ್ಸ್‌ನಲ್ಲಿ ಸರ್ಬಿಯಾದ ಜೋಕೋ ದಾಖಲೆಯ 25ನೇ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿದ್ದು, ಪ್ರಬಲ ಪೈಪೋಟಿ ನಿರೀಕ್ಷೆ ಇದ್ದರೂ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದಾರೆ. ಅವರು ಆಸ್ಟ್ರೇಲಿಯನ್‌ ಓಪನ್‌ನಲ್ಲಿ 10 ಪ್ರಶಸ್ತಿ ಗೆದ್ದಿದ್ದು, ಈ ಬಾರಿ ಮೊದಲ ಸುತ್ತಿನಲ್ಲಿ ಕ್ರೊವೇಷಿಯಾದ ಡಿನೊ ಪ್ರಿಜ್ಮಿಕ್‌ ಸವಾಲು ಎದುರಾಗಲಿದೆ.

Australian Open 2024 begins today kvn

ಮೆಲ್ಬರ್ನ್‌(ಜ.14): 2024ರ ಮೊದಲ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಾಗಿರುವ ಆಸ್ಟ್ರೇಲಿಯನ್‌ ಓಪನ್‌ಗೆ ಭಾನುವಾರ ಚಾಲನೆ ಸಿಗಲಿದೆ. ಹಾಲಿ ಚಾಂಪಿಯನ್‌ಗಳಾದ ನೋವಾಕ್‌ ಜೋಕೋವಿಚ್‌ ಹಾಗೂ ಅರೈನಾ ಸಬಲೆಂಕಾ, ವಿಶ್ವ ನಂ.1 ಪೋಲೆಂಡ್‌ನ ಇಗಾ ಸ್ವಿಯಾಟೆಕ್‌, ಯುವ ಸೂಪರ್‌ ಸ್ಟಾರ್‌ ಕಾರ್ಲೊಸ್‌ ಆಲ್ಕರಜ್‌ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಸರ್ಬಿಯಾದ ಜೋಕೋ ದಾಖಲೆಯ 25ನೇ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿದ್ದು, ಪ್ರಬಲ ಪೈಪೋಟಿ ನಿರೀಕ್ಷೆ ಇದ್ದರೂ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದಾರೆ. ಅವರು ಆಸ್ಟ್ರೇಲಿಯನ್‌ ಓಪನ್‌ನಲ್ಲಿ 10 ಪ್ರಶಸ್ತಿ ಗೆದ್ದಿದ್ದು, ಈ ಬಾರಿ ಮೊದಲ ಸುತ್ತಿನಲ್ಲಿ ಕ್ರೊವೇಷಿಯಾದ ಡಿನೊ ಪ್ರಿಜ್ಮಿಕ್‌ ಸವಾಲು ಎದುರಾಗಲಿದೆ. ಇನ್ನು, ಹಾಲಿ ವಿಂಬಲ್ಡನ್‌ ಚಾಂಪಿಯನ್‌, 20ರ ಕಾರ್ಲೊಸ್‌ ಚೊಚ್ಚಲ ಆಸ್ಟ್ರೇಲಿಯನ್‌ ಓಪನ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಕಳೆದ ಬಾರಿ ರನ್ನರ್‌-ಅಪ್‌ ಗ್ರೀಕ್‌ನ ಸ್ಟೆಫಾನೊಸ್‌ ಸಿಟ್ಸಿಪಾಸ್‌, ಇಟಲಿಯ ಜಾನಿಕ್‌ ಸಿನ್ನರ್‌, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌, ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌, ಆ್ಯಂಡ್ರೆ ರುಬ್ಲೆವ್‌, ಡೆನ್ಮಾರ್ಕ್‌ನ ಹೋಲ್ಗರ್‌ ರ್‍ಯುನೆ ಕೂಡಾ ಕಣದಲ್ಲಿದ್ದಾರೆ.

