ಹಿಂದೂಗಳ ಹತ್ಯೆ ಕಂಡು ಹೊಟ್ಟೆ ಉರಿಯುತ್ತಿದೆ: ಕೆ.ಎಸ್‌.ಈಶ್ವರಪ್ಪ

By Kannadaprabha News  |  First Published Oct 13, 2023, 10:23 PM IST

ಸಿದ್ದರಾಮಯ್ಯನವರೇ ನಿಮ್ಮ ಮಗ ಯತೀಂದ್ರರನ್ನು ಮುಸ್ಲಿಂ ಗುಂಡಾಗಳು ಕೊಲೆ ಮಾಡಿದ್ದರೆ ನಿಮಗೆ ಏನು ಅನಿಸುತ್ತಿತ್ತು, ಡಿ.ಕೆ.ಶಿವಕುಮಾರ್‌ ಅವರೇ ನಿಮ್ಮ ಸಹೋದರ ಡಿ.ಕೆ.ಸುರೇಶ್‌ ಅವರನ್ನು ಮುಸ್ಲಿಂ ಗುಂಡಾಗಳು ಕೊಲೆ ಮಾಡಿದರೆ ಏನು ಅನಿಸುತ್ತಿತ್ತು ಎಂದು ಪ್ರಶ್ನೆಸುವ ಮೂಲಕ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. 
 


ಶಿವಮೊಗ್ಗ (ಅ.13): ಸಿದ್ದರಾಮಯ್ಯನವರೇ ನಿಮ್ಮ ಮಗ ಯತೀಂದ್ರರನ್ನು ಮುಸ್ಲಿಂ ಗುಂಡಾಗಳು ಕೊಲೆ ಮಾಡಿದ್ದರೆ ನಿಮಗೆ ಏನು ಅನಿಸುತ್ತಿತ್ತು, ಡಿ.ಕೆ.ಶಿವಕುಮಾರ್‌ ಅವರೇ ನಿಮ್ಮ ಸಹೋದರ ಡಿ.ಕೆ.ಸುರೇಶ್‌ ಅವರನ್ನು ಮುಸ್ಲಿಂ ಗುಂಡಾಗಳು ಕೊಲೆ ಮಾಡಿದರೆ ಏನು ಅನಿಸುತ್ತಿತ್ತು ಎಂದು ಪ್ರಶ್ನೆಸುವ ಮೂಲಕ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ನಗರದ ಮಥುರಾ ಪ್ಯಾರಡೈಸ್‌ ಎದುರು ಗುರುವಾರ ನಡೆದ ಬಿಜೆಪಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು. ಮುಸ್ಲಿಂ ಗೂಂಡಾಗಳು ನಮ್ಮ ಹಿಂದು ಕಾರ್ಯಕರ್ತರನ್ನು ಕೊಲೆ ಮಾಡಿದ್ದನ್ನು ಕಂಡು ನಮಗೆ ಹೊಟ್ಟೆ ಉರಿಯುತ್ತಿದೆ. ನಿಮ್ಮ ಕುಟುಂಬಕ್ಕೂ ಇಂತಹ ಸಂಕಷ್ಟ ಎದುರಾಗಿದ್ದರೆ ಹೊಟ್ಟೆ ಉರಿಯುತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.

ಮುಸ್ಲಿಮರನ್ನು ಉದ್ದೇಶಿಸಿ ಮಾತನಾಡಿದ ಅವರು, ನಮಗೆ ಸಿದ್ದರಾಮಯ್ಯ ರಕ್ಷಣೆ ಕೊಡ್ತಾರೆ, ಸಿದ್ದರಾಮಯ್ಯ ಎಜೆಂಟರ್‌ಗಳಾದ ಎಸ್‌ಪಿ, ಡಿಸಿ ನಮಗೆ ರಕ್ಷಣೆ ಕೊಡುತ್ತಾರೆ ಎಂಬುದು ನಿಮ್ಮ ನಂಬಿಕೆ. ಆದರೆ, ಹರ್ಷ ಹತ್ಯೆ ಘಟನೆ ವೇಳೆ ಹಿಂದೂಗಳು ಮುಸ್ಲಿಮರ ಕೇರಿಗೆ ನುಗ್ಗಿದ್ದರೆ ಮಾರಿ ಜಾತ್ರೆಯಲ್ಲಿ ಕುರಿ ಕತ್ತರಿಸಿದಂತೆ ಕತ್ತರಿಸಿ ಹಾಕುತ್ತಿದ್ದರು ಎಂದು ಕಿಡಿಕಾರಿದರು. ದೇಶದಲ್ಲಿ ಏಕರೂಪ ನಾಗರಿಕ ಸಹಿತೆ ಕಾನೂನು ಜಾರಿ ಆಗಲಿದೆ. ಎರಡನೇ ಮದುವೆಯಾದರೆ, ಕಾನೂನು ಕ್ರಮ ಆಗಬೇಕು. ಹಿಂದೂಗಳಿಗೆ ಹಮ್ ದೋ, ಹಮಾರಾ ದೋ.. ಮುಸ್ಲಿಮರಿಗೆ ಹಮ್ ಪಾಂಚ್ ಹಮಾರಾ ಪಚ್ಚಿಸ್ ರೀತಿ ಆಗಿದೆ. ಈ ದೇಶ ಉಳಿಯಲು ನನ್ನಂತೆ 5 ಮಕ್ಕಳು, 8 ಮೊಮ್ಮಕ್ಕಳನ್ನಾದರೂ ಮಾಡಿಕೊಳ್ಳಿ ಎಂದು ಕರೆ ನೀಡಿದರು.

