ತಿಹಾರ್ ಜೈಲಿನಲ್ಲಿದ್ದ ಡಿಕೆ ಶಿವಕುಮಾರ್ ಬಿಡುಗಡೆಯಾಗಿದ್ದು, ನನ್ನ ಮಕ್ಕಳು ನನ್ನ ಮನೆಗೆ ವಾಪಸಾಗುತ್ತಿರುವೇ ಹಬ್ಬ ಎಂದು ತಾಯಿ ಗೌರಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
ರಾಮನಗರ [ಅ.24]: ನನ್ನ ಮಗ ಹೇಗೊ ರಿಲೀಸ್ ಆದ ಸುದ್ದಿ ಕೇಳಿ ತುಂಬಾ ಸಂತೋಷ ಆಗುತ್ತಿದೆ. ನನ್ನ ಮಕ್ಕಳು ಬರುತ್ತಿರುವುದೇ ನನಗೆ ದೊಡ್ಡ ಹಬ್ಬ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಪ್ರತಿಕ್ರಿಯಿಸಿದರು.
ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದ ನಿವಾಸದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಗೌರಮ್ಮ ಅವರು, ನನ್ನ ಮಕ್ಕಳು ನನ್ನ ಜತೆಯಿದ್ದರೆ ಅದಕ್ಕಿಂತ ಖುಷಿಯ ವಿಷಯ ಮತ್ತೊಂದಿಲ್ಲ. ನನ್ನ ಮಗ ಬಂದರೆ ಅದೇ ಹಬ್ಬ. ಪಟಾಕಿ ಹೊಡೆಯಲೇ ಬೇಕಾಗಿಲ್ಲ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನನ್ನ ಮಕ್ಕಳು ಗೌರಿ ಹಬ್ಬ ಮತ್ತು ದಸರಾ ಹಬ್ಬದಲ್ಲಿ ಇರಲಿಲ್ಲ. ಇದರಿಂದ ಮನಸ್ಸಿಗೆ ತುಂಬಾ ನೋವಾಗಿತ್ತು. ನನ್ನ ಮಗನ ಬಿಡುಗಡೆಗಾಗಿ ದೇವರಲ್ಲಿ ಬೇಡಿಕೊಂಡಿದ್ದೆವು. ನಮ್ಮ ಪ್ರಾರ್ಥನೆಗೆ ದೇವರು ಆಸೀರ್ವಾದ ಮಾಡಿದ್ದಾನೆ. ಮಗನ ಬಿಡುಗಡೆಯ ಸುದ್ದಿ ಕೇಳಿ ಆಗುತ್ತಿರುವ ಖುಷಿಗೆ ಏನು ಮಾತನಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಹೇಳಿದರು.