* ಮಾನೆ ವಿಧಾನಸಭೆಗೆ ಆಯ್ಕೆಯಾಗುತ್ತಿದ್ದಂತೆ ಇತ್ತ ಲಾಬಿಯೂ ಜೋರು
* ವಿಧಾನಪರಿಷತ್ತಿನ 2 ಸ್ಥಾನಗಳ ಅವಧಿ 2022ರ ಜನವರಿಯಲ್ಲಿ ಮುಕ್ತಾಯ
* ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ
ಶಿವಾನಂದ ಗೊಂಬಿ
ಹುಬ್ಬಳ್ಳಿ(ನ.04): ಇತ್ತೀಚೆಗೆ ನಡೆದ ಹಾನಗಲ್ಲ ಉಪಚುನಾವಣೆಯಲ್ಲಿ ಶ್ರೀನಿವಾಸ ಮಾನೆ(Srinivas Mane) ಭರ್ಜರಿ ಜಯ ಸಾಧಿಸುತ್ತಿದ್ದಂತೆ ಹಿಂದೆ ಅವರು ಪ್ರತಿನಿಧಿಸುತ್ತಿದ್ದ ವಿಧಾನಪರಿಷತ್(Vidhanaparishat) ಸ್ಥಾನಕ್ಕೆ ತೀವ್ರ ಪೈಪೋಟಿ ಹೆಚ್ಚಿದೆ.
undefined
ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನಪರಿಷತ್ತಿನ 2 ಸ್ಥಾನಗಳ ಅವಧಿ 2022ರ ಜನವರಿಯಲ್ಲಿ ಮುಕ್ತಾಯವಾಗಲಿದೆ. ಅವಿಭಜಿತ ಧಾರವಾಡ(Dharwad) ಜಿಲ್ಲೆ (ಹಾವೇರಿ(Haveri), ಧಾರವಾಡ, ಗದಗ(Gadag) ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ಪರಿಷತ್ ಸ್ಥಾನವಿದು. ಸದ್ಯ ಬಿಜೆಪಿಯಿಂದ(BJP) ಪ್ರದೀಪ ಶೆಟ್ಟರ್(Pradeep Shettar) ಹಾಗೂ ಕಾಂಗ್ರೆಸ್‌ನಿಂದ(Congress) ಶ್ರೀನಿವಾಸ ಮಾನೆ ಸದಸ್ಯರಾಗಿದ್ದರು. ಇದೀಗ ಎರಡೂ ಕ್ಷೇತ್ರಗಳ ಅವಧಿ ಮುಕ್ತಾಯವಾಗಲಿದೆ. ಕಾಂಗ್ರೆಸ್ಸಿನ ಮಾನೆ ಉತ್ತರಾಧಿಕಾರಿ ಯಾರು? ಎನ್ನುವ ಹಂತದಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತ ಸಾಗಿದೆ.
ಎರಡು ಸ್ಥಾನಗಳಿಗೆ ಆಯ್ಕೆ ಮಾಡಬೇಕಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ನವರು ಹೊಂದಾಣಿಕೆ ಮಾಡಿಕೊಂಡು ಎರಡೂ ಪಕ್ಷಗಳಿಂದ ಒಬ್ಬೊಬ್ಬರನ್ನೇ ಕಣಕ್ಕಿಳಿಸುವುದರಿಂದ ಎರಡೂ ಪಕ್ಷಗಳಲ್ಲಿ ಆಯ್ಕೆಯಾಗುವುದು ಖಚಿತ.
ಯಾರ್ಯಾರು?
