ಹಿಂದೂ ಕಾರ್ಯಕರ್ತರು ಜೋಪಾನವಾಗಿರಿ: ಶ್ರೀರಾಮುಲು ಕರೆ

By Kannadaprabha News  |  First Published Jul 13, 2023, 2:16 PM IST

ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂ ಕಾರ್ಯಕರ್ತರ ಹತ್ಯೆ ಶುರುವಾಗುತ್ತದೆ. ಈ ಸರ್ಕಾರ ಇರುವ ತನಕ ಹಿಂದೂ ಕಾರ್ಯಕರ್ತರು ಜೋಪಾನವಾಗಿರಿ, ಒಬ್ಬೊಬ್ಬರೆ ಓಡಾಡಬೇಡಿ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಕರೆ ನೀಡಿದರು. 


ಟಿ. ನರಸೀಪುರ (ಜು.13): ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂ ಕಾರ್ಯಕರ್ತರ ಹತ್ಯೆ ಶುರುವಾಗುತ್ತದೆ. ಈ ಸರ್ಕಾರ ಇರುವ ತನಕ ಹಿಂದೂ ಕಾರ್ಯಕರ್ತರು ಜೋಪಾನವಾಗಿರಿ, ಒಬ್ಬೊಬ್ಬರೆ ಓಡಾಡಬೇಡಿ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಕರೆ ನೀಡಿದರು. ಪಟ್ಟಣದ ಶ್ರೀರಾಮಪುರ ಬೀದಿ ನಿವಾಸಿ ಹಿಂದೂ ಕಾರ್ಯಕರ್ತ ವೇಣುಗೋಪಾಲ್‌ ಭಾನುವಾರ ಹತ್ಯೆಯಾದ ಹಿನ್ನೆಲೆ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಆಗಮಿಸಿದ ವೇಳೆ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಕಾಂಗ್ರೆಸ್‌ ಸರ್ಕಾರ ಹಿಂದುಗಳನ್ನು ಸಂಪೂರ್ಣವಾಗಿ ಮುಗಿಸುವ ಕೆಲಸ ಮಾಡುತಿರುವುದರಿಂದ ಹಿಂದೂ ಕಾರ್ಯಕರ್ತರು ಜೋಪಾನವಾಗಿ ಇರುವುದು ಒಳ್ಳೆಯದು ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾನೂನನ್ನು ಗಂಟು ಮೂಟೆಕಟ್ಟಿಬಿಸಾಕಲಾಗಿದೆ. ರಾಜ್ಯದ ಎಲ್ಲ ಕಡೆಗಳಲ್ಲೂ ಕೊಲೆ, ಹತ್ಯೆ, ದೌರ್ಜನ್ಯ ನಡೆಯುತ್ತಿವೆ. ಸಿಎಂ ಕ್ಷೇತ್ರದಲ್ಲೇ ಕಾನೂನು ಸುವ್ಯವಸ್ಥೆ ಹದೆಗಟ್ಟಿದೆ. ಅಂದ ಮೇಲೆ ರಾಜ್ಯದ ಬೇರೆ ಭಾಗಗಳ ಪರಿಸ್ಥಿತಿ ಹೇಗಿರಬೇಡ ಎಂಬುದನ್ನು ತಾವು ಯೋಚಿಸಬೇಕಾಗಿದೆ, ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ, ಸ್ವಾಮೀಜಿಗಳಿಗೆ, ಹಿರಿಯ ನಾಗರಿಕರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

Tap to resize

Latest Videos

ಕಾಂಗ್ರೆಸ್‌ನಿಂದ ಬ್ಲಾಕ್‌ಮೇಲ್‌ ರಾಜಕೀಯ: ಸಂಸದ ಮುನಿಸ್ವಾಮಿ ಕಿಡಿ

ಕಾಂಗ್ರೆಸ್‌ ಸರ್ಕಾರ ಬಂದಾಗಲೆಲ್ಲ ರಾಜ್ಯದ ಒಳಗ್ನಿ ಜಿಹಾದಿ ಮನಃಸ್ಥಿತಿ ಇರುವ ಜನ ಎದ್ದು ಕೂರುತ್ತಾರೆ ಹೀಗಾಗಿ ಕೊಲೆಗಳು ನಡೆಯುತ್ತವೆ. ವೇಣುಗೋಪಾಲ್‌ ಪ್ರಕರಣ ಸಹ ಪೂರ್ವ ನಿಯೋಜಿತ ಕೊಲೆ. ಜಿಹಾದಿ ಮನಃಸ್ಥಿತಿ ಜನ ಪ್ಲ್ಯಾನ್‌ ಮಾಡಿಕೊಂಡು ಹಿಂದೂಗಳ ಕೊಲೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರಕ್ಕೆ ಈ ಕೊಲೆಗಳ ವಿಚಾರದಲ್ಲಿ ಗಂಭೀರತೆ ಇಲ್ಲ, ಇವರಿಗೆ ಅಧಿಕಾರದ ಅಹಂ ಜಾಸ್ತಿಯಾಗಿದೆ ಎಂದರು. ಸುಳ್ಳಿನ ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದವರು ವೈಯಕ್ತಿಕ ವರ್ಚಸ್ಸಿನಿಂದ ಬಂದ ರೀತಿ ಮಾತಾನಾಡುತ್ತಿದ್ದಾರೆ. ವೇಣುಗೋಪಾಲ್‌ ನಾಯಕ್‌ ಹತ್ಯೆ ನಂತರ ಅವರ ಕುಟುಂಬಕ್ಕೆ ಸ್ಪಂದಿಸುವ ಕೆಲಸವನ್ನು ಸಿಎಂ ಮಾಡಿಲ್ಲ. ಸಿಎಂ ಸಮೇತ ಎಲ್ಲರೂ ಕಣ್ಮುಚ್ಚಿ ಕುಳಿತಿದ್ದಾರೆ.

