
ಬಾಲ್ಯ (Childhood) ದಲ್ಲಿ ಮಕ್ಕಳಿ (Children) ಗೆ ಒಳ್ಳೊಳ್ಳೆ ವಿಷ್ಯಗಳನ್ನು ಕಲಿಸಬೇಕು. ಮಕ್ಕಳು ಬಾಲ್ಯದಲ್ಲಿ ಕಲಿತ ವಿಷ್ಯಗಳು ಶಾಶ್ವತವಾಗಿ ಉಳಿಯುತ್ತವೆ. ಚಿಕ್ಕ ಮಕ್ಕಳಿಗೆ ಪಾಲಕರು (Parents) ಅನೇಕ ಒಳ್ಳೆಯ ವಿಷ್ಯಗಳನ್ನು ತಿಳಿ ಹೇಳಬೇಕು. ದಯವಿಟ್ಟು, ಕ್ಷಮಿಸು (sorry) ಸೇರಿದಂತೆ ಕೆಲ ಪದಗಳ ಅರ್ಥ ಹಾಗೂ ಅದನ್ನು ಯಾವಾಗ ಹೇಳಬೇಕು ? ಇದನ್ನು ಹೇಳುವುದ್ರಿಂದ ಏನು ಪ್ರಯೋಜನ ಎಂಬೆಲ್ಲ ವಿಷ್ಯವನ್ನು ಮಕ್ಕಳಿಗೆ ಹೇಳಬೇಕು. ಪಾಲಕರು ಮಕ್ಕಳಿಗೆ ಕ್ಷಮಿಸು ಎಂಬ ಪದವನ್ನು ಹೇಳ್ತಾರೆ. ಪಾಲಕರು ಹೇಳ್ತಾರೆಂಬ ಕಾರಣಕ್ಕೆ ಮಕ್ಕಳು ಸಾರಿ ಎನ್ನುತ್ತಾರೆ ನಿಜ. ಆದ್ರೆ ಇದು ಸಾಕಾಗುವುದಿಲ್ಲ. ಇದರ ನಿಜವಾದ ಅರ್ಥ ಮಕ್ಕಳಿಗೆ ತಿಳಿದಿರುವುದಿಲ್ಲ. ತಾವೇನು ತಪ್ಪು ಮಾಡಿದ್ದೇವೆ ಎಂಬುದು ಕೂಡ ಅವರಿಗೆ ಗೊತ್ತಿರುವುದಿಲ್ಲ.
ಅನೇಕ ಮಕ್ಕಳು ಕ್ಷಮೆ ಕೇಳಿದ ನಂತರವೂ ತಪ್ಪನ್ನು ಪುನರಾವರ್ತಿಸುತ್ತಾರೆ. ಇದರರ್ಥ ಅವರು ಕ್ಷಮಿಸು ಎಂಬುದನ್ನು ಹೇಳಲು ಕಲಿತಿರುತ್ತಾರೆ. ಆದ್ರೆ ಕ್ಷಮೆಯ ನಿಜವಾದ ಅರ್ಥ ಅವರಿಗೆ ತಿಳಿದಿರುವುದಿಲ್ಲ. ಕ್ಷಮೆಯನ್ನು ಯಾಕೆ ಕೇಳಿದ್ದೇವೆ ಎಂಬುದು ಮಗುವಿಗೆ ತಿಳಿದಾಗ ಅವರ ನಡವಳಿಕೆಯು ಸ್ವಯಂಚಾಲಿತವಾಗಿ ಬದಲಾಗುತ್ತದೆ. ಅಂದರೆ ಮಕ್ಕಳು ಕ್ಷಮಿಸು ಎಂದು ಹೇಳಿದ ನಂತ್ರ ತಪ್ಪನ್ನು ಅರಿತುಕೊಳ್ಳುತ್ತಾರೆ. ತಪ್ಪನ್ನು ಮತ್ತೆ ಮಾಡುವುದಿಲ್ಲ. ಹಾಗಾಗಿ ಕ್ಷಮೆಯ ಸರಿಯಾದ ಅರ್ಥವನ್ನು ಮಗುವಿಗೆ ಕಲಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಕ್ಷಮೆಯ ಸರಿಯಾದ ಅರ್ಥವನ್ನು ಕಲಿಸಲು ನಿಮಗೆ ಸಹಾಯ ಮಾಡುವ ಕೆಲವು ವಿಧಾನಗಳು ಇಲ್ಲಿವೆ.
