ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 18 ವಿಧಾನಸಭಾ ಕ್ಷೇತ್ರಗಳಿವೆ. ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ 8, ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲಿ 8 ಹಾಗೂ ಕೆನರಾ ಲೋಕಸಭಾ ವ್ಯಾಪ್ತಿಯಲ್ಲಿ 2 ವಿಧಾನಸಭೆ ಕ್ಷೇತ್ರಗಳಿವೆ. ಈ ಬಾರಿ ಕಾಂಗ್ರೆಸ್ 11 ಕ್ಷೇತ್ರಗಳನ್ನ ಜಯ ಸಾಧಿಸಿದರೆ ಬಿಜೆಪಿ 7 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದೆ.
ಬೆಳಗಾವಿ(ಮೇ.13): ರಾಜಧಾನಿ ಬೆಂಗಳೂರು ಬಿಟ್ಟರೆ ಬೆಳಗಾವಿಯಲ್ಲಿ ಅತೀ ಹೆಚ್ಚು ವಿಧಾನಸಬಾ ಕ್ಷೇತ್ರಗಳನ್ನ ಹೊಂದಿದೆ. ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 18 ವಿಧಾನಸಭಾ ಕ್ಷೇತ್ರಗಳಿವೆ. ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ 8, ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲಿ 8 ಹಾಗೂ ಕೆನರಾ ಲೋಕಸಭಾ ವ್ಯಾಪ್ತಿಯಲ್ಲಿ 2 ವಿಧಾನಸಭೆ ಕ್ಷೇತ್ರಗಳಿವೆ. ಈ ಬಾರಿ ಕಾಂಗ್ರೆಸ್ 11 ಕ್ಷೇತ್ರಗಳನ್ನ ಜಯ ಸಾಧಿಸಿದರೆ ಬಿಜೆಪಿ 7 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದೆ.
ನಿಪ್ಪಾಣಿ (Nippani)
ಹಾಲಿ ಶಾಸಕಿ ಶಶಿಕಲಾ ಜೊಲ್ಲೆ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್ ಟಿಕೆಟ್ ವಂಚಿತ, ಜಾರಕಿಹೊಳಿ ಸಹೋದರರ ಆಪ್ತ ಉತ್ತಮ ಪಾಟೀಲ ಎನ್‌ಸಿಪಿಯಿಂದ ಕಣದಲ್ಲಿ ಉಳಿದಿದ್ದರು. ರಾಜಾರಾಮ್ ಪೋವಾರ್ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಎಂಇಎಸ್ ಬೆಂಬಲಿತ ಅಭ್ಯರ್ಥಿಗಳು ಕಣದಲ್ಲಿದ್ದರು.
ಈ ಬಾರಿಯೂ ಶಶಿಕಲಾ ಜೊಲ್ಲೆ ಜಯಶಾಲಿಯಾಗಿದ್ದಾರೆ. ಈ ಮೂಲಕ ಶಶಿಕಲಾ ಜೊಲ್ಲೆ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಶಶಿಕಲಾ ಜೊಲ್ಲೆ 73625, ಕಾಕಾಸಾಹೇಬ ಪಾಟೀಲ 44297, ರಾಜಾರಾಮ್ ಪೋವಾರ್ 613 ಮತಗಳನ್ನ ಪಡೆದಿದ್ದಾರೆ.
KARNATAKA ELECTION RESULT 2023: ಗದಗದಲ್ಲಿ ಸ್ಥಾನ ಬಿಟ್ಟುಕೊಟ್ಟ ಬಿಜೆಪಿ
ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ: ಶಾಸಕಿ ಶಶಿಕಲಾ ಜೊಲ್ಲೆ(73625)
ಕಾಂಗ್ರೆಸ್: ಕಾಕಾಸಾಹೇಬ ಪಾಟೀಲ(44297)
ಜೆಡಿಎಸ್: ರಾಜಾರಾಮ್ ಪೋವಾರ್(613)
ಪುರುಷ ಮತದಾರರು- 1,13,856
ಮಹಿಳಾ ಮತದಾರರು- 111823
ಒಟ್ಟು- 2,25,688
ನಿಪ್ಪಾಣಿ ಜಾತಿ ಲೆಕ್ಕಾಚಾರ
ಲಿಂಗಾಯತ 48,000
ಜೈನ 20,000
ಮರಾಠ 68,000
ಎಸ್‌ಸಿ/ಎಸ್‌ಟಿ 36,000
ಬ್ರಾಹ್ಮಣ 8,000
ಕುರುಬ 28,000
ಮುಸ್ಲಿಂ 22,000
ಇತರೆ 25,000
ಕಳೆದ ಬಾರಿ ನಿಪ್ಪಾಣಿ ಕ್ಷೇತ್ರದಲ್ಲಿ ಶಶಿಕಲಾ ಜೊಲ್ಲೆ ಅವರು 1,70,804 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಚಿಕ್ಕೋಡಿ- ಸದಲಗಾ (Chikkodi-Sadalaga Assembly Constituency)
ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಅವರ ಪುತ್ರ, ಹಾಲಿ ಕಾಂಗ್ರೆಸ್ ಶಾಸಕ ಗಣೇಶ ಹುಕ್ಕೇರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಬಿಜೆಪಿಯಿಂದ ಚಿಕ್ಕೋಡಿ ಮಾಜಿ ಸಂಸದ ರಮೇಶ ಕತ್ತಿ ಕಣಕ್ಕಿಳಿದಿದ್ದರು. ರಮೇಶ ಕತ್ತಿ ಅವರು ಇದೆ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು.
