ಮಾಜಿ ಸಚಿವ ಡಿಕೆ ಶಿವಕುಮಾರ್ ಕ್ಷೇತ್ರಕ್ಕೆ ಶುಭ ಸುದ್ದಿಯೊಂದನ್ನು ಸಿಎಂ ಬಿ ಎಸ್ ಯಡಿಯೂರಪ್ಪ ನೀಡಿದ್ದಾರೆ. ಮೆಡಿಕಲ್ ಕಾಲೇಜು ನೀಡುವ ಭರವಸೆಯನ್ನೂ ನೀಡಿದರು.
ರಾಮನಗರ [ನ.09] : ಕನಕಪುರ ಜಿಲ್ಲೆಗೆ ಸ್ಥಳಾಂತರಿಸಿದ್ದರಿಂದ ಬಿಜೆಪಿ ನಾಯಕರು ಹಾಗೂ ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ನಡುವೆ ಉಂಟಾಗಿದ್ದ ವಾಗ್ಯುದ್ಧವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಶಮನಗೊಳಿಸುವ ಪ್ರಯತ್ನ ಮಾಡಿದರು.
ಕನಕಪುರ ತಾಲೂಕಿಗೂ ಮೆಡಿಕಲ್ ಕಾಲೇಜು ಮಂಜೂರು ಮಾಡುವುದಾಗಿ ಭರವಸೆ ನೀಡುವ ಮೂಲಕ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಸಮಾಧಾನಪಡಿಸುವ ಸಂದೇಶ ರವಾನಿ ಸಿದರು. ಸಮಾರಂಭದಲ್ಲಿ ಸಂಸದ ಡಿ.ಕೆ.ಸುರೇಶ್ ಅವರು ತಮ್ಮ ಭಾಷಣದಲ್ಲಿ
ಮೆಡಿಕಲ್ ಕಾಲೇಜು ವಿಚಾರ ಪ್ರಸ್ತಾಪಿಸಿ, ಕನಕಪುರ ತಾಲೂಕಿಗೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಜಿಲ್ಲೆಗೆ ತೆಗೆದುಕೊಂಡು ಹೋಗುತ್ತಿದ್ದೀರಿ ಎಂದರು. ಇದಕ್ಕೆ ತಮ್ಮ ಭಾಷಣ ದಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ
ಡಿ.ಕೆ.ಸುರೇಶ್ ಮೆಡಿಕಲ್ ಕಾಲೇಜು ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಡಿಕೆಶಿ ಅವರೊಂದಿಗೆ ಸಮಾಲೋಚನೆ ಮಾಡುತ್ತೇನೆ ಎಂದರು.
ಲೋಕಲ್ ಫೈಟ್ : ಡಿಕೆಶಿ ಕ್ಷೇತ್ರದಲ್ಲಿ ಅವಿರೋಧ ಆಯ್ಕೆ...
ಈಗ ಜ್ಞಾನೋದಯವಾಗಿರಬೇಕು : ಯಡಿಯೂರಪ್ಪ ಅವರಿಗೆ ಈಗ ಜ್ಞಾನೋದಯವಾಗಿರಬೇಕು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕನಕಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರಾತಿ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿರುವ ಭರವಸೆ ಬಗ್ಗೆ ಉತ್ತರಿಸಿದ ಅವರು, ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ತಮಗೇನು ಗೊತ್ತಿಲ್ಲ. ಯಾವುದೋ ಫೋನ್ ಬಂದಿತ್ತು, ಏನೇನು ವಿಚಾರ ಆಗಿದೆಯೋ ಗೊತ್ತಿಲ್ಲ. ತಿಳಿದುಕೊಂಡು ಮಾತನಾಡುತ್ತೇನೆ ಎಂದರು.
ಕಾನೂನುಬದ್ದ ಅಸೆಂಬ್ಲಿಯಲ್ಲೇ ಬಜೆಟ್ ಮೂಲಕ ಮೆಡಿಕಲ್ ಕಾಲೇಜು ನಿರ್ಧಾರವಾಗಿತ್ತು. ಬಹುಶಃ ಸಿಎಂ ಅವರಿಗೆ ಈಗ ಜ್ಞಾನೋದಯ ಆಗಿರಬೇಕು ಎಂದು ಹೇಳಿದರು.