ಕ್ಷಮೆ ಬಗ್ಗೆ ಮಕ್ಕಳಿಗೆ ತಿಳಿಸಿ :
ಭಾವನೆಗಳೊಂದಿಗೆ ವ್ಯವಹರಿಸಿ : ತಪ್ಪು ಮಾಡಿದಾಗ ಅದನ್ನು ಹೇಗೆ ಎದುರಿಸಬೇಕೆಂದು ಮಗುವಿಗೆ ತಿಳಿದಿರಬೇಕು. ತಪ್ಪಾಗಿದೆ ಎಂಬುದು ಮಗುವಿಗೆ ತಿಳಿದಾಗ ಮಾತ್ರ ನಾವು ಕ್ಷಮಿಸಬೇಕು ಎಂಬುದು ಅವರಿಗೆ ತಿಳಿಯುತ್ತದೆ.
MARRIAGE TIPS : ನಿಶ್ಚಿತಾರ್ಥಕ್ಕೆ ಮುನ್ನವೇ ಹುಡುಗಿ ಇಟ್ಟ ಡಿಮ್ಯಾಂಡ್ ಕೇಳಿ ಕಂಗಾಲಾದ ಹುಡುಗ
ಕ್ಷಮೆ ಶಿಕ್ಷೆಯಲ್ಲ : ಇಲ್ಲಿ ಕ್ಷಮೆ ಎಂದರೆ ಕಠಿಣ ಶಿಕ್ಷೆ ಎಂಬ ಅರ್ಥವಲ್ಲ ಎಂದು ಅವರಿಗೆ ಮನವರಿಕೆ ಮಾಡಿ. ಕ್ಷಮೆ ಕೇಳುವುದು ಅವಮಾನವಲ್ಲವೆಂದು ಅವರಿಗೆ ಅರ್ಥ ಮಾಡಿಸಿ. ತಪ್ಪಿಗೆ ಸ್ವಲ್ಪ ಧನಾತ್ಮಕ ಶಿಕ್ಷೆಯನ್ನು ನೀಡಿ. ಉದಾಹರಣೆಗೆ, ಮಗುವು ಏನನ್ನಾದರೂ ಮುರಿದರೆ ಮತ್ತು ಹಾಳು ಮಾಡಿದ್ರೆ ಬೈದು, ಹೊಡೆದು ಮಾಡ್ಬೇಡಿ. ಅವರಿಗೆ ಕ್ಷಮಿಸುವಂತೆ ಹೇಳಲು ಹೇಳಿ.
ರೋಲ್ಮಾಡೆಲ್ ಆಗಿ : ಮಕ್ಕಳಿಗೆ ಪೋಷಕರೇ ಮಾದರಿ. ಒಮ್ಮೆ ನೀವು ತಪ್ಪು ಮಾಡಿದ್ರೆ ಮತ್ತೆ ಅದೇ ತಪ್ಪನ್ನು ಮಾಡ್ಬೇಡಿ. ವಿಶೇಷವಾಗಿ ಮಕ್ಕಳ ಮುಂದೆ ಹೀಗೆ ಮಾಡ್ಬೇಡಿ. ಕುಟುಂಬದಲ್ಲಿ ಯಾರಿಗಾದರೂ ನೋವುಂಟುಮಾಡಿದರೆ, ಕ್ಷಮಿಸಿ ಎಂದು ಹೇಳಲು ವಿಳಂಬ ಮಾಡಬೇಡಿ. ಇದು ನಿಮ್ಮ ಮಗುವಿನ ಮೇಲೂ ಪರಿಣಾಮ ಬೀರುತ್ತದೆ. ನಿಮ್ಮನ್ನು ನೋಡಿ ಅವರು ಕಲಿಯುತ್ತಾರೆ. ತಪ್ಪು ಮಾಡಿದಾಗ ಅವರೂ ಕ್ಷಮೆ ಕೇಳಲು ಕಲಿಯುತ್ತಾರೆ.
