ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಕ್ಯಾಮೆರಾದಿಂದ ಮನೆಮಂದಿ ಕ್ಯಾಮೆರಾಮೆನ್ ಆಗಿದ್ದಾರೆ. ಮನೆ, ಸಂಸಾರದ ಎಲ್ಲಾ ಶುಭ ಸಮಾರಂಭಗಳು ಮನೆಯಾತನ ಮೊಬೈಲ್ ಗ್ಯಾಲರಿ ತುಂಬುತ್ತದೆಯೇ ವಿನಹಃ ಅವರನ್ನೆಲ್ಲಾ ಫೋಟೋಗ್ರಾಫರ್ ಎಂದು ಒಪ್ಪಿಕೊಳ್ಳಲಾಗದು.
ಎಂ.ಆರ್.ಮಂಜುನಾಥ್
ಸುಂದರ ದೃಶ್ಯಗಳನ್ನು ತನ್ನ ಮೂರನೇ ಕಣ್ಣಿನ ಸಹಾಯದಿಂದ ಸೆರೆಹಿಡಿದು ಪೋಟೋಗಳನ್ನು ನಮ್ಮ ಮುಂದಿಟ್ಟರೆ ಅದನ್ನು ನೋಡಿ ನಾವು, ‘ವಾವ್, ಎಷ್ಟೊಂದು ಸುಂದರವಾಗಿದೆ!’ ಎಂದು ಉದ್ಘರಿಸುತ್ತೇವೆ. ಆದರೆ ಅಂತಹ ಅಪರೂಪದ ಚಿತ್ರಗಳನ್ನು ಚಿತ್ರಿಸಬೇಕಾದರೆ ಆತ ಎಷ್ಟೊಂದು ಶ್ರಮಪಟ್ಟಿದ್ದಾನೆ ಎಂಬುದು ನಮಗೆ ತಿಳಿಯುವುದೇ ಇಲ್ಲ. ಕ್ಯಾಮೆರಾ ಹಿಂದೆ ತನ್ನ ನೋವು ತೋರ್ಪಡಿಸದೆ ತಾನು ನಗದೇ ಇದ್ದರೂ ಕ್ಯಾಮೆರಾ ಮುಂದೆ ಕುಳಿತಿರುವವರನ್ನು ಸ್ವಲ್ಪ ನಗು ಮುಖವಿರಲಿ, ‘ಸ್ಮೈಲ್ ಪ್ಲೀಸ್’ ಎಂದು ಕ್ಯಾಮೆರಾ ಕ್ಲಿಕ್ಕಿಸುತ್ತಾನೆ. ಸಾಮಾನ್ಯವಾಗಿ ನಮ್ಮ ಕಣ್ಣಿಗೆ ಹತ್ತಾರು ಅಪರೂಪದ ದೃಶ್ಯಗಳು ಕಾಣಸಿಗುತ್ತವೆ. ಆದರೆ ಅದು ನಮಗೆ ವಿಶೇಷ ಎನಿಸುವುದಿಲ್ಲ.
undefined
ಆದರೆ ಅದೇ ದೃಶ್ಯವನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದು ಅದಕ್ಕೊಂದು ಜೀವ ತುಂಬುವಲ್ಲಿ ಫೋಟೋಗ್ರಾಫರ್ ಸಫಲನಾಗಿಬಿಡುತ್ತಾನೆ. ಅವುಗಳಲ್ಲಿ ಕೆಲವು ಅಪರೂಪದ ಚಿತ್ರಗಳಾಗಿರುತ್ತವೆ. ನಾಳೆ ವಿಶ್ವ ಛಾಯಾಗ್ರಹಣ ದಿನ. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಕ್ಯಾಮೆರಾದಿಂದ ಮನೆಮಂದಿ ಕ್ಯಾಮೆರಾಮೆನ್ ಆಗಿದ್ದಾರೆ. ಮನೆ, ಸಂಸಾರದ ಎಲ್ಲಾ ಶುಭ ಸಮಾರಂಭಗಳು ಮನೆಯಾತನ ಮೊಬೈಲ್ ಗ್ಯಾಲರಿ ತುಂಬುತ್ತದೆಯೇ ವಿನಹಃ ಅವರನ್ನೆಲ್ಲಾ ಫೋಟೋಗ್ರಾಫರ್ ಎಂದು ಒಪ್ಪಿಕೊಳ್ಳಲಾಗದು. ಅಂದಿನ ಫ್ಯಾಮಿಲಿ ಡಾಕ್ಟರ್‌ರಂತೆ ಇದ್ದ ಫ್ಯಾಮಿಲಿ ಫೋಟೋಗ್ರಾಫರ್ ಇಂದು ಮರೆಯಾಗಿದ್ದಾನೆ!
