#Feelfree: ಗುಪ್ತಾಂಗದ ಕೂದಲು ಬೆಳೆಸಬೇಕೇ, ಉಳಿಸಬೇಕೇ?

By Suvarna News  |  First Published Sep 14, 2020, 5:52 PM IST

ನನ್ನ ಗುಪ್ತಾಂಗದಲ್ಲಿರುವ ಕೂದಲನ್ನು ನಾನು ಈವರೆಗೆ ತೆಗೆದಿಲ್ಲ. ಆದರೆ ನನ್ನ ಕೆಲವು ಗೆಳತಿಯರು ರೆಗ್ಯುಲರ್ ಆಗಿ ಶೇವ್ ಮಾಡುತ್ತಾರೆ. ನನಗೆ ಹಾಗೆಲ್ಲ ಮಾಡಲು ಇಷ್ಟವಿಲ್ಲ. ಆದರೆ ಅವನಿಗೆ ಹಾಗಿದ್ದರೆ ಅಸಹ್ಯ ಅನಿಸಿದರೆ ಅನ್ನೋ ಮುಜುಗರ. ಯಾವುದು ಆರೋಗ್ಯಕರ? 


ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತನಾಲ್ಕು ವರ್ಷ. ನಾನೂ ನನ್ನ ಬಾಯ್ ಫ್ರೆಂಡ್ ಲಿವ್ ಇನ್ ರಿಲೇಶನ್ ಶಿಪ್ ಆರಂಭಿಸಲಿದ್ದೇವೆ. ಇಬ್ಬರಿಗೂ ಸೆಕ್ಸ್‌ನಲ್ಲಿ ಆಸಕ್ತಿ ಇದೆ. ಆದ್ರೆ ಈಗ ನನಗೊಂದು ಅನುಮಾನ ಶುರುವಾಗಿದೆ. ನನ್ನ ಗುಪ್ತಾಂಗದಲ್ಲಿರುವ ಕೂದಲನ್ನು ನಾನು ಈವರೆಗೆ ತೆಗೆದಿಲ್ಲ. ಆದರೆ ನನ್ನ ಕೆಲವು ಗೆಳತಿಯರು ರೆಗ್ಯುಲರ್ ಆಗಿ ಶೇವ್ ಮಾಡುತ್ತಾರೆ. ನನಗೆ ಹಾಗೆಲ್ಲ ಮಾಡಲು ಇಷ್ಟವಿಲ್ಲ. ಆದರೆ ಅವನಿಗೆ ಹಾಗಿದ್ದರೆ ಅಸಹ್ಯ ಅನಿಸಿದರೆ ಅನ್ನೋ ಮುಜುಗರ. ನಾನು ಕೆಲವೊಮ್ಮೆ ಪೋರ್ನ್ ಸಿನಿಮಾ ನೋಡ್ತೀನಿ. ಅದರಲ್ಲಿ ಎಲ್ಲರೂ ಆ ಪ್ರದೇಶದ ಕೂದಲುಗಳನ್ನು ನೀಟಾಗಿ ತೆಗೆದುಹಾಕಿ, ಫಳಫಳ ಹೊಳೆಯುವಂತೆ ಇಟ್ಟುಕೊಂಡಿರುವುದನ್ನು ನೋಡಿದ್ದೇನೆ. ಇದು ಆರೋಗ್ಯಕರವಾ? ಯಾವುದು ಆರೋಗ್ಯಕರ? ನನ್ನ ಬಾಯ್‌ಫ್ರೆಂಡನ್ನು ಕನ್‌ವಿನ್ಸ್ ಮಾಡುವುದು ಹೇಗೆ?

Tap to resize

Latest Videos

undefined

ಉತ್ತರ: ನಿಮ್ಮ ಪ್ರಶ್ನೆ ಮುಖ್ಯವಾದ್ದು ಮತ್ತು ಎಲ್ಲರೂ ಇದರ ಬಗ್ಗೆ ವೈಜ್ಞಾನಿಕ ಅರಿವು ಬೆಳೆಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಪ್ರಕೃತಿ ಯಾಕೆ ಮನುಷ್ಯನಿಗೆ ಆ ಭಾಗದಲ್ಲಿ ಕೂದಲುಗಳನ್ನು ಕೊಟ್ಟಿತು? ಇದು ತಿಳಿದುಕೊಳ್ಳಬೇಕು. ಲಕ್ಷಾಂತರ ವರ್ಷಗಳ ಹಿಂದೆ ಮನುಷ್ಯನೂ ಕೋತಿಗಳ ಹಾಗೆಯೇ ಬೆತ್ತಲಾಗಿದ್ದ. ಆಗ ಆತನ/ ಆಕೆಯ ದೇಹದ ಆ ಸೂಕ್ಷ್ಮ ಭಾಗಗಳನ್ನು ಪ್ರಕೃತಿಯ ಅತಿ ಶಾಖ, ಅತಿ ಚಳಿ ಇತ್ಯಾದಿಗಳಿಂದ ರಕ್ಷಿಸಲು ಕವಚವೊಂದರ ರಕ್ಷಣೆ ಬಿತ್ತು. ಪ್ರಕೃತಿಯೇ ಅಲ್ಲಿ ಕೂದಲುಗಳನ್ನು ಬೆಳೆಸಿತು. 