ಅನಗತ್ಯ ಕ್ಷಮೆಯನ್ನು ಸ್ವೀಕರಿಸಬೇಡಿ : ಮಗು ಪದೇ ಪದೇ ತಪ್ಪನ್ನು ಮಾಡ್ತಿದ್ದರೆ ಪದೇ ಪದೇ ಕ್ಷಮಿಸಬೇಡಿ. ಆಗ ಕ್ಷಮೆ ಅರ್ಥ ಕಳೆದುಕೊಳ್ಳುತ್ತದೆ. ಕ್ಷಮಿಸುತ್ತಾರೆನ್ನುವ ಕಾರಣಕ್ಕೆ ಮಗು ಪದೇ ಪದೇ ತಪ್ಪನ್ನು ಮಾಡುತ್ತದೆ. ತಪ್ಪು ಮಾಡಿ ಕ್ಷಮೆ ಕೇಳಿದ್ರೆ ಪಾಲಕರು ಸುಮ್ಮನಾಗ್ತಾರೆ ಎಂದು ಅರ್ಥೈಸಿಕೊಳ್ಳುವ ಅವರು ತಪ್ಪು ಮಾಡಲು ಹೆದರುವುದಿಲ್ಲ. ಹಾಗೆ ಮನಸ್ಸಿನಾಳದಿಂದ ಕ್ಷಮೆ ಕೇಳುವುದಿಲ್ಲ. ಪಾಲಕರಿಂದ ತಪ್ಪಿಸಿಕೊಳ್ಳಲು ಕ್ಷಮೆ ಕೇಳಿ ಸುಮ್ಮನಾಗ್ತಾರೆ.
ನಿದ್ರೆಯಲ್ಲಿದ್ದಾಗ ಪತಿ ಜೊತೆ ಸಂಬಂಧ ಬೆಳೆಸಿದ ಪತ್ನಿ.. ಎಚ್ಚರಗೊಂಡ ಪತಿ ಮಾಡಿದ್ದೇನು ?
ಆಕ್ಷನ್ ಮೂಲಕ ಕಲಿಸಿ : ಮಗು ತಪ್ಪು ಮಾಡಿದಾಗ ನಾವು ಕೈ ಎತ್ತುತ್ತೇವೆ. ಇಲ್ಲವೆ ಬಾಯಿಗೆ ಬಂದಂತೆ ಬೈತೇವೆ. ಆದ್ರೆ ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿ. ತಪ್ಪು ಮಾಡದೆ ಕೆಲವನ್ನು ಹೇಗೆ ಮಾಡ್ಬಹುದು ಎಂದು ಮಗುವಿಗೆ ತಿಳಿಸಿ. ಮೇಜಿನ ಮೇಲೆ ಹಾಲು ಚೆಲ್ಲಿದರೆ, ಅವರನ್ನು ಬೈಯುವ ಬದಲು, ಅದನ್ನು ಹೇಗೆ ಸ್ವಚ್ಛಗೊಳಿಸಬೇಕೆಂದು ಅವರಿಗೆ ಕಲಿಸಿ. ಕ್ಷಮೆಯನ್ನು ಪದಗಳಲ್ಲಿ ಮಾತ್ರವಲ್ಲದೆ ಕ್ರಿಯೆಗಳ ಮೂಲಕವೂ ಕಲಿಸಬಹುದು. ತಪ್ಪು ಮಾಡಿದ್ದೇವೆ ಎಂಬುದು ಮಗುವಿಗೆ ಅರ್ಥವಾದಾಗ ಅದು ಕ್ಷಮೆಯನ್ನು ತಾನಾಗಿಯೇ ಹೇಳಲು ಕಲಿಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.