ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಮುಸ್ಲಿಮರ ಹತ್ಯೆಗೆ ಆದೇಶ ಮಾಡಿದ್ದಾರೆ. ಇವರ ಪ್ರಚೋದನೆಯಿಂದಾಗಿಯೇ ದೇಶದ ಹಲವು ಕಡೆಗಳಲ್ಲಿ ಮುಸ್ಲಿಮರ ಹತ್ಯೆ ನಡೆದಿವೆ ಎಂದು ‘ನವರಂಗ ಕಾಂಗ್ರೆಸ್ ಪಾರ್ಟಿ’ಯ ರಾಷ್ಟ್ರೀಯ ಅಧ್ಯಕ್ಷ ಶೇಖ ಜಲೀಲ್ ವಿವಾದಾತ್ಮಕ ಹೇಳಿಕೆ ನೀಡಿದರು.
ಹುಬ್ಬಳ್ಳಿ (ಮೇ.18) : ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಮುಸ್ಲಿಮರ ಹತ್ಯೆಗೆ ಆದೇಶ ಮಾಡಿದ್ದಾರೆ. ಇವರ ಪ್ರಚೋದನೆಯಿಂದಾಗಿಯೇ ದೇಶದ ಹಲವು ಕಡೆಗಳಲ್ಲಿ ಮುಸ್ಲಿಮರ ಹತ್ಯೆ ನಡೆದಿವೆ ಎಂದು ‘ನವರಂಗ ಕಾಂಗ್ರೆಸ್ ಪಾರ್ಟಿ(Navaranga congress party)’ಯ ರಾಷ್ಟ್ರೀಯ ಅಧ್ಯಕ್ಷ ಶೇಖ ಜಲೀಲ್ (shaik jalil)ವಿವಾದಾತ್ಮಕ ಹೇಳಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ(PM Narendra Modi) ದೇಶದ ಅಭಿವೃದ್ಧಿಯ ಕಡೆಗೆ ಗಮನ ನೀಡದೇ ಅದಾನಿ, ಅಂಬಾನಿಗಳ ಅಭಿವೃದ್ಧಿಗೆ ಸಾಥ್ ನೀಡುತ್ತಿದ್ದಾರೆ. ಹಿಂದುತ್ವ, ಆರ್‌ಎಸ್‌ಎಸ್, ಬಜರಂಗದಳದ ವಕ್ತಾರರಂತೆ ಮಾತನಾಡುವುದನ್ನು ಕೈಬಿಡಬೇಕು. ತಾವೊಬ್ಬ ದೇಶದ ಪ್ರಧಾನಿ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಡಿಕೆಶಿ, ಸಿದ್ದು ನಡುವೆ ಸಿಎಂ ಆಯ್ಕೆ ಕಗ್ಗಂಟು ; ರಾಮನಗರ, ಕನಕಪುರದಲ್ಲಿ ಪೊಲೀಸ್ ಬಿಗಿ ಭದ್ರತೆ!
ಕೇಂದ್ರ ಸರ್ಕಾರ ಜನತೆಯನ್ನು ಇಂದು ಬ್ರಿಟಿಷರಿಗಿಂತಲೂ ಕಡೆಯಾಗಿ ನೋಡುತ್ತಿರುವುದು ವಿಪರ್ಯಾಸ. ಇದನ್ನರಿತು ರಾಜ್ಯದಲ್ಲಿ ಬಿಜೆಪಿಗೆ ಮತದಾರರು ಸೋಲುಣಿಸುವ ಮೂಲಕ ತಕ್ಕಪಾಠ ಕಲಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ದೊರತಿದೆ. ಆದರೆ, ಇಂದಿಗೂ ಮುಸಲ್ಮಾನರ ಮೇಲೆ ದಬ್ಬಾಳಿಕೆ ನಿಂತಿಲ್ಲ. ರಾಜ್ಯದ ಬಿಜೆಪಿ ನಾಯಕರು ಮುಸ್ಲಿಮರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡುತ್ತಾ, ಹಿಂದೂ ಜನರಲ್ಲಿ ದ್ವೇಷಭಾವನೆ ಬಿತ್ತುವ ಕಾರ್ಯ ಮಾಡುತ್ತಿದ್ದಾರೆ. ಕೆಲವು ರಾಜಕಾರಣಿಗಳು ನಮಗೆ ಮುಸ್ಲಿಮರ ಮತಗಳೇ ಬೇಡ ಎಂಬ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಚುನಾವಣೆಯಲ್ಲಿ ಹಿಂದುಗಳ ಮತ ಗಳಿಕೆಗಾಗಿ ಮುಸ್ಲಿಮರಿಗಿದ್ದ ಮೀಸಲಾತಿ ರದ್ದುಗೊಳಿಸಿರುವುದು ಖಂಡನಾರ್ಹ ಎಂದರು.
