ಟೀನೇಜ್ ಮಕ್ಕಳಿಗೆ ಹೀಗೆ ನೋಡಿಕೊಂಡರೆ ದಾರಿ ತಪ್ಪೋದಿಲ್ಲ ಅಂತಾರೆ ಸುಧಾಮೂರ್ತಿ!

By Suvarna NewsFirst Published Jan 30, 2024, 2:36 PM IST
Highlights

ಟೀನೇಜ್ ಬಂತು ಅಂದ್ರೆ ಮಕ್ಕಳು ದಾರಿ ತಪ್ಪುತ್ತಾರೆ. ಪೇರೆಂಟ್ಸ್ ಸ್ಟ್ರಿಕ್ಟ್ ಆಗಿ ಇರಬೇಕು ಎಂಬ ಮನೋಭಾವ ಹಲವರಲ್ಲಿದೆ. ಆದರೆ ಸುಧಾಮೂರ್ತಿ ಅವರು ಟೀನೇಜ್ ಮಕ್ಕಳನ್ನು ಹೀಗೆ ನೋಡಿಕೊಳ್ಳಿ ಅಂತಿದ್ದಾರೆ. ಅದು ಹೇಗೆ?

ಟೀನೇಜ್ ಬಂತು ಅಂದರೆ ಕೆಂಡದ ಮೇಲೆ ನಡೆಯೋ ಹಾಗಿರುತ್ತೆ ಪೋಷಕರ ಮನಸ್ಥಿತಿ. ಮಾತು ಕೇಳದ ಮಕ್ಕಳನ್ನು ತಾವು ಹೇಳಿದಂತೆ ಕೇಳಿಸಿಯೇ ಕೇಳಿಸುತ್ತೇನೆ ಎಂದು ಹೆಣಗುತ್ತಾರೆ ಪೋಷಕರು. ಆದರೆ ಟೀನೇಜ್ ಮಕ್ಕಳ ಮನಸ್ಥಿತಿಯನ್ನು ಹತ್ತಿರದಿಂದ ಕಂಡ, ಈ ಬಗ್ಗೆ ಹಿಂದಿನಿಂದಲೇ ಮಾತನಾಡುತ್ತಾ ಬಂದಿರುವ ಸುಧಾಮೂರ್ತಿ ಟೀನೇಜ್ ಮಕ್ಕಳ ಪೇರೆಂಟಿಂಗ್ ಹೇಗಿರಬೇಕು ಅನ್ನೋದರ ಬಗ್ಗೆ ಮಹತ್ವದ ಟಿಪ್ಸ್ ನೀಡುತ್ತಾರೆ. ಅವರ ಮಾತುಗಳನ್ನು ಕೇಳುತ್ತಿದ್ದರೆ ಮಕ್ಕಳು ದಾರಿ ತಪ್ಪೋ ಮಾತೇ ಇರಲ್ಲ ಅನಿಸುತ್ತೆ.

ಸುಧಾಮೂರ್ತಿ ಹೇಳೋ ಮೊದಲ ಮಾತು ಟೀನೇಜ್ ಮಕ್ಕಳ ಮಾತನ್ನು ಕೇಳಿಸಿಕೊಳ್ಳುವ ಸಹನೆ (Patience), ತಾಳ್ಮೆ ಪೋಷಕರಿಗೆ ಬೇಕು ಅನ್ನೋದು. 'ಟೀನೇಜ್ ಮಕ್ಕಳಿಗೂ ಮನಸ್ಸಿದೆ. ಅವರಿಗೂ ಭಾವನೆಗಳಿವೆ. ಅವುಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವೂ ಇದೆ. ಆದರೆ ಕೇಳಿಸಿ ಕೊಳ್ಳುವ ಕಿವಿ ಬೇಕು ಅಷ್ಟೇ. ಅಂತಹ ಕೇಳಿಸಿಕೊಳ್ಳುವ ಗುಣ ನಿಮ್ಮಲ್ಲಿ ಇದ್ದರೆ ನಿಮ್ಮ ಮಕ್ಕಳಿಗೆ ನೀವೇ ನಿಜವಾದ ಬೆಸ್ಟ್ ಫ್ರೆಂಡ್ಸ್. ಮಕ್ಕಳಿಗೆ ನಿಮ್ಮ ಬಗ್ಗೆ ಗೌರವ, ನಂಬಿಕೆ, ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಬಳಿ ಮಾತನಾಡಲು ಹೆಚ್ಚು ಖುಷಿ ಪಡುತ್ತಾರೆ' ಎನ್ನುವ ವಿಚಾರ ಹೇಳುತ್ತಾರೆ.

