ಮಾಗಡಿಯ ಹಲವು ಕೈ ಮುಖಂಡರು ಬಿಜೆಪಿ ಸೇರ್ಪಡೆಯಾಗಿದ್ದು ಇದೇ ಬೆನ್ನಲ್ಲೇ ಇನ್ನಷ್ಟು ಎರಡೂ ಪಕ್ಷಗಳ ಮುಖಂಡರು ಶೀಘ್ರ ಪಕ್ಷದತ್ತ ಮುಖ ಮಾಡಲಿದ್ದಾರೆ ಬಿಜೆಪಿ ಮುಖಂಡರೋರ್ವರು ಹೇಳಿದ್ದಾರೆ.
ಮಾಗಡಿ [ನ.11]: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತವನ್ನು ಮೆಚ್ಚಿರುವ ಬೇರೆ ಪಕ್ಷಗಳ ಮುಖಂಡರು ಶೀಘ್ರದಲ್ಲಿಯೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಪಕ್ಷದ ಮುಖಂಡ ಎ.ಎಚ್. ಬಸವರಾಜ್ ತಿಳಿಸಿದರು.
ಪಟ್ಟಣದ ತಿರುಮಲೆಯಲ್ಲಿ ಪುರಸಭೆ ಮಾಜಿ ಸದಸ್ಯರಾದ ಕೃಷ್ಣಕುರ್ಮಾ, ಎಳನೀರು ಮುತ್ತಯ್ಯ, ಕೋಳಿ ರಂಗನಾಥ್ ಹಾಗೂ ರಾಮು ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ತಾಲೂಕಿನಲ್ಲಿ ಬಿಜೆಪಿ ಸದೃಢವಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದವರು ಮಾಗಡಿ ತಾಲೂಕಿನಲ್ಲಿ ಬಿಜೆಪಿಗೆ ನೆಲೆ ಇಲ್ಲ ಎನ್ನುತ್ತಿದ್ದರು. ಆದರೆ, ಮುಖ್ಯ ವ್ಯಕ್ತಿಗಳು ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದು ಎರಡು ಪಕ್ಷಗಳಿಗೆ ತಿರುಗೇಟು ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿ ನೂರಾರು ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು.
ಪುರಸಭಾ ಚುನಾವಣೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ನಿದ್ದೆಗೆಡಿಸಿದೆ, ಅವರು ಈಗ ತ್ರಿಶಂಕು ಸ್ಥಿತಿಯಲ್ಲಿದ್ದು, ಹಾಲಿ ಹಾಗೂ ಮಾಜಿ ಶಾಸಕರು ಮಾಗಡಿಯಲ್ಲಿ ಟೆಂಟ್ ಹಾಕಿದ್ದಾರೆ. ಯಾವುದೇ ಚುನಾವಣೆಯಾದರೆ ಕಾರ್ಯಕರ್ತರು ಮುಖಂಡರು ಮನೆ ಹತ್ತಿರ ಕರೆದು ಚುನಾವಣೆ ಮಾಡು ಎಂದು ಹೇಳುತ್ತಿದ್ದರು. ಈಗ ಮೂರನೇ ಶಕ್ತಿಯನ್ನು ಬಿಜೆಪಿ ತೋರಿಸುತ್ತಿದ್ದು, ಗೆಲ್ಲಲ್ಲು ಎಲ್ಲಾ ರೀತಿಯ ಸರ್ಕಸ್ ನಡೆಸುತ್ತಿದ್ದಾರೆ. ಮತದಾರರ ಬಿಜೆಪಿ ಪರವಾಗಿ ನಿರ್ಣಯ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಬಸವರಾಜು ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಿಜೆಪಿ ತಾಲೂಕು ಅಧ್ಯಕ್ಷ ರಂಗಧಾ ಮಯ್ಯ ಮಾತನಾಡಿ ಪುರಸಭಾ ಚುನಾವ ಣೆಯ 23 ವಾರ್ಡ್‌ಗಳಿಗೂ ಅಭ್ಯರ್ಥಿ ಗಳನ್ನು ಹಾಕಿದ್ದೇವೆ, ನಮ್ಮೆಲ್ಲ ಕಾರ್ಯಕರ್ತ ರೂ ಒಗ್ಗಟ್ಟಾಗಿ ಸೇರಿ ಪ್ರಚಾರ ಮಾಡು ತ್ತಿದ್ದು, ನಮ್ಮ ಸರ್ಕಾರದವರೂ ಸಹ ಪಟ್ಟ ಣದ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಮಾದ ರಿ ಪುರಸಭೆಯನ್ನಾಗಿಸು ತ್ತೇವೆ ಎಂದು ನುಡಿದರು. ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಹುಲು ವಾಡಿ ದೇವರಾಜ್, ಶಿವಕುಮಾರ್, ರಾಘ ವೇಂದ್ರ, ಧನಂಜ ಯ್ಯ, ತಿರುಮಲೆ ಭಾಸ್ಕರ್, ಶಂಕರ್, ರಾಜೇಶ್ ಇದ್ದರು.