ಜೈಲಿನಲ್ಲಿರೋ ದರ್ಶನ್‌ಗೆ ಕಾಟೇರ ನಮಸ್ಕಾರ; ಮದುವೆಗೆ ಆಶೀರ್ವಾದ ಪಡೆದ ನಿರ್ದೇಶಕ ತರುಣ್ ಸುಧೀರ

By Sathish Kumar KH  |  First Published Jul 19, 2024, 2:11 PM IST

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ ಭೇಟಿ ಮಾಡಿದ ನಟ ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರು ತಮ್ಮ ಮದುವೆಗೆ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ.


ಬೆಂಗಳೂರು (ಜು.19): ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲಿನಲ್ಲಿರುವ ಆರೋಪಿ ನಟ ದರ್ಶನ್‌ ಅವರನ್ನು ಭೇಟಿ ಮಾಡಿದ ನಿರ್ದೇಶಕ ತರುಣ್ ಸುಧೀರ್ ಅವರು ತಮ್ಮ ಮದುವೆಗೆ ದರ್ಶನ್‌ನಿಂದ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ. ಆದರೆ, ನಮ್ಮ ಮದುವೆ ಡೇಟ್ ಫಿಕ್ಸ್ ಮಾಡಿದ್ದೇ ದರ್ಶನ್ ಅವರು, ಮದುವೆಗೆ ಮುಂಚೆ ಜೈಲಿನಿಂದ ಹಿರಗೆ ಬರ್ತಾರೆಂಬ ನಂಬಿಕೆ ಇದೆ ಎಂದು ನಿರ್ದೇಶಕ ತರುಣ್ ಸುಧೀರ್ ಹೇಳಿದ್ದಾರೆ. 

ಬೆಂಗಳೂರಿನ ಹೊರ ವಲಯದಲ್ಲಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಭೇಟಿ ಮಾಡಿ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ದೇಶಕ ತರುಣ್ ಸುಧೀರ್ ಅವರು, ಜೈಲಿನಲ್ಲಿರುವ ದರ್ಶನ್ ಆರೋಗ್ಯ ಸರಿ ಇಲ್ಲ ಅಂತ ಕೇಳಿ ಜೈಲಿಗೆ ಬಂದಿದ್ದೇವೆ. ಜ್ವರ ಅಂತ ಹೇಳಿದ್ರು ಸ್ವಲ್ಪ ರಿಕವರಿ ಆಗಿದ್ದಾರೆ. ಬೇಸಿಕಲಿ ಅವರು ಹೇಗಿದ್ದಾರೋ ಹಾಗೆ ಇದ್ದಾರೆ. ಈಗ ಜ್ವರ ಸ್ವಲ್ಪ ಕಡಿಮೆ ಆಗಿದೆ ಅಂತ ಹೇಳಿದ್ದಾರೆ. ಮನೆ ಊಟದ ಬಗ್ಗೆ ಕೇಳಿದಾಗ, ನಗು ಮುಖದಲ್ಲೇ ಉತ್ತರ ಕೊಟ್ಟಿದ್ದಾರೆ. ದರ್ಶನ್ ಅವರು ಸ್ವಲ್ಪ ವೈಟ್ ಲಾಸ್ ಆದವರ ರೀತಿ ಕಾಣುತ್ತಾ ಇದ್ದಾರೆ ಎಂದು ಮಾಹಿತಿ ನೀಡಿದರು.

Tap to resize

Latest Videos

ನಾಲ್ಕು ಗೋಡೆ ಮಧ್ಯೆ ಕಾಲು ಹಿಡ್ಕೊಳಲು ರೆಡಿ... ಕನಸಿನ ಹುಡುಗಿಯ ಕ್ವಾಲಿಟಿ ಹೇಳಿದ ನಿರ್ದೇಶಕ ತರುಣ್​ ಸುಧೀರ್​

ದರ್ಶನ್ ಅವರು ಏನು ತಪ್ಪು ಮಾಡಿಲ್ಲ ಎನ್ನುವ ನಂಬಿಕೆ ನಮಗೂ ಇದೆ. ನಮ್ಮನ್ನು ಹೆಚ್ಚಾಗಿ ಪ್ರೀತಿಸುವವರ ಮೇಲೆಯೇ ನಮಗೆ ನಂಬಿಕೆ ಹೆಚ್ಚಾಗಿರುತ್ತದೆ. ಮದುವೆಗೆ ದರ್ಶನ್ ಬರಲು ವಿಶೇಷ ಅನುಮತಿ ಪಡೆಯುತ್ತಾರೆಯೇ ಎಂಬ ಪ್ರಶ್ನೆಗೆ, ಮದುವೆ ದಿನಾಂಕದ ಮುಂಚೆಯೇ ಜೈಲಿನಿಂದ ಹೊರ ಬರುತ್ತಾರೆ ಎನ್ನುವ ನಂಬಿಕೆ ಇದೆ. ನನ್ನ ಮದುವೆ ಡೇಟ್ ಫಿಕ್ಸ್ ಮಾಡಿದ್ದೆ ಅವರು. ಅದನ್ನು ಬದಲಾವಣೆ ಮಾಡೋದು ಬೇಡ ಅಂತ ಹೇಳಿದ್ದಾರೆ. ಅವರಿಗೆ ಈಗ ಮದುವೆ ಇನ್ವಿಟೇಶನ್ ಕೊಟ್ಟಿಲ್ಲ. ಅದಕ್ಕೆಲ್ಲ ಜೈಲಿನಲ್ಲಿ ಅನುಮತಿ ಇಲ್ಲದ ಹಿನ್ನೆಲೆಯಲ್ಲಿ ಕೇವಲ ಅವರ ಆಶೀರ್ವಾದ ಪಡೆದು ಬಂದಿದ್ದೇನೆ. ಅವರಿಗೆ ಯಾವಾಗಲೂ ನನ್ನ ಮೇಲೆ ಪ್ರೀತಿ ಇದ್ದೆ ಇದೆ ಎಂದು ಹೇಳಿದರು. 