ಮುದಿಯಾಗಿದೆ ಫೇಸ್‌ಬುಕ್ಕು: ಸೋಷಿಯಲ್ ಮೀಡಿಯಾ ದಾರಿತಪ್ಪಿಸುತ್ತಿದೆ ಗೊತ್ತೇ?
ಮೊಬೈಲ್‌ಗಳಿಂದ ಫೊಟೋಗಳನ್ನು ತೆಗೆದ ತಕ್ಷಣ ಅವರ್‍ಯಾರು ಉತ್ತಮ ಫೋಟೋಗ್ರಾಫರ್ ಆಗುವುದಿಲ್ಲ. ಉತ್ತಮ ಛಾಯಾಗ್ರಾಹಕನಾಗಬೇಕಾದರೆ ತಾಳ್ಮೆ, ನೈಪುಣ್ಯತೆ ಅಗತ್ಯ. ಫೋಟೋಗ್ರಫಿಯನ್ನು ಕೆಲವೇ ಕೆಲವರು ವೃತ್ತಿಯನ್ನಾಗಿಸಿಕೊಂಡರೆ, ಹಲವರಿಗೆ ಇದು ಹವ್ಯಾಸ. ಶುಭ ಸಮಾರಂಭಗಳಲ್ಲಿ ಫೋಟೋ ತೆಗೆಯುವ ಫೋಟೋಗ್ರಾಫರ್‌ಗೂ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಛಾಯಾಗ್ರಾಹಕನಿಗೆ ಅಜಗಜಾಂತರ ವ್ಯತ್ಯಾಸವಿರುತ್ತದೆ. ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ಫೋಟೋಗ್ರಾಫರ್ ಸದಾ ಕ್ರಿಯಾಶೀಲನಾಗಿರಬೇಕು, ಅಷ್ಟೇ ಅಲ್ಲ ಎಲ್ಲವನ್ನೂ ಸೂಕ್ಷ್ಮವಾಗಿ ಗ್ರಹಿಸುವ ಮತ್ತು ಸಮಯ ಪ್ರಜ್ಞೆ ಹಾಗೂ ಧೈರ್ಯವನ್ನು ಹೊಂದಿರಬೇಕು. ಇವತ್ತು ಛಾಯಾಗ್ರಹಣ ಕ್ಷೇತ್ರ ಎಲ್ಲಾ ವಿಧದ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಯಾಗಿದೆ.
