ಆಸ್ಪ್ರೇಲಿಯನ್‌ ಓಪನ್‌: 2ನೇ ಸುತ್ತಿಗೆ ಫೆಡರರ್‌, ನಡಾಲ್‌

By Web DeskFirst Published Jan 15, 2019, 9:55 AM IST
Highlights

ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ  ಮೊದಲ ಸುತ್ತಲ್ಲೇ ಹೊರಬಿದ್ದಿದ್ದರೆ, ರಾಫೆಲ್ ನಡಾಲ್ ಹಾಗೂ ರೋಜರ್ ಫೆಡರರ್ 2ನೇ ಸುತ್ತು ಪ್ರವೇಶಿಸಿದ್ದಾರೆ. ಇಲ್ಲಿದೆ ಆಸ್ಪ್ರೇಲಿಯನ್‌ ಓಪನ್‌ ಹೈಲೈಟ್ಸ್ ಇಲ್ಲಿದೆ.

ಮೆಲ್ಬರ್ನ್‌(ಜ.15): ಗಾಯದ ಸಮಸ್ಯೆಯಿಂದ ಬಳಲುತ್ತಿರುವ 3 ಬಾರಿ ಗ್ರ್ಯಾಂಡ್‌ಸ್ಲಾಂ ಚಾಂಪಿಯನ್‌ ಬ್ರಿಟನ್‌ನ ಆ್ಯಂಡಿ ಮರ್ರೆ, ಸೋಮವಾರದಿಂದ ಇಲ್ಲಿ ಆರಂಭಗೊಂಡ ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌ ಗ್ರ್ಯಾಂಡ್‌ಸ್ಲಾಂನ ಮೊದಲ ಸುತ್ತಲ್ಲೇ ಹೊರಬಿದ್ದಿದ್ದಾರೆ. ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ರರ್ಬೆಟೋ ಬಟ್ಟಿಸ್ಟಾಅಗುಟ್‌ ವಿರುದ್ಧ 4-6, 4-6, 7-6, 7-6, 2-6 ಸೆಟ್‌ಗಳಲ್ಲಿ ಸೋಲುಂಡರು. ಮರ್ರೆ, ಆಸ್ಪ್ರೇಲಿಯನ್‌ ಓಪನ್‌ ಬಳಿಕ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದರು.

ಇದನ್ನೂ ಓದಿ: ಖೇಲೋ ಇಂಡಿಯಾ: ಈಜಿನಲ್ಲಿ ರಾಜ್ಯಕ್ಕೆ ಅಗ್ರಸ್ಥಾನ

ಇದೇ ವೇಳೆ 21ನೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸ್ವಿಜರ್‌ಲೆಂಡ್‌ನ ರೋಜರ್‌ ಫೆಡರರ್‌, ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಉಜ್ಬೇಕಿಸ್ತಾನದ ಡೆನಿಸ್‌ ಇಸ್ಟೋಮಿನ್‌ ವಿರುದ್ಧ 6-3, 6-4, 6-4 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ 2ನೇ ಸುತ್ತಿಗೆ ಪ್ರವೇಶ ಪಡೆದರು. ಗಾಯದಿಂದ ಚೇತರಿಸಿಕೊಂಡು ಕಣಕ್ಕಿಳಿದಿರುವ 17 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಸ್ಪೇನ್‌ನ ರಾಫೆಲ್‌ ನಡಾಲ್‌, ಆಸ್ಪ್ರೇಲಿಯಾದ ಜೇಮ್ಸ್‌ ಡಕ್ವತ್‌ರ್‍ ವಿರುದ್ಧ 6-4, 6-3, 7-5 ಸೆಟ್‌ಗಳಲ್ಲಿ ಗೆದ್ದು ಮುಂದಿನ ಸುತ್ತಿಗೇರಿದರು. 5ನೇ ಶ್ರೇಯಾಂಕಿತ ಕೆವಿನ್‌ ಆ್ಯಂಡರ್‌ಸನ್‌ 2ನೇ ಸುತ್ತಿಗೆ ಪ್ರವೇಶಿಸಿದರೆ, 9ನೇ ಶ್ರೇಯಾಂಕಿತ ಜಾನ್‌ ಇಸ್ನರ್‌ ಮೊದಲ ಸುತ್ತಲ್ಲೇ ಹೊರಬಿದ್ದು ಅಚ್ಚರಿ ಮೂಡಿಸಿದರು.

ಇದನ್ನೂ ಓದಿ: ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯಕ್ಕೆ ತಂಡ ಪ್ರಕಟಿಸಿದ ಬಿಸಿಸಿಐ!

