ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್‌ಗೆ ಚರ್ಚೆ ದೌರ್ಭಾಗ್ಯ: ಸಂಸದ ಬಿ.ವೈ.ರಾಘವೇಂದ್ರ ಆರೋಪ

By Kannadaprabha News  |  First Published Jul 2, 2023, 1:20 AM IST

ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್‌ ಪಡೆಯುವ ಬಗ್ಗೆ ಕಾಂಗ್ರೆಸ್‌ ಸರ್ಕಾರದಲ್ಲಿ ಚರ್ಚೆ ನಡೆಯುತ್ತಿದ್ದಂತೆ ಗೋ ಮಾಂಸ ಮಾರಾಟ, ಸಾಗಣೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ನಮ್ಮ ದೌರ್ಭಾಗ್ಯ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು.


ಶಿವಮೊಗ್ಗ (ಜು.02): ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್‌ ಪಡೆಯುವ ಬಗ್ಗೆ ಕಾಂಗ್ರೆಸ್‌ ಸರ್ಕಾರದಲ್ಲಿ ಚರ್ಚೆ ನಡೆಯುತ್ತಿದ್ದಂತೆ ಗೋ ಮಾಂಸ ಮಾರಾಟ, ಸಾಗಣೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ನಮ್ಮ ದೌರ್ಭಾಗ್ಯ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶುಕ್ರವಾರ ಶಿರಾಳಕೊಪ್ಪ ಸಮೀಪದ ಪುಣೇದಹಳ್ಳಿ ಬಳಿ ಗೋಮಾಂಸ ಸಿಕ್ಕಿದೆ. ಇದರ ಬಗ್ಗೆ ಗಲಾಟೆ ಆಗಿವೆ. ಒಂದು ಆಟೋದಲ್ಲಿ 2-3 ಕ್ವಿಂಟಲ್‌ನ​ಷ್ಟುಗೋ ಮಾಂಸ ಸಿಕ್ಕಿದೆ. ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಗೋಮಾಂಸದ ಬಗ್ಗೆ ಮಾಹಿತಿ ನೀಡಿದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. 

ಜೊತೆಗೆ ಅವಾಚ್ಯ ಶಬ್ಧಗಳಿಂದ ದೂಷಿಸುವ ಕೆಲಸ ಮಾಡಿದ್ದಾರೆ. ಠಾಣೆ ಮುಂದೆ ಹಲ್ಲೆ ಮಾಡಲು ಯತ್ನಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಈ ಘಟನೆಗೆ ಪ್ರಚೋದನೆ ನೀಡಿದ ವ್ಯಕ್ತಿಗಳ ಮೇಲೆ ತ್ವರಿತ ಕ್ರಮವಾಗಬೇಕು ಎಂದು ಒತ್ತಾಯಿಸಿದರು. ಕಾನೂನು ಎಲ್ಲರಿಗೂ ಒಂದೇ. ಎಲ್ಲರೂ ಈ ದೇಶದ ಕಾನೂನಿಗೆ ಗೌರವ ಕೊಡಬೇಕು. ಪೊಲೀಸರ ಸಮ್ಮುಖದಲ್ಲೇ ಹಲ್ಲೆ ಮಾಡುವ ಪ್ರಯತ್ನ ಸರಿಯಲ್ಲ. ನಮ್ಮನ್ನು ಜೀವನ ಪೂರ್ತಿ ಸಾಕುವ ಗೋವಿನ ರಕ್ಷಣೆ ಎಲ್ಲರ ಕರ್ತವ್ಯವಾಗಿದೆ. ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.

Latest Videos

undefined

ಯಾವುದೇ ಜವಾಬ್ದಾರಿಯಾದರೂ ಒಕ್ಕಲಿಗರು ಸಮರ್ಥವಾಗಿ ನಿಬಾಯಿಸುವರು: ಶಾಸಕ ಟಿ.ಡಿ.ರಾಜೇಗೌಡ

ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲೂ ಕಾಂಗ್ರೆಸ್‌ ಸರ್ಕಾರ ಅದೇ ರೀತಿ ನಡೆದುಕೊಳ್ಳುತ್ತಿದೆ. ಬಿಜೆಪಿ ಸರ್ಕಾರವಿದ್ದಾಗ ನಮ್ಮ ಪಕ್ಷದ ತತ್ವ ಸಿದ್ಧಾಂತವನ್ನು ಜೋಡಿಸಿರಲಿಲ್ಲ. ದೇಶ ಹಾಗೂ ಸ್ವಾತಂತ್ರ್ಯಕ್ಕಾಗಿ ತೊಡಗಿಸಿಕೊಂಡವರ ಪಠ್ಯ ಜೋಡಿಸಲಾಗಿತ್ತು. ಅದನ್ನು ತೆಗೆಯುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡಿದ್ದಾರೆ. ಆ ಮೂಲಕ ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ ಪಠ್ಯಪುಸ್ತಕದಲ್ಲೂ ರಾಜಕೀಯ ಮಾಡಲು ಹೊರಟಿತಿದೆ ಎಂದು ಟೀಕಿಸಿದರು.

ಕಲ್ಲುಕುಟುಗರಿಗೆ ಕೆಲಸ ಮಾಡಲು ಪರವಾನಗಿ ನೀಡಿ: ಸಂಸದ ಮುನಿಸ್ವಾಮಿ ಆಗ್ರಹ

ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಾಸ್‌ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಮನೆ ಮುಂಭಾಗ ಇರುವ ತುಳಸಿಕಟ್ಟೆಗಳು ಶಿಲುಬೆಗಳಾಗಿ ಪರಿವರ್ತನೆಯಾಗುತ್ತಿದೆ. ಯಾರೇ ಯಾವ ಧರ್ಮಕ್ಕೆ ಹೋದರೂ ಅದಕ್ಕೆ ನಮ್ಮ ವೈಯಕ್ತಿಕ ವಿರೋಧ ಇಲ್ಲ. ಆದರೆ, ಬಲವಂತವಾಗಿ ಮತಾಂತರ ಮಾಡುವುದನ್ನ ವಿರೋಧಿಸಿ ನಮ್ಮ ಸರ್ಕಾರ ಕಾಯ್ದೆ ತಂದಿತ್ತು. ಅದನ್ನು ಕೂಡ ವೋಟಿಗಾಗಿ ಮರು ಪರಿಶೀಲನೆ ಮಾಡಲು ನಿರ್ಧಾರ ಮಾಡ್ತಿದ್ದಾರೆ. ಇದಕ್ಕೆಲ್ಲಾ ಉತ್ತರ ತೆರಬೇಕಾದ ದಿನ ಬಹಳ ದೂರ ಇಲ್ಲ
- ಬಿ.ವೈ.​ರಾ​ಘ​ವೇಂದ್ರ, ಸಂಸ​ದ

click me!