Father’s Day: ಅಪ್ಪ-ಮಕ್ಕಳ ನಡುವೆ ಕಂದಕ ಸೃಷ್ಟಿಸುವ ಅಭ್ಯಾಸಗಳಿವು

By Suvarna News  |  First Published Jun 19, 2022, 11:54 AM IST

ಅಪ್ಪನೆಂದರೆ ಪ್ರೀತಿ, ಭಯ. ಅಪ್ಪನೆಂದರೆ ಗೌರವವೂ ಇದೆ. ಆದರೆ, ಅಪ್ಪ ಹಾಕುವ ನಿಯಮಗಳಿಗೆ ಮಕ್ಕಳು ಬಿಲ್ಕುಲ್ ಒಪ್ಪುವುದಿಲ್ಲ. ಅಪ್ಪಂದಿರೂ ಮಕ್ಕಳ ಬಗ್ಗೆ ದೂರುವುದನ್ನು ಬಿಡುವುದಿಲ್ಲ. ಮಕ್ಕಳು-ಅಮ್ಮಂದಿರ ನಡುವೆ ಇಂಥ ಗಲಾಟೆಗಳು ಇದ್ದದ್ದೇ. ಆದರೆ, ಅಪ್ಪಂದಿರು ಮಕ್ಕಳೊಂದಿಗೆ ಸಾಧ್ಯವಾದಷ್ಟೂ ಸ್ನೇಹಭಾವ ಹೊಂದಿರಬೇಕು. ಆಗ ಮನೆಯಲ್ಲಿ ಗಲಾಟೆಗಳಾಗುವುದಿಲ್ಲ. 
 


ಅಪ್ಪಾ ಅಪ್ಪಾ (Daddy) ಐ ಲವ್ ಯೂ ಪಾ... ಜಗತ್ತಿನ ಪರಿಚಯ ಮಾಡಿಕೊಟ್ಟ ಅಪ್ಪನಿಗೆ “ಐ ಲವ್ ಯೂ’ ಎಂದಲ್ಲದೆ ಇನ್ನೇನು ಹೇಳಲು ಸಾಧ್ಯ? ಯಾವ ರೀತಿ ಪ್ರೀತಿ ಹಾಗೂ ಕೃತಜ್ಞತೆ ವ್ಯಕ್ತಪಡಿಸಲು ಸಾಧ್ಯ? ಅಮ್ಮ ಮಕ್ಕಳಿಗೆ ಜನ್ಮ ನೀಡಿದರೆ ಅಪ್ಪ ಜಗತ್ತನ್ನು ತೋರಿಸುತ್ತಾನೆ. ಇಂದಿನ ಆಧುನಿಕ ಅಮ್ಮಂದಿರು ಬಾಹ್ಯ ಪ್ರಪಂಚದೊಂದಿಗೆ ಮಕ್ಕಳನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರೂ, ಹೊರ ಲೋಕದೊಂದಿಗೆ ಬಿಂದಾಸ್ ಆಗಿ ಬೆರೆಯುವುದನ್ನು ಅಪ್ಪನೇ ಹೇಳಿಕೊಡುತ್ತಾನೆ. ಕಟ್ಟುಕಟ್ಟಳೆಗಳಿಲ್ಲದೆ, ಸಮಯ-ಊಟ-ತಿಂಡಿಗಳಲ್ಲಿ ನಿರ್ಬಂಧ (Restriction) ವಿಧಿಸದೇ ಮಕ್ಕಳ ಪಾಲಿಗೆ ಹೀರೋ ಎನಿಸುತ್ತಾನೆ. ತಮ್ಮ  ಮಕ್ಕಳೊಂದಿಗೆ ಆಟವಾಡದ ತಂದೆ (Father) ಇರಲಿಕ್ಕಿಲ್ಲ. ಮಕ್ಕಳು ಚಿಕ್ಕವರಿರುವಾಗ ಬಿಂದಾಸ್ ಬದುಕನ್ನು ಹೇಳಿಕೊಟ್ಟ ಅದೇ ಅಪ್ಪ ದೊಡ್ಡವರಾಗುತ್ತಿದ್ದಂತೆ ಮಕ್ಕಳನ್ನು ಟೀಕಿಸಲು ಶುರು ಮಾಡುತ್ತಾರೆ. ನೋಡುತ್ತ ನೋಡುತ್ತ ಗಂಡು ಮಕ್ಕಳು (Children) ಹಾಗೂ ಅಪ್ಪನ ನಡುವೆ “ದೂರ’ವೊಂದು ಸೃಷ್ಟಿಯಾಗಿಬಿಡುತ್ತದೆ. ಸಾಮಾನ್ಯವಾಗಿ ಅಪ್ಪ-ಮಕ್ಕಳ ನಡುವೆ ಕೆಲವು ವಿಚಾರಗಳಲ್ಲಿ ಪ್ರತಿದಿನವೂ ಕಿರಕಿರಿ ಉಂಟಾಗುತ್ತದೆ. ಆದರೆ, ಬೆಳೆಯುವ ಮಕ್ಕಳ ಕೆಲವು ಅಭ್ಯಾಸಗಳ ಬಗ್ಗೆ ಅಪ್ಪಂದಿರು ಹೆಚ್ಚು ಕಿರಿಕಿರಿ ಮಾಡಿಕೊಳ್ಳುವುದನ್ನು ಬಿಟ್ಟುಬಿಡಬೇಕು. 
ಮಕ್ಕಳೊಂದಿಗೆ ಯಾವ ವಿಚಾರಕ್ಕೆ ಜಗಳವಾಗುತ್ತದೆ ಎನ್ನುವುದನ್ನು ಗಮನಿಸಿ ಅದರ ಬಗ್ಗೆ ಅವರೊಂದಿಗೆ ಚರ್ಚೆಗೆ ಹೋಗದಿರುವುದು ವಿಹಿತ. ವಾಗ್ವಾದ ಉಂಟಾಗುವ ಕೆಲವು ಸಾಮಾನ್ಯ ಕಾರಣಗಳನ್ನು ಅರಿತುಕೊಳ್ಳಿ.