Latest Videos

ಮನೆಯಲ್ಲಿ ಬೆಳೆಯುವ ಮಕ್ಕಳಿದ್ದರೆ ಪೋಷಕರಿಗೆ ಜವಾಬ್ದಾರಿ ಜಾಸ್ತಿ. ಏಕೆಂದರೆ ಸಮಾಜದಲ್ಲಿ ಮಕ್ಕಳನ್ನು ಅರ್ಥ ಪೂರ್ಣವಾಗಿ ಬೆಳೆಸಬೇಕು ಎನ್ನುವ ಒತ್ತಡ (Stress) ಇರುತ್ತದೆ. ಬೆಳೆಯುವ ಹಂತದಲ್ಲಿ ಮಕ್ಕಳು ತಪ್ಪು ದಾರಿ ಹಿಡಿದರೆ ಅದು ಅವರ ಭವಿಷ್ಯವನ್ನೇ ಹಾಳು ಮಾಡಬಹುದು. ತಪ್ಪು ದಾರಿ ಎಂದರೆ ಮಕ್ಕಳೇ ಆಯ್ದುಕೊಳ್ಳುವ ಹಾದಿಗಳೇ ಆಗಬೇಕು ಎಂದೇನಿಲ್ಲ. ಕೆಲವೊಮ್ಮೆ ಮನೆಯಲ್ಲಿ ಪೋಷಕರು ನಡೆದುಕೊಳ್ಳುವ ರೀತಿ ಕೂಡ ಅವರನ್ನು ತಪ್ಪು ಮಾರ್ಗದ ಕಡೆಗೆ ಕೊಂಡೊಯ್ಯುತ್ತದೆ. ಹಾಗಾಗಿ ಪೋಷಕರಾದವರು ಮಕ್ಕಳ ಜೊತೆ ಸ್ನೇಹಿತರಾಗಿ ನಡೆದುಕೊಂಡು ಅವರ ಆಗು ಹೋಗುಗಳನ್ನು ಅರ್ಥ ಮಾಡಿ ಕೊಂಡು ಮಕ್ಕಳನ್ನು ಅತ್ಯುತ್ತಮವಾಗಿ ಬೆಳೆಸುವ ಕಲೆಯನ್ನು ಕಲಿತು ಕೊಳ್ಳಬೇಕು ಎನ್ನುತ್ತಾರೆ ಈ ನ್ಯಾಶನಲ್ ನಾನಿ.

ಎಂಗೇಜ್ಮೆಂಟ್ ಆಗಿರುವ ಗರ್ಲ್, ಸಾಯಲು ಹೊರಟಿರುವ ಬಾಯ್‌ ಮಧ್ಯೆ ಯಾಕೆ ಹುಟ್ಕೊಂಡ್ತು ಲವ್..!

'ಮಕ್ಕಳು ಬೆಳೆಯುವ ವಯಸ್ಸಿನಲ್ಲೇ ಅವರ ಮೇಲೆ ಅವರಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ವಿಷಯಗಳನ್ನು ಹೇರುವುದು ತಪ್ಪು. ಮಕ್ಕಳಿಗೆ ಪೋಷಕರಾದವರು ಎಂದಿಗೂ ಸಹ ಸ್ನೇಹಿತರಾಗಿರಬೇಕು (feiends). ನಮ್ಮ ಹಲವಾರು ಗೊಂದಲಗಳನ್ನು ಬದಿಗಿಟ್ಟು ಮಕ್ಕಳ ಜೊತೆ ಮಕ್ಕಳಾಗಿ ವರ್ತಿಸಬೇಕು. ಮಕ್ಕಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬೆಳೆಯಲು ಬಿಡಬೇಕು. ಪೋಷಕರಾದವರು ತಮ್ಮ ಮಕ್ಕಳಿಗೆ ತಕ್ಕಮಟ್ಟಿಗೆ ಸ್ವಾತಂತ್ರ್ಯ ಕೊಡುವುದು ಬಹಳ ಮುಖ್ಯ.​ ಮಕ್ಕಳ ಬೆಳವಣಿಗೆಗೆ ಅನುಕೂಲ ಕರವಾದ ವಾತಾವರಣವನ್ನು ಪೋಷಕರಾಗಿ ನೀವೇ ನಿರ್ಮಿಸಬೇಕು. ಏಕೆಂದರೆ ಮಕ್ಕಳು ಪೋಷಕರಿಂದ ಕಲಿಯುವುದು ಬಹಳ ಇದೆ. ನೀವು ಮನೆಯಲ್ಲಿ ಹೇಗೆ ನಡೆದುಕೊಳ್ಳುತ್ತೀರಿ ಎನ್ನುವುದು ನಿಮ್ಮ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಇದು ಅವರ ನಿರ್ಧಾರ ತೆಗೆದುಕೊಳ್ಳುವಿಕೆಯ ಮೇಲು ಸಹ ಪ್ರಭಾವ ಬೀರಬಹುದು. ಹೀಗಾಗಿ ಬೆಳೆಯುವ ಮಕ್ಕಳ ವಿಷಯ ಬಂದಾಗ ನಿಮ್ಮ ಜವಾಬ್ದಾರಿ ಹೇಗಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ' ಎಂಬ ಮಾತನ್ನೂ ಹೇಳುತ್ತಾರೆ.