ಮುಂಬರುವ 2024ರ ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದ್ದು, ಧಾರವಾಡದಿಂದ ಮೆಹಬೂಬಅಲಿ ಬುಡನಖಾನ್, ಉತ್ತರ ಕನ್ನಡದಿಂದ ಅಲ್ತಾಫಹುಸೇನ್ ಸರ್ದಾರ, ಬೆಳಗಾವಿ ಸೌತ್‌ನಿಂದ ನಾಶೀರಅಹ್ಮದ ಅವರನ್ನು ಆಯ್ಕೆಗೊಳಿಸಿರುವುದಾಗಿ ತಿಳಿಸಿದರು.
ಭಾರತದಲ್ಲಿ ಶೇ. 14.92, ಕರ್ನಾಟಕದಲ್ಲಿ ಶೇ. 12.91ರಷ್ಟುಮುಸ್ಲಿಂ ಜನಸಂಖ್ಯೆ ಹೊಂದಿದ್ದು, ಈ ಸಂಖ್ಯೆಗಳ ಅನುಗುಣವಾಗಿ ಎಲ್ಲ ರಂಗಗಳಲ್ಲೂ ಮುಸ್ಲಿಮರಿಗೆ ಶೇ. 12ರಷ್ಟುಮೀಸಲಾತಿಗೆ ಕ್ರಮ ಕೈಗೊಳ್ಳಬೇಕಿದೆ. ಕರ್ನಾಟಕದಲ್ಲಿ ರದ್ದು ಮಾಡಿದ 2ಬಿ ಮೀಸಲಾತಿಯನ್ನು ಯಥಾ ಪ್ರಕಾರ ಜಾರಿಗೊಳಿಸಬೇಕು. ಹುಬ್ಬಳ್ಳಿಯಲ್ಲಿ ಹಜ್ ಭವನ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಎಸ್ಸಿ, ಎಸ್ಟಿಯುವಕರಿಗಿಂತ ಮುಸ್ಲಿಮರ ಬದುಕು ಕೆಳಮಟ್ಟದಲ್ಲಿದೆ ಎಂದು ಸಾಚಾರ್ ಸಮಿತಿ ನೀಡಿರುವ ವರದಿಯಂತೆ ಶಿಕ್ಷಣ, ನೌಕರ ಮತ್ತು ಅಧಿಕಾರ ನೀಡುವಿಕೆಯಲ್ಲಿ ಪ್ರಾತಿನಿಧ್ಯ ನೀಡಬೇಕು. ದೇಶದ ಪ್ರತಿ ರಾಜ್ಯಗಳಲ್ಲೂ ವಕ್ಫ್ ಆಸ್ತಿಯನ್ನು ಕಬಳಿಸಲಾಗಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವುದರೊಂದಿಗೆ ಮರಳಿ ಮುಸ್ಲಿಂ ಸಮುದಾಯಕ್ಕೆ ನೀಡಬೇಕು ಎಂದು ಮನವಿ ಮಾಡಿದರು.
Karnataka election results: ಸಚಿವ ಸ್ಥಾನಕ್ಕೆ ಘಟಾನುಘಟಿಗಳ ಮಧ್ಯೆ ಪೈಪೋಟಿ!
ಈ ವೇಳೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೆಹಬೂಬಅಲಿ ಬುಡನ್‌ಖಾನ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅಲ್ತಾಫ್‌ಹುಸೇನ ಸರದಾರ ಹಾಜರಿದ್ದರು.