ಈ ಬಾರಿ ಗಣೇಶ ಹುಕ್ಕೇರಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಗಣೇಶ ಹುಕ್ಕೇರಿ 128349 , ರಮೇಶ ಕತ್ತಿ 49840 ಮತಗಳನ್ನ ಪಡೆದಿದ್ದಾರೆ.
ಕಾಂಗ್ರೆಸ್- ಗಣೇಶ ಹುಕ್ಕೇರಿ(128349)
ಬಿಜೆಪಿ- ರಮೇಶ ಕತ್ತಿ(49840)
2018ರಲ್ಲಿ ಗಣೇಶ ಹುಕ್ಕೇರಿ ಕಾಂಗ್ರೆಸ್‌ನಿಂದ 1,77,838 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಒಟ್ಟು ಮತದಾರರು- 223834
ಪುರುಷ ಮತದಾರರು- 112437
ಮಹಿಳಾ ಮತದಾರರು- 111388
ಚಿಕ್ಕೋಡಿ ಸದಲಗ ಜಾತಿ ಲೆಕ್ಕಾಚಾರ
ಲಿಂಗಾಯತ 45,000
ಬ್ರಾಹ್ಮಣ 10,000
ಎಸ್‌ಸಿ/ಎಸ್‌ಟಿ 30,000
ಮುಸ್ಲಿಂ 30,000
ಜೈನ 35,000
ಮರಾಠ 18,000
ಇತರೆ 30,000
ಅಥಣಿ (Athani Assembly Constituency)
ಅಥಣಿ, ಈ ಬಾರಿಯ ಹೈವೋಲ್ಟೇಜ್ ಕ್ಷೇತ್ರ. ಲಕ್ಷ್ಮಣ ಸವದಿ ಮತ್ತು ಮಹೇಶ ಕುಮಟಳ್ಳಿ ನಡುವೆಯೇ ಇಲ್ಲಿ ಮತ್ತೊಮ್ಮೆ ಫೈಟ್ ಏರ್ಪಟ್ಟಿತ್ತು. ವಿಪರ್ಯಾಸವೆಂದರೆ 2018ರಲ್ಲಿ ಲಕ್ಷ್ಮಣ ಸವದಿ ಬಿಜೆಪಿಯಿಂದ ಸ್ಪರ್ಧಿಸಿದ್ದರೆ, ಮಹೇಶ ಕುಮಟಳ್ಳಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಕುಮಟಳ್ಳಿ ಗೆದ್ದು, ನಂತರ ನಡೆದ ‘ಆಪರೇಷನ್ ಕಮಲ’ಕ್ಕೆ ಒಳಗಾಗಿ ಬಿಜೆಪಿಗೆ ಸೇರಿ ಉಪ ಚುನಾವಣೆಯಲ್ಲಿ ಗೆದ್ದರು. ಈಗಲೂ ಮತ್ತೆ ಸವದಿ ಮತ್ತು ಕುಮಟಳ್ಳಿ ನಡುವೆಯೇ ಫೈಟ್ ಏರ್ಪಟ್ಟಿದೆ. ಆದರೆ, ಲಕ್ಷ್ಮಣ ಸವದಿ ಕಾಂಗ್ರೆಸ್ ಹುರಿಯಾಳಾಗಿದ್ದರು, ಮಹೇಶ ಕುಮಟಳ್ಳಿ ಬಿಜೆಪಿ ಅಭ್ಯರ್ಥಿಯಾಗಿದ್ದರು. ಒಂದು ರೀತಿಯಲ್ಲಿ ಇದು ಸವದಿ ಮತ್ತು ರಮೇಶ ನಡುವಿನ ಪ್ರತಿಷ್ಠೆಯಾಗಿ ಪರಿಣಮಿಸಿತ್ತು.
ಈ ಬಾರಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ಲಕ್ಷ್ಮಣ ಸವದಿ ಮತದಾರ ಪ್ರಭು ಜೈ ಎಂದಿದ್ದಾನೆ. ಲಕ್ಷ್ಮಣ ಸವದಿ 131404, ಮಹೇಶ ಕುಮಟಳ್ಳಿ 55282, ಶಶಿಕಾಂತ್ ಪಡಸಲಗಿ 1265 ಮತಗಳನ್ನ ಪಡೆದಿದ್ದಾರೆ.
ಬಿಜೆಪಿ: ಮಹೇಶ ಕುಮಟಳ್ಳಿ(55282)
ಕಾಂಗ್ರೆಸ್- ಲಕ್ಷ್ಮಣ ಸವದಿ(131404)
ಜೆಡಿಎಸ್- ಶಶಿಕಾಂತ್ ಪಡಸಲಗಿ(1265)
2018ರಲ್ಲಿ ಗಣೇಶ ಹುಕ್ಕೇರಿ ಕಾಂಗ್ರೆಸ್‌ನಿಂದ 1,69,723 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
Karnataka Election 2023 Live: ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದೆ ಕುತೂಹಲವೀಗ!
ಅಥಣಿ ಜಾತಿ ಲೆಕ್ಕಾಚಾರ
ಲಿಂಗಾಯತ 75,000
ಕುರುಬ 25,000
ಮರಾಠ 18,000
ಬ್ರಾಹ್ಮಣ 8,000
ಜೈನ 18,000
ಮುಸ್ಲಿಂ 30,000
ಎಸ್‌ಸಿ/ಎಸ್‌ಟಿ 30,000
ಇತರೆ 30,000
ಕಾಗವಾಡ (Kagawada Assembly Constituency)
ಕಾಗವಾಡ ಕ್ಷೇತ್ರದಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ ಬಿಜೆಪಿಯಿಂದ ಕಣಕ್ಕಿಳಿದ್ದರು. ಮಾಜಿ ಶಾಸಕ ಭರಮಗೌಡ ಕಾಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಕಣದಲ್ಲಿ 13 ಅಭ್ಯರ್ಥಿಗಳಿದ್ದರೂ ಇಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆಯೇ ನೇರ ಹಣಾಹಣಿ ಏರ್ಪಟ್ಟಿತ್ತು. ಜೆಡಿಎಸ್‌ನಿಂದ ಶ್ರೀಕಾಂತ ಪಡಸಲಗಿ ಸ್ಪರ್ಧಿಸಿದ್ದರು.
