ಮಂಗಳ ಗ್ರಹಕ್ಕೆ ಸೂಪರ್‌ಫಾಸ್ಟ್‌ ಪ್ರಯಾಣ, ನ್ಯೂಕ್ಲಿಯರ್‌ ಚಾಲಿತ ನೌಕೆ ಸಿದ್ಧಪಡಿಸಲಿರುವ ನಾಸಾ!

By Santosh Naik  |  First Published Jul 31, 2023, 3:15 PM IST


ಪ್ರಸ್ತುತ ಮಂಗಳಗ್ರಹಕ್ಕೆ ಪ್ರಯಾಣ ಮಾಡುವ ಸಮಯ 7 ತಿಂಗಳು. ಆದರೆ, ಈ ಸಮಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಾಸಾ ದೊಡ್ಡ ಮಟ್ಟದ ಪ್ರಯತ್ನ ಮಾಡುತ್ತಿದ್ದು, ನ್ಯೂಕ್ಲಿಯರ್‌ ಚಾಲಿತ ನೌಕೆಯನ್ನು ಸಿದ್ಧಮಾಡುವ ಹಾದಿಯಲ್ಲಿದೆ.


ನ್ಯೂಯಾರ್ಕ್‌ (ಜು.31): ತನ್ನ ಬಹುನಿರೀಕ್ಷಿತ ಆರ್ಟಿಮಿಸ್‌ ಯೋಜನೆಯೊಂದಿಗೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ಚಂದ್ರನಲ್ಲಿಗೆ ಮಾನವನನ್ನು ಮತ್ತೊಮ್ಮೆ ಕಳಿಸುವ ಪ್ರಯತ್ನದಲ್ಲಿದೆ. ಅದರೊಂದಿಗೆ ನಾಸಾ ಮತ್ತೊಂದು ಮಹತ್ವದ ಯೋಜನೆಗೆ ಈಗಾಗಳೇ ಸಿದ್ಧತೆಯನ್ನು ಆರಂಭ ಮಾಡಿದೆ. ಭವಿಷ್ಯದ ದಿನಗಳಲ್ಲಿ ಆರ್ಟಿಮಿಸ್‌ ಯೋಜನೆ ಮಂಗಳ ಗ್ರಹಕ್ಕೂ ವಿಸ್ತರಣೆಯಾಗಬಹುದು. ಅದಕ್ಕಾಗಿ ಭೂಮಿಯ ಮೇಲೆ ಹಿಂದೆಂದೂ ಇರದ ಅತ್ಯಂತ ಶಕ್ತಿಶಾಲಿ ಪ್ರಪಲ್ಶನ್‌ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ಹಂತದಲ್ಲಿದೆ. 2025ರ ಕೊನೆಯಲ್ಲಿ ಅಥವಾ 2026ರ ಆರಂಭದಲ್ಲಿ ನಾಸಾ ಭೂಕಕ್ಷೆಗೆ ಹೊಸ ನೌಕೆಯನ್ನು ಹಾರಿಬಿಡಲಿದೆ. ಆದರೆ, ಇದು ಸಾಮಾನ್ಯ ಪ್ರಪಲ್ಶನ್‌ ವ್ಯವಸ್ಥೆ ಹೊಂದಿರುವ ನೌಕೆಯಾಗಿರುವುದಿಲ್ಲ. ಇದು ನ್ಯೂಕ್ಲಿಯರ್‌ ಚಾಲಿತ ಬಾಹ್ಯಾಕಾಶ ನೌಕೆಯಾಗಿರಲಿದೆ. ಹಾಗೇನಾದರೂ ನ್ಯೂಕ್ಲಿಯರ್‌ ಥರ್ಮಲ್‌ ಪ್ರಪಲ್ಶನ್‌ ವ್ಯವಸ್ಥೆ ಯಶಸ್ವಿಯಾದಲ್ಲಿ ಮಂಗಳ ಗ್ರಹಕ್ಕೆ ಪ್ರಯಾಣ ಮಾಡುವ ಸಮಯದಲ್ಲಿ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಅದೇ ಕಾರಣಕ್ಕಾಗಿ ಈ ತಂತ್ರಜ್ಞಾನವನ್ನು ಭೂಕಕ್ಷಗೆ ಸಮೀಪದಲ್ಲಿ ಪರೀಕ್ಷೆ ಮಾಡುವ ಗುರಿಯನ್ನು ನಾಸಾ ಹೊಂದಿದೆ.

ಹಾಗೇನಾದರೂ ನ್ಯೂಕ್ಲಿಯರ್‌ ಥರ್ಮಲ್‌ ಪ್ರಪಲ್ಶನ್‌ ವ್ಯವಸ್ಥೆ ಯಶಸ್ವಿಯಾದಲ್ಲಿ, 2030ರ ಕೊನೆಯಲ್ಲಿ ಅಥವಾ 2040ರ ದಶಕದ ಆರಂಭದಲ್ಲಿ ಮಾನವರನ್ನು ಮಂಗಳಗ್ರಹಕ್ಕೆ ಕಳಿಸುವ ತನ್ನ ಗುರಿಯನ್ನು ತಲುಪಲು ಸಹಾಯ ಮಾಡಲಿದೆ.

