ಬಿಜೆಪಿ, ಎಎಪಿ, ಕಾಂಗ್ರೆಸ್ ನಡುವೆ ಬಿಗ್ ಫೈಟ್, ಯಾರಾಗ್ತಾರೆ ದೆಹಲಿ ಸುಲ್ತಾನ?

Published : May 21, 2024, 08:01 PM IST
ಬಿಜೆಪಿ, ಎಎಪಿ, ಕಾಂಗ್ರೆಸ್ ನಡುವೆ ಬಿಗ್ ಫೈಟ್, ಯಾರಾಗ್ತಾರೆ ದೆಹಲಿ ಸುಲ್ತಾನ?

ಸಾರಾಂಶ

ಮನೆಯಿಂದ ಹೊರಬರಲು ಸಾಧ್ಯ ಇಲ್ಲದ ರೀತಿ ಒಂದು ಕಡೆ ಸೂರ್ಯ ಶಿಕಾರಿ ನಡೆಸುತ್ತಿದ್ದಾನೆ. ಮತ್ತೊಂದು ಮತ ಶಿಕಾರಿ ನಡೆಯುತ್ತಿದೆ ನವದೆಹಲಿಯಲ್ಲಿ. ಮತಪತ್ರದ ಮುಂದಿನ ಬಟನ್ ಹೊತ್ತಲು ಉಳಿದಿರೋದು ಕೇವಲ ನಾಲ್ಕು ದಿನ. ಹೇಗಿದೆ ನಮ್ಮ ದೆಹಲಿ. ಡೆಲ್ಲಿ ರಾಜಕೀಯ ಅಖಾಡ ಹೇಗೆ ಬಿಸಿಯಾಗಿದೆ? ಕ್ಷೇತ್ರ, ಅಭ್ಯರ್ಥಿ, ರಾಜಕೀಯ ಪಕ್ಷಗಳ ತಂತ್ರಗಾರಿಕೆ ? ಇವುಗಳ ಬಗ್ಗೆ  ಮಾಹಿತಿ ಇಲ್ಲಿದೆ ನೋಡಿ.

ಡೆಲ್ಲಿ ಮಂಜು

ನವದೆಹಲಿ : ಮನೆಯಿಂದ ಹೊರಬರಲು ಸಾಧ್ಯ ಇಲ್ಲದ ರೀತಿ ಒಂದು ಕಡೆ ಸೂರ್ಯ ಶಿಕಾರಿ ನಡೆಸುತ್ತಿದ್ದಾನೆ. ಮತ್ತೊಂದು ಮತ ಶಿಕಾರಿ ನಡೆಯುತ್ತಿದೆ ನವದೆಹಲಿಯಲ್ಲಿ. ಮತಪತ್ರದ ಮುಂದಿನ ಬಟನ್ ಹೊತ್ತಲು ಉಳಿದಿರೋದು ಕೇವಲ ನಾಲ್ಕು ದಿನ. ಹೇಗಿದೆ ನಮ್ಮ ದೆಹಲಿ. ಡೆಲ್ಲಿ ರಾಜಕೀಯ ಅಖಾಡ ಹೇಗೆ ಬಿಸಿಯಾಗಿದೆ? ಕ್ಷೇತ್ರ, ಅಭ್ಯರ್ಥಿ, ರಾಜಕೀಯ ಪಕ್ಷಗಳ ತಂತ್ರಗಾರಿಕೆ ? ಇವುಗಳ ಬಗ್ಗೆ  ಮಾಹಿತಿ ಇಲ್ಲಿದೆ ನೋಡಿ.