ಈ ಬಾರಿ ಭರಮಗೌಡ ಕಾಗೆ ಅವರು ಗೆಲುವು ದಾಖಲಿಸಿದ್ದಾರೆ. ಭರಮಗೌಡ ಕಾಗೆ 83387, ಶ್ರೀಮಂತ ಪಾಟೀಲ 74560, ಮಲ್ಲಿಕಾರ್ಜುನ ಗುಂಜಿಗಣವಿ 887 ಮತಗಳನ್ನ ಪಡೆದಿದ್ದಾರೆ.
ಬಿಜೆಪಿ-ಶ್ರೀಮಂತ ಪಾಟೀಲ(74560)
ಕಾಂಗ್ರೆಸ್- ಭರಮಗೌಡ ಕಾಗೆ(83387)
ಜೆಡಿಎಸ್- ಮಲ್ಲಿಕಾರ್ಜುನ ಗುಂಜಿಗಣವಿ(887)
2018ರಲ್ಲಿ ಶ್ರೀಮಂತ ಪಾಟೀಲ ಕಾಂಗ್ರೆಸ್‌ನಿಂದ 1,44,981 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಕಾಗವಾಡ ಜಾತಿ ಲೆಕ್ಕಾಚಾರ
ಲಿಂಗಾಯತ 60,000
ಎಸ್‌ಸಿ 25,000
ಎಸ್‌ಟಿ 8,000
ಮುಸ್ಲಿಂ 18,000
ಮರಾಠ 30,000
ಬ್ರಾಹ್ಮಣ 8,000
ಉಪ್ಪಾರ 6,000
ಜೈನ 30,000
ಇತರೆ 35,000
ಕುಡಚಿ( ಎಸ್‌ಸಿ) (Kudachi SC Assembly Constituency)
ಕುಡಚಿ ಎಸ್‌ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಪಿ.ರಾಜೀವ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನಿಂದ ಹೊಸಮುಖ ಮಹೇಂದ್ರ ತಮ್ಮಣ್ಣವರ ಕಣಕ್ಕಿಳಿದಿದ್ದರು. ಇದೇ ಮೊದಲ ಬಾರಿಗೆ ಈ ಕ್ಷೇತ್ರದಿಂದ ಕಾಂಗ್ರೆಸ್ ಹೊಸಮುಖಕ್ಕೆ ಅವಕಾಶ ನೀಡಿತ್ತು.
ಈ ಬಾರಿ ಮಹೇಂದ್ರ ತಮ್ಮಣ್ಣವರ 85321, ಪಿ.ರಾಜೀವ 60078, ಆನಂದ್ ಮಾಳಗಿ 1566 ಮತಗಳನ್ನ ಪಡೆದಿದ್ದಾರೆ.
ಬಿಜೆಪಿ-ಪಿ.ರಾಜೀವ(60078)
ಕಾಂಗ್ರೆಸ್-ಮಹೇಂದ್ರ ತಮ್ಮಣ್ಣವರ(85321)
ಜೆಡಿಎಸ್- ಆನಂದ್ ಮಾಳಗಿ(1566)
2018ರಲ್ಲಿ ಪಿ.ರಾಜೀವ ಬಿಜೆಪಿಯಿಂದ 1,36,305 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಕುಡಚಿ ಜಾತಿ ಲೆಕ್ಕಾಚಾರ
ಲಿಂಗಾಯತ 50,000
ಎಸ್‌ಸಿ/ಎಸ್‌ಟಿ- 40,000
ಮುಸ್ಲಿಂ 35,000
ಕುರುಬ 12,000
ಉಪ್ಪಾರ 7,000
ಜೈನ 10,000
ಮರಾಠ 5,000
ಇತರೆ 30,000
ರಾಯಬಾಗ(ಎಸ್‌ಸಿ) (Raibaugh Assemly Constituency (SC Reserved))
ರಾಯಬಾಗ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಹಾಲಿ ಶಾಸಕ ದುರ್ಯೋಧನ ಐಹೊಳೆ ನಾಲ್ಕನೇ ಬಾರಿಗೆ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಮಹಾವೀರ ಮೋಹಿತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಸ್ವಯಂ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಕರ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಜೊತೆಗೆ, ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರದೀಪಕುಮಾರ ಮಾಳಗಿ ಈ ಬಾರಿ ಜೆಡಿಎಸ್ ಸೇರಿ, ಜೆಡಿಎಸ್‌ನಿಂದ ಕಣಕ್ಕಿಳಿದಿದ್ದರು.
ಈ ಬಾರಿ ದುರ್ಯೋಧನ ಐಹೊಳೆ 57500, ಮಹಾವೀರ ಮೋಹಿತೆ 22685, ಪ್ರದೀಪಕುಮಾರ ಮಾಳಗಿ 25393 ಮತಗಳನ್ನ ಪಡೆದಿದ್ದಾರೆ.