ಭೂಮಿಯಿಂದ ಬರೋಬ್ಬರಿ 300 ಮಿಲಿಯನ್‌ ಮೈಲಿ (480 ಮಿಲಿಯನ್‌ ಕಿಲೋಮೀಟರ್‌) ದೂರದಲ್ಲಿ ಮಂಗಳಗ್ರಹವಿದೆ. ಸೂರ್ಯನಿಂದ ದೂರವಿರುವ ನಾಲ್ಕನೇ ಗ್ರಹ. ಈ ಗ್ರಹಕ್ಕೆ ಹೋಗಲು ಮಾನವನಿಗೆ ಈಗಿರುವ ವ್ಯವಸ್ಥೆಯಲ್ಲಿ 7 ತಿಂಗಳು ಬೇಕಾಗುತ್ತದೆ. ನ್ಯೂಕ್ಲಿಯರ್‌ ಥರ್ಮಲ್‌ ಪ್ರಪಲ್ಶನ್‌ ವ್ಯವಸ್ಥೆಯಿಂದ ಮಂಗಳ ಗ್ರಹಕ್ಕೆ ಪ್ರಯಾಣ ಮಾಡುವ ಅವಧಿ ಎಷ್ಟು ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ, ನಾಸಾ ಆಡಳಿತಾಧಿಕಾರಿ ಬಿಲ್‌ ನೆಲ್ಸನ್‌ ಹೇಳುವ ಪ್ರಕಾರ, ಹಾಗೇನಾದರೂ ಈ ಪ್ರಯತ್ನ ಯಶಸ್ವಿಯಾದಲ್ಲಿ ದಾಖಲೆಯ ವೇಗದಲ್ಲಿ ಮಾನವನು ಮಂಗಳ ಗ್ರಹಕ್ಕೆ ಹೋಗಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಡ್ರಾಕೋ (ಡೆಮಾನ್‌ಸ್ಟ್ರೇಷನ್‌ ರಾಕೆಟ್ ಫಾರ್ ಅಗೈಲ್ ಸಿಸ್ಲುನಾರ್ ಕಾರ್ಯಾಚರಣೆಗಳು) ಎಂದು ಕರೆಯಲ್ಪಡುವ ಬಾಹ್ಯಾಕಾಶ ನೌಕೆಯು ನಾಸಾ ಮತ್ತು ಅಮೆರಿಕದ ಡಿಫೆನ್ಸ್ ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿ (DARPA) ನೇತೃತ್ವದ ಯೋಜನೆಯಾಗಿದೆ. ಇದನ್ನು ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿ ಲಾಕ್ಹೀಡ್ ಮಾರ್ಟಿನ್ ನಿರ್ಮಿಸಲಿದೆ.

ನಾಲ್ಕೇ ದಿನದಲ್ಲಿ ಚಂದ್ರನತ್ತ ಹೋಗುತ್ತೆ ಅಮೆರಿಕಾ, ಭಾರತಕ್ಕೆ ಏಕೆ 42 ದಿನ?

ನ್ಯೂಕ್ಲಿಯರ್‌ ಥರ್ಮಲ್‌ ರಾಕೆಟ್‌, ಹೈ ಥ್ರಸ್ಟ್‌-ಟು-ವೇಟ್‌ ರೇಶ್ಯೋ ಹೊಂದಿದೆ. ಈಗಿರುವ ಎಲೆಕ್ಟ್ರಿಕ್‌ ಪ್ರಪಲ್ಶನ್‌ಗಿಂತ 10 ಸಾವಿರ ಪಟ್ಟು ಅಧಿಕ ಮತ್ತು ಬಾಹ್ಯಾಕಾಶದಲ್ಲಿನ ಕೆಮಿಕಲ್‌ ಪ್ರಪಲ್ಶನ್‌ (ಕೆಮಿಕಲ್‌ ಬಳಸಿ ಬಾಹ್ಯಾಕಾಶ ನೌಕೆಯ ಪ್ರಯಾಣ) 2 ರಿಂದ 5 ಪಟ್ಟು ಅಧಿಕ ವೇಗವನ್ನು ಇದು ಹೊಂದಿರಲಿದೆ. ನಾಸಾ ಬಾಹ್ಯಾಕಾಶ ಸಂಸ್ಥೆಯು ನ್ಯೂಕ್ಲಿಯರ್ ಥರ್ಮಲ್ ಪ್ರೊಪಲ್ಷನ್ ಕುರಿತಾಗಿ ದಶಕಗಳಲ್ಲಿ ಅಧ್ಯಯನದ ನಿರತವಾಗಿದೆ.

Tap to resize

Latest Videos

undefined

 

ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಭಾರತೀಯ, ಇಂದಿಗೂ ಸಿಂಪಲ್‌ ಲೈಫ್‌ ಬದುಕುತ್ತಿರುವ ರಾಕೇಶ್‌ ಶರ್ಮ!

ಈ ತಂತ್ರಜ್ಞಾನವು ಪರಮಾಣು ವಿದಳನ ರಿಯಾಕ್ಟರ್‌ನಿಂದ ಹೈಡ್ರೋಜನ್ ಪ್ರೊಪೆಲ್ಲಂಟ್‌ಗೆ ಶಾಖವನ್ನು ಪರಿಚಯಿಸುತ್ತದೆ, ಇದು ಸಾಂಪ್ರದಾಯಿಕ ರಾಸಾಯನಿಕ-ಆಧಾರಿತ ರಾಕೆಟ್ ಎಂಜಿನ್‌ಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂದು ಅಸಾಧ್ಯವಾದ ವೇಗದ ಒತ್ತಡವನ್ನು ನೀಡುತ್ತದೆ. ಅದರೊಂದಿಗೆ 7 ತಿಂಗಳ ಕಾಲ ಸುದೀರ್ಘವಾಗಿ ಬಾಹ್ಯಾಕಾಶ ನೌಕೆಯಲ್ಲಿ ಇರಬೇಕಾದ ಅನಿವಾರ್ಯತೆಯನ್ನೂ ಇದು ತಪ್ಪಿಸುತ್ತದೆ.

click me!