ವಿಂಬಲ್ಡನ್: ಹಾಲಿ ಚಾಂಪಿಯನ್ ಕಾರ್ಲೊಸ್ ಆಲ್ಕರಜ್‌ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ

By Kannadaprabha News  |  First Published Jul 8, 2024, 10:58 AM IST

ಪುರುಷರ ಸಿಂಗಲ್ಸ್‌ 4ನೇ ಸುತ್ತಿನ ಪಂದ್ಯದಲ್ಲಿ 3ನೇ ಶ್ರೇಯಾಂಕಿತ, ಸ್ಪೇನ್‌ನ ಆಲ್ಕರಜ್‌ ಅವರು ಫ್ರಾನ್ಸ್‌ನ 16ನೇ ಶ್ರೇಯಾಂಕಿತ ಯುಗೊ ಹಂಬರ್ಟ್‌ ವಿರುದ್ಧ 6-3, 6-4, 1-6, 7-5 ಸೆಟ್‌ಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು. ಇದರೊಂದಿಗೆ ವಿಂಬಲ್ಡ್‌ನಲ್ಲಿ ಸತತ 2ನೇ ಟ್ರೋಫಿ ಗೆಲ್ಲುವ ಹಾದಿಯಲ್ಲಿ ಆಲ್ಕರಜ್‌ಗೆ ಇನ್ನು 3 ಹೆಜ್ಜೆ ಮಾತ್ರ ಬಾಕಿಯಿದೆ.


ಲಂಡನ್‌: ಹಾಲಿ ಚಾಂಪಿಯನ್‌ ಕಾರ್ಲೊಸ್‌ ಆಲ್ಕರಜ್‌ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಇದೇ ವೇಳೆ 24 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ನೋವಾಕ್‌ ಜೋಕೋವಿಚ್‌ ಪ್ರಿ ಕ್ವಾರ್ಟರ್‌ ಫೈನಲ್‌ಗೇರಿದ್ದಾರೆ.

ಭಾನುವಾರ ಪುರುಷರ ಸಿಂಗಲ್ಸ್‌ 4ನೇ ಸುತ್ತಿನ ಪಂದ್ಯದಲ್ಲಿ 3ನೇ ಶ್ರೇಯಾಂಕಿತ, ಸ್ಪೇನ್‌ನ ಆಲ್ಕರಜ್‌ ಅವರು ಫ್ರಾನ್ಸ್‌ನ 16ನೇ ಶ್ರೇಯಾಂಕಿತ ಯುಗೊ ಹಂಬರ್ಟ್‌ ವಿರುದ್ಧ 6-3, 6-4, 1-6, 7-5 ಸೆಟ್‌ಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು. ಇದರೊಂದಿಗೆ ವಿಂಬಲ್ಡ್‌ನಲ್ಲಿ ಸತತ 2ನೇ ಟ್ರೋಫಿ ಗೆಲ್ಲುವ ಹಾದಿಯಲ್ಲಿ ಆಲ್ಕರಜ್‌ಗೆ ಇನ್ನು 3 ಹೆಜ್ಜೆ ಮಾತ್ರ ಬಾಕಿಯಿದೆ.

Tap to resize

Latest Videos

ಕೇಕ್ ಕತ್ತರಿಸಿ, ತಿಂದ ನಂತರ ಪತ್ನಿಗೆ ಧೋನಿ ಕೇಳಿದ್ದೇನು? ಉತ್ತರದಿಂದ ಮಹಿ ನಿರಾಳ!

Carlos Alcaraz, you are ridiculous 🤯 | pic.twitter.com/UCuhaZAaw8

— Wimbledon (@Wimbledon)

ಇದಕ್ಕೂ ಮುನ್ನ ಶನಿವಾರ 3ನೇ ಸುತ್ತಿನ ಪಂದ್ಯದಲ್ಲಿ 2ನೇ ಶ್ರೇಯಾಂಕಿತ ಜೋಕೋವಿಚ್‌, ಆಸ್ಟ್ರೇಲಿಯಾದ ಅಲೆಕ್ಸಿ ಪಾಪಿರಿನ್‌ ವಿರುದ್ಧ 4-6, 6-3, 6-4, 7-6(7/3) ಸೆಟ್‌ಗಳಲ್ಲಿ ಜಯಭೇರಿ ಬಾರಿಸಿ ಪ್ರಿ ಕ್ವಾರ್ಟರ್‌ಗೇರಿದರು. ಡೆನ್ಮಾರ್ಕ್‌ನ ಹೋಲ್ಗರ್‌ ರ್‍ಯುನೆ, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್ ಕೂಡಾ 4ನೇ ಸುತ್ತು ಪ್ರವೇಶಿಸಿದರು.

