ಕರ್ನಾಟಕಕ್ಕೆ ಕಾಲಿಟ್ಟಿತು ವಿದೇಶದ ಪಾಡಲ್ ಟೆನಿಸ್- ಏನಿದು ಹೊಸ ಕ್ರೀಡೆ?

By Web Desk  |  First Published Jan 26, 2019, 8:22 PM IST

ಹೊಸ ಕ್ರೀಡೆ ಪಾಡಲ್ ಟೆನಿಸ್ ವಿದೇಶಲ್ಲಿ ತುಂಬಾ ಹೆಸರು ಮಾಡಿದೆ. ಜಗತ್ತಿನಾದ್ಯಂತ 3 ಕೋಟಿ ಜನರು ಈ ಕ್ರೀಡೆಯನ್ನು ಆಡುತ್ತಾರೆ . ಇದೀಗ ಮೊದಲ ಬಾರಿಗೆ ಭಾರತಕ್ಕೆ ಲಗ್ಗೆ ಇಟ್ಟಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಮೊತ್ತ ಮೊದಲ ಅಂತಾರಾಷ್ಟ್ರೀಯ ಪಾಡಲ್ ಟೆನಿಸ್ ಟೂರ್ನಿ ಆಯೋಜನೆಗೊಳ್ಳುತ್ತಿದೆ. ಈ ಹೊಸ ಕ್ರೀಡೆ ಹಾಗೂ ಟೂರ್ನಿಯ ಹೆಚ್ಚಿನ ಮಾಹಿತಿ ಇಲ್ಲಿದೆ.


ಬೆಂಗಳೂರು(ಜ.26): ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಾಡಲ್ ಟೆನ್ನಿಸ್ ಕ್ರೀಡೆ ಈಗ ಭಾರತಕ್ಕೂ ಕಾಲಿಟ್ಟು ತನ್ನ ಅಲೆಯನ್ನು ಬೀಸಲು ಪ್ರಾರಂಭಿಸಿದೆ. ಭಾರತದಲ್ಲೇ ಮೊದಲ ಪಾಡಲ್ ಕೋರ್ಟ್ ಹೊಂದಿದ ಹೆಗ್ಗಳಿಕೆಗೆ ಸದಾಶಿವನಗರದ ಪಾಡಲ್ ಟೆನ್ನಿಸ್ ಕೋರ್ಟ್ ಪಾತ್ರವಾಗಿದೆ.

ಪಾಡಲ್ ಟೆನ್ನಿಸನ್ನು ಕರ್ನಾಟಕ ರಾಜ್ಯದಲ್ಲಿ ಜನಪ್ರಿಯಗೊಳಿಸುವುದೇ ಕರ್ನಾಟಕ ರಾಜ್ಯ ಪೆಡಲ್ ಸಂಸ್ಥೆಯ ಮುಖ್ಯ ಗುರಿಯಾಗಿದೆ. ಇದಕ್ಕಾಗಿ ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಪಾಡಲ್ ಟೆನ್ನಿಸ್ ಸ್ಪೋರ್ಟ್ಸ್ ಕ್ಲಬ್ ಸ್ಥಾಪಿಸಲು ಉದ್ದೇಶಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ಪಾಡಲ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.

Tap to resize

Latest Videos

ಇಂಡಿಯನ್ ಪಾಡೆಲ್ ರ‍್ಯಾಂಕಿಂಗ್ ವಿಜೇತರೊಂದಿಗೆ ಪ್ರಶಾಂತ್ ಸಂಬರ್ಗಿ: 

ಇದನ್ನೂ ಓದಿ: ಗಂಭೀರ್, ಬಚೇಂದ್ರಿ ಪಾಲ್ ಸೇರಿ 9 ಕ್ರೀಡಾಸಾಧಕರಿಗೆ ಒಲಿದ ಪದ್ಮಶ್ರೀ ಗೌರವ

"ಟೆನ್ನಿಸ್ ವಿತ್ ವಾಲ್ಸ್"  ಹಾಗು "ಸ್ಕ್ವ್ಯಾಷ್ ಇನ್ ದಿ ಸನ್" ಎಂಬ ಹೆಸರಿನಿಂದಲೂ ಕರೆಯಲ್ಪಡುವ ಈ ಕ್ರೀಡೆಯನ್ನು ಮಹಿಳೆಯರು-ಪುರುಷರು ಎಂಬ ಬೇಧಭಾವವಿಲ್ಲದೆ ಎಲ್ಲ ವಯೋಮಾನದವರೂ ಆಡಬಹುದಾಗಿದೆ ಎಂದು ಪಾಡಲ್ ಅಸೋಸಿಯೇಶನ್ ಸಂಘದ ಅಧ್ಯಕ್ಷೆ ಶ್ರೀಮತಿ ಸ್ನೇಹ ಹೇಳಿದ್ದಾರೆ.

