ಭೂಮಿಯಿಂದ ಸೂರ್ಯನತ್ತ ಈಗಾಗಲೇ ನಾಲ್ಕು ತಿಂಗಳ ಅವಧಿಯಲ್ಲಿ 15 ಲಕ್ಷ ಕಿ.ಮೀ.ಗಳನ್ನು ಕ್ರಮಿಸಿರುವ ಆದಿತ್ಯ ಎಲ್1 ಸೌರ್ಯನೌಕೆಯನ್ನು ಇಂದು ಅದರ ನಿಗದಿತ ಕಕ್ಷೆಯಲ್ಲಿ ಕೂರಿಸುವ ಮಹತ್ವದ ಸಾಹಸಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಸಜ್ಜಾಗಿದೆ
ಭೂಮಿಯಿಂದ ಸೂರ್ಯನತ್ತ ಈಗಾಗಲೇ ನಾಲ್ಕು ತಿಂಗಳ ಅವಧಿಯಲ್ಲಿ 15 ಲಕ್ಷ ಕಿ.ಮೀ.ಗಳನ್ನು ಕ್ರಮಿಸಿರುವ ಆದಿತ್ಯ ಎಲ್1 ಸೌರ್ಯನೌಕೆಯನ್ನು ಇಂದು ಅದರ ನಿಗದಿತ ಕಕ್ಷೆಯಲ್ಲಿ ಕೂರಿಸುವ ಮಹತ್ವದ ಸಾಹಸಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಸಜ್ಜಾಗಿದೆ. ಆದಿತ್ಯ ಎಲ್1 ನೌಕೆಯನ್ನು ಇಂದು ಸಂಜೆ 4 ಗಂಟೆಯ ವೇಳೆಗೆ ಲ್ಯಾಂಗ್ರೇಜ್ ಪಾಯಿಂಟ್ (ಎಲ್1)ನಲ್ಲಿ ಇಸ್ರೋ ಕೂರಿಸಲಿದೆ. ಇದು ಸೂರ್ಯಯಾನ ನೌಕೆಯ ಅಂತಿಮ ನಿಲ್ದಾಣವಾಗಿದ್ದು, ಅಲ್ಲಿಂದಲೇ ಅದು ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಲಿದೆ.
ಸೆ.2ರಂದು ಎಲ್1 ನೌಕೆಯನ್ನು ಇಸ್ರೋ ಉಡಾವಣೆ ಮಾಡಿತ್ತು. ಅದು ನಾಲ್ಕು ತಿಂಗಳ ಕಾಲ ಸುಮಾರು 15 ಲಕ್ಷ ಕಿ.ಮೀ. ಸಂಚರಿಸಿ ತನ್ನ ಅಂತಿಮ ಗುರಿಯನ್ನು ಸಮೀಪಿಸಿದೆ. ಅದನ್ನೀಗ ಎಲ್1 ಪಾಯಿಂಟ್ ಎಂಬ ನಿರ್ವಾತ ಪ್ರದೇಶದಲ್ಲಿ ಕೂರಿಸಲಾಗುತ್ತದೆ. ಈ ಅವಕಾಶ ಕೈಬಿಟ್ಟರೆ ಅದು ಸೂರ್ಯನತ್ತ ಪ್ರಯಾಣ ಮುಂದುವರೆಸಿ ವ್ಯರ್ಥವಾಗುವ ಅಪಾಯವಿದೆ. ಹೀಗಾಗಿ ಶನಿವಾರದ ಕಾರ್ಯಾಚರಣೆ ಇಸ್ರೋಗೆ ಅತ್ಯಂತ ಮಹತ್ವದ್ದಾಗಿದೆ.
ಜ.6ಕ್ಕೆ ಸೂರ್ಯ ನಮಸ್ಕಾರ ಮಾಡಲಿದೆ ಆದಿತ್ಯ ಎಲ್-1, ಬಾಹ್ಯಾಕಾಶದಿಂದಲೇ ದೇಶದ 400 ಉಪಗ್ರಹಗಳ ರಕ್ಷಣೆ!
ಎಲ್1 ಪಾಯಿಂಟ್ ಎಂಬುದು ಭೂಮಿಯಿಂದ ಸೂರ್ಯನಿಗಿರುವ ಒಟ್ಟು ದೂರದಲ್ಲಿ ನೂರನೇ ಒಂದರಷ್ಟು ದೂರವಾಗಿದೆ. ಇಲ್ಲಿಂದ ಯಾವುದೇ ಅಡೆತಡೆಯಿಲ್ಲದೆ, ಹಗಲು ರಾತ್ರಿಗಳಿಲ್ಲದೆ, ಗ್ರಹಣಗಳೂ ಇಲ್ಲದೆ ಆದಿತ್ಯ ನೌಕೆಯು ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಬಹುದಾಗಿದೆ. ಸೂರ್ಯನಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಅಂತರಿಕ್ಷದ ವಾತಾವರಣದ ಮೇಲೆ ಅದರ ಪರಿಣಾಮವನ್ನು ಎಲ್1 ಅಧ್ಯಯನ ನಡೆಸಲಿದೆ.