Tap to resize

Latest Videos

ಕುರುಕ್ಷೇತ್ರವನ್ನೇ ಬರೆದ ವ್ಯಕ್ತಿ ಇವರು: ಮುನಿರತ್ನಗೆ ತಿರುಗೇಟು ಕೊಟ್ಟ ಸಂಸದ ಸುರೇಶ್

ಸಿದ್ದರಾಮಯ್ಯ ಮೈಯಲ್ಲಿ ಯಾವ ರಕ್ತ ಹರಿಯುತ್ತಿದೆ?: ಈ ರಾಜ್ಯದ ಕುತಂತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಯಲ್ಲಿ ಕೆಂಪುರಕ್ತ ಬದಲಾಗಿ ಹಸಿರುರಕ್ತ ಹರಿಯುತ್ತಿದೆಯೇ? ಇಲ್ಲಾ, ಹಿಂದು ರಕ್ತ ಹರಿಯುತ್ತಿದೆಯಾ, ತೀರ್ಮಾನ ಆಗಬೇಕಿದೆ. ಸಿದ್ದರಾಮಯ್ಯ ಅವರೇ ತಾಕತ್ತು ಇದ್ದರೆ ನಿಮಗೆ ಯಾವ ಬಣ್ಣ ಬೇಕು ಆಯ್ಕೆ ಮಾಡಿ ಎಂದು ಸವಾಲು ಎಸೆದ ಕೆ.ಎಸ್‌.ಈಶ್ವರಪ್ಪ, ಸಿದ್ದರಾಮಯ್ಯ ಈ ಮೊದಲು ದೇವಸ್ಥಾನಕ್ಕೆ ಹೋಗ್ತಿರಲಿಲ್ಲ. ಈಗ ಕದ್ದುಮುಚ್ಚಿ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಈಗ ತಿಲಕ ಇಟ್ಟುಕೊಂಡಿದ್ದಾರೆ, ಈಗ ಹಿಂದು ಸಿದ್ದು ಆಗಿದ್ದಾರೆ ಎಂದು ವಂಗ್ಯವಾಡಿದರು.

ಮಹಾನವಮಿ ಸಂಭ್ರಮ: ದಾಂಡಿಯಾ ನೃತ್ಯಕ್ಕಾಗಿ ಶುರುವಾಗಿದೆ ಭರ್ಜರಿ ತಯಾರಿ!

ಬಿಜೆಪಿಗೆ ವೋಟು ಹಾಕಿ: ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುವ ದಿನ ದೂರವಿಲ್ಲ ಎಂದಿದ್ದೆ. ಆಗ ಡಿ.ಕೆ.ಶಿವಕುಮಾರ್‌ ನನಗೆ ದೇಶದ್ರೋಹಿ ಎದ್ದಿದ್ದರು. ಅದಕ್ಕೆ ಡಿ.ಕೆ.ಶಿವಕುಮಾರ್‌ಗೆ ನೀನು ದೇಶದ್ರೋಹಿ ನಿಮ್ಮಪ್ಪ, ದೇಶದ್ರೋಹಿ ಎಂದಿದ್ದೆ. ಮೊನ್ನೆ ಡಿ.ಕೆ.ಶಿವಕುಮಾರ್‌ ಕದ್ದು ನೀರು ಬಿಟ್ಟಿದ್ದಕ್ಕೆ ಕಳ್ಳ ಎಂದು ಕರೆದೆ. ಎಸ್‌ಪಿ, ಡಿಸಿ ಕಾಂಗ್ರೆಸ್ ಗುಲಾಮರಾಗಿದ್ದಾರೆ ಎಂದು ಬೈಯ್ಯಲು ಈ ಸಭೆಯಲ್ಲ. ದೇಶದಲ್ಲಿ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯಾಗಿ ಮಾಡಬೇಕು. ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ಅವರನ್ನು ಸಂಸದರನ್ನಾಗಿ ಮಾಡಬೇಕು. ಯಾವುದು ಗ್ಯಾರಂಟಿ ತೋರಿಸಿ. ಈಗ ಪವರ್ ಇಲ್ಲ, ಏನೂ ಇಲ್ಲ. ಹಿಂದೂ ಸಮಾಜದ ರಕ್ಷಣೆಗಾಗಿ ಲೋಕಸಭೆಯಲ್ಲಿ ಬಿಜೆಪಿಗೆ ವೋಟು ಹಾಕಿ ಎಂದು ಕರೆ ನೀಡಿದರು.

click me!