ಲವ್ ಮ್ಯಾರೇಜ್ ಹಾಗೂ ಅರೇಂಜ್ಡ್ ಮ್ಯಾರೇಜ್ ಎಂಬ ಎರಡು ಆಯ್ಕೆ ಮುಂದಿಟ್ಟಾಗ ಲವ್ ಮ್ಯಾರೇಜ್ ಆಯ್ಕೆ ಮಾಡಿಕೊಳ್ಳೋರೇ ಹೆಚ್ಚು. ಆದ್ರೆ ಅರೇಂಜ್ಡ್ ಮ್ಯಾರೇಜ್ ನಿಂದಲೂ ಸಾಕಷ್ಟು ಲಾಭವಿದೆ. ಪಾಲಕರ ಆಯ್ಕೆ, ನಿಮ್ಮ ಆಯ್ಕೆಗಿಂತ ಎರಡು ಪಟ್ಟು ಚೆನ್ನಾಗಿರುತ್ತೆ ಎಂಬುದು ನೆನಪಿರಲಿ.
ಅರೇಂಜ್ಡ್ ಮ್ಯಾರೇಜ್ ಹೆಸರು ಕೇಳ್ತಿದ್ದಂತೆ ಯುವ ಜನತೆ, ಮುಖ ತಿರುಗಿಸ್ತಾರೆ. ಅರೇಂಜ್ಡ್ ಮ್ಯಾರೇಜ್ ಹೆಸರೇ ವಿಚಿತ್ರ ಎನಿಸುತ್ತದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಲವ್ ಮ್ಯಾರೇಜ್ ಟ್ರೆಂಡ್ ಹೆಚ್ಚಾಗಿದೆ. ಹುಡುಗರು ಮತ್ತು ಹುಡುಗಿಯರು ತಮ್ಮ ಆಯ್ಕೆಯ ಪ್ರಕಾರ ತಮ್ಮ ಜೀವನ ಸಂಗಾತಿಯನ್ನು ಹುಡುಕುತ್ತಾರೆ. ಪರಿಚಿತ ವ್ಯಕ್ತಿ ಜೊತೆ ಮದುವೆಯಾಗುವುದು ಒಳ್ಳೆಯ ಆಯ್ಕೆ ಎಂದು ಅವರು ಭಾವಿಸ್ತಾರೆ. ಈಗಿನ ದಿನಗಳಲ್ಲಿ ಅರೇಂಜ್ಡ್ ಮ್ಯಾರೇಜ್ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯಿದ್ರೂ ಸಂಪೂರ್ಣವಾಗಿ ನಿಂತಿಲ್ಲ. ಲವ್ ಮ್ಯಾರೇಜ್ ಗಿಂತ ಅರೇಂಜ್ಡ್ ಮ್ಯಾರೇಜ್ ಯಶಸ್ವಿಯಾಗುವ ಸಾಧ್ಯತೆ ಹೆಚ್ಚು ಎಂಬ ನಂಬಿಕೆ ಈಗ್ಲೂ ಉಳಿದಿದೆ. ಇದೇ ಕಾರಣಕ್ಕೆ ಕೆಲವರು ಅರೇಂಜ್ಡ್ ಮ್ಯಾರೇಜ್ ಆಯ್ಕೆ ಮಾಡಿಕೊಳ್ತಾರೆ. ನಾವಿಂದು ಅರೇಂಜ್ಡ್ ಮ್ಯಾರೇಜ್ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.
