
ಪ್ಯಾರಿಸ್(ಮೇ.24): 2022ರ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯು (French Open Tennis Grand slam) ಆರಂಭದಲ್ಲೇ ಆಘಾತಕಾರಿ ಫಲಿತಾಂಶಗಳಿಗೆ ಸಾಕ್ಷಿಯಾಗಿದೆ. ಮಹಿಳಾ ಸಿಂಗಲ್ಸ್‌ನ ಹಾಲಿ ಚಾಂಪಿಯನ್, 2ನೇ ಶ್ರೇಯಾಂಕಿತೆ ಚೆಕ್ ಗಣರಾಜ್ಯದ ಬಾರ್ಬೊರಾ ಕ್ರೇಜಿಕೋವಾ (Defending champion Barbora Krejcikova knocked out) ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. 4 ಗ್ರ್ಯಾನ್ ಸ್ಲಾಂಗಳ ಒಡತಿ ಜಪಾನ್‌ನ ನವೊಮಿ ಒಸಾಕ ಸಹ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದಾರೆ.
ಸೋಮವಾರ ನಡೆದ ಪಂದ್ಯದಲ್ಲಿ ಕ್ರೇಜಿಕೋವಾ, ಫ್ರಾನ್ಸ್‌ನ 19 ವರ್ಷದ ಡಯೇನ್ ಪ್ಯಾರಿ ವಿರುದ್ಧ 6-1, 2-6, 3-6 ಸೆಟ್‌ಗಳಲ್ಲಿ ಸೋಲುಂಡರು. ಒಸಾಕ, ಅಮೆರಿಕದ ಅಮಾಂಡ ಅನಿಸಿಮೊವಾ ವಿರುದ್ಧ 5-7, 4-6 ನೇರ ಸೆಟ್‌ಗಳಲ್ಲಿ ಪರಾಭವಗೊಂಡರು. ಇದೇ ವೇಳೆ ವಿಶ್ವ ನಂ.1 ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಮೊದಲ ಸುತ್ತಿನಲ್ಲಿ ಸುಲಭ ಗೆಲುವು ಸಾಧಿಸಿ ಮುನ್ನಡೆದರು.
106ನೇ ಜಯ: ಹೊಸ ದಾಖಲೆ ಬರೆದ ನಡಾಲ್
ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಆಸ್ಪ್ರೇಲಿಯಾದ ಜಾರ್ಡನ್ ಥಾಮ್ಸನ್ ವಿರುದ್ಧ 6-2, 6-2, 6-2 ಸೆಟ್‌ಗಳಲ್ಲಿ ಗೆದ್ದ 13 ಬಾರಿ ಫ್ರೆಂಚ್ ಓಪನ್ ಚಾಂಪಿಯನ್ ರಾಫೆಲ್ ನಡಾಲ್ (Rafael Nadal) ಹೊಸ ದಾಖಲೆ ಬರೆದಿದ್ದಾರೆ. ಫ್ರೆಂಚ್ ಓಪನ್‌ನಲ್ಲಿ ನಡಾಲ್‌ಗಿದು 106ನೇ ಗೆಲುವು. ಇದರೊಂದಿಗೆ ಒಂದು ಗ್ರ್ಯಾನ್‌ಸ್ಲಾಂನಲ್ಲಿ ಅತಿಹೆಚ್ಚು ಪಂದ್ಯ ಗೆದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ವಿಂಬಲ್ಡನ್‌ನಲ್ಲಿ ರೋಜರ್ ಫೆಡರರ್ (Roger Federer) 105 ಪಂದ್ಯಗಳನ್ನು ಗೆದ್ದಿದ್ದು, ಆಸ್ಪ್ರೇಲಿಯನ್ ಓಪನ್‌ನಲ್ಲೂ (Australian Open) ಅತಿಹೆಚ್ಚು ಗೆಲುವು(102)ಗಳ ದಾಖಲೆ ಫೆಡರರ್ ಹೆಸರಿನಲ್ಲೇ ಇದೆ. ಯುಎಸ್ ಓಪನ್‌ನಲ್ಲಿ ಅಮೆರಿಕದ ಜಿಮ್ಮಿ ಕಾನ್ನಸ್ 98 ಪಂದ್ಯ ಗೆದ್ದಿದ್ದರು.
ಏಷ್ಯಾಕಪ್ ಹಾಕಿ: ಭಾರತ, ಪಾಕಿಸ್ತಾನ ಪಂದ್ಯ 1-1 ಡ್ರಾ
ಜಕಾರ್ತ: ಹಾಲಿ ಚಾಂಪಿಯನ್ ಭಾರತ ಕೊನೆ ಘಳಿಗೆಯಲ್ಲಿ ಗೋಲು ಬಿಟ್ಟು ಪರಿಣಾಮ, ಬದ್ಧವೈರಿ ಪಾಕಿಸ್ತಾನ ವಿರುದ್ಧ ಏಷ್ಯಾಕಪ್ ಪಂದ್ಯದಲ್ಲಿ 1-1ರ ಡ್ರಾಗೆ ತೃಪ್ತಿಪಟ್ಟಿತು. ಸೋಮವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ 9ನೇ ನಿಮಿಷದಲ್ಲೇ ಮುನ್ನಡೆ ಪಡೆಯಿತು. ಕಾರ್ತಿ ಸೆಲ್ವಂ ಗೋಲು ಬಾರಿಸಿದರು. ಆದರೆ 59ನೇ ನಿಮಿಷದಲ್ಲಿ ಅಬ್ದುಲ್ ರಾಣಾ, ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಭಾರತದ ರಕ್ಷಣಾ ಪಡೆಯನ್ನು ವಂಚಿಸಿ ಗೋಲು ಗಳಿಸಿದರು.
ನಡಾಲ್, ಜೋಕೋವಿಚ್, ಜ್ವರೇವ್ ಮಣಿಸಿ ಮ್ಯಾಡ್ರಿಡ್ ಓಪನ್ ಗೆದ್ದ ಕಾರ್ಲೋಸ್..!
ಎರಡೂ ತಂಡಗಳು ಪಂದ್ಯದುದ್ದಕ್ಕೂ ಹಲವು ಪೆನಾಲ್ಟಿಕಾರ್ನರ್ ಅವಕಾಶಗಳನ್ನು ವ್ಯರ್ಥ ಮಾಡಿದವು. ಪಾಕಿಸ್ತಾನ ಅನೇಕ ಬಾರಿ ಫೀಲ್ಡ್ ಗೋಲು ಬಾರಿಸುವ ಅವಕಾಶಗಳನ್ನೂ ಕೈಚೆಲ್ಲಿತು. ಇದೇ ವೇಳೆ ಮೊದಲ ದಿನ ಒಮಾನ್ ವಿರುದ್ಧ ಮಲೇಷ್ಯಾ 7-0, ಬಾಂಗ್ಲಾದೇಶ ವಿರುದ್ಧ ಕೊರಿಯಾ 6-1, ಇಂಡೋನೇಷ್ಯಾ ವಿರುದ್ಧ ಜಪಾನ್ 9-0 ಅಂತರದಲ್ಲಿ ಗೆದ್ದವು. ಭಾರತ 2ನೇ ಪಂದ್ಯದಲ್ಲಿ ಮಂಗಳವಾರ ಜಪಾನ್ ವಿರುದ್ಧ ಆಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.