ಬಿಜೆಪಿ-ದುರ್ಯೋಧನ ಐಹೊಳೆ(57500)
ಕಾಂಗ್ರೆಸ್-ಮಹಾವೀರ ಮೋಹಿತೆ(22685)
ಜೆಡಿಎಸ್- ಪ್ರದೀಪಕುಮಾರ ಮಾಳಗಿ(25393)
2018ರಲ್ಲಿ ದುರ್ಯೋಧನ ಐಹೊಳೆ ಬಿಜೆಪಿಯಿಂದ 1,49,215 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ರಾಯಬಾಗ ಜಾತಿ ಲೆಕ್ಕಾಚಾರ
ಲಿಂಗಾಯತ 60,000
ಕುರುಬ 48,000
ಮುಸ್ಲಿಂ 32,000
ಜೈನ 14,000
ಮರಾಠ 18,000
ಎಸ್‌ಸಿ/ಎಸ್‌ಟಿ 33,000
ಇತರೆ 25,000
ಹುಕ್ಕೇರಿ (Hukkeri Assembly Constituency)
ಹುಕ್ಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಉಮೇಶ ಕತ್ತಿ ಅವರ ಪುತ್ರ ನಿಖಿಲ್ ಕತ್ತಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಮಾಜಿ ಸಚಿವ ಎ.ಬಿ.ಪಾಟೀಲ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಜೆಡಿಎಸ್‌ಗೆ ಇಲ್ಲಿ ನೆಲೆ ಇಲ್ಲದಿದ್ದರೂ ಜೆಡಿಎಸ್ ಅಭ್ಯರ್ಥಿಯಾಗಿ ಬಸವರಾಜ ಪಾಟೀಲ ಸ್ಪರ್ಧಿಸಿದ್ದರು.
ಈ ಬಾರಿ ನಿಖಿಲ್ ಕತ್ತಿ ಗೆಲುವು ದಾಖಲಸಿದ್ದಾರೆ. ನಿಖಿಲ್ ಕತ್ತಿ 90351, ಎ.ಬಿ.ಪಾಟೀಲ 54078, ಬಸವರಾಜ ಪಾಟೀಲ 351 ಮತಗಳನ್ನ ಪಡೆದಿದ್ದಾರೆ.
ಬಿಜಪಿ-ನಿಖಿಲ್ ಕತ್ತಿ(90351)
ಕಾಂಗ್ರೆಸ್-ಎ.ಬಿ.ಪಾಟೀಲ(54078)
ಜೆಡಿಎಸ್- ಬಸವರಾಜ ಪಾಟೀಲ(351)
2018ರಲ್ಲಿ ಉಮೇಶ ಕತ್ತಿ ಬಿಜೆಪಿಯಿಂದ 1,56,057 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಹುಕ್ಕೇರಿ ಜಾತಿ ಲೆಕ್ಕಾಚಾರ
ಲಿಂಗಾಯತ 65,000
ಬ್ರಾಹ್ಮಣ 10,000
ಎಸ್‌ಸಿ/ಎಸ್‌ಟಿ 40,000
ಮುಸ್ಲಿಂ 35,000
ಜೈನ್ 25,000
ಮರಾಠ 15,000
ಇತರೆ 20,000
ಯಮಕನಮರಡಿ(ಎಸ್‌ಟಿ) (Yamanakaramaradi ST Reserved)
ಈ ಬಾರಿಯೂ ಸತೀಶ ಜಾರಕಿಹೊಳಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು. ಬಿಜೆಪಿಯಿಂದ ಹೊಸಮುಖ ಬಸವರಾಜ ಹುಂದ್ರಿ ಸ್ಪರ್ಧಿಸಿದ್ದರು. ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಮಾರುತಿ ಅಷ್ಟಗಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಈ ಬಾರಿಯೂ ಸತೀಶ ಜಾರಕಿಹೊಳಿ ಜಯ ದಾಖಲಿಸಿದ್ದಾರೆ. ಸತೀಶ ಜಾರಕಿಹೊಳಿ 100290, ಬಸವರಾಜ ಹುಂದ್ರಿ 43079, ಮಾರುತಿ ಅಷ್ಟಗಿ 19567 ಮತಗಳನ್ನ ಪಡೆದಿದ್ದಾರೆ.
ಬಿಜೆಪಿ-ಬಸವರಾಜ ಹುಂದ್ರಿ(43079)
ಕಾಂಗ್ರೆಸ್-ಸತೀಶ ಜಾರಕಿಹೊಳಿ(100290)
ಜೆಡಿಎಸ್-ಮಾರುತಿ ಅಷ್ಟಗಿ(19567)
2018ರಲ್ಲಿ ಸತೀಶ ಜಾರಕಿಹೊಳಿ ಕಾಂಗ್ರೆಸ್‌ನಿಂದ 1,47,830 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಯಮಕನಮರಡಿ ಜಾತಿ ಲೆಕ್ಕಾಚಾರ
ಎಸ್‌ಟಿ 60,000
ಲಿಂಗಾಯತ 40,000
ಮರಾಠ 40,000
ಮುಸ್ಲಿಂ 15,000
ಜೈನ 10,000
ಕುರುಬ 5,000
ಬ್ರಾಹ್ಮಣ 7,500
ನೇಕಾರ 6,000
ಇತರೆ 25,000
ಅರಭಾವಿ (Arabhavi Assembly Constituency)
ಅರಭಾವಿಯಲ್ಲಿ ವಾಲ್ಮೀಕಿ ಸಮಾಜದ ಪ್ರಭಾವಿ ನಾಯಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಕಾಂಗ್ರೆಸ್‌ನಿಂದ ಅರವಿಂದ ದಳವಾಯಿ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ ಟಿಕೆಟ್ ವಂಚಿತ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಈ ಬಾರಿಯೂ ಬಾಲಚಂದ್ರ ಜಾರಕಿಹೊಳಿ ವಿಜಯಶಾಲಿಯಾಗಿದ್ದಾರೆ. ಬಾಲಚಂದ್ರ ಜಾರಕಿಹೊಳಿ
ಬಿಜೆಪಿ-ಬಾಲಚಂದ್ರ ಜಾರಕಿಹೊಳಿ (28431)
ಕಾಂಗ್ರೆಸ್-ಅರವಿಂದ ದಳವಾಯಿ (5670)
ಜೆಡಿಎಸ್- ಪ್ರಕಾಶ್ ಕಾಶೆಟ್ಟಿ(146)
2018ರಲ್ಲಿ ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಿಂದ 1,75,538 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಅರಬಾವಿ ಜಾತಿ ಲೆಕ್ಕಾಚಾರ
ಲಿಂಗಾಯತ 63,000
ಕುರುಬ 44,000
ಉಪ್ಪಾರ 40,000
ಪರಿಶಿಷ್ಟ ಪಂಗಡ 6,000
ಪರಿಶಿಷ್ಟ ಜಾತಿ 19,000
ಮುಸ್ಲಿಂ 19,000
ರೆಡ್ಡಿ 10,000
ಇತರೆ 24,000
ಗೋಕಾಕ (Gokak Assembly Constituency)
ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಗೋಕಾಕದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿಯವರು 7ನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದು, ಬಿಜೆಪಿ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್, ಹೊಸಮುಖ ಡಾ.ಮಹಾಂತೇಶ ಕಡಾಡಿಗೆ ಟಿಕೆಟ್ ನೀಡಿತ್ತು. ಜೆಡಿಎಸ್ ಅಭ್ಯರ್ಥಿ ಚನ್ನಬಸಪ್ಪ ಗಿಡ್ಡನವರ ನಾಮಪತ್ರ ಹಿಂಪಡೆದು ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದರು.