ಅರೇಂಜ್ಡ್ (Arranged) ಮ್ಯಾರೇಜ್ ಅಂದ್ರೇನು? : ಮದುವೆ (Marriage) ಅಂದ್ರೆ ಬರೀ ಇಬ್ಬರು ಒಂದಾಗುವುದಲ್ಲ. ಎರಡು ಕುಟುಂಬಗಳು ಒಂದಾಗುವುದು. ಇಲ್ಲಿಂದ ಹೊಸ ಸಂಬಂಧವೊಂದು ಶುರುವಾಗುತ್ತದೆ. ಎಲ್ಲರ ಮಧ್ಯೆ ಪ್ರೀತಿ, ಬಾಂಧವ್ಯ ಬೆಸೆಯುತ್ತದೆ. ಅರೇಂಜ್ಡ್ ಮ್ಯಾರೇಜ್ ನಲ್ಲಿ ಪಾಲಕರು, ಮಕ್ಕಳಿಗೆ ಸಂಗಾತಿಯನ್ನು ಹುಡುಕುತ್ತಾರೆ. ಎಲ್ಲ ಪಾಲಕರು, ಮಕ್ಕಳ ಭವಿಷ್ಯ ಚೆನ್ನಾಗಿರಲೆಂದು ಬಯಸ್ತಾರೆ. ಇದೇ ಕಾರಣಕ್ಕೆ ಸಂಗಾತಿಯಾಗುವ ವ್ಯಕ್ತಿಯ ಹಿನ್ನೆಲೆ, ಅವರ ಕುಟುಂಬ, ಆರ್ಥಿಕ ಸ್ಥಿತಿ ಸೇರಿದಂತೆ ಎಲ್ಲವನ್ನು ಪರಿಶೀಲಿಸಿ, ಯೋಗ್ಯ ಎನ್ನಿಸಿದ್ರೆ ಮಾತ್ರ ಮದುವೆಗೆ ಮುಂದಾಗ್ತಾರೆ. ಅರೇಂಜ್ಡ್ ಮ್ಯಾರೇಜ್ ನಲ್ಲಿ ಯಾವುದೇ ಸಮಸ್ಯೆ ಬಂದ್ರೂ ಹಿರಿಯರು, ಆಪ್ತರು ಬೆಂಬಲಕ್ಕೆ ನಿಲ್ಲುತ್ತಾರೆ. ನಿಮಗೆ ಲವ್ ಮ್ಯಾರೇಜ್ ನಲ್ಲಿ ಈ ಸೌಲಭ್ಯ ಸಿಗುವುದಿಲ್ಲ. ನೀವೇ ಹುಡುಗ ಅಥವಾ ಹುಡುಗಿ ಆಯ್ಕೆ ಮಾಡಿಕೊಂಡ ಕಾರಣ, ಸಮಸ್ಯೆಯನ್ನು ನೀವೇ ಎದುರಿಸಬೇಕಾಗುತ್ತದೆ.
ಅರೇಂಜ್ಡ್ ಮ್ಯಾರೇಜ್ ನಲ್ಲಿ ವಿಚ್ಛೇದನ (Divorce) ಕಡಿಮೆ : ನಿಮಗೆ ಇದು ಅಚ್ಚರಿ ಎನ್ನಿಸಬಹುದು. ಆದ್ರೆ ಪ್ರೇಮ ವಿವಾಹ ಹೆಚ್ಚಾದಂತೆ ವಿಚ್ಛೇದನ ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಸ್ಟ್ಯಾಟಿಸ್ಟಿಕ್ಸ್ ಬ್ರೈನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರಕಾರ, ಅರೇಂಜ್ಡ್ ಮ್ಯಾರೇಜ್‌ಗಳಲ್ಲಿ ವಿಚ್ಛೇದನ ಪ್ರಮಾಣ ಕೇವಲ ಶೇಕಡಾ 6 ರಷ್ಟಿದೆ. ಆದರೆ ಪ್ರೇಮ ವಿವಾಹವಾದವರೇ ಹೆಚ್ಚು ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಗಟ್ಟಿಯಾಗಿರುತ್ತೆ ಸಂಬಂಧ : ಸಂಬಂಧ ಕಾಪಾಡಿಕೊಳ್ಳುವುದು ಇಂದಿನ ಕಾಲದಲ್ಲಿ ಅತ್ಯಂತ ಕಷ್ಟ. ಪತಿ ಮತ್ತು ಪತ್ನಿ ಸಂಬಂಧ ನಿಭಾಯಿಸುವ ವೇಳೆ ಅನೇಕ ಸವಾಲು ಎದುರಾಗುತ್ತದೆ. ಅರೇಂಜ್ಡ್ ಮ್ಯಾರೇಜ್ ಗಿಂತ ಲವ್ ಮ್ಯಾರೇಜ್ ನಲ್ಲಿ ಸಮಸ್ಯೆ, ಸವಾಲು ಹೆಚ್ಚು. ಪ್ರತಿ ದಿನ ಸವಾಲುಗಳ ಜೊತೆ ಬದುಕಲು ಜನರು ಇಷ್ಟಪಡುವುದಿಲ್ಲ. ಇದೇ ಕಾರಣಕ್ಕೆ ಅರೇಂಜ್ಡ್ ಮ್ಯಾರೇಜ್ ಮೊರೆ ಹೋಗ್ತಾರೆ.