Sex Education: ಬೇಕಾ? ಯಾರಿಗೆ? ಯಾವಾಗ? 
ಹಾಗಿದ್ದರೆ ಈಗ ಎಲ್ಲರೂ ಬಟ್ಟೆ ತೊಟ್ಟುಕೊಳ್ಳುತ್ತೇವಲ್ಲ, ಈಗಲೂ ಯಾಕೆ ಈ ಕೂದಲು ಇದೆ ಹಾಗೂ ಅದನ್ನು ಹಾಗೇ ಬಿಟ್ಟಿರುತ್ತೇವೆ? ಈ ಬಗ್ಗೆ ತಿಳಿಯಬೇಕು. ಪೋರ್ನ್‌ನಲ್ಲಿ ನೀವು ನೋಡಬೇಕಾದಂತೆಯೇ ದೃಶ್ಯಗಳನ್ನು ಪ್ರೆಸೆಂಟ್ ಮಾಡಿರುತ್ತಾರೆ. ಪೋರ್ನ್‌ನಲ್ಲಿಯೇ ಹೇರಿ ಅನ್ನುವ ವಿಭಾಗವೂ ಇದೆ. ಅದರಲ್ಲಿ ಗುಪ್ತಾಂಗದಲ್ಲಿ ಕೂದಲು ಇದ್ದವರ ಸೆಕ್ಸ್ ದೃಶ್ಯಗಳು ಸಿಗುತ್ತವೆ. ಆದರೆ ಅದಕ್ಕೆ ಬೇಡಿಕೆ ಕಡಿಮೆ. ಹೀಗಾಗಿ ಪಾಪ್ಯುಲರ್ ಯಾವುದೋ ಆ ವಿಡಿಯೋಗಳು ಹೆಚ್ಚಾಗಿ ಕಾಣಸಿಗುತ್ತವೆ ಅಷ್ಟೇ. 

ಗುಪ್ತಾಂಗದ ಕೂದಲುಗಳಿಗೆ ಏನೂ ಕೆಲಸವೇ ಇಲ್ಲ ಅನ್ನುವವರೂ ಇದ್ದಾರೆ. ಆದರೆ ಪ್ರಾಕೃತಿಕ ರಕ್ಷಣೆಗಿಂತ ಹೆಚ್ಚಿನ ಹೊಣೆಗಳೂ ಅದಕ್ಕೆ ಇವೆ ಅನ್ನುವವರೂ ಇದ್ದಾರೆ. ಕೆಲವು ಕಾರಣಗಳನ್ನು ಹೇಳಬಹುದು- ಅದು ಸೆಕ್ಸ್‌ನ ಸಂದರ್ಭದಲ್ಲಿ ಅಂಗಗಳ ನಡುವಿ ಘರ್ಷಣೆಯನ್ನು ಕಡಿಮೆ ಮಾಡುತ್ತದೆ. ಬ್ಯಾಕ್ಟೀರಿಯಾ, ವೈರಸ್‌ ಅಥವಾ ಇನ್ನಿತರ ಸೂಕ್ಷ್ಮಾಣುಗಳು ಒಬ್ಬರ ದೇಹದಿಂದ ಇನ್ನೊಬ್ಬರ ದೇಹಕ್ಕೆ ಹರಡುವುದನ್ನು ತಪ್ಪಿಸುತ್ತದೆ. ಗುಪ್ತಾಂಗಕ್ಕೆ ಎಷ್ಟು ಬೇಕೋ ಅಷ್ಟೇ ತಾಪಮಾನವನ್ನು ಆ ಪ್ರದೇಶದಲ್ಲಿ ಮೇಂಟೇನ್ ಮಾಡುತ್ತವೆ. ಇನ್ನು ಕೆಲವರೆನ್ನುವಂತೆ, ಇವು ಲೈಂಗಿಕ ಆಕರ್ಷಣೆಯನ್ನು ಹೆಚ್ಚಿಸುವ ಫೆರೋಮೋನ್ ಎಂಬ ಚೋದಕಗಳನ್ನು ಉತ್ಪತ್ತಿ ಮಾಡುತ್ತವೆ. ಇವು ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನು ತಡೆಗಟ್ಟುವುದರಲ್ಲೂ ಸಹಾಯ ಮಾಡುತ್ತವೆ ಎಂಬುದು ಅಧ್ಯಯನಗಳಿಂದ ಗೊತ್ತಾಗಿದೆ. ಒಬ್ಬ ವ್ಯಕ್ತಿಗೆ ಆ ಭಾಗದಲ್ಲಿ ಇಷ್ಟೇ ಕೂದಲು ಇರಬೇಕು, ಇದು ಹೆಚ್ಚು, ಇದು ಕಡಿಮೆ ಎಂದೇನಿಲ್ಲ. ಇದರ ಪ್ರಮಾಣ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. 

