ನಿಮ್ಮ ಮಗು ಇಂಟರ್‌ನೆಟ್‌ ಪೋರ್ನೋಗ್ರಫಿ ನೋಡ್ತಾ ಇದೆಯಾ?

By Suvarna NewsFirst Published Jan 25, 2020, 4:16 PM IST
Highlights

ಅಮೆರಿಕ ಮಸಾಚುಸೆಟ್ಸ್‌ ಯೂನಿವರ್ಸಿಟಿ ನಡೆಸಿದ ಒಂದು ಅಧ್ಯಯನದಿಂದ ಶಾಕಿಂಗ್‌ ಅನ್ನಿಸುವ ವಿಚಾರ ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ, ಈಗಿನ ಮಕ್ಕಳು ತಮ್ಮ ಸರಾಸರಿ ಹತ್ತನೇ ವಯಸ್ಸಿನಲ್ಲಿ ಪೋರ್ನೋಗ್ರಫಿ ಪರಿಚಯ ಮಾಡಿಕೊಳ್ಳುತ್ತಿದ್ದಾವಂತೆ.

ಅಮೆರಿಕ ಮಸಾಚುಸೆಟ್ಸ್‌ ಯೂನಿವರ್ಸಿಟಿ ನಡೆಸಿದ ಒಂದು ಅಧ್ಯಯನದಿಂದ ಶಾಕಿಂಗ್‌ ಅನ್ನಿಸುವ ವಿಚಾರ ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ, ಈಗಿನ ಮಕ್ಕಳು ತಮ್ಮ ಸರಾಸರಿ ಹತ್ತನೇ ವಯಸ್ಸಿನಲ್ಲಿ ಪೋರ್ನೋಗ್ರಫಿ ಪರಿಚಯ ಮಾಡಿಕೊಳ್ಳುತ್ತಿದ್ದಾವಂತೆ. ಇಂಟರ್‌ನೆಟ್‌ ಹೊಂದಿರುವ, ಆದರೆ ಬಿಗಿಯಾದ ನಿಷೇಧವಿಲ್ಲದ ಫ್ಯಾಮಿಲಿಗಳಲ್ಲಿ ಮಕ್ಕಳು ತುಸು ಬೇಗ ಇದನ್ನು ಕಾಣಬಹುದು; ಮಕ್ಕಳಿಗೆ ಗ್ಯಾಜೆಟ್‌, ಇಂಟರ್‌ನೆಟ್‌ ಕೊಡದ ಫ್ಯಾಮಿಲಿಗಳಲ್ಲಿ ತುಸು ತಡವಾಗಬಹುದು. ಇಂಥ ಸಂದರ್ಭಗಳು ಎದುರಾದಾಗ ಸಾಮಾನ್ಯವಾಗಿ ಹೆತ್ತವರು ಹೇಗೆ ಡೀಲ್‌ ಮಾಡ್ತಾರೆ?

ಕೆಲವೊಮ್ಮೆ ಮಕ್ಕಳು ತಂದೆ ತಾಯಿ ಇಲ್ಲದಿದ್ದಾಗ ಯೂಟ್ಯೂಬ್‌ ನೋಡ್ತಾ ನೋಡ್ತಾ, ಫಕ್ಕನೆ ಯಾವುದೋ ಪೋರ್ನ್ ವೆಬ್‌ಸೈಟ್‌ನ ನೋಟಿಫಿಕೇಶನ್‌ ಪಾಪ ಅಪ್‌ ಆಗಬಹುದು. ಅದನ್ನು ಆಕಸ್ಮಿಕವಾಗಿ ಕ್ಲಿಕ್‌ ಮಾಡಿದ ಮಕ್ಕಳಿಗೆ, ಅಲ್ಲೊಂದು ಹೊಸ ಲೋಕವೇ ಕಾಣಬಹುದು. ನಿಜಕ್ಕೂ ಆ ವಯಸ್ಸಿನ ಮಕ್ಕಳಿಗೆ ಅದು ಏನು ಅಂತ ಅರ್ಥವಾಗಿರೋಲ್ಲ. ಅದಕ್ಕೇ ಅವು ಗುಟ್ಟುಗುಟ್ಟಾಗಿ ಅದನ್ನು ನೋಡಿ ಫ್ರೆಂಡ್ಸ್‌ ಬಳಿ ಕೇಳಿ ಸಮಸ್ಯೆಗೆ ಉತ್ತರ ಪಡೆಯುತ್ತವೆ. ಆತನ ಅಥವಾ ಆಕೆಯ ಫ್ರೆಂಡ್ಸ್ ಕೂಡ ಇದರಲ್ಲಿ ಅಲ್ಪಜ್ಞಾನ ಹೊಂದಿರೋರೇ ಆದ್ದರಿಂದ ತಪ್ಪು ಕಲ್ಪನೆಗಳು ಬೆಳೆಯುತ್ತವೆ.