ಸುಲಭವಾಗಿ ಕಲಿಯಬಹುದಾದ ಈ ಕ್ರೀಡೆಯನ್ನು ಗಾಜಿನ ಕೋರ್ಟ್ ಒಳಗೆ ಆಡುತ್ತಾರೆ. 66ಅಡಿ X 33 ಅಡಿಯಷ್ಟು ವಿಸ್ತೀರ್ಣ ಹೊಂದಿರುವ ಪಾಡಲ್ ಟೆನ್ನಿಸ್ ಕೋರ್ಟ್ ಟೆನ್ನಿಸ್ ಕೋರ್ಟ್’ಗಿಂತ ಚಿಕ್ಕದಾಗಿದೆ. ಬಹುಬೇಗನೆ ಕಲಿಯಬಹುದಾದ ಈ ಕ್ರೀಡೆನ್ನು ಜಗತ್ತಿನಾದ್ಯಂತ 3 ಕೋಟಿ ಜನರು ಆಡುತ್ತಾರೆ. ವಿಶ್ವ ಪಾಡಲ್ ಟೆನ್ನಿಸ್ ಪಂದ್ಯಾವಳಿಗೆ ಬಾಲ್ ಪೂರೈಕೆದಾರರಾದ ಬಾಬೊಲಾಟ್ ಕಂಪನಿ ಇಂಡಿಯನ್ ಪಾಡಲ್ ಫೆಡರೇಶನ್ ಜೊತೆಗೆ ಪಾಲುದಾರರಾಗಿ ಕೈ ಜೋಡಿಸಿದೆ.

ಇದನ್ನೂ ಓದಿ: 2019ರ ವಿಶ್ವಕಪ್: ಎಂ.ಎಸ್.ಧೋನಿಗೆ 4ನೇ ಕ್ರಮಾಂಕ!

ಪಾಡೆಲ್ ಟೆನ್ನಿಸ್ ಆಟದ ನಿಯಮಗಳು :

1. ಪಾಡಲ್ ಟೆನ್ನಿಸ್ ಕ್ರೀಡೆಯನ್ನು ಯಾವಾಗಲೂ ಡಬಲ್ಸ್ ಮಾದರಿಯಲ್ಲಿ ಆಡುತ್ತಾರೆ 

2. ಕ್ರೀಡೆಯು ಅಂಡರ್ ಹ್ಯಾಂಡ್ ಸರ್ವಿಸ್ ಮೂಲಕ ಶುರುವಾಗುತ್ತದೆ ಹಾಗು ಎರಡು ಪ್ರಯತ್ನಗಳನ್ನು ಒಳಗೊಂಡಿರುತ್ತದೆ. 

3. ಟೆನ್ನಿಸ್ ಆಟದ ಹಾಗೆಯೇ ಇದರಲ್ಲಿ ಬಾಲನ್ನು ಒಮ್ಮೆ ಮಾತ್ರ ಹಿಟ್ ಹಾಗು ಬೌನ್ಸ್ ಮಾಡಬಹುದು.

4. ಎದುರಾಳಿಯು ಬಾಲನ್ನು ಡೈರೆಕ್ಟ್ ಹಿಟ್ ಮಾಡದೆ ನೆಲದ ಮೇಲೆ ಬೌನ್ಸ್ ಅದ ಮೇಲಷ್ಟೇ ಹೊಡೆಯಬೇಕು. 

ಅಂಕಗಳು 

1. ಪಾಡಲ್ ಟೆನ್ನಿಸ್ ಆಟದ ಅಂಕಗಳು ಟೆನ್ನಿಸ್ ಅಂಕಗಳ ಹಾಗೆಯೇ ಇರುತ್ತದೆ (ಉದಾಹರಣೆ : 15/೦, 3೦/೦, 4೦/೦, ಅಡ್ವಾಂಟೇಜ್, ಡ್ಯೂಸ್ ಇತ್ಯಾದಿ )

2. ಪಾಡಲ್ ಟೆನ್ನಿಸ್ ಗೆಲ್ಲಲು 2 ಸೆಟ್’ಗಳಲ್ಲಿ ಜಯ ಗಳಿಸಬೇಕು (ಒಂದು ಸೆಟ್ 6 ಪಂದ್ಯಗಳನ್ನು ಒಳಗೊಂಡಿರುತ್ತದೆ )

ಇದನ್ನೂ ಓದಿ: ಐಪಿಎಲ್’ನ ಚಾಂಪಿಯನ್ ತಂಡ ಖರೀದಿಸಲು ಮುಂದಾದ ಬಚ್ಚನ್ ಕುಟುಂಬ..!