ಮಹಿಳಾ ಸಿಂಗಲ್ಸ್‌ನಲ್ಲಿ 2ನೇ ಶ್ರೇಯಾಂಕಿತೆ ಹಾಗೂ 2016ರ ಚಾಂಪಿಯನ್‌ ಜರ್ಮನಿಯ ಆ್ಯಂಜಿಲಿಕ್‌ ಕೆರ್ಬರ್‌ ಸ್ಲೋವೆನಿಯಾದ ಪೊಲೊನಾ ಹೆರ್ಕೊಗ್‌ ವಿರುದ್ಧ 6-2, 6-2ರಲ್ಲಿ ಗೆದ್ದರೆ, 2008ರ ಚಾಂಪಿಯನ್‌ ರಷ್ಯಾದ ಮರಿಯಾ ಶರಪೋವಾ ಬ್ರಿಟನ್‌ನ ಹಾರ್ಟಿಯೆಟ್‌ ಡಾರ್ಟ್‌ ವಿರುದ್ಧ 6-0, 6-0 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು.

3ನೇ ಶ್ರೇಯಾಂಕಿತೆ ಹಾಗೂ ಹಾಲಿ ಚಾಂಪಿಯನ್‌ ಡೆನ್ಮಾರ್ಕ್ನ ಕ್ಯಾರೋಲಿನ್‌ ವೋಜ್ನಿಯಾಕಿ, ಬೆಲ್ಜಿಯಂನ ವಾನ್‌ ಯುಟ್‌ವ್ಯಾನ್‌್ಕ ವಿರುದ್ಧ 6-3,6-4 ಸೆಟ್‌ಗಳಲ್ಲಿ ಜಯಗಳಿಸಿ 2ನೇ ಸುತ್ತಿಗೆ ಪ್ರವೇಶ ಪಡೆದರು. 5ನೇ ಶ್ರೇಯಾಂಕಿತೆ ಸ್ಲೋನ್‌ ಸ್ಟೀಫನ್ಸ್‌ ಸಹ 2ನೇ ಸುತ್ತಿಗೆ ಪ್ರವೇಶಿಸಿದರು.

ಇದನ್ನೂ ಓದಿ: ರಾಹುಲ್ ದ್ರಾವಿಡ್ ಗೆ 20 ವರ್ಷದ ಯುವತಿ ಪ್ರಪೋಸ್ ಮಾಡಿದಾಗ...!

ಬ್ರಿಟನ್‌ನ ಕ್ಯಾಟಿ ಬೌಲ್ಟರ್‌, ರಷ್ಯಾದ ಎಕ್ತರೀನಾ ಮಕರೋವಾ ವಿರುದ್ಧ 6-0, 4-6, 7-6(10/6) ಸೆಟ್‌ಗಳಲ್ಲಿ ಗೆದ್ದು ಆಸ್ಪ್ರೇಲಿಯನ್‌ ಓಪನ್‌ನಲ್ಲಿ 3ನೇ ಸೆಟ್‌ ಟೈ ಬ್ರೇಕರ್‌ ಗೆದ್ದ ಮೊದಲ ಮಹಿಳಾ ಆಟಗಾರ್ತಿ ಎನ್ನುವ ದಾಖಲೆಗೆ ಪಾತ್ರರಾದರು.

ಮೊದಲ ಸುತ್ತಲ್ಲೇ ಪ್ರಜ್ನೇಶ್‌ ಹೊರಕ್ಕೆ!
ಭಾರತದ ಪ್ರಜ್ನೇಶ್‌ ಗುಣೇಶ್ವರನ್‌ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಸೋಮವಾರ ಅಮೆರಿಕದ ಫ್ರಾನ್ಸಸ್‌ ಟಿಯಾಫೋ ವಿರುದ್ಧ ನಡೆದ ಪಂದ್ಯದಲ್ಲಿ ಪ್ರಜ್ನೇಶ್‌ 6-7,3-6,3-6 ಸೆಟ್‌ಗಳಲ್ಲಿ ಪರಾಭವಗೊಂಡರು. ವಿಶ್ವ ರಾರ‍ಯಂಕಿಂಗ್‌ನಲ್ಲಿ 39ನೇ ಸ್ಥಾನದಲ್ಲಿರುವ ಅಮೆರಿಕದ ಆಟಗಾರ, 1 ಗಂಟೆ 52 ನಿಮಿಷಗಳಲ್ಲಿ ಪಂದ್ಯ ಮುಕ್ತಾಯಗೊಳಿಸಿದರು.
 

click me!