ನಾನೇಕೆ ಬಿಜೆಪಿಯಿಂದ ದೂರವಾಗುತ್ತಿದ್ದೇನೆ..?

Published : Oct 05, 2018, 01:39 PM IST
ನಾನೇಕೆ ಬಿಜೆಪಿಯಿಂದ ದೂರವಾಗುತ್ತಿದ್ದೇನೆ..?

ಸಾರಾಂಶ

ನಾನೇಕೆ ಬಿಜೆಪಿಯಿಂದ ದೂರವಾಗುತ್ತಿದ್ದೇನೆ ಎನ್ನುವ ಬಗ್ಗೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರಂತೆ ಕಾಣಿಸುವ ಅಭಿನಂದನ್ ಪಾಟಕ್ ಇದೀಗ ಮನಬಿಚ್ಚಿ ಮಾತನಾಡಿದ್ದಾರೆ. 

ಲಕ್ನೋ :  ಪ್ರಧಾನಿ ನರೇಂದ್ರ ಮೋದಿ ಅವರಂತೆ ಇರುವ ಅಭಿನಂದನ್ ಪಾಟಕ್ ಅವರು ಇದೀಗ ತಮ್ಮ ಬೆಂಬಲವನ್ನು ಬಿಜೆಪಿಯಿಂದ ಹಿಂತೆಗೆದುಕೊಂಡು ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿದ್ದಾರೆ. 

ಅವರು ಇದೇ ವೇಳೆ ತಾವೇಕೆ ಬಿಜೆಪಿಯಿಂದ ದೂರ  ಉಳಿದೆ ಎನ್ನುವ ಬಗ್ಗೆ ಮನ ಬಿಚ್ಚಿ ಅಭಿನಂದನ್ ಪಾಟಕ್ ಮಾತನಾಡಿದ್ದು  ಉತ್ತರ ಪ್ರದೇಶದ ಗೋರಕ್ ಪುರ ಉಪ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾಗೂ ಅವರ ಪಕ್ಷಕ್ಕಾಗಿ ಮನೆ ಬಾಗಿಲಿಗೆ ತೆರಳಿ ಚುನಾವಣಾ ಪ್ರಚಾರವನ್ನು ಮಾಡಿದೆ ಆದರೆ ಪಕ್ಷ ಸೋಲನ್ನು ಅನುಭವಿಸಿತು. 

ಈ ವೇಳೆ ಜನರು ಸಾರ್ವಜನಿಕರ ಆಕ್ರೋಶವನ್ನು ಕಣ್ಣಾರೆ ಕಂಡಿದ್ದೇನೆ. ಸರ್ಕಾರ ವಿರುದ್ಧ ತೀವ್ರ ಅಸಮಾಧಾನ ಹೊಂದಿದ್ದಾರೆ ಎಂದು ಹೇಳಿದ್ದಾರೆ. 

ಚುನಾವಣಾ ಪ್ರಚಾರಕ್ಕೆ ತೆರಳಿದಾಗ ಅಚ್ಚೆ ದಿನ್ ಯಾವಾಗ ಬರುತ್ತದೆ ಎಂದು ಪ್ರಶ್ನೆ ಮಾಡುತ್ತಿದ್ದರು.  ಈ ನಿಟ್ಟಿನಲ್ಲಿ 2019ನೇ ಸಾಲಿನ ಚುನಾವಣೆಯಲ್ಲಿ ತಾವು ಬಿಜೆಪಿ ವಿರುದ್ಧ ಚುನಾವಣಾ ಪ್ರಚಾರವನ್ನು ಮಾಡಲು ನಿರ್ಧಾರ ಮಾಡಿದ್ದಾಗಿ ಹೇಳಿದ್ದಾರೆ. 

ಅಲ್ಲದೇ ಈಗಾಗಲೇ ಉತ್ತರ ಪ್ರದೇಶ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿದ್ದಾಗಿಯೂ ಕೂಡ ಅವರು ಹೇಳಿದ್ದಾರೆ. 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!