•    ಲೇಟಾಗಿ ಏಳುವ (Late Morning) ಮಕ್ಕಳು
ನಿಮ್ಮ ಕಾಲದಲ್ಲಿ ಬೇಗ ಏಳುವುದು ಸಾಮಾನ್ಯವಾಗಿತ್ತು. ಆದರೆ, ಇಂದಿನ ಮಕ್ಕಳು ಬೇಗ ಏಳುವ ಗೋಜಿಗೆ ಹೋಗುವುದಿಲ್ಲ. ಅದಕ್ಕಾಗಿ ಅವರನ್ನು ದೂಷಿಸುತ್ತ, ಬೆಳ್ಳಂಬೆಳಗ್ಗೆ ಬೈಯ್ಯುತ್ತಿರುವುದು ಒಳ್ಳೆಯದಲ್ಲ. ಬದಲಿಗೆ, ಅವರಿಗೆ ಐದಾರು ವರ್ಷಗಳಾಗುತ್ತಿದ್ದಂತೆ ದಿನವೂ ಅವರನ್ನೂ ಎಬ್ಬಿಸಿಕೊಂಡು ಬೆಳಗ್ಗೆ ಒಂದು ಪುಟ್ಟ ವಾಕ್ ಹೋಗಿಬರುವ ಅಭ್ಯಾಸ ಮಾಡಿಕೊಳ್ಳಬಹುದು. ಅವರಿಗೆ ಅಪ್ಪನ ಸಾಂಗತ್ಯ ಹೇಗೂ ಇಷ್ಟವಾಗುತ್ತದೆ. ಚಿಕ್ಕವರಿರುವಾಗ ತರಬೇತಿ ನೀಡದೆ ದೊಡ್ಡವರಾದ ಬಳಿಕ ದೂಷಿಸಿದರೆ ಅವರಿಗೆ ಕೋಪ ಬರುತ್ತದೆಯೇ ಹೊರತು, ನಿಮ್ಮಿಂದ ಇನ್ನಷ್ಟು ದೂರವಾಗುತ್ತಾರೆಯೇ ಹೊರತು ಇನ್ನೇನೂ ಆಗುವುದಿಲ್ಲ. ಖಂಡಿತವಾಗಿ ಲೇಟಾಗ ಏಳುವುದು ಒಳ್ಳೆಯದಲ್ಲ. ಆದರೆ, ಈ ಸಮಸ್ಯೆಯನ್ನು ಜಾಣತನದಿಂದ ನಿಭಾಯಿಸಬೇಕು. 

ನೀವು ಯೋಗ ಮಾಡುವ ಟೈಮ್ ಸರಿ ಇದ್ಯಾ? ಇಲ್ಲಾಂದ್ರೆ ಆರೋಗ್ಯಕ್ಕೆ ಡೇಂಜರ್

•    ನಿಮ್ಮ ಮಗ ನೀವಲ್ಲ!
ಸಾಮಾನ್ಯವಾಗಿ ಪಾಲಕರು (Parents) ತಾವೇನು ಆಗಬೇಕೆಂದುಕೊಂಡಿದ್ದರೋ ಮಕ್ಕಳು ಹಾಗಾಗಬೇಕೆಂದು ಬಯಸುತ್ತಾರೆ. ತಂದೆಯೂ ಅಷ್ಟೆ, ತಾನು ಆಗಬೇಕೆಂದುಕೊಂಡಿರುವುದನ್ನು ಮಗನಾದರೂ ಆಗಲಿ ಎಂದು ಬಯಸುತ್ತಾರೆ. ಆದರೆ, ನಿಮ್ಮ ಮಕ್ಕಳು ನೀವಲ್ಲ ಎನ್ನುವುದು ನೆನಪಿನಲ್ಲಿರಲಿ. ಅವರ ಕನಸುಗಳು (Dream) ಈಡೇರಲು ನೀವು ಸಹಾಯ ಮಾಡಿ. ಆದರೆ, ನಿಮ್ಮ ಕನಸುಗಳನ್ನು ಪೂರೈಸುವುದು ಅವರ ಕೆಲಸವಲ್ಲ. 