ಈ ಬಾರಿಯೂ ರಮೇಶ ಜಾರಕಿಹೊಳಿ ಅವರು ಗೆಲುವು ದಾಖಲಿಸಿದ್ದಾರೆ. ರಮೇಶ ಜಾರಕಿಹೊಳಿ 105313, ಡಾ.ಮಹಾಂತೇಶ ಕಡಾಡಿ 79901 ಮತಗಳನ್ನ ಪಡೆದಿದ್ದಾರೆ.
ಬಿಜೆಪಿ-ರಮೇಶ ಜಾರಕಿಹೊಳಿ(105313)
ಕಾಂಗ್ರೆಸ್-ಡಾ.ಮಹಾಂತೇಶ ಕಡಾಡಿ(79901)
2018ರಲ್ಲಿ ರಮೇಶ ಜಾರಕಿಹೊಳಿ ಬಿಜೆಪಿಯಿಂದ 1,71,859 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಗೋಕಾಕ್ ಜಾತಿ ಲೆಕ್ಕಾಚಾರ
ಲಿಂಗಾಯತ 75,000
ಪರಿಶಿಷ್ಟ ಪಂಗಡ 35,000
ಪರಿಶಿಷ್ಟ ಜಾತಿ 19,000
ಮುಸ್ಲಿಂ 31,000
ಕುರುಬ 22,000
ಉಪ್ಪಾರ 13,000
ಮರಾಠ 10,000
ಇತರೆ 30,000
ಬೆಳಗಾವಿ ಉತ್ತರ (Belagavi North Assembly Constituency)
ಬೆಳಗಾವಿ ಉತ್ತರದಲ್ಲಿ ಬಿಜೆಪಿಯಿಂದ ಡಾ.ರವಿ ಪಾಟೀಲ ಕಣದಲ್ಲಿದ್ದರೆ, ಮಾಜಿ ಶಾಸಕ ಫಿರೋಜ್ ಸೇಠ್ ಅವರ ಸಹೋದರ ಆಸೀಫ್ ಸೇಠ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಜೆಡಿಎಸ್‌ನಿಂದ ರೈತ ಮುಖಂಡ ಶಿವಾನಂದ ಮುಗಳಿಹಾಳ, ಆಪ್‌ನಿಂದ ಪತ್ರಕರ್ತ ರಾಜಕುಮಾರ ಟೋಪಣ್ಣವರ ಸ್ಪರ್ಧಿಸಿದ್ದರು.
ಈ ಬಾರಿ ಆಸೀಫ್ ಸೇಠ್ ಗೆಲುವು ದಾಖಲಿಸಿದ್ದಾರೆ. ಆಸೀಫ್ ಸೇಠ್ 62911, ಡಾ.ರವಿ ಪಾಟೀಲ 55162 ಮತಗಳನ್ನ ಪಡೆದಿದ್ದಾರೆ.
ಬಿಜೆಪಿ-ಡಾ.ರವಿ ಪಾಟೀಲ (55162)
ಕಾಂಗ್ರೆಸ್-ಆಸೀಫ್ ಸೇಠ್(62911)
2018ರಲ್ಲಿ ಅನಿಲ್ ಬೆನಕೆ ಬಿಜೆಪಿಯಿಂದ 1,46,065 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಬೆಳಗಾವಿ ಉತ್ತರ ಜಾತಿ ಲೆಕ್ಕಾಚಾರ
ಲಿಂಗಾಯತ 40 ಸಾವಿರ
ಮರಾಠಾ 48 ಸಾವಿರ
ಮುಸ್ಲಿಂ 30 ಸಾವಿರ
ಕುರುಬ 3 ಸಾವಿರ
ಎಸ್‌ಸಿ ಎಸ್‌ಟಿ 30 ಸಾವಿರ
ಇತರೆ 25 ಸಾವಿರ
ಬೆಳಗಾವಿ ದಕ್ಷಿಣ (Belagavi South Assembly Constituency)
ಅಭಯ ಪಾಟೀಲ ಈ ಬಾರಿ ಮತ್ತೆ ಬಿಜೆಪಿಯಿಂದ ಜಯಶಾಲಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಹೊಸಮುಖ ಪ್ರಭಾವತಿ ಮಾಸ್ತಮರಡಿ ಕಣದಲ್ಲಿದ್ದರು. ಪ್ರಖರ ಹಿಂದುತ್ವ ಹೋರಾಟಗಾರ ರಮಾಕಾಂತ ಕುಂಡೋಸ್ಕರ್ ಅವರು ಎಂಇಎಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಅಭಯ ಪಾಟೀಲ 77094, ಪ್ರಭಾವತಿ ಮಾಸ್ತಮರಡಿ 13015, ಶ್ರೀನಿವಾಸ್ ತಲುಕರ್ 952, ರಮಾಕಾಂತ ಕುಂಡೋಸ್ಕರ್ 64786 ಮತಗಳನ್ನ ಪಡೆದಿದ್ದಾರೆ.