ಆದಿತ್ಯ ನೌಕೆಯಲ್ಲಿ 4 ಪೇಲೋಡ್‌ಗಳಿವೆ. ಅವು ಸೂರ್ಯನನ್ನು ಅಧ್ಯಯನ ಮಾಡಿ ಇಸ್ರೋಗೆ ಮಾಹಿತಿ ರವಾನಿಸಲಿವೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚು ದಕ್ಷ, ಕಡಿಮೆ ವೆಚ್ಚದ ಹೊಸ ಬ್ಯಾಟರಿ ಯಶಸ್ವಿ: ಮುಂದಿನ ಉಪಗ್ರಹಗಳಲ್ಲಿ ಇದೇ ಬಳಕೆ:ಇಸ್ರೋ
ಬೆಂಗಳೂರು: ಉಪಗ್ರಹಗಳಲ್ಲಿ ಬಳಸುವ ಹಳೆಯ ಸಾಂಪ್ರದಾಯಿಕ ಬ್ಯಾಟರಿಯ ಬದಲು ಹೆಚ್ಚು ದಕ್ಷವಾದ ಹಾಗೂ ಕಡಿಮೆ ವೆಚ್ಚದ ಹೊಸ ಬ್ಯಾಟರಿಯ ಪ್ರಯೋಗವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಯಶಸ್ವಿಯಾಗಿ ನಡೆಸಿದೆ. ಜ.1ರಂದು ಉಡಾವಣೆಯಾದ ಪಿಎಸ್‌ಎಲ್‌ವಿ-ಸಿ58 ರಾಕೆಟ್‌ನಲ್ಲಿ ಹೊಸ ಬ್ಯಾಟರಿಯ ಪೇಲೋಡ್ ಕಳುಹಿಸಲಾಗಿತ್ತು. ಅದು ಯಶಸ್ವಿಯಾಗಿ ಕೆಲಸ ಮಾಡಿದ್ದು, ಇನ್ನುಮುಂದಿನ ಉಪಗ್ರಹಗಳಲ್ಲಿ ಹೊಸ ಬ್ಯಾಟರಿಯನ್ನೇ ಬಳಸಲು ನಿರ್ಧರಿಸಲಾಗಿದೆ ಎಂದು ಇಸ್ರೋದ ಪ್ರಕಟಣೆ ತಿಳಿಸಿದೆ.
ಜನವರಿ 6ಕ್ಕೆ ಎಲ್1 ಪಾಯಿಂಟ್ ತಲುಪಲಿದೆ ಆದಿತ್ಯ, ಬಾಹ್ಯಾಕಾಶ ನಿಲ್ದಾಣದ ಹೆಸರು ಘೋಷಿಸಿದ ಇಸ್ರೋ!
ಹಳೆ ಬ್ಯಾಟರಿಯಲ್ಲಿ ಶುದ್ಧ ಗ್ರಾಫೈಟ್‌ನಿಂದ ಕೆಲಸ ಮಾಡುವ ಲೀಥಿಯಂ ಅಯಾನ್ ಕೋಶಗಳನ್ನು ಬಳಸಲಾಗುತ್ತಿತ್ತು. ಆದರೆ ಹೊಸ ಬ್ಯಾಟರಿಯಲ್ಲಿ ಸಿಲಿಕಾನ್ ಗ್ರಾಫೈಟ್ ಬಳಸಲಾಗಿದೆ. ಅದು ಹಳೆಯ ಬ್ಯಾಟರಿಗಿಂತ ಶೇ.35ರಿಂದ ಶೇ.40ರಷ್ಟು ಹೆಚ್ಚು ಇಂಧನವನ್ನು ಒದಗಿಸುತ್ತದೆ. ಮತ್ತು ಈ ಬ್ಯಾಟರಿ ತಯಾರಿಸಲು ಕಡಿಮೆ ವೆಚ್ಚ ತಗಲುತ್ತದೆ. ಬ್ಯಾಟರಿಗಳಿಂದ ಪಡೆದ ಇಂಧನವನ್ನು ಉಪಗ್ರಹಗಳು ಬಾಹ್ಯಾಕಾಶದಲ್ಲಿ ಬಳಸುತ್ತವೆ ಎಂದು ಇಸ್ರೋ ಹೇಳಿದೆ.