ಅತಿಯಾಗಿ ಸ್ವಪ್ರಶಂಸೆ ಮಾಡಿಕೊಳ್ಳುವ ಜನರು ನಮ್ಮಲ್ಲಿ ಮುಜುಗರ ಹುಟ್ಟಿಸುತ್ತಾರೆ. ಅವರು ಇನ್ನೊಬ್ಬರನ್ನು ಹಗುರ ಮಾಡಲು ಹಿಂದೇಟು ಹಾಕುವುದಿಲ್ಲ. ತಮ್ಮ ಮಾತುಗಳಿಂದ ನೋಯಿಸಲೂ ಬೇಸರ ಪಟ್ಟುಕೊಳ್ಳುವುದಿಲ್ಲ. ಅಂಥವರೇ ನಿಮ್ಮ ಪತಿಯಾದರೆ…? ನಿಭಾಯಿಸುವುದು ಸುಲಭವಲ್ಲ. ಅದಕ್ಕಾಗಿ ಕೆಲವು ಟಿಪ್ಸ್.
ಮದುವೆ ಆಗುವಾಗ ಗೌಣವಾಗಿ ಕಾಣುವ ವ್ಯಕ್ತಿಯ ಕೆಲವು ಸ್ವಭಾವಗಳು ಮದುವೆಯ ಬಳಿಕ ಒಟ್ಟಿಗೆ ಜೀವನ ಸಾಗಿಸುವಾಗಿ ಹಿಂಸೆ ನೀಡಲು ಆರಂಭಿಸುತ್ತವೆ. ಅಥವಾ ಮೊದಲು ಈ ಬಗ್ಗೆ ಅರಿವಿಗೆ ಬರುವುದೇ ಇಲ್ಲ. ವ್ಯಕ್ತಿಯಲ್ಲಿರುವ ಈಗೋ, ಅಹಂಕಾರ, ಆತ್ಮರತಿಯ ಸ್ವಭಾವಗಳೂ ಇಂಥವೇ. ಪತ್ನಿಯಾದವಳು ಇಂತಹ ಪತಿಯನ್ನು ನಿಭಾಯಿಸುತ್ತ ಸುಸ್ತಾಗಿ ಹೋಗುತ್ತಾಳೆ. ಆತ್ಮರತಿ ಅಥವಾ ಸ್ವ ಆರಾಧನೆ ಮಾಡಿಕೊಳ್ಳುವ ಪ್ರವೃತ್ತಿಯ ಪುರುಷರು ಪತ್ನಿಯ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ಸಾಧ್ಯತೆ ಕಡಿಮೆ. ಅವರ ಮನಸ್ಸು ಭಾವನಾತ್ಮಕವಾಗಿ ಮಿಡಿಯುವುದಿಲ್ಲ. ತಮ್ಮ ಬಗ್ಗೆ ಇನ್ನೊಬ್ಬರು ಅತಿಯಾಗಿ ಗಮನ ನೀಡಬೇಕೆಂದು ಬಯಸುತ್ತಾರೆ. ತಮ್ಮ ಈ ಸ್ವಭಾವ ಪತ್ನಿಗೆ ಹಿಂಸೆ ನೀಡಬಹುದು ಎಂದು ಕ್ಷಣಕಾಲವೂ ಚಿಂತಿಸುವುದಿಲ್ಲ. ಈ ಗುಣಲಕ್ಷಣವನ್ನು ಮನಶಾಸ್ತ್ರದಲ್ಲಿ “ಆತ್ಮರತಿ ವ್ಯಕ್ತಿತ್ವದ ಸಮಸ್ಯೆʼ ಎಂಬುದಾಗಿಯೇ ಗುರುತಿಸಲಾಗುತ್ತದೆ. ಏಕೆಂದರೆ, ಖಂಡಿತವಾಗಿ ಇದೊಂದು ಮಾನಸಿಕ ಸಮಸ್ಯೆಯೇ ಸರಿ. ಸಂಸಾರದಲ್ಲಿ ಇಬ್ಬರಿಗೂ ಪ್ರಾಮುಖ್ಯತೆ ಇರುತ್ತದೆ. ಆದರೆ, ಆತ್ಮರತಿ ಹೊಂದಿರುವ ಪುರುಷರು ಪತ್ನಿಗೂ ಪ್ರಾಮುಖ್ಯತೆ ಇದೆ ಎನ್ನುವುದನ್ನು ಒಪ್ಪಿಕೊಳ್ಳುವುದಿಲ್ಲ. ಅಂತಹ ಪತಿಯನ್ನು ನಿಭಾಯಿಸಲು ಮಹಿಳೆಯರು ಕೆಲವು ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ.