•    ಹೋಲಿಕೆ ಮಾಡಬೇಡಿ (Comparison)
ಬಹಳಷ್ಟು ಪಾಲಕರು ಈ ತಪ್ಪನ್ನು ಮಾಡುತ್ತಾರೆ. ಅಮ್ಮ ಇಂತಹ ಮಾತನಾಡುವುದು ಸಾಮಾನ್ಯ. ಆದರೆ, ಅಪ್ಪನೂ ಹೀಗೆ ಮಾಡಿದರೆ ಮಕ್ಕಳಿಗೆ ಬೇಸರವಾಗುತ್ತದೆ. ಕೀಳರಿಮೆ (Inferiority) ಬೆಳೆಯಬಹುದು. ಹೋಲಿಕೆ ಮಾಡಿ ಅವರ ಆತ್ಮವಿಶ್ವಾಸ (Confidence) ಕುಗ್ಗಿಸಬೇಡಿ. ನಿಮ್ಮ ಮಕ್ಕಳಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ ಅದನ್ನು ಬೆಳೆಸಲು ಸಹಕಾರ ನೀಡಿ. ಅಪ್ಪನಾದವನು ಮಕ್ಕಳಲ್ಲಿ ಅಪಾರ ಆತ್ಮವಿಶ್ವಾಸ ತುಂಬಲು ಸಾಧ್ಯವಿದೆ. 

•    ಕಠೋರ (Rough) ವರ್ತನೆ ಬೇಡ
“ಹೀಗೆ ಮಾಡಬೇಡ, ಅಲ್ಲಿ ಹೋಗಬೇಡ, ಅವರ ಸ್ನೇಹ ಬೇಡ’ ಇತ್ಯಾದಿ ನಿರ್ಬಂಧಗಳನ್ನು ಬೆಳೆಯುವ ಮಕ್ಕಳಿಗೆ ಹಾಕುವುದು ಸಾಮಾನ್ಯ. ಆದರೆ, ಅದ್ಯಾಕೆ ಎಂದು ವಿವರಿಸಿ ಹೇಳಿ. ಹದಿಹರೆಯದ ಮಕ್ಕಳೊಂದಿಗೆ ತಾಳ್ಮೆಯಿಂದ, ಜಾಣತನದಿಂದ ವ್ಯವಹಾರ ಮಾಡಬೇಕು. ಕಠೋರವಾಗಿ ವರ್ತಿಸಿದರೆ ಅವರೂ ನಿಮ್ಮ ಬಗ್ಗೆ ಕಠೋರತೆಯನ್ನೇ ತಾಳುತ್ತಾರೆ. 

Tap to resize

Latest Videos

ಆರ್ಡಿನರಿ ಮ್ಯಾನ್ ಆಗಿ ಮಕ್ಕಳಿಗೆ ಎಕ್ಸ್ಟ್ರಾರ್ಡಿನರಿ ಲೈಫ್ ಕೊಟ್ಟ ಅಪ್ಪನಿಗೆ Happy Father’s Day

•    ಮೊಬೈಲ್ (Mobile) ಬಗ್ಗೆ ಜಗಳ
ಮಕ್ಕಳು ನಿರ್ದಿಷ್ಟ ಸಮಯದಲ್ಲಿ ಮೊಬೈಲ್ ಬಳಕೆ ಮಾಡುವಂತೆ ಸಮಯ ನಿಗದಿಪಡಿಸಿ. ನೀವೂ ಹಾಗೆಯೇ ಮಾಡಿ. ಉಳಿದಂತೆ ಕೆಲ ಸಮಯ ಎಲ್ಲರೂ ಮಾತನಾಡುತ್ತ ಸಮಯ ಕಳೆಯಬೇಕು. ಅಡುಗೆ ಮನೆಯಲ್ಲಿ ಒಟ್ಟಾಗಿ ಏನಾದರೂ ಮಾಡಬೇಕು. ಆದರೆ, ಇದನ್ನು ಆರಂಭದಲ್ಲೇ ಅಭ್ಯಾಸ ಮಾಡಿಸಬೇಕು.  ಮೊಬೈಲ್ ಬಳಕೆ ಮಾಡುವುದು ಹೆಚ್ಚಾದ ಬಳಿಕ ಮಾಡಿದರೆ ಪ್ರಯೋಜನವಿಲ್ಲ. ಆಗ ಅಪ್ಪ-ಮಕ್ಕಳ ನಡುವೆ ಬರೀ ಗಲಾಟೆಗಳೇ ಆಗುತ್ತವೆ. 

click me!