 

ಮಗುವಿನ ಬಗ್ಗೆ ನಿಮ್ಮಲ್ಲಿರುವ ಈ ತಪ್ಪುಕಲ್ಪನೆಗಳನ್ನು ತೊಡೆದು ಹಾಕಿ

 

ಅಥವಾ ಈ ಮಗು ನೇರವಾಗಿ ಬಂದು ಹೆತ್ತವರ ಬಳಿಯೇ ತನ್ನ ಸಂಶಯವನ್ನು ಕೇಳಬಹುದು. ಇಂಥ ಸಂದರ್ಭದಲ್ಲಿ ಹೆತ್ತವರು ಹೌಹಾರುವುದು, ಗಾಬರಿಯಿಂದ ಪ್ರತಿಕ್ರಿಯಿಸುವುದು, ಯಾಕೆ ಅದನ್ನೆಲ್ಲ ನೋಡೋಕೆ ಹೋದೆ ಅಂತ ಗದರಿಸುವುದು, ಅದು ತುಂಬಾ ಕೆಟ್ಟದು ಅಂತೆಲ್ಲ ಹೆದರಿಸುವುದು ಮಾಡುತ್ತಾರೆ. ಹೀಗೆ ಮಾಡಬಾರದು ಅನ್ನುತ್ತಾರೆ ಲೈಂಗಿಕ ತಜ್ಞರು ಹಾಗೂ ಮಕ್ಕಳ ತಜ್ಞರು. ಮಕ್ಕಳು, ಮಕ್ಕಳಾಗಿಯೇ ಕುತೂಹಲದ ಪ್ರಶ್ನೆಗಳನ್ನು ಕೇಳಿರುತ್ತಾರೆ. ಹಾಗಿದ್ರೆ ಇದನ್ನು ನಿಭಾಯಿಸೋದು ಹೇಗೆ? ಸರಳವಾಗಿ ಇದಕ್ಕೆ ಉತ್ತರ ಹೇಳಬೇಕೆಂದರೆ, ಮಗುವಿನ ಪ್ರಾಯಕ್ಕೆ ಅನುಗುಣವಾಗಿ ಅದಕ್ಕೆ ಪ್ರಾಮಾಣಿಕವಾದ ಉತ್ತರವನ್ನೇ ಹೇಳಬೇಕು. ನೀವು ಹೇಳದೆ ಹೋದರೆ, ಮಕ್ಕಳು ಕೆಟ್ಟ ಕುತೂಹಲವನ್ನು ತಮ್ಮಲ್ಲಿ ಉಳಿಸಿಕೊಂಡು, ಬೇರೆ ಕಡೆ ಅದಕ್ಕೆ ಉತ್ತರ ಹುಡುಕೋಕೆ ಹೋಗಿಬಿಡುತ್ವೆ.

 

ಸುಮಾರು ಹತ್ತು ವರ್ಷದ ಮಗು ನಿಮ್ಮ ಬಳಿ ಬಂದು, ಆಕಸ್ಮಿಕವಾಗಿ ತಾನು ಪೋರ್ನ್ ಸೈಟ್‌ ನೋಡಿದ್ದೇನೆ ಎಂದು ನಿಮಗೆ ತಿಳಿಸಿದರೆ, ನೀವು ಮಾಡಬೇಕಾದ ಮೊದಲ ಕೆಲಸ, ಅದು ನಿಜವಲ್ಲ ಎಂಬುದನ್ನು ತಿಳಿಹೇಳುವುದು, ಸಿನೆಮಾದ ಹಾಗೆ, ಡಬ್ಲ್ಯುಡಬ್ಲ್ಯುಎಫ್‌ನ ಹಾಗೆ ಅದು ಕೂಡ ಚಿತ್ರಿತ ಕಾರ್ಯಕ್ರಮ ಎಂದು ತಿಳಿಸುವುದು. ಹಾಗಿದ್ದರೆ ಗಂಡು ಹೆಣ್ಣಿನ ನಡುವೆ ನಡೆಯುವ ಆ ಕ್ರಿಯೆ ಏನು ಎಬ ಪ್ರಶ್ನೆಯನ್ನು ಅದು ಕೇಳಿಯೇ ಕೇಳುತ್ತದೆ. ಅದು ನಿರ್ದಿಷ್ಟ ಪ್ರಾಯಕ್ಕೆ ಬಂದ ನಂತರ ಗಂಡು ಹೆಣ್ಣುಗಳ ನಡುವೆ ನಡೆಯುವ ಸಹಜ ಕ್ರಿಯೆ ಎಂದೂ, ಅದು ಮಗು ಜನಿಸುವುದಕ್ಕೆ ಸಂಬಂಧಪಟ್ಟದ್ದು ಎಂದೂ ತಿಳಿಸಿದರೆ ಸಾಕು.