ಬಿಜೆಪಿ-ಅಭಯ ಪಾಟೀಲ (77094)
ಕಾಂಗ್ರೆಸ್-ಪ್ರಭಾವತಿ ಮಾಸ್ತಮರಡಿ (13015)
ಎಂಇಎಸ್-ರಮಾಕಾಂತ ಕುಂಡೋಸ್ಕರ್ (6478)
ಜೆಡಿಎಸ್- ಶ್ರೀನಿವಾಸ್ ತಲುಕರ್(952)
2018ರಲ್ಲಿ ಅಭಯ ಪಾಟೀಲ ಬಿಜೆಪಿಯಿಂದ 1,45,241 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಬೆಳಗಾವಿ ದಕ್ಷಿಣ ಜಾತಿ ಲೆಕ್ಕಾಚಾರ
ಲಿಂಗಾಯತ 14,000
ಮರಾಠ 70,000
ನೇಕಾರ 40,000
ಜೈನ 15,000
ಬ್ರಾಹ್ಮಣ 17,000
ಮುಸ್ಲಿಂ 15,000
ಎಸ್‌ಸಿ ಎಸ್‌ಟಿ 20,000
ವಿಶ್ವಕರ್ಮ 8,000
ಇತರೆ 26,000
ಬೆಳಗಾವಿ ಗ್ರಾಮೀಣ (Belagavi Rural Assembly Constiruency)
ಲಕ್ಷ್ಮೀ ಹೆಬ್ಬಾಳಕರ ಮತ್ತೊಮ್ಮೆ ಕಾಂಗ್ರೆಸ್‌ನಿಂದ ಜಯ ದಾಖಲಿಸಿದ್ದಾರೆ. ಹೆಬ್ಬಾಳಕರ ವಿರುದ್ಧ ಮಾಜಿ ಸಚಿವ ರಮೇಶ ಜಾರಕಿಹೊಳಿ ಆಪ್ತ, ಬಿಜೆಪಿಯ ಹೊಸಮುಖ ನಾಗೇಶ ಮನ್ನೋಳಕರ ಸ್ಪರ್ಧಿಸಿದ್ದರು. ಈ ಬಾರಿಯೂ ಲಕ್ಷ್ಮೀ ಹೆಬ್ಬಾಳಕರ ಅವರೇ ಗೆಲುವು ದಾಖಲಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳಕರ 107619, ನಾಗೇಶ ಮನ್ನೋಳಕರ 51603
ಬಿಜೆಪಿ-ನಾಗೇಶ ಮನ್ನೋಳಕರ (51603)
ಕಾಂಗ್ರೆಸ್-ಲಕ್ಷ್ಮೀ ಹೆಬ್ಬಾಳಕರ (107619)
2018ರಲ್ಲಿ ಲಕ್ಷ್ಮೀ ಹೆಬ್ಬಾಳಕರ ಕಾಂಗ್ರೆಸ್‌ನಿಂದ 1,84,461 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಬೆಳಗಾವಿ ಗ್ರಾಮೀಣ ಜಾತಿ ಲೆಕ್ಕಾಚಾರ
ಲಿಂಗಾಯತ 38,000
ಮರಾಠ 80,000
ಮುಸ್ಲಿಂ 19,000
ಜೈನ 7 ,000
ಬ್ರಾಹ್ಮಣ 2,000
ಕುರುಬ 17,000
ಹಣಬರ 12,000
ಎಸ್‌ಸಿ 25,000
ಎಸ್‌ಟಿ 8,000
ಇತರೆ 19,000
ಸವದತ್ತಿ ಯಲ್ಲಮ್ಮ
ಆನಂದ ಮಾಮನಿ ಅವರ ಪತ್ನಿ ರತ್ನಾ ಮಾಮನಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಪ್ತ ವಿಶ್ವಾಸ ವೈದ್ಯ ಕಾಂಗ್ರೆಸ್‌ನಿಂದ ಕಣದಲ್ಲಿದ್ದರು. ಕಾಂಗ್ರೆಸ್ ಟಿಕೆಟ್ ವಂಚಿತ ಸೌರವ ಚೋಪ್ರಾ, ಜೆಡಿಎಸ್‌ನಿಂದ ಕಣದಲ್ಲಿದ್ದರು.
ಈ ಬಾರಿ ವಿಶ್ವಾಸ ವೈದ್ಯ ಜಯ ದಾಖಲಿಸಿದ್ದಾರೆ. ವಿಶ್ವಾಸ ವೈದ್ಯ 71224, ರತ್ನಾ ಮಾಮನಿ 56529 ಮತಗಳನ್ನ ಗಳಿಸಿದ್ದಾರೆ.