ಹಿಂದೂ ಕಾರ್ಯಕರ್ತರ ಮೇಲೆ ಈ ರೀತಿ ಘಟನಾವಳಿಗಳು ಮೇಲಿಂದ ಮೇಲೆ ನಡೆಯುತ್ತವೆ ಹಿಂದೂ ಕಾರ್ಯಕರ್ತರು ಸ್ವಲ್ಪ ಜಾಗರೂಕರಾಗಿರಿ ಎಂದರು. ಶವದ ಮೇಲೆ ಬಿಜೆಪಿ ಯಾವತ್ತೂ ರಾಜಕೀಯ ಮಾಡಿಲ್ಲ. ಹಿಂದೂ ಸಂಘಟನೆಯ ಕಾರ್ಯಕರ್ತರ ಹತ್ಯೆಯಾದಾಗ ಅವರ ವಿರುದ್ದ ಧ್ವನಿ ಎತ್ತುವುದು ನಮ್ಮ ಜವಾಬ್ದಾರಿ ಯಾಗಿದೆ, ವೇಣುಗೋಪಾಲ ಹತ್ಯೆಯನ್ನು ಪೊಲೀಸ್‌ ತನಿಖೆಗೆ ಒಳಪಡಿಸಿರುವುದರಿಂದು ಒತ್ತಡಗಳು ಉಂಟಾಗುವ ಅನುಮಾನ ನಮಗೆ ಇದೆ. ಆದರಿಂದ ಸಿಬಿಐ ತನಿಖೆ ಮಾಡಿದರೆ ಸತ್ಯ ಹೊರಬರುತ್ತದೆ ಅವರು ಎಂದು ಆಗ್ರಹಿಸಿದರು.

ಶಕ್ತಿ ಯೋಜನೆಯಿಂದ ರಾಜ್ಯದ ದೇವಸ್ಥಾನ ಭರ್ತಿ: ಕಾಂಗ್ರೆಸ್‌ ಗ್ಯಾರಂಟಿಗಳಿಗೆ ಜಿಟಿಡಿ ಪ್ರಶಂಸೆ

ವೇಣುಗೋಪಾಲ್‌ ಒಬ್ಬ ಹಿಂದೂ ಸಂಘಟನೆಯಲ್ಲಿ ಕೆಲಸ ಮಾಡುವ ಸಾಮಾನ್ಯ ಮನುಷ್ಯ, ಇವರನ್ನು ಹತ್ಯೆ ಮಾಡುವ ಅವಶ್ಯಕತೆ ಏನಿತ್ತು, ಇವರಿಂದ ಅವರು ಏನು ಸಾಧಿಸದಂತಾಗಿದೆ, ಅವರ ಕುಟುಂಕ್ಕೆ ಯಾರು ಜವಾಬ್ದಾರಿ, ಆ ಮಗುವನ್ನು ನೋಡಿದರೆ ಕರುಳು ಕಿತ್ತು ಬರುತ್ತದೆ ಎಂದು ನೋವು ಹೊರಹಾಕಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್‌, ಡಾ. ರೇವಣ್ಣ, ಮಂಡಲ ಅಧ್ಯಕ್ಷ ಲೋಕೇಶ್‌ ನಾಯಕ್‌, ಟೌನ್‌ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಎಸ್‌.ಕೆ. ಕಿರಣ, ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್‌, ಯುವ ಮೋರ್ಚಾ ಅಧ್ಯಕ್ಷರಾದ ಶಿವು, ಮೋಹನ್‌, ತಾಪಂ ಮಾಜಿ ಸದಸ್ಯ ಬಸವರಾಜು, ಟಿಎಪಿಎಂಎಸ… ನಿರ್ದೇಶಕ ಸೋಮಶೇಖರ್‌, ರಂಗು ನಾಯಕ, ವೆಂಕಟರಮಣಶೆಟ್ಟಿಇದ್ದರು.

click me!