 

2020ರಲ್ಲಿ ಬೆಸ್ಟ್ ಪೇರೆಂಟ್ ಆಗಬೇಕೇ? ಹಾಗಾದ್ರೆ ಈ ರೆಸಲ್ಯೂಶನ್‍

 

ಆದರೆ ಇದು ಸುಲಭವಲ್ಲ. ಮಗು ಇಲ್ಲಿಂದ ಬಳಿಕ ಕುತೂಹಲ ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತದೆ. ಅದು ಯಾವ ಪ್ರಶ್ನೆಯನ್ನು ಕೇಳಬಹುದು ಎಂಬುದನ್ನೂ ನಾವು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಮುಖ್ಯವಾಗಿ ಇಂಥ ಪ್ರಶ್ನೆಗಳು ಎದುರಾದಾಗ, ಮಗುವಿನ ಮನಸ್ಸಿನಲ್ಲಿ ನಿಜಕ್ಕೂ ಎಷ್ಟು ಪ್ರಮಾಣದ ಕುತೂಹಲ ಇದೆ, ಆ ಪ್ರಶ್ನೆಯ ಹಿಂದೆ ಎಷ್ಟನ್ನು ತಿಳಿದುಕೊಳ್ಳುವ ಉದ್ದೇಶ ಇದೆ, ಮಗು ಇದುವರೆಗೂ ಎಷ್ಟನ್ನು ಅರ್ಥ ಮಾಡಿಕೊಂಡಿದೆ ಎಂಬುದನ್ನು ನೀವು ತಿಳಿಯಬೇಕು. ಅದಕ್ಕೆ ನೀವು ನಾಲ್ಕಾರು ಪ್ರಶ್ನೆ ಕೇಳಿದರೆ ಸಾಕು. ಸಾಮಾನ್ಯವಾಗಿ ಮಗು ತನ್ನ ಫ್ರೆಂಡ್‌ಗಳು ಹೇಳಿದ ಕೆಲವು ಪದಗಳನ್ನು ರಿಪೀಟ್‌ ಮಾಡುತ್ತಿರುತ್ತದೆ. ಉದಾಹರಣೆಗೆ- ಕಿಸ್‌, ಫಕ್‌, ಇತ್ಯಾದಿ. ಇವುಗಳಿಗೆ ಸಾಂದರ್ಭಿಕ ಅರ್ಥಗಳಿಗಿಂತ ಆಚೆ ವಿವರಿಸುವುದು ಬೇಕಾಗಿಲ್ಲ.


ಇನ್ನು ಇಂಟರ್‌ನೆಟ್‌ನಲ್ಲಿ ಮಗು ಪೋರ್ನ್ ಸೈಟ್‌ಗಳಿಗೆ ಆಕಸ್ಮಿಕವಾಗಿ ಭೇಟಿ ಕೊಡುವ ಸಾಧ್ಯತೆ ಇಲ್ಲದಂತೆ, ನೀವು ಸೆಕ್ಯುರಿಟಿ ವ್ಯವಸ್ಥೆ ಮಾಡಿಕೊಳ್ಳಲೇಬೇಕು. ಈಗ ಅದಕ್ಕಾಗಿ ಅನೇಕ ಲಾಕಿಂಗ್‌ ವ್ಯವಸ್ಥೆಗಳು ಲಭ್ಯ ಇವೆ. ಯೂಟ್ಯೂಬ್‌ನಲ್ಲೋ ಗೂಗಲ್‌ನಲ್ಲಿಯೋ ನೀವು ರಿಸರ್ಚ್‌ ಮಾಡಿದರೆ ಅದು ನಿಮಗೆ ಕಲಿಸಿಕೊಡುತ್ತದೆ.
 

ಆದರೆ ನೆನಪಿಡಿ. ನಿಮ್ಮ ಮಗು ನಿಮಗೆ ಹೋಲಿಸಿದರೆ ಟೆಕ್ನಾಲಜಿಯಲ್ಲಿ ಅಡ್ವಾನ್ಸ್‌ ತಲೆಮಾರಿಗೆ ಸೇರಿದೆ. ಹೀಗಾಗಿ ನಿಮ್ಮ ಎಲ್ಲ ಭದ್ರತೆಗಳೂ ಒಂದಲ್ಲ ಒಂದು ದಿನ ಮುರಿದು ಬೀಳಲೇಬೇಕು. ಮಗು ದೊಡ್ಡದಾಗುತ್ತ ಹೋದಂತೆ, ನೀವು ಅದರ ಪ್ರಶ್ನೆಗಳಿಗೆ ಉತ್ತರಿಸಲೇಬೇಕಾಗುತ್ತದೆ. ಮಗುವನ್ನು ಸ್ನೇಹಿತನ ಸಮಾನವಾಗಿ ಅಂಗೀಕರಿಸಿ, ಆತನ ಅಥವಾ ಆಕೆಯ ಪ್ರಶ್ನೆಗಳಿಗೆ ತಕ್ಕ ಉತ್ತರಗಳನ್ನು ನೀಡುತ್ತ ಹೋದರೆ ಅವರು ಹೆಲ್ದಿಯಾಗಿ ಬೆಳೆಯುತ್ತಾರೆ. ಇದಕ್ಕೆ ನೀವು ಕೌನ್ಸಿಲರ್‌ಗಳ ಸಹಾಯ ಪಡೆದರೂ ಪರವಾಗಿಲ್ಲ.

click me!