ಮದ್ವೆಯಾಗಿದೆ ಓಕೆ, ಲೈಂಗಿಕ ಜೀವನದಲ್ಲಿ ಎಷ್ಟು ಆಕ್ಟಿವ್ ಆಗಿದ್ದೀರಾ?
ಭಾರತೀಯ ಸಂಸ್ಕೃತಿ : ಅರೇಂಜ್ಡ್ ಮ್ಯಾರೇಜ್ ಭಾರತದ ಸಂಸ್ಕೃತಿ. ಅನಾಧಿ ಕಾಲದಿಂದಲೂ ಜನರು ಅರೇಂಜ್ಡ್ ಮ್ಯಾರೇಜ್ ಆಗ್ತಿದ್ದಾರೆ. ಇದನ್ನು ಉಳಿಸಿಕೊಂಡು ಹೋಗಲು ಈಗ್ಲೂ ಕೆಲವರು ಬಯಸ್ತಾರೆ. ಲವ್ ಮ್ಯಾರೇಜ್ ಭರಾಟೆಯಲ್ಲಿ ಅರೇಂಜ್ಡ್ ಮ್ಯಾರೇಜ್ ಸಂಸ್ಕೃತಿ ಮಾಸದಿರಲಿ ಎಂಬುದು ಅನೇಕರ ಬಯಕೆಯಾಗಿದೆ.
ಮಾತೇ ಆಡದ ಪತಿಗಿಂತ ಹ್ಯಾಂಡ್ಸಮ್ ಮೈದುನ ಇಷ್ಟವಾಗ್ತಾನಂತೆ ಇವ್ಳಿಗೆ!
ಸರಿಯಾದ ಟೈಂನಲ್ಲಿ ಮದುವೆ : ಪ್ರೇಮ ವಿವಾಹದಲ್ಲಿ ಮದುವೆ ತಡವಾಗೋದು ಮಾಮೂಲಿ. ಮೊದಲು ಪ್ರೀತಿ ನಂತ್ರ ಮನೆಯವರನ್ನು ಒಪ್ಪಿಸಲು ಒದ್ದಾಟ. ಕೊನೆಯಲ್ಲಿ ಆರ್ಥಿಕ ಸ್ಥಿತಿ ಸುಧಾರಣೆಗೆ ಒತ್ತು. ಹೀಗೆ ಎಲ್ಲ ಮುಗಿಯುವವರೆಗೆ ವಯಸ್ಸು ಹೆಚ್ಚಾಗಿರುತ್ತದೆ. ಆದ್ರೆ ಅರೇಂಜ್ಡ್ ಮ್ಯಾರೇಜ್ ನಲ್ಲಿ ಮಕ್ಕಳ ಮದುವೆ ಮಾಡುವ ಜವಾಬ್ದಾರಿ ಪಾಲಕರಿಗಿರುತ್ತದೆ. ಹಾಗಾಗಿ ಅವರು, ಮಕ್ಕಳು ಸೆಟಲ್ ಆಗ್ತಿದ್ದಂತೆ, ಮದುವೆಗೆ ಅರ್ಹರು ಎನ್ನಿಸುತ್ತಿದ್ದಂತೆ ಮದುವೆ ಮಾಡಲು ಮುಂದಾಗ್ತಾರೆ.
ಕೊನೆಯದಾಗಿ, ಯಾವ ಮದುವೆ ಮುಖ್ಯ ಎನ್ನುವುದಕ್ಕಿಂತ ಮದುವೆಯಾದ್ಮೇಲೆ ಸಂಗಾತಿ ಹೇಗಿದ್ದಾರೆ ಎಂಬುದು ಕೇಂದ್ರಬಿಂದುವಾಗುತ್ತದೆ.