• ಮುಕ್ತ ಮಾತುಕತೆ (Open Conversation)
ಅತಿಯಾಗಿ ಸ್ವಕೇಂದ್ರಿತ (Self Centered) ಮನಸ್ಥಿತಿ ಹೊಂದಿರುವ ಪುರುಷರು (Male) ತಮ್ಮ ಕುರಿತ ಯಾವುದೇ ವಿಮರ್ಶೆಯನ್ನು (Criticism) ಸಕಾರಾತ್ಮಕವಾಗಿ ತೆಗೆದುಕೊಳ್ಳುವುದೇ ಇಲ್ಲ. ಹೀಗಾಗಿ, ಮಾತುಕತೆಯನ್ನು ನಿಯಂತ್ರಿಸಲು ಪ್ರಯತ್ನ ಪಡುತ್ತಾರೆ. ಹೀಗಾಗಿ, ಮಾತನಾಡುವಾಗ ನಿಮ್ಮ ಮಾತಿನ ಬಗ್ಗೆ ಸಾಕಷ್ಟು ಗಮನ ಇಡಿ. ಅವರ ಯಾವ ನಡೆನುಡಿ (Behavior) ನಿಮಗೆ ತೊಂದರೆ ನೀಡುತ್ತಿದೆ ಎನ್ನುವುದನ್ನು ಸ್ಪಷ್ಟವಾಗಿ ಆದರೆ ಮೃದುವಾಗಿ ತಿಳಿಸಿ. ಅವರ ಮೇಲೆ ಆರೋಪ ಮಾಡಬೇಡಿ. ಬೈಯ್ಯಬೇಡಿ. ಅವರನ್ನು ಕನ್ವಿನ್ಸ್ (Convince) ಮಾಡಲು ಯತ್ನಿಸಿ. ಅಂತಹ ಪತಿಯಲ್ಲಿ ನಿಮ್ಮ ಭಾವನೆ ವ್ಯಕ್ತಪಡಿಸಲು ಮುಕ್ತ ಮಾತುಕತೆಯೊಂದೇ ನೇರವಾದ ಮಾರ್ಗ. ನಿಮ್ಮ ಸಂಬಂಧಕ್ಕೆ ಪೂರಕವಾಗುವಂತೆ ಅವರ ವರ್ತನೆ ಹೇಗಿದ್ದರೆ ಚೆನ್ನ ಎಂದು ತಿಳಿಸಿ.
ಗಂಡ-ಹೆಂಡತಿ ಬೇರೆ ರೂಮಲ್ಲಿ ಮಲಗಿದರೂ ಬಾಂಧವ್ಯ ಚೆನ್ನಾಗಿದೆ ಎಂದರ್ಥ!
• ವರ್ತನೆಗೆ ಕಾರಣ ಕಂಡುಕೊಳ್ಳಿ
ಪತಿ (Husband) ಎದುರಿಸುತ್ತಿರುವ ಅಭದ್ರತೆ (Insecurity) ಹಾಗೂ ಅದನ್ನು ಮುಚ್ಚಿಡಲು ಅವರು ಪಡುತ್ತಿರುವ ಪ್ರಯತ್ನಗಳ ಬಗ್ಗೆ ಅರಿತುಕೊಳ್ಳಿ. ಇದಕ್ಕಾಗಿ ನೀವು ಅವರ ಕುಟುಂಬ ಹಾಗೂ ಸ್ನೇಹಿತರ ನೆರವು ಪಡೆದುಕೊಳ್ಳಬಹುದು. ಆತ್ಮರತಿಯ (Narcissist) ಸಮಸ್ಯೆ ಉಳ್ಳವರಲ್ಲಿ ಅಭದ್ರತೆಯ ಭಾವನೆ ಅಧಿಕವಾಗಿರುತ್ತದೆ. ಹೀಗಾಗಿ, ಅವರು ತಮ್ಮನ್ನು ತಾವು ಅತಿಯಾಗಿ ಪ್ರಶಂಸೆ ಮಾಡಿಕೊಳ್ಳುವ, ಹೊಗಳಿಕೊಳ್ಳುವ ಮಾರ್ಗಕ್ಕೆ ಇಳಿಯುತ್ತಾರೆ. ಹೀಗಾಗಿ, ಅವರು ಯಾವಾಗಲಾದರೂ ಇತರರ ಎದುರು ಮುಜುಗರವಾಗುವಂತೆ ಹೊಗಳಿಕೊಳ್ಳಲು ಶುರು ಮಾಡಿದರೆ ಅವರ ವರ್ತನೆಗೆ ಮೂಲ ಕಾರಣ ಅರಿತುಕೊಳ್ಳಿ. ಅಂಥವರು ನಿಮ್ಮನ್ನು ಟೀಕಿಸಿ ತಾವು ಸುಭದ್ರವಾಗಿರುವ ಭಾವನೆ ಅನುಭವಿಸುತ್ತಾರೆ.