ಬೆಂಗಳೂರಿನ ಸದಾಶಿವನಗರದಲ್ಲಿ ಜನವರಿ 26 ಹಾಗೂ 27ರಂದು ನಡೆಯುವ ಪಾಡಲ್ ಟೆನ್ನಿಸ್ ಪಂದ್ಯಾವಳಿ ಕ್ರೀಡಾಪಟುಗಳಿಗೆ ಒಂದು ಉತ್ತಮ ಅವಕಾಶ. ಈಗಾಗಲೇ ನಮ್ಮ ಸಂಘದ ವೆಬ್’ಸೈಟ್’ನಲ್ಲಿ ನೋಂದಣಿ ಶುರವಾಗಿದೆ. ಈ ಪಂದ್ಯಾವಳಿಯ ವಿಜೇತರು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳುತ್ತಾರೆ ಎಂದು ಸಂಬರ್ಗಿ ಹೇಳಿದ್ದಾರೆ.

ಪಾಡಲ್ ಟೆನ್ನಿಸ್  ಕರ್ನಾಟಕದಲ್ಲಿ ಯಾಕೆ ಬೇಕು? 
1. ಪಾಡಲ್ ಕ್ರೀಡೆಯು ಯೂರೋಪ್,  ಅಮೆರಿಕ ಕೆನಡಾ, ದುಬೈ ಹಾಗೂ ಜಪಾನ್ ದೇಶಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಹಾಗೂ ಈ ಶತಮಾನದ ಕ್ರೀಡೆ ಎಂದು ಖ್ಯಾತಿಗೊಂಡಿದೆ. 

2. ಪಾಡಲ್ ಟೆನ್ನಿಸ್ ಎಲ್ಲರೂ ಆಡಬಹುದಾದಂತಹ ಅತ್ಯಂತ ಸುಲಭದ ಕ್ರೀಡೆ ಹಾಗೂ ಈ ಕ್ರೀಡೆಯನ್ನು ಆಡುವುದರಿಂದ ಇನ್ನಷ್ಟು ಬಲಾಢ್ಯರಾಗಬಹುದು. 

3. ಭಾರತ ದೇಶದಲ್ಲಿ ಕರ್ನಾಟಕ ಅತ್ಯಂತ ಅಭಿವೃದ್ಧಿ ಹೊಂದುತ್ತಿರುವ ರಾಜ್ಯ.  ಐಟಿ ಸಿಟಿ, ಗಾರ್ಡೆನ್ ಸಿಟಿ ಎಂದೇ ಖ್ಯಾತಿಪಡೆದ ಬೆಂಗಳೂರಿನ ಜನಸಂಖ್ಯೆ ದಿನೇ ದಿನೇ ಏರುತ್ತಿದೆ. ಕೆಲಸದ ಒತ್ತಡದಿಂದ ತತ್ತರಿಸಿ ಹೋಗಿರುವ ಜನರಿಗೆ ಇಂತಹ ಕ್ರೀಡೆಯ ಅಗತ್ಯವಿದೆ. 

4. ಈಗಿನ ತಾಂತ್ರಿಕ ಯುಗದಲ್ಲಿ ಜನರಿಗೆ ಯಾವುದಕ್ಕೂ ಸಮಯವಿಲ್ಲ. ಅವರು ಕೆಲಸದ ಒತ್ತಡದಲ್ಲಿ ತಮ್ಮ ಆರೋಗ್ಯದ ಕಡೆ ಕಾಳಜಿ ವಹಿಸುವುದಿಲ್ಲ, ಮನೆಯವರ ಜೊತೆ ಹಾಗೂ ಸ್ನೇಹಿತರೊಡನೆ ಮಾತನಾಡಲೂ ಅವರಿಗೆ ಸಮಯವವಿಲ್ಲ. ಪಾಡಲ್ ಟೆನ್ನಿಸ್ ಆಡುವುದರಿಂದ ಗಂಟೆಗೆ 500 ಕ್ಯಾಲೊರಿಸ್ ಇಳಿಸಬಹುದು, ಮನೆಯವರ ಹಾಗೂ ಸ್ನೇಹಿತರ ಜೊತೆ ಇದನ್ನು ಆಡವುದರಿಂದ ಅವರ ಜೊತೆ ಬಾಂಧವ್ಯವು ಚೆನ್ನಾಗಿರುತ್ತದೆ, ಹಾಗೂ ಹೊಸಜನರ ಸಂಪರ್ಕವೂ ಆಗುತ್ತದೆ.

click me!