ಬಿಜೆಪಿ-ರತ್ನಾ ಮಾಮನಿ (56529)
ಕಾಂಗ್ರೆಸ್-ವಿಶ್ವಾಸ ವೈದ್ಯ (71224)
2018ರಲ್ಲಿ ಆನಂದ ಮಾಮನಿ ಬಿಜೆಪಿಯಿಂದ 1,52,747 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಸವದತ್ತಿ ಜಾತಿ ಲೆಕ್ಕಾಚಾರ
ಲಿಂಗಾಯತ 75,000
ಕುರುಬ 35,000
ಎಸ್‌ಸಿ/ಎಸ್‌ಟಿ 25,000
ಮುಸ್ಲಿಂ 20,000
ರೆಡ್ಡಿ 10,000
ಉಪ್ಪಾರ 10,000
ಇತರೆ 18,000
ರಾಮದುರ್ಗ (Ramadurga Assembly Constituency)
ರಾಮದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಹೊಸಮುಖ ಬೆಂಗಳೂರು ಮೂಲದ ಉದ್ಯಮಿ ಚಿಕ್ಕರೇವಣ್ಣ ಅಜ್ಜಪ್ಪ ಅವರಿಗೆ ಬಿಜೆಪಿ ಮಣೆ ಹಾಕಿತ್ತು. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಅಶೋಕ ಪಟ್ಟಣ ಕಣದಲ್ಲಿದ್ದರು. ಜೆಡಿಎಸ್‌ನಿಂದ ಪ್ರಕಾಶ ಮುಧೋಳ ಸ್ಪರ್ಧಿಸಿದ್ದರು. ಈ ಬಾರಿ ಅಶೋಕ ಪಟ್ಟಣ ವಿಜಯಶಾಲಿಯಾಗಿದ್ದಾರೆ. ಅಶೋಕ ಪಟ್ಟಣ 80294, ಚಿಕ್ಕರೇವಣ್ಣ ಅಜ್ಜಪ್ಪ 68564, ಪ್ರಕಾಶ ಮುಧೋಳ 1105 ಮತಗಳನ್ನ ಗಳಿಸಿದ್ದಾರೆ.
ಬಿಜೆಪಿ-ಚಿಕ್ಕರೇವಣ್ಣ ಅಜ್ಜಪ್ಪ (68564)
ಕಾಂಗ್ರೆಸ್-ಅಶೋಕ ಪಟ್ಟಣ (80294)
ಜೆಡಿಎಸ್-ಪ್ರಕಾಶ ಮುಧೋಳ (1105)
2018ರಲ್ಲಿ ಯಾದವಾಡ ಬಿಜೆಪಿಯಿಂದ 1,49,624 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ರಾಮದುರ್ಗ ಜಾತಿ ಲೆಕ್ಕಾಚಾರ
ಲಿಂಗಾಯತ 42,000
ಕುರುಬ 20,000
ರೆಡ್ಡಿ 16,000
ಮುಸ್ಲಿಂ 21,000
ಲಂಬಾಣಿ 10,000
ನೇಕಾರ 12,000
ಮರಾಠ 3,000
ಎಸ್‌ಸಿ/ಎಸ್‌ಟಿ 26,000
ಬ್ರಾಹ್ಮಣ & ಜೈನ; ಜೈನ 3,000
ಉಪ್ಪಾರ 3,000
ಇತರೆ 10,000
ಬೈಲಹೊಂಗಲ (Bailahongala Assembly Constituency)
ಬೈಲಹೊಂಗಲದಲ್ಲಿ ಈ ಬಾರಿ ಕಳೆದ ಸಲದ ಅಭ್ಯರ್ಥಿಗಳದ್ದೇ ಮುಖಾಮುಖಿಯಾಗಿದ್ದರು. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಮಹಾಂತೇಶ ಕೌಜಲಗಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದರು. 2018ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಬಿಜೆಪಿ ಟಿಕೆಟ್ ವಂಚಿತ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಪಕ್ಷೇತರರಾಗಿ ಕಣದಲ್ಲಿದ್ದರು.
ಈ ಬಾರಿ ಮಹಾಂತೇಶ ಕೌಜಲಗಿ ಜಯ ದಾಖಲಿಸಿದ್ದಾರೆ. ಮಹಾಂತೇಶ ಕೌಜಲಗಿ 58408, ಜಗದೀಶ ಮೆಟಗುಡ್ಡ 55630, ಶಂಕರ ಮಾಡಲಗಿ 9427 ಮತಗಳನ್ನ ಗಳಿಸಿದ್ದಾರೆ.