ಮಹಿಳಾ ಸಿಂಗಲ್ಸ್‌ನಲ್ಲಿ ಸ್ವಿಯಾಟೆಕ್‌ ಚೊಚ್ಚಲ ಆಸ್ಟ್ರೇಲಿಯನ್‌ ಓಪನ್‌ ಮೇಲೆ ಕಣ್ಣಿಟ್ಟಿದ್ದು, ಜಪಾನ್‌ನ ನವೊಮಿ ಒಸಾಕ, ಯುವ ತಾರೆಗಳಾದ ಅಮೆರಿಕದ ಕೊಕೊ ಗಾಫ್‌, ಮಾರ್ಕೆಟ್‌ ವೊಂಡ್ರೊಸೋವಾ, ಎಲೆನಾ ರಬೈಕೆನಾ, ಒನ್ಸ್‌ ಜಬುರ್‌, ಜೆಸ್ಸಿಕಾ ಪೆಗುಲಾ ಕೂಡಾ ಪ್ರಶಸ್ತಿ ರೇಸ್‌ನಲ್ಲಿದ್ದಾರೆ.

ನಡಾಲ್‌ ಗೈರು

ದೀರ್ಘಕಾಲದಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ರಾಫೆನ್‌ ನಡಾಲ್‌ ಈ ಬಾರಿ ಆಸ್ಟ್ರೇಲಿಯನ್‌ ಓಪನ್‌ ಆಡುತ್ತಿಲ್ಲ. 2 ಬಾರಿ ಆಸ್ಟ್ರೇಲಿಯನ್‌ ಓಪನ್‌, ಒಟ್ಟಾರೆ 22 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ನಡಾಲ್‌ ವರ್ಷಗಳಿಂದಲೂ ಪಕ್ಕೆಲುಬು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಇತ್ತೀಚೆಗಷ್ಟೇ ಬ್ರಿಸ್ಟೇನ್‌ ಟೆನಿಸ್‌ ಟೂರ್ನಿಗೆ ಮರಳಿದ್ದರೂ, ಮತ್ತೆ ಗಾಯಗೊಂಡ ಕಾರಣ ಟೂರ್ನಿಯಿಂದ ಹೊರ ನಡೆದಿದ್ದರು.

ಇಂದಿನಿಂದ ಬೆಂಗ್ಳೂರಲ್ಲಿ ಐಟಿಎಫ್‌ ವನಿತಾ ಟೆನಿಸ್‌

ಬೆಂಗಳೂರು: ಕರ್ನಾಟಕ ರಾಜ್ಯ ಲಾನ್‌ ಟೆನಿಸ್ ಸಂಸ್ಥೆ(ಕೆಎಸ್‌ಎಲ್‌ಟಿಎ) ಆಯೋಜಿಸುವ 3ನೇ ಆವೃತ್ತಿಯ ಐಟಿಎಫ್‌ ಮಹಿಳಾ ಓಪನ್ ಟೆನಿಸ್ ಟೂರ್ನಿ ಭಾನುವಾರದಿಂದ ಆರಂಭಗೊಳ್ಳಲಿದೆ. ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ಭಾನುವಾರದಿಂದ ಅರ್ಹತಾ ಪಂದ್ಯಗಳು ನಡೆಯಲಿದ್ದು, ಮಂಗಳವಾರ ಪ್ರಧಾನ ಸುತ್ತು ಆರಂಭಗೊಳ್ಳಲಿದೆ. ಕರ್ನಾಟಕದ ಸೋಹಾ ಸಾದಿಕ್‌, ಸುಹಿತಾ ಮರೂರಿ ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದಿದ್ದಾರೆ. ಭಾರತ ಸೇರಿದಂತೆ 19 ದೇಶಗಳ ಆಟಗಾರ್ತಿಯರು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜ.21ಕ್ಕೆ ಫೈನಲ್‌ ಪಂದ್ಯ ನಿಗದಿಯಾಗಿದೆ. ಕಳೆದ ಬಾರಿ ರನ್ನರ್‌-ಅಪ್‌ ಅಂಕಿತಾ ರೈನಾ ಪ್ರಮುಖ ಆಕರ್ಷಣೆ ಎನಿಸಿದ್ದಾರೆ.
 

Latest Videos
Follow Us:
Download App:
  • android
  • ios