ದೆಹಲಿಯಲ್ಲಿ ಜಿದ್ದಾಜಿದ್ದಿ ಹೋರಾಟ ನಡೆಸೋ ಪಕ್ಷಗಳು ಅಂದ್ರೆ ಕಮಲ ಪಕ್ಷ ಬಿಜೆಪಿ, ಹಸ್ತದ ಪಕ್ಷ ಕಾಂಗ್ರೆಸ್ ಹಾಗು ಪೊರಕೆ ಪಕ್ಷ ಆಮ್ ಆದ್ಮಿ. ಕಳೆದ ಎರಡು ಚುನಾವಣೆಗಳಲ್ಲಿ ಮೂರು ಪಕ್ಷಗಳ ನಡುವೆ ಹೋರಾಟ ನಡೆದಿದೆ. ಈ ಬಾರಿ ಇಂಡಿಯಾ ಮೈತ್ರಿಕೂಟದ ಭಾಗವಾಗಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಒಂದಾಗಿ ದೆಹಲಿಯಲ್ಲಿ ನಾಲ್ಕು ಮತ್ತು ಮೂರು ಕ್ಷೇತ್ರಗಳು ಹಂಚಿಕೊಂಡಿವೆ. ಬಿಜೆಪಿ ಆರು ಹೊಸ ಮುಖಗಳಿಗೆ ಟಿಕೆಟ್ ಕೊಟ್ಟು ಏಳು ಕ್ಷೇತ್ರಗಳಲ್ಲಿ ಏಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಳೆದೆರಡು ಲೋಕಸಭಾ ಚುನಾವಣೆಗಳಲ್ಲಿ ಏಳಕ್ಕೆ ಏಳೂ ಕ್ಷೇತ್ರಗಳಲ್ಲಿ ಕಮಲ ಅರಳಿತ್ತು.

ರಾಷ್ಟ್ರ ರಾಜಧಾನಿಯಲ್ಲಿ ಚುನಾವಣಾ ಕಲರವ: 7 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲೊರ‍್ಯಾರು? ಸೋಲರ‍್ಯಾರು?

ಕ್ಷೇತ್ರ : ಪಶ್ಚಿಮ ದೆಹಲಿ

ಆಪ್  ಪಕ್ಷಕ್ಕೆ ಗೆಲುವಿನ ರುಚಿ ಈ ಬಾರಿ ಉಣಿಸಲಿದೆ ಎಂದು ಲೆಕ್ಕಾಚಾರ ಹಾಕಿರುವ ಕ್ಷೇತ್ರಗಳಲ್ಲಿ ಪಶ್ಚಿಮ ದೆಹಲಿ ಕ್ಷೇತ್ರ(West Delhi Lok Sabha Election 2024) ಕೂಡ ಒಂದು. ಕಾರಣ ಇಷ್ಟೇ  ಈತನಕ ಹಸ್ತದ ಪಕ್ಷದಲ್ಲಿದ್ದ ಮಹಾಬಲ ಮಿಶ್ರಾ(Mahabal Mishra) ಈ ಬಾರಿ ಆಮ್ ಆದ್ಮಿ ಪಕ್ಷ ದಿಂದ ಸ್ಪರ್ಧೆ ಮಾಡಿದ್ದಾರೆ.   ಕಮಲಜೀತ್ ಸೆಹ್ರಾವತ್(Kamaljeet Sehrawat) ಬಿಜೆಪಿ ಪಕ್ಷ ದಿಂದ ಸ್ಪರ್ಧೆ ಮಾಡಿದ್ದಾರೆ. 

ಕ್ಷೇತ್ರ ವಿಂಗಡಣೆಗೂ ಮೊದಲು ಸ್ವಲ್ಪ ಭಾಗ ದಕ್ಷಿಣ ದೆಹಲಿ, ಸ್ವಲ್ಪ ಭಾಗ ದೆಹಲಿ ಹೊರವಲಯ ಕ್ಷೇತ್ರಗಳಲ್ಲಿ ದಕ್ಷಿಣ ದೆಹಲಿ ಕ್ಷೇತ್ರ ಹಂಚಿ ಹೋಗಿತ್ತು. 2008 ರ ಕ್ಷೇತ್ರ ವಿಂಗಡಣೆಯ ಬಳಿಕ ಹುಟ್ಟಿಕೊಂಡ ಕ್ಷೇತ್ರ ಇದು. ಶ್ರೀಮಂತರು ಹೆಚ್ಚಾಗಿರುವ ಹಾಗು ಜನದಟ್ಟಣೆ ಹೊಂದಿರುವ ಕ್ಷೇತ್ರ ಇದು. ಡೆಲ್ಲಿ ಮಾಜಿ ಸಿಎಂ ಸಾಹೇಬ್ ಸಿಂಗ್ ವರ್ಮಾ ಪುತ್ರ ಪರವೇಶ್ ಸಾಹೇಬ್ ಸಿಂಗ್ ವರ್ಮಾ ಬಿಜೆಪಿ ಯಿಂದ 2019 ರಲ್ಲಿ ಆಯ್ಕೆಯಾಗಿದ್ದರು. ಈ ಬಾರಿ ಬಿಜೆಪಿ, ಟಿಕೆಟ್ ಬದಲಾಯಿಸಿ ಕಮಲಜೀತ್ ಅವರಿಗೆ ನೀಡಿದೆ.