• ಆತ್ಮವಿಶ್ವಾಸ (Self Esteem) ಹೆಚ್ಚಿಸಲು ಪ್ರಯತ್ನ
ಎನ್‌ಪಿಡಿ (NPD) ಸಮಸ್ಯೆ ಉಳ್ಳ ಜನರಲ್ಲಿ ಆತ್ಮವಿಶ್ವಾಸ ಕುಗ್ಗಿರುತ್ತದೆ. ತಮ್ಮ ತಪ್ಪುಗಳ ಜವಾಬ್ದಾರಿಯನ್ನು ಹೊರಲು ಅವರು ಸಿದ್ಧರಿರುವುದಿಲ್ಲ. ಇತರರನ್ನು ಬಹಳ ಬೇಗ ನೋಯಿಸುತ್ತಾರೆ. ಅವರನ್ನು ಬದಲಿಸಲು ಸಾಧ್ಯವಿಲ್ಲ ಎನ್ನುವ ಹತಾಶೆ (Helplessness) ನಿಮ್ಮನ್ನು ಕಾಡಬಹುದು. ಆದರೆ, ಜಿದ್ದಿಗೆ ಬೀಳಬೇಡಿ. ಆತ್ಮವಿಶ್ವಾಸ ಹೆಚ್ಚಿಸುವ ಚಟುವಟಿಕೆಯತ್ತ ಅವರನ್ನು ಹೊರಳಿಸಿ. ಕೇವಲ ವ್ಯಾಯಾಮ, ಧ್ಯಾನ (Meditation) ಸೇರಿದಂತೆ ಕೃತಜ್ಞತಾ (Gratitude) ಭಾವ ಹೆಚ್ಚಿಸುವ ಚಟುವಟಿಕೆಗಳ ಮೂಲಕ ಅವರಲ್ಲಿ ಬದಲಾವಣೆ ತರಬಹುದು. ಹಾಗೆಯೇ ನಿಮ್ಮ ಪ್ರೀತಿ, ಕಾಳಜಿ ಅವರಿಗೆ ಅಗತ್ಯ.
Male ego ನಿಮಗೂ ಇದೆಯೇ? ಬಿಟ್ ಬಿಡಿ… ಸಂಬಂಧ ಚೆನ್ನಾಗಿರುತ್ತೆ
• ಅತಿಯಾದ ಗಮನ (Concentrate) ಬೇಡ
ನಿಮ್ಮ ಸಲಹೆಗಳನ್ನು ಅವರು ಕಡೆಗಣಿಸುತ್ತಾರೆ. ನಿಮ್ಮ ತ್ಯಾಗಕ್ಕೆ ಬೆಲೆ ನೀಡುವುದಿಲ್ಲ. ನಿಮ್ಮ ಕೆಲಸ ಅವರ ಲೆಕ್ಕಕ್ಕೆ ಏನೂ ಅಲ್ಲ. ಅಂತಹ ಪತಿಯ ಬಗ್ಗೆ ಹೆಚ್ಚಿನ ಗಮನ ನೀಡುವುದನ್ನು ಕಡಿಮೆ ಮಾಡಿ. ನಿಮ್ಮ ಗುರಿಗಾಗಿ ಕೆಲಸ ಮಾಡಿ. ಈ ಹಾದಿಯಲ್ಲಿ ನಿಮ್ಮ ವಿಶ್ವಾಸ ಕಡಿಮೆ ಆಗದಂತೆ ನೋಡಿಕೊಳ್ಳುವುದು ಸಹ ಮುಖ್ಯ. ಅಗತ್ಯವಾದರೆ ಆಪ್ತಸಮಾಲೋಚಕರ ನೆರವು ಪಡೆದುಕೊಳ್ಳಿ.