ಮುಸ್ಲಿಂ(Muslim) ಸಮುದಾಯಕ್ಕೆ ಕೊಡಿ ಎಂಬ ಬೇಡಿಕೆಯನ್ನಿಟ್ಟುಕೊಂಡು ಕೆಲವರು ಈಗಿನಿಂದಲೇ ಪೈಪೋಟಿಗಿಳಿದಿದ್ದಾರೆ. ಅದರಲ್ಲೂ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರೆಂದರೆ ಮಾಜಿ ಸಚಿವ ಎ.ಎಂ. ಹಿಂಡಸಗೇರಿ. ಲೋಕಸಭಾ ಚುನಾವಣೆ(Loksabha Election) ವೇಳೆ ಸ್ವಲ್ಪದರಲ್ಲಿ ಟಿಕೆಟ್ ತಪ್ಪಿಸಿಕೊಂಡ, ಪ್ರೊ.ಐ.ಜಿ.ಸನದಿ ಅವರ ಪುತ್ರ ಶಾಕೀರ್ ಸನದಿ, ಪಶ್ಚಿಮ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಪರಾಭವಗೊಂಡ ಇಸ್ಮಾಯಿಲ್ ತಮಟಗಾರ, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರು ಧಾರವಾಡ ಜಿಲ್ಲೆಯಿಂದ ಪ್ರಯತ್ನಿಸುತ್ತಿದ್ದರೆ, ಹಾವೇರಿ ಜಿಲ್ಲೆಯಿಂದ ವಿಧಾನಪರಿಷತ್ ಮಾಜಿ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸಲೀಂ ಅಹ್ಮದ, ಐ.ಯು. ಪಠಾಣ, ಸುಬಾನಿ ಚುಡಿಗಾರ ಕೂಡ ಪ್ರಯತ್ನಿಸುತ್ತಿದ್ದಾರೆ.
Vidhan Parishat Election: ಬಿಜೆಪಿ, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆ ಕಸರತ್ತು
ಲಿಂಗಾಯತ(Lingayat) ಕೋಟಾದಿಂದ ಧಾರವಾಡದ ಶರಣಪ್ಪ ಕೊಟಗಿ ಸೇರಿದಂತೆ ಹಲವರು ಪ್ರಯತ್ನಿಸುತ್ತಿದ್ದರೆ, ಹಾವೇರಿ ಜಿಲ್ಲೆಯಿಂದ ಹಾನಗಲ್ಲ(Hanagal) ಟಿಕೆಟ್ ವಂಚಿತ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಬ್ಯಾಡಗಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನುಭವಿಸಿದ ಎಸ್.ಆರ್.ಪಾಟೀಲ ಪ್ರಯತ್ನಿಸುತ್ತಿದ್ದಾರೆ. ಇನ್ನೂ ಗದಗ ಜಿಲ್ಲೆಯ ಆನಂದ ಗಡ್ಡದೇವರಮಠ, ಸಚಿನ ಪಾಟೀಲ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಸೇರಿದಂತೆ ಹಲವರು ಟಿಕೆಟ್ ಬೇಡಿಕೆ ಇಟ್ಟಿದ್ದಾರೆ.
ಈ ಕ್ಷೇತ್ರದಿಂದ ಪರಿಶಿಷ್ಟ ಜಾತಿಗೆ(Scheduled Caste) ಟಿಕೆಟ್ ನೀಡಿಯೇ ಇಲ್ಲ. ಹೀಗಾಗಿ, ಈ ಸಲ ನಮಗೆ ನೀಡಬೇಕೆಂಬ ಒತ್ತಡವೂ ಪರಿಶಿಷ್ಟ ಜಾತಿ ಸಮುದಾಯದವರಿಂದ ಕೇಳಿ ಬಂದಿದೆ. ಕೆಪಿಸಿಸಿ ಪರಿಶಿಷ್ಟ ಶಾಖೆಯ ಅಧ್ಯಕ್ಷ ಎಫ್.ಎಚ್. ಜಕ್ಕಪ್ಪನವರ ಕೂಡ ಪ್ರಯತ್ನ ನಡೆಸಿದ್ದಾರೆ. 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದರಲ್ಲಿ 2 ಸ್ಥಾನಗಳಿಗಾದರೂ ಪರಿಶಿಷ್ಟ ಜಾತಿಗೆ ನೀಡಬೇಕು. ಮೈಸೂರು(Mysuru) ಭಾಗದಲ್ಲಿ ಒಂದು ಸ್ಥಾನಕ್ಕೆ ಪರಿಶಿಷ್ಟ ಜಾತಿಗೆ ಅವಕಾಶ ಕೊಟ್ಟರೆ, ಉತ್ತರ ಕರ್ನಾಟಕ(North Karnataka) ಭಾಗದಲ್ಲಿ ಒಂದು ಸ್ಥಾನಕ್ಕೆ ಅವಕಾಶ ಕಲ್ಪಿಸಬೇಕು. ಬೆಳಗಾವಿ(Belagavi) ಹಾಗೂ ವಿಜಯಪುರ(Vijayapura) ಭಾಗದಲ್ಲಿ ಈಗಾಗಲೇ ಲಿಂಗಾಯತ ಸಮುದಾಯದವರು ಸದಸ್ಯರಾಗಿರುವುದರಿಂದ ಅವರಿಗೆ ಕೊಡಲಾಗುತ್ತದೆ. ಹೀಗಾಗಿ ಅವಿಭಜಿತ ಧಾರವಾಡ ಜಿಲ್ಲೆಯಿಂದ ನಡೆಯುವ ಚುನಾವಣೆಯಲ್ಲಿ ಎಸ್ಸಿಗೆ ಅವಕಾಶ ಕಲ್ಪಿಸಬೇಕೆಂಬ ಬೇಡಿಕೆ ಇಲ್ಲಿನವರದು.
