ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ. ಆದರೆ ಈ ಪ್ರಕರಣದಿಂದ ಬಚಾವ್ ಆಗಲು ದರ್ಶನ್ ಶತಪ್ರಯತ್ನ ನಡೆಸಿದ್ದರು. ಬೇರೆಯವರನ್ನು ಸರೆಂಡರ್ ಮಾಡಿಸಿ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದರು.
ಬೆಂಗಳೂರು(ಜೂ.11) ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ತನಿಖೆ ಚುರುಕುಗೊಳ್ಳುತ್ತಿದ್ದಂತೆ ಸ್ಫೋಟಕ ಮಾಹಿತಿ ಹೊರಬರುತ್ತಿದೆ. ಚಿತ್ರದುರ್ಗದ ರೇಣಕಾಸ್ವಾಮಿ ಹತ್ಯೆ ಬಳಿಕ ಈ ಪ್ರಕರಣದಿಂದ ಬಚಾವ್ ಆಗಲು ನಟ ದರ್ಶನ್ ಹಲವು ಪ್ರಯತ್ನ ನಡೆಸಿದ್ದಾರೆ. ಕೊಲೆ ಪ್ರಕರಣದಲ್ಲಿ ತನ್ನ ಪಾತ್ರ ಏನೂ ಇಲ್ಲ ಎಂದು ಬಿಂಬಿಸಲು ಬೇರೆಯವರನ್ನು ಪೊಲೀಸರ ಮುಂದೆ ಸರೆಂಡರ್ ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ಪ್ರಯತ್ನಗಳು ಕೈಗೂಡಿಲ್ಲ. ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ದರ್ಶನ್ ಅಭಿಮಾನಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನೇ ಹತ್ಯೆ ಮಾಡಲಾಗಿದೆ. ದರ್ಶನ್ ಹಾಗೂ 12 ಮಂದಿ ಗ್ಯಾಂಗ್ ಈ ಹತ್ಯೆ ನಡೆಸಿದೆ ಅನ್ನೋ ಗಂಭೀರ ಆರೋಪ ನಟನ ಮೇಲೆ ಬಿದ್ದಿದೆ. ದರ್ಶನ್ 2ನೇ ಹೆಂಡತಿ ಎಂದೇ ಗುರುತಿಸಿಕೊಂಡಿರುವ ಪವಿತ್ರಾ ಗೌಡಗೆ ಮಸೆಜ್ ಮಾಡಿದ್ದಾನೆ ಅನ್ನೋ ಕಾರಣಕ್ಕೆ ಹತ್ಯೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕೆಲ ಆರೋಪಿಗಳನ್ನು ಬಂಧಿಸಿದ್ದರು. ಈ ಪೈಕಿ ದರ್ಶನ್ ಆಪ್ತ ನಂದೀಶ್ ಕೂಡ ಒಬ್ಬನಾಗಿದ್ದ.
ದರ್ಶನ್-ವಿಜಯಲಕ್ಷ್ಮಿ ಸಂಸಾರ ಚೆನ್ನಾಗಿರ್ಲಿ ಬಯಸಿದ ಅಭಿಮಾನಿ ರೇಣುಕಾಸ್ವಾಮಿ ನಟನಿಂದಲೇ ಹತ್ಯೆ?
ಕೊಲೆ ಕೇಸ್‌ನಿಂದ ಬಚಾವ್ ಆಗಲು ದರ್ಶನ್ ತನ್ನ ಆಪ್ತರೇ ಈ ಕೊಲೆ ನಡೆಸಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ಅನುಮಾನಗೊಂಡ ಪೊಲೀಸರು ಆರೋಪಿ ನಂದೀಶ್‌ಗೆ ತಮ್ಮದೇ ಭಾಷೆಯಲ್ಲಿ ಕೇಳಿದಾಗ ಮಾಹಿತಿ ಹೊರಬಿದ್ದಿದೆ. ರೇಣುಕಾಸ್ವಾಮಿ ಅಶ್ಲೀಲವಾಗಿ ಪವಿತ್ರಾ ಗೌಡಾಗೆ ಸಂದೇಶ ಕಳುಹಿಸಿದ್ದ. ಹೀಗಾಗಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದಾಗ ಮೃತಪಟ್ಟಿದ್ದಾನೆ. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಸ್ಥಳದಲ್ಲೇ ಇದ್ದರು ಎಂದು ಮಾಹಿತಿ ನೀಡಿದ್ದಾನೆ.
ನಂದೀಶ್ ಹಾಗೂ ಬಂಧಿತ ಆರೋಪಿಗಳ ಫೋನ್ ಪರಿಶೀಲಿಸಿದಾಗ ಪೊಲೀಸರಿಗೆ ಮಹತ್ವದ ಮಾಹಿತಿಗಳು ಲಭ್ಯವಾಗಿದೆ. ಕೊಲೆ ನಡೆದ ರಾತ್ರಿ ಸತತವಾಗಿ ದರ್ಶನ್‌ಗೆ ಕರೆ ಮಾಡಿರುವುದು ಬಹಿರಂಗವಾಗಿದೆ. ಇದರ ಆಧಾರದಲ್ಲಿ ದರ್ಶನ್ ಬಂಧಿಸಿದ ಪೊಲೀಸರು ಇದೀಗ ವೈದ್ಯಕೀಯ ತಪಾಸಣೆ ನಡೆಸಿ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.
ಇತ್ತ ದರ್ಶನ್ ಗ್ಯಾಂಗ್ ನಡೆಸಿದ ಹತ್ಯೆ ಪ್ರಕರಣದ ಘಟನಾ ಸ್ಥಳದಲ್ಲಿ ಫೊರೆನ್ಸಿಕ್ ತಂಡ ಮಹಜರು ನಡೆಸಿದೆ. ಇಂದು ಬೆಳಗ್ಗೆಯಿಂದ ಫೊರೆನ್ಸಿಕ್ ತಂಡ ಸ್ಥಳ ಮಹಜರು ನಡೆಸಿದೆ. ಹತ್ಯೆ ಮಾಡಿದ ಶೆಡ್‌ನಲ್ಲಿ ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ. ಇತ್ತ ರೇಣುಕಾಸ್ವಾಮಿಯನ್ನು ಶೆಡ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ.
ದರ್ಶನ್ ಅರೆಸ್ಟ್ ಕೇಸ್; ಶೆಡ್‌ನಲ್ಲಿ ಕೂಡಿ ಹಾಕಿ ರೇಣುಕಾಸ್ವಾಮಿ ಹತ್ಯೆ, ಮೃತದೇಹ ಮೋರಿಗೆ ಎಸೆದು ಪರಾರಿ!
ರೇಣುಕಾಸ್ವಾಮಿ ದೇಹದ ಮೇಲೆ 15 ಕಡೆ ಗಾಯವಾಗಿದೆ. ರೇಣುಕಾಸ್ವಾಮಿ ಮೃತದೇಹದಲ್ಲಿನ ಗಾಯಗ ಗುರುತಗಳ ಕುರಿತು ಫಾರೆನ್ಸಿಕ್ ವೈದ್ಯರು ಮಾಹಿತಿ ನೀಡಿದ್ದರೆ. ಮೂಗು, ಕಾಲು, ತಲೆ, ಬೆನ್ನು, ದವಡೆ ಸೇರಿದಂತೆ 15 ಕಡೆ ಗಾಯಾಗಳಾಗಿವೆ. ರಾಡು ಮತ್ತು ಕಟ್ಟಿಗೆಯ ರಿಪೀಸ್ ನಿಂದ ಹಲ್ಲೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.