
ಬೆಂಗಳೂರು: 1969ರಲ್ಲಿ ಇಸ್ರೋ ಸ್ಥಾಪನೆಯಾದಾಗ ಹಾಗೂ ಅದಕ್ಕೂ ಮೊದಲು ಪರೀಕ್ಷೆಗಾಗಿ ರಾಕೆಟ್‌ಗಳನ್ನು ಭಾರತದ ವಿಜ್ಞಾನಿಗಳು ಸೈಕಲ್ ಮೇಲೆ ಕೊಂಡೊಯ್ಯುತ್ತಿದ್ದರು. ಇದಾದ ಬಳಿಕ ಉಪಗ್ರಹಗಳನ್ನು ಎತ್ತಿನ ಗಾಡಿಯ ಮೇಲಿಟ್ಟು, ಉಡ್ಡಯನ ಕೇಂದ್ರಗಳಿಗೆ ಸಾಗಿಸಲಾಗುತ್ತಿತ್ತು. ಇದಕ್ಕೆ ಹಲವು ದೇಶಗಳು ಕುಹಕವಾಡಿದ್ದವು. ಅಲ್ಲದೇ ಪೋಖ್ರಾನ್ ಅಣು ಪರೀಕ್ಷೆಯ ಬಳಿಕ ಹಲವು ದೇಶಗಳು ಭಾರತಕ್ಕೆ ನೀಡುತ್ತಿದ್ದ ಸಹಕಾರವನ್ನು ನಿಲ್ಲಿಸಿದವು. ಆದರೂ ಧೃತಿಗೆಡದ ಇಸ್ರೋ, ದೇಶೀಯವಾಗಿ ಹಲವು ಸಂಶೋಧನೆ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಚಂದ್ರ ಹಾಗೂ ಮಂಗಳನ ಅಂಗಳವನ್ನು ತಲುಪಿದೆ. ಈ ಫೋಟೋಗಳು ಇಸ್ರೋದ ಸಾಧನೆಯನ್ನು ತೋರಿಸುವ ಪ್ರಮುಖ ಸಾಧನಗಳಾಗಿವೆ.
ಪರ್ಯಾಯ ಮಾರ್ಗ, ಮುಂದೂಡಿಕೆ ಇಲ್ಲದೆ ಯಶಸ್ವಿ ಲ್ಯಾಂಡಿಂಗ್
ಚಂದ್ರಯಾನ-2 ಯೋಜನೆಯ ವಿಫಲತೆಯಿಂದ ಪಾಠ ಕಲಿತ ಇಸ್ರೋ ಚಂದ್ರಯಾನ-3 (Chandrayaan3) ಯೋಜನೆಯನ್ನು ಯಶಸ್ವಿಯಾಗಿ ನಡೆಸಿದೆ. ಜು.14ರಂದು ಉಡಾವಣೆಗೊಂಡ ಚಂದ್ರಯಾನ ನೌಕೆ ಆ.23ರಂದು ಸುರಕ್ಷಿತವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಿದೆ. ಉಡಾವಣೆಯಾದಾಗಿನಿಂದ ಲ್ಯಾಂಡ್‌ವರೆಗೆ ಎಲ್ಲಾ ಪ್ರಕ್ರಿಯೆಗಳು ಇಸ್ರೋ ರೂಪಿಸಿದ್ದಂತೆ ಸುಸೂತ್ರವಾಗಿ ನಡೆದಿವೆ. ಜು.14ರಂದು ಶ್ರೀಹರಿಕೋಟಾದಿಂದ (Sriharikota) ಹೊರಟ ಎಲ್‌ಎಂವಿ-3 ನೌಕೆ ಚಂದ್ರಯಾನ ನೌಕೆಯನ್ನು ಯಶಸ್ವಿಯಾಗಿ ಭೂ ಕಕ್ಷೆಯಲ್ಲಿ (Orbitor) ಕೂರಿಸಿತು. ಇದಾದ ಬಳಿಕ ನಿಗದಿತವಾಗಿ ಈ ನೌಕೆಯ ಕಕ್ಷೆ ಎತ್ತರಿಸುವ ಕಾರ್ಯ ಕೈಗೊಳ್ಳುವ ಮೂಲಕ ಅದನ್ನು ಭೂಮಿಯಿಂದ ದೂರ ಕೊಂಡೊಯ್ಯಲಾಯಿತು. ಬಳಿಕ ಆ.1ರಂದು ಒಂದೇ ಬಾರಿ ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ನೌಕೆಯನ್ನು ಕಳುಹಿಸಲಾಯಿತು. ಚಂದ್ರನ ಕಕ್ಷೆಯನ್ನು ತಲುಪಿದ ನೌಕೆಯ ಕಕ್ಷೆ ಇಳಿಸುವ ಕಾರ್ಯವನ್ನು ನಿಗದಿತವಾಗಿ ಕೈಗೊಂಡು ಲ್ಯಾಂಡರನ್ನು ನೌಕೆಯಿಂದ ಬೇರ್ಪಡಿಸಲಾಯಿತು.
ಇದಾದ ಬಳಿಕ ಮೊದಲು ನಿಗದಿ ಪಡಿಸಿದ್ದಂತೆ ಆ.23ರಂದು ಲ್ಯಾಂಡರ್ (Lander)ವೇಗವನ್ನು ತಗ್ಗಿಸುತ್ತಾ ಅದನ್ನು ಮೊದಲು ನಿಗದಿಪಡಿಸಿದ್ದ ಕಾಲಕ್ಕೆ ಚಂದ್ರನ ಮೇಲೆ ಇಳಿಸಲಾಯಿತು. ಒಂದು ವೇಳೆ ಲ್ಯಾಂಡ್ ವೇಳೆ ಸಮಸ್ಯೆಯಾದರೆ ಮತ್ತೊಂದು ಸ್ಥಳ ಬದಲಾವಣೆಗೂ ಅವಕಾಶ ಮಾಡಿಕೊಳ್ಳಲಾಗಿತ್ತು. ಹಾಗೆಯೇ ಲ್ಯಾಂಡರ್ ನೇರಗೊಳ್ಳುವ ಪ್ರಕ್ರಿಯೆಯಲ್ಲಿ ಸಮಸ್ಯೆಯಾದರೆ ಲ್ಯಾಂಡಿಂಗ್ ದಿನಾಂಕವನ್ನು ಜು.27ಕ್ಕೆ ಮುಂದೂಡಲು ನಿರ್ಧರಿಸಲಾಗಿತ್ತು. ಆದರೆ ಈ ಯಾವುದೇ ಅಡೆತಡೆಗಳು ಉಂಟಾಗದೇ ಚಂದ್ರಯಾನ-3 ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಮೇಲೆ ಇಳಿಯಿತು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.