ಪತ್ರಿಕಾ ಛಾಯಾಗ್ರಾಹಕ ತೆಗೆದ ಒಂದೊಂದು ಚಿತ್ರವೂ ಮನ ಕಲಕುವ ದೃಶ್ಯವಾಗಿರಬೇಕು. ಸಮಾಜಕ್ಕೆ ಕಣ್ಣು ತೆರೆಸುವ ಚಿತ್ರವಾಗಿರಬೇಕು. ಪತ್ರಿಕೆಗಳಲ್ಲಿ ಬಂದ ಛಾಯಾಚಿತ್ರಗಳನ್ನು ಓದುಗರು ಮರೆಯಬಾರದು ನೆನಪಿಸುವಂತಿರಬೇಕು. ಇದೇ ಪತ್ರಿಕಾ ಛಾಯಾಗ್ರಾಹಕನ ಕ್ರಿಯೇಟಿವಿಟಿ. ಒಬ್ಬ ಛಾಯಾಗ್ರಾಹಕ ಹಳೆಯ ಕಡತದಲ್ಲಿ ಹುಡುಕುವಾಗ ಸಿಕ್ಕ ಅಪರೂಪದ ಫೋಟೋಗಳನ್ನು ನೋಡಿ, ಇದು ತಾನು ತೆಗೆದ ಚಿತ್ರವೇ ಎಂದು ಹುಬ್ಬೇರಿಸಿ ಮೆಲುಕು ಹಾಕುವಂತಿರಬೇಕು. ಛಾಯಾಗ್ರಹಣ ಕ್ಷೇತ್ರದಲ್ಲಿ ಸ್ಥಿತ್ಯಂತರ, ಇಷ್ಟೊಂದು ಅಭಿವೃದ್ಧಿ ಒಮ್ಮೆಲೇ ಆಗಿಲ್ಲ. ಬದಲಿಗೆ ಹಂತಹಂತವಾಗಿ ಅಭಿವೃದ್ಧಿಯಾಗಿರುವುದನ್ನು ನಾವು ಒಪ್ಪಲೇ ಬೇಕಾಗುತ್ತದೆ. ಛಾಯಾಗ್ರಹಣ ಕ್ಷೇತ್ರ ಅಭಿವೃದ್ಧಿಯಾಗಲು ಹಲವರು ತಮ್ಮದೇ ಆದ ತಂತ್ರಜ್ಞಾನವನ್ನು ಬಳಸಿ ಹೊಸ ಪ್ರಯೋಗಗಳನ್ನು ಕೂಡ ಮಾಡಿದ್ದಾರೆ.
ಮನೆ ಹಿತ್ತಲಿನಲ್ಲಿ ಪತ್ನಿಯ ಬೃಹತ್ ಪ್ರತಿಮೆ ಸ್ಥಾಪಿಸಿದ ಫೇಸ್‌ಬುಕ್ ಸಂಸ್ಥಾಪಕ ಜುಕರ್‌ಬರ್ಗ್
ಅಂತಹವರ ಸಾಲಿಗೆ ಫ್ರಾನ್ಸ್ ದೇಶದ ಲೂಯಿಸ್ ದಾಗುರೇ ಸೇರುತ್ತಾರೆ. ಅವರನ್ನು ‘ಛಾಯಾಗ್ರಹಣದ ಪಿತಾಮಹ’ ಎಂದು ಕರೆಯಲಾಗುತ್ತದೆ. ವಿಶ್ವ ಛಾಯಾಗ್ರಾಹಕರ ದಿನದಂದು ಪ್ರತಿಯೊಬ್ಬರೂ ದಾಗುರೆಯವರನ್ನು ನೆನಪಿಸಿಕೊಳ್ಳಲೇ ಬೇಕು. ಏಕೆಂದರೆ ಅವರು ಛಾಯಾಗ್ರಹಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಛಾಯಾಗ್ರಹಣದ ಪ್ರತಿಬಿಂಬವನ್ನು ಶಾಶ್ವತವಾಗಿ ಹಿಡಿದಿಡಬಲ್ಲ ಸೂತ್ರವನ್ನು ಅವರು ಬಿಡುಗಡೆಗೊಳಿಸಿದ್ದರು. ಇದು ಅತ್ಯುತ್ತಮ ಸಂಶೋಧನೆಯಾಗಿದ್ದ ಛಾಯಾಗ್ರಹಣ ಕಲೆಯ ಅಭಿವ್ಯಕ್ತಿಯಲ್ಲಿ ಮಹತ್ವವನ್ನು ಪಡೆಯಿತು. ಛಾಯಾಗ್ರಾಹಕರು ತಮ್ಮ ಯೋಚನೆ, ಯೋಜನೆ, ಹಂಚಿಕೊಳ್ಳಲು, ಪ್ರೋತ್ಸಾಹಿಸಲು, ತಾಂತ್ರಿಕ, ಕೌಶಲ್ಯ, ಪ್ರೇರಣೆ ನೀಡಲು ಹಿರಿಯರನ್ನು ನೇಮಿಸಲು ಈ ದಿನವನ್ನು ವಿಶ್ವ ಛಾಯಾಗ್ರಹಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.