ಬಿಜೆಪಿ-ಜಗದೀಶ ಮೆಟಗುಡ್ಡ (55630)
ಕಾಂಗ್ರೆಸ್-ಮಹಾಂತೇಶ ಕೌಜಲಗಿ (58408)
ಜೆಡಿಎಸ್-ಶಂಕರ ಮಾಡಲಗಿ (9427)
2018ರಲ್ಲಿ ಮಹಾಂತೇಶ ಕೌಜಲಗಿ ಕಾಂಗ್ರೆಸ್‌ನಿಂದ 1,43,448 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಬೈಲಹೊಂಗಲ ಜಾತಿ ಲೆಕ್ಕಾಚಾರ
ಲಿಂಗಾಯತ 90,000
ಕುರುಬ 15,000
ಎಸ್‌ಸಿ/ಎಸ್‌ಟಿ 25,000
ಮುಸ್ಲಿಂ 18,000
ಜೈನ 6,000
ಬ್ರಾಹ್ಮಣ 3,000
ಸುಣಗಾರ 5,000
ಇತರೆ 10,000
ಖಾನಾಪುರ (Khanapura Assembly Constituency)
ಕಾಂಗ್ರೆಸ್ ಶಾಸಕಿ ಡಾ.ಅಂಜಲಿ ನಿಂಬಾಳ್ಕರ ಎರಡನೇ ಅವಧಿಗೆ ಕಾಂಗ್ರೆಸ್‌ನಿಂದ ಆಯ್ಕೆ ಬಯಸಿದ್ದರು. ಬಿಜೆಪಿಯಿಂದ ವಿಠ್ಠಲ ಹಲಗೇಕರ ಎರಡನೇ ಬಾರಿ ಕಣಕ್ಕಿಳಿದಿದ್ದರು. ಜೆಡಿಎಸ್‌ನಿಂದ ನಾಸೀರ್ ಬಗವಾನ್ ಕಣದಲ್ಲಿದ್ದರು. ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಅಭ್ಯರ್ಥಿಯಾಗಿ ಮುರಳೀಧರ ಪಾಟೀಲ ಸ್ಪರ್ಧಿಸಿದ್ದರು. ಈ ಬಾರಿ ಅಂಜಲಿ ನಿಂಬಾಳ್ಕರ ಪರಾಭವ ಹೊಂದಿದ್ದಾರೆ. ವಿಠ್ಠಲ ಹಲಗೇಕರ ಜಯ ದಾಖಲಿಸಿದ್ದಾರೆ. ಅಂಜಲಿ ನಿಂಬಾಳ್ಕರ 37205, ವಿಠ್ಠಲ ಹಲಗೇಕರ 91834 ಮತಗಳನ್ನ ಗಳಿಸಿದ್ದಾರೆ.
ಬಿಜೆಪಿ-ವಿಠ್ಠಲ ಹಲಗೇಕರ (91834)
ಕಾಂಗ್ರೆಸ್-ಡಾ.ಅಂಜಲಿ ನಿಂಬಾಳ್ಕರ (37205)
2018ರಲ್ಲಿ ಡಾ.ಅಂಜಲಿ ನಿಂಬಾಳ್ಕರ ಕಾಂಗ್ರೆಸ್‌ನಿಂದ 1,52,658 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಖಾನಾಪುರ ಜಾತಿ ಲೆಕ್ಕಾಚಾರ
ಮರಾಠ 80,000
ಲಿಂಗಾಯತ 35,000
ಮುಸ್ಲಿಂ 22,000
ಎಸ್ಎಸಿ/ಎಸ್‌ಟಿ 20,000
ಜೈನ 8,000
ಕ್ರಿಶ್ಚಿಯನ್ 10,000
ಬ್ರಾಹ್ಮಣ 3,000
ವಿಶ್ವಕರ್ಮ 4,000
ಇತರೆ 20,000
Koppal Election Result 2023: ಬಿಜೆಪಿಗೆ ನೆರವಿಗೆ ಬಾರದ ಹನುಮ, ಕಾಂಗ್ರೆಸ್ ಹಂಗಾಮ!
ಚನ್ನಮ್ಮನ ಕಿತ್ತೂರು (Kitturu Assembly Constituency)
ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಬಿಜೆಪಿಯಿಂದ ಮತ್ತೊಮ್ಮೆ ಕಣಕ್ಕಿಳಿದಿದ್ದರು. ಕಾಂಗ್ರೆಸ್, ಬಾಬಾಸಾಹೇಬ ಪಾಟೀಲ ಅವರನ್ನು ಕಣಕ್ಕಿಳಿಸಿತ್ತು. ಈ ಬಾರಿ ಬಾಬಾಸಾಹೇಬ ಪಾಟೀಲ ಗೆಲುವು ದಾಖಲಿಸಿದ್ದಾರೆ. ಬಾಬಾಸಾಹೇಬ ಪಾಟೀಲ 77536, ಮಹಾಂತೇಶ ದೊಡ್ಡಗೌಡರ 74543, ಅಶ್ವಿನಿ ಸಿಂಗಯ್ಯ ಪೂಜಾರ್ 775 ಮತಗಳನ್ನ ಗಳಿಸಿದ್ದಾರೆ.
ಬಿಜೆಪಿ-ಮಹಾಂತೇಶ ದೊಡ್ಡಗೌಡರ (74543)
ಕಾಂಗ್ರೆಸ್- ಬಾಬಾಸಾಹೇಬ ಪಾಟೀಲ(77536)
ಜೆಡಿಎಸ್- ಅಶ್ವಿನಿ ಸಿಂಗಯ್ಯ ಪೂಜಾರ್(775)
ಒಟ್ಟು ಮತಗಳು: 186,195 ಪುರುಷ: 94,884 ಸ್ತ್ರೀ: 91,304 ತೃತೀಯ ಲಿಂಗಿ: 7
2018ರಲ್ಲಿ ಮಹಾಂತೇಶ ದೊಡ್ಡಗೌಡರ ಬಿಜೆಪಿಯಿಂದ 1,47,056 ಮತಗಳನ್ನ ಪಡೆದು ಜಯಶಾಲಿಯಾಗಿದ್ದರು.
ಕಿತ್ತೂರು ಜಾತಿ ಲೆಕ್ಕಾಚಾರ
ಲಿಂಗಾಯತ ಪಂಚಮಸಾಲಿ 65,000
ವೀರಶೈವ ಲಿಂಗಾಯತ 18,000
ಕುರುಬ 6,000
ಮುಸ್ಲಿಂ 29,000
ಎಸ್‌ಸಿ 12,000
ಎಸ್‌ಟಿ 15,000
ಜೈನ 3,000
ಬ್ರಾಹ್ಮಣ 7,000
ವಿಶ್ವಕರ್ಮ 5,000
ಮರಾಠ 5,000
ಕ್ರಿಶ್ಚಿಯನ್ 2,000
ಇತರೆ 4,000