ಮಕ್ಕಳಲ್ಲಿ ಕೀಳರಿಮೆ (Guilt) ಬೆಳೆಸಬಾರದು ಎಂಬುದು ಸುಧಾಮೂರ್ತಿ ಹೇಳುವ ಇನ್ನೊಂದು ಮಾತು. 'ಬೆಳೆಯುವ ಮಗುವನ್ನು ಯಾವುದೇ ಕಾರಣಕ್ಕೂ ಇನ್ನೊಬ್ಬರ ಜೊತೆ ಹೋಲಿಕೆ (Comparision) ಮಾಡಿ ನೋಡಬಾರದು. ನಮ್ಮ ಮಕ್ಕಳು ನಮಗೆ ಹೆಚ್ಚಲ್ಲವೇ? ಹಾಗಾಗಿ ಅವರ ಮುಂದೆ ಇನ್ನೊಬ್ಬರನ್ನು ಹೊಗಳುವುದು ಬೇಡ. ಏಕೆಂದರೆ ಈ ರೀತಿ ಮಾಡಿದರೆ ಅವರಿಗೆ ಒಂದು ರೀತಿಯ ಕೀಳರಿಮೆ ಉಂಟಾಗುತ್ತದೆ ಮತ್ತು ಇದು ಜೀವನ ಪರ್ಯಂತ (life long) ಅವರನ್ನು ಕುಗ್ಗುವಂತೆ ಮಾಡುತ್ತದೆ. ಅವರ ಸಾಧನೆಯ ಹಾದಿಗೆ ತಡೆ ಒಡ್ಡಿದಂತೆ ಆಗುತ್ತದೆ. ಹೀಗಾಗಿ ಮಕ್ಕಳೇ ಆದರೂ ಅವರು ಸಹ ಗೌರವಯುತವಾಗಿ ಬದುಕಲು ಅನುಕೂಲ ಮಾಡಿಕೊಡಿ. ಮಕ್ಕಳಿಗೂ ಕೂಡ ಅವರದೇ ಆದ ಮಾನಸಿಕ ಒತ್ತಡ ಮತ್ತು ಖಿನ್ನತೆ (Depression) ಇರುತ್ತದೆ. ಶಾಲೆಗೆ ಹೋಗುವುದು, ಟ್ಯೂಷನ್ (Tuition) ಗೆ ಹೋಗುವುದು, ಆಟ ಪಾಠಗಳಲ್ಲಿ ಭಾಗಿಯಾಗುವುದು ಇದರ ಜೊತೆಗೆ ಓದಿಕೊಳ್ಳುವಂತೆ ನಿಮ್ಮ ಒತ್ತಡ ಬೇರೆ. ಇವೆಲ್ಲವನ್ನೂ ನಿರ್ವಹಿಸುವಲ್ಲಿ ಕೆಲವು ಮಕ್ಕಳು ವಿಫಲರಾಗುತ್ತಾರೆ. ಅಂತಹ ಸಂದರ್ಭದಲ್ಲಿ ಮಕ್ಕಳ ಮಾನಸಿಕ ಆರೋಗ್ಯ (Mental Health of Kids) ಹದಗೆಡುತ್ತದೆ. ಸಾಧ್ಯವಾದಷ್ಟು ಪೋಷಕರು ಇದರ ಬಗ್ಗೆ ಗಮನವಹಿಸಿ. ಚಿಕ್ಕ ವಯಸ್ಸಿಗೆ ಎಲ್ಲವನ್ನು ಬ್ಯಾಲೆನ್ಸ್ (balance) ಮಾಡಲು ನೀವು ಕೂಡ ನೆರವಾಗಿ ಎಂಬುದು ಸುಧಾ ಮೂರ್ತಿಯವರ ಸಲಹೆ.​

18 ವರ್ಷದೊಳಿಗಿನ ಹುಡುಗಿ ಮದುವೆಯಾಗಿದ್ದಕ್ಕೆ 20 ವರ್ಷ ಜೈಲು ಶಿಕ್ಷೆ

click me!