ಅರೆ ಗ್ರಾಮೀಣ ಮತ್ತು ನಗರ ಪ್ರದೇಶ ಹೊಂದಿರುವ ಕ್ಷೇತ್ರ ಇದು. ಅರೆ ಗ್ರಾಮೀಣ ಪ್ರದೇಶದಲ್ಲಿ ಸಾಂಪ್ರದಾಯಿಕ ಕೃಷಿ ಹಾಗು ಹೈನುಗಾರಿಕೆ ಕಾಣಿಸುತ್ತದೆ. ಜಾಟರು, ಪಂಜಾಬಿ ಸಿಖ್, ಬ್ರಾಹ್ಮಣರು ಸಮುದಾಯದವರು ಹೆಚ್ಚು ಮಂದಿ ಇದ್ದಾರೆ. 70 ವರ್ಷದ ಅಭ್ಯರ್ಥಿ ಮಹಾಬಲ ಮಿಶ್ರಾ ( ಬ್ರಾಹ್ಮಣ)  ಕಾಂಗ್ರೆಸ್ ನಿಂದ ಒಮ್ಮೆ ಸಂಸದ ಆಗಿದ್ದರು. ಈಗ ಪಕ್ಷ ಬದಲಾಯಿಸಿ ಆಮ್ ಆದ್ಮಿಯಿಂದ ಸ್ಪರ್ಧೆ ಮಾಡಿದ್ದಾರೆ. ಬಿಹಾರ ಮಧುಬನಿ ಮೂಲದ ಮಿಶ್ರಾ, ಪೂರ್ವಾಂಚಲ ಭಾಗದಲ್ಲಿ ಕಾಂಗ್ರೆಸ್ ಪ್ರಮುಖ ಮುಖ ಆಗಿದ್ರು. ಕಾಂಗ್ರೆಸ್ ನಿಂದ ದ್ವಾರಕ ಕ್ಷೇತ್ರದಿಂದ ಒಮ್ಮೆ ಶಾಸಕರು ಕೂಡ ಆಗಿದ್ರು.

51 ವರ್ಷದ ಕಮಲ್ ಜೀತ್  ಸೆಹ್ರಾವತ್ ಅವರು ಪದವೀಧರಾಗಿದ್ದು ಬಿಜೆಪಿ ಪಕ್ಷದಲ್ಲಿ ಹಲವು ಹುದ್ದೆಗಳು ಅಲಂಕರಿಸಿದ್ದಾರೆ. ಇವರು ಜಾಟ ಸಮುದಾಯದವರಾಗಿದ್ದೂ, 
ದಕ್ಷಿಣ ದೆಹಲಿ ಪಾಲಿಕೆಯ ಮೇಯರ್ ಕೂಡ ಆಗಿದ್ರು.  ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರು. ಮೊದಲ ಬಾರಿ ಸಂಸತ್ ಚುನಾವಣಾ ಕಣದಲ್ಲಿದ್ದಾರೆ. 

ಕ್ಷೇತ್ರ : ದಕ್ಷಿಣ ದೆಹಲಿ

ಇದೊಂದು  ರೀತಿ ಬಿಜೆಪಿ ಭದ್ರಕೋಟೆ. 1989  ರಿಂದ 2004 ರತನಕ ಬಿಜೆಪಿ ಘಟಾನುಘಟಿ ನಾಯಕರು ಇಲ್ಲಿ ಗೆದ್ದು ಬಂದಿದ್ದಾರೆ. ಮದನ್ ಲಾಲ್ ಖುರಾನ, ಸುಷ್ಮಾಸ್ವರಾಜ್, ವಿಜಯ್ ಕುಮಾರ್ ಮಲ್ಹೋತ್ರಾ ಗೆದ್ದಿದ್ದಾರೆ. ಕ್ಷೇತ್ರ ವಿಂಗಡಣೆಯ ಬಳಿಕ ಕಾಂಗ್ರೆಸ್ ಪಕ್ಷಕ್ಕೆದ ಕೈಗೆ ಈ ಕ್ಷೇತ್ರ ಒಮ್ಮೆ ಹೋಗಿತ್ತು. 