ದರ್ಶನ್ ಅವರಿಗೆ ಎರಡು ಪುಸ್ತಕವನ್ನು ಕೊಟ್ಟಿದ್ದೇನೆ. ಲೈಫ್ ಜರ್ನಿ ಹಾಗೂ ಫಿಲಾಸಫಿ ಪುಸ್ತಕ ಕೊಟ್ಟಿದ್ದೇನೆ. ಒಳಗೆ ಅವರು ಸ್ವಲ್ಪ ಬದಲಾವಣೆ ಆಗಬೇಕು ಎನ್ನುವ ಅರ್ಥ ಇರುವ ಪುಸ್ತಕಗಳು. ಎಲ್ಲರ ಜೀವನದಲ್ಲೂ ಒಂದಷ್ಟು ನೋವುಗಳು ಬರುತ್ತದೆ. ಆದರೆ ನಾವು ಬದುಕಬೇಕಾಗಿದೆ. ಪ್ರಕರಣ ಕೋರ್ಟಿನಲ್ಲಿ ಇದೆ ತನಿಖೆ ನಡೆಯುತ್ತಿದೆ. ನಾವು ಹೆಚ್ಚಾಗಿ ಇಷ್ಟಪಡುವವರ ಕಡೆ ಸರಿ ತಪ್ಪು ಇದ್ರು ನಾವು ಹೊಲುತ್ತೇವೆ. ಅದನ್ನು ಅನಾಲಿಸಿಸ್ ಕೂಡ ನಾವು ಮಾಡುವುದಿಲ್ಲ. ಅದಕ್ಕಾಗಿಯೇ ಕಾನೂನು ಅಂತ ಇದೆ ತನಿಖೆ ನಡೆಯುತ್ತಿದೆ. ಹೊರಗಿನವರು ಏನು ಯೋಚನೆ ಮಾಡುತ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಪ್ರಾಜೆಕ್ಟ್ ಮಾಡುತ್ತಿದ್ದಾರೆ. ಸಿನಿಮಾರಂಗದಲ್ಲಿ ಇದೇನು ಹೊಸತಲ್ಲ. ಅವರೇನು ತಪ್ಪು ಮಾಡಿಲ್ಲ ನ್ಯಾಯ ಸಿಗುತ್ತದೆ ಎಂದು ತರುಣ್ ಸುಧೀರ್ ಹೇಳಿದರು.

ಸೋನಲ್‌ ಮನೆಯವರು ದುಬೈನಿಂದ ಬರಬೇಕು, ಒಂದೆರಡು ತಿಂಗಳಲ್ಲಿ ಮದುವೆ ಆದ್ರೂ ಆಗುತ್ತೆ; ತರುಣ್ ಸುಧೀರ್ ತಾಯಿ ಸ್ಪಷ್ಟನೆ

ದರ್ಶನ್ ಭೇಟಿಗೆ ಸೋನಲ್ ಮಾಂಟರೋ ಅವರನ್ನು ಜೊತೆಗೆ ಕರೆದುಕೊಂಡು ಬಂದಿಲ್ವಾ ಎನ್ನುವ ಪ್ರಶ್ನೆಗೆ, ಜೈಲಿನೊಳಗೆ ವಿಚಾರಣಾಧೀನ ಕೈದಿ ಭೇಟಿಗೆ 5 ಜನರಿಗೆ ಮಾತ್ರ ಅವಕಾಶ ಇತ್ತು. ಎರಡು ವಾರದಿಂದ ಬರಬೇಕು ಅಂತ ಟ್ರೈ ಮಾಡಿದ್ದೆ. ನಿನ್ನೆ ಬೇಟೆಗೆ ಅವಕಾಶ ಅಂತ ಹೇಳಿದ್ದರಿಂದ ಇವತ್ತು ಬಂದಿದ್ದೇವೆ. ನಿನ್ನೆ ದರ್ಶನ್ ಅವರಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮದುವೆ ದಿನಾಂಕ ಯಾವಾಗ ಎಂದ ಮಾಧ್ಯಮದವರ ಪ್ರಶ್ನೆಗೆ ಶೀಘ್ರದಲ್ಲೇ ಹೇಳುತ್ತೇನೆ ಎಂದು ತೆರಳಿದರು.

click me!