ಪೌಲಿನಿ ಕ್ವಾರ್ಟರ್‌ಗೆ: 2024ರ ಫ್ರೆಂಚ್‌ ಓಪನ್‌ ರನ್ನರ್‌-ಅಪ್‌, ಇಟಲಿಯ ಜಾಸ್ಮಿನ್‌ ಪೌಲಿನಿ ಮಹಿಳಾ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಪ್ರಿ ಕ್ವಾರ್ಟರ್‌ ಪಂದ್ಯದ ವೇಳೆ ಅಮೆರಿಕದ ಮ್ಯಾಡಿಸನ್ ಕೀಸ್‌ ಗಾಯಗೊಂಡ ಕಾರಣ ಪೌಲಿನಿ ಮುಂದಿನ ಸುತ್ತಿಗೇರಿದರು.

ಶಾಂತ ಚಿತ್ತದಿಂದಿರಿ, ಸರಿಯಾಗಿ ನಿದ್ದೆ ಮಾಡಿ: ಒಲಿಂಪಿಯನ್ಸ್‌ಗೆ ಪ್ರಧಾನಿ ಮೋದಿ ಸಲಹೆ

ಬೋಪಣ್ಣ-ಎಬ್ಡೆನ್‌ ಅಭಿಯಾನ ಅಂತ್ಯ

ಭಾರತದ ರೋಹನ್‌ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ವಿಂಬಲ್ಡನ್‌ ಟೆನಿಸ್‌ ಟೂರ್ನಿಯಲ್ಲಿ 2ನೇ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಶನಿವಾರ ರಾತ್ರಿ ನಡೆದ ಪುರುಷರ ಡಬಲ್ಸ್‌ ಪಂದ್ಯದಲ್ಲಿ 2ನೇ ಶ್ರೇಯಾಂಕಿತ ಇಂಡೋ-ಆಸೀಸ್‌ ಜೋಡಿಗೆ ಜರ್ಮನಿಯ ಹೆಂಡ್ರಿಕ್‌ ಜೆಬೆನ್ಸ್‌-ಕಾನ್ಸ್‌ಟಾಂಟಿನ್‌ ಫ್ರಾಂಟ್‌ಜೆನ್‌ ವಿರುದ್ಧ 3-6, 6-7 ಸೆಟ್‌ಗಳಲ್ಲಿ ಸೋಲು ಎದುರಾಯಿತು. 2ನೇ ಸೆಟ್‌ನಲ್ಲಿ ಉಭಯ ಜೋಡಿಗಳು 5-5ರಲ್ಲಿ ಸಮಬಲ ಸಾಧಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಕೆಲ ಹೊತ್ತಿನ ಬಳಿಕ ಪಂದ್ಯ ಶುರುವಾಗಿ, ಜರ್ಮನಿಯ ಜೋಡಿಗೆ ಗೆಲುವು ಒಲಿಯಿತು.

ಉಗಾಂಡದಲ್ಲಿ ಪ್ಯಾರಾ ಬ್ಯಾಡ್ಮಿಂಟನ್‌: ರಾಜ್ಯದ ಅಥ್ಲೀಟ್ಸ್‌ಗೆ ಆರು ಪದಕ

ಕಂಪಾಲ(ಉಗಾಂಡ): ಉಗಾಂಡ ಪ್ಯಾರಾ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕರ್ನಾಟಕದ ಪ್ಯಾರಾ ಶಟ್ಲರ್‌ಗಳು 6 ಪದಕ ಗೆದ್ದಿದ್ದಾರೆ. ಅನುಶಾ ಮಹಿಳಾ ಡಬಲ್ಸ್‌ನಲ್ಲಿ ಬೆಳ್ಳಿ, ಸಿಂಗಲ್ಸ್ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಕಂಚು ಜಯಿಸಿದರು. ಬಾಲಕೇಶವುಲು ಎಸ್‌ಎಲ್‌3 ವಿಭಾಗದ ಸಿಂಗಲ್ಸ್‌ನಲ್ಲಿ ಕಂಚು, ಕಾಂತರಾಜ್‌ ನಾಯ್ಕ್‌ ಡಬ್ಲ್ಯುಎಚ್‌1 ವಿಭಾಗದ ಸಿಂಗಲ್ಸ್‌ನಲ್ಲಿ ಕಂಚು, ಸುಮಿತ್‌ ಎಸ್‌ಯು5 ವಿಭಾಗದ ಡಬಲ್ಸ್‌ನಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.

click me!