ನಗರ, ಅರೆ ಗ್ರಾಮೀಣ, ಕೊಳಚಪ್ರದೇಶ, ಅನಧಿಕೃತ ಕಾಲೋನಿಗಳು ಹೆಚ್ಚಿರುವ ಕ್ಷೇತ್ರ ಇದು. ಗುಜ್ಜಾರ್ ಸಮುದಾಯ ಇಲ್ಲಿ ಹೆಚ್ಚಾಗಿದೆ.  ಇದೇ ಕಾರಣಕ್ಕೆ ಇಂಡಿಯಾ ಬ್ಲಾಕ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಗುಜ್ಜಾರ್ ಸಮುದಾಯದ ನಾಯಕರನ್ನು ಚುನಾವಣಾ ಅಖಾಡಕ್ಕೆ ಇಳಿಸಿವೆ. 

ಬಿಜೆಪಿ, ಗುಜ್ಜಾರ್ ಸಮುದಾಯದ 71 ವರ್ಷದ ರಾಮವೀರ್ ಸಿಂಗ್ ಬಿಧೂರಿ ಅವರನ್ನು ಕಣಕ್ಕೆ ಇಳಿಸಿದೆ. ಬಿಧೂರಿ ಪ್ರಸ್ತುತ ದೆಹಲಿಯ ವಿಧಾನಸಭೆಯಲ್ಲಿ ವಿಪಕ್ಷ ನಾಯಕ. ದಕ್ಷಿಣ ದೆಹಲಿ ವ್ಯಾಪ್ತಿಯಲ್ಲಿ ಬರುವ 10 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಗೆದ್ದಿರುವ ಏಕೈಕ ಬಿಜೆಪಿ ಶಾಸಕ. 

ಆಪ್‌ ಸೇನಾನಿಗಳು ಜೈಲಿಗೆ: ಉಡುಗಿದ ಸೇನೆಯ ಮಹಾದಂಡನಾಯಕನ ಜಂಘಾಬಲ..!

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ರಾಜಕಾರಣಕ್ಕೆ ಬಂದವರು. ರಾಷ್ಟ್ರೀಯ ಕಾಂಗ್ರೆಸ್ ಪಕ್ಷ,  ಪಕ್ಷೇತರ, ಜನತಾ ದಳ ಬಳಿಕ ಬಿಜೆಪಿಗೆ ಬಂದು ಶಾಸಕರಾಗಿ ಈಗ ವಿಪಕ್ಷ ನಾಯಕನಾಗಿದ್ದಾರೆ.

ಅದೇ ರೀತಿ ಆಮ್ ಆದ್ಮಿ ಪಕ್ಷ ಕೂಡ ಗುಜ್ಜರ್ ಸಮುದಾಯದ ನಾಯಕ ಹಾಲಿ ಶಾಸಕ ಸಹಿರಾಮ್ ಅವರನ್ನು ಕಣಕ್ಕೆ ಇಳಿಸಿದೆ. ಎರಡು ಬಾರಿ ಶಾಸಕರಾಗಿರುವ ಸಹಿರಾಮ್, ದಕ್ಷಿಣ ದೆಹಲಿ ಪಾಲಿಕೆಯ ಉಪ ಮೇಯರ್ ಕೂಡ ಆಗಿದ್ರು.   20 ಲಕ್ಷ ಮತದಾರರು ಇರುವ ದಕ್ಷಿಣ ದೆಹಲಿ ಕ್ಷೇತ್ರ 2019ರಲ್ಲಿ ಬಿಜೆಪಿ ಪಾಲಾಗಿತ್ತು. ದಿವಗಂತ ಅನಂತ್ ಕುಮಾರ್ ಅವರ ಶಿಷ್ಯ ರಮೇಶ್ ಬಿಧೂರಿ ಸಂಸದರಾಗಿದ್ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ - ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