#Feelfree: ಸ್ಯಾಂಡಲ್‌ವುಡ್‌ನ ಡ್ರಗ್ಸ್ ಮತ್ತು ಸೆಕ್ಸ್- ಡೆಡ್ಲೀ ಕಾಂಬಿನೇಶನ್! ...

ಇದು ಹೈಜೀನಿಕ್ ಅಲ್ಲ ಎಂಬ ಭಾವನೆ ಕೆಲವರಲ್ಲಿದೆ. ಇದು ತಪ್ಪು. ಇಲ್ಲಿ ಬೆವರು ಅಥವಾ ಕೊಳೆ ಸೇರಿಕೊಳ್ಳುವುದು ನಿಜ. ಅದರಿಂದಾಗಿ ಸ್ವಲ್ಪ ವಾಸನೆಯೂ ಬರಬಹುದು. ಆದರೆ ಪ್ರತಿದಿನ ಸ್ನಾನದ ಸಂದರ್ಭದಲ್ಲಿ ಅದನ್ನು ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಬೇಕು. ಅಥವಾ ಸೆಕ್ಸ್‌ಗೆ ಮೊದಲು ಈ ಭಾಗವನ್ನು ತೊಳೆದುಕೊಂಡರೂ ಅಡ್ಡಿಯಿಲ್ಲ. ಇದನ್ನು ನಿಮ್ಮ ಫ್ರೆಂಡ್‌ಗೆ ಮನದಟ್ಟು ಮಾಡಿಸಿ. ಒಂದು ವೇಳೆ ಆತನಿಗೆ ಇನ್ನೂ ಅದು ಅಸಹ್ಯ ಅನ್ನಿಸಿದರೆ ನೀವು ಅದನ್ನು ತೆಗೆಯಲೂ ಬಹುದು. ಆದರೆ ತೆಗೆಯುವಾಗ ಗುಪ್ತಾಂಗಕ್ಕೆ ಬ್ಲೇಡ್‌ ಅಥವಾ ರೇಜರ್‌ನ ಗಾಯ ಆಗದಂತೆ ನೋಡಿಕೊಳ್ಳಿ. ಒಮ್ಮೆ ಕೂದಲು ತೆಗೆದರೆ ಅದು ಮತ್ತೆ ಮೊಳೆಯಲಾರಂಭಿಸುವಾಗ ತುರಿಕೆ ಶುರುವಾಗುತ್ತದೆ. ಇದನ್ನು ಸಹಿಸಿಕೊಳ್ಳಬೇಕು. ಕೆಲವರಿಗೆ ಅಲ್ಲಿಯ ರೋಮವನ್ನು ತೆಗೆದರೆ ಹೆಚ್ಚಿ ಲೈಂಗಿಕ ಸಂತೃಪ್ತಿ ಸಿಗುತ್ತದೆ. ಮುಖಮೈಥುನ ಮಾಡುವಾಗಲೂ ರೋಮಗಳಿದ್ದರೆ ಕೆಲವರಿಗೆ ಹಿತವಾಗುವುದಿಲ್ಲ. ಹಾಗಿದ್ದಲ್ಲಿ ನೀವೂ ಹಾಗೂ ನಿಮ್ಮ ಸಂಗಾತಿ ಅಲ್ಲಿನ ರೋಮವನ್ನು ತೆಗೆಯುವ ಬಗ್ಗೆ ಯೋಚಿಸಬಹುದು. 



 

click me!