ಕಾಂಗ್ರೆಸ್ ಎಂಎಲ್‌ಸಿ ಟಿಕೆಟ್ ಅರ್ಜಿ ಜತೆಗೆ 1 ಲಕ್ಷ ರು. ಡಿಡಿ ಕಡ್ಡಾಯ!
ಆಕಾಂಕ್ಷಿಗಳಿಂದ ಸೆ.30ರ ವರೆಗೆ ಅರ್ಜಿಯನ್ನು ಕಾಂಗ್ರೆಸ್ ಪಕ್ಷವೂ ಪಡೆದಿತ್ತು. ಬಳಿಕ ಹಾನಗಲ್ಲ ಚುನಾವಣೆ ಘೋಷಣೆಯಾಗಿದ್ದರಿಂದ ಇದೀಗ ಮತ್ತೆ ಅರ್ಜಿ ಆಹ್ವಾನಿಸಬೇಕು ಎಂಬ ಬೇಡಿಕೆ ಆಕಾಂಕ್ಷಿಗಳಿಂದ ಕೇಳಿ ಬಂದಿದೆ. ಈ ಸಂಬಂಧ ಕೆಪಿಸಿಸಿಗೆ ಕೆಲವರು ಮನವಿಯನ್ನೂ ಕೊಟ್ಟಿದ್ದುಂಟು. ಒಟ್ಟಿನಲ್ಲಿ ಈ ಸಲ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆದಿರುವುದಂತೂ ಸತ್ಯ. ಆದರೆ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!
ನಾನು ಹಾನಗಲ್ಲ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆಗ ಟಿಕೆಟ್ ಸಿಗಲಿಲ್ಲ. ಇದೀಗ ಸ್ಥಳೀಯ ಸಂಸ್ಥೆಯಿಂದ ಪರಿಷತ್‌ಗೆ ಚುನಾವಣೆ ಸನಿಹ ಇರುವ ಕಾರಣ ಅದರ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ತಿಳಿಸಿದ್ದಾರೆ.
ಈ ಕ್ಷೇತ್ರಕ್ಕೆ ಈವರೆಗೂ ಪರಿಶಿಷ್ಟ ಜಾತಿ ಅವರಿಗೆ ಅವಕಾಶ ಸಿಕ್ಕಿಲ್ಲ. ಈ ಕಾರಣದಿಂದ ಈ ಸಲವಾದರೂ ಎಸ್ಸಿ ಅಭ್ಯರ್ಥಿಗಳಿಗೆ(Candidates)ಅವಕಾಶ ಕಲ್ಪಿಸಬೇಕು. ಈ ಹಿನ್ನೆಲೆಯಲ್ಲಿ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಕೆಪಿಸಿಸಿ(KPCC) ಎಸ್ಸಿ ಘಟಕದ ಅಧ್ಯಕ್ಷ ಎಫ್.ಎಚ್.ಜಕ್ಕಪ್ಪನವರ ಹೇಳಿದ್ದಾರೆ.