2ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸಿಗೋದಿಲ್ಲ ಈ ಎಲ್ಲಾ ಸೌಲಭ್ಯ..?

By Web DeskFirst Published Jan 24, 2019, 12:23 PM IST
Highlights

2ಕ್ಕಿಂತಲೂ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಾರಾ..? ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು ನಿಯಂತ್ರಣಕ್ಕೆ ಇಂತಹ ಕ್ರಮ ಕೈಗೊಳ್ಳಬೇಕು ಎಂದು ಯೋಗಗುರು ಬಾಬಾ ರಾಮದೇವ್ ಹೇಳಿದ್ದಾರೆ. 

ನವದೆಹಲಿ : ದೇಶದಲ್ಲಿ 2ಕ್ಕಿಂತಲೂ ಹೆಚ್ಚು ಮಕ್ಕಳಿರುವವರಿಗೆ ಮತದಾನದ ಹಕ್ಕು ನೀಡಬಾರದು ಎಂದು ಯೋಗಗುರು ಬಾಬಾ ರಾಮದೇವ್ ಹೇಳಿದ್ದಾರೆ.  ಅಲ್ಲದೇ ಚುನಾವಣೆ ನಿಲ್ಲುವ ಅವಕಾಶವನ್ನೂ ಕೂಡ ನೀಡಬಾರದು ಎಂದು ಹೇಳಿದ್ದಾರೆ. 

2ಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಂಡವರಿಗೆ ಮತದಾನದ ಹಕ್ಕು, ಸರ್ಕಾರಿ ಉದ್ಯೋಗ,  ಸರ್ಕಾರಿ ಆಸ್ಪತ್ರೆ ಸೌಲಭ್ಯ,  ಸರ್ಕಾರಿ ಶಾಲೆ ಬಳಕೆಗೂ ಕೂಡ ಅವಕಾಶ ನೀಡಬಾರದು. ಇದರಿಂದ ಜನಸಂಖ್ಯೆ ನಿಯಂತ್ರಣ ಸಾಧ್ಯ ಎಂದು ಪತಂಜಲಿ ಮುಖ್ಯಸ್ಥ ರಾಮದೇವ್ ಹೇಳಿದ್ದಾರೆ. 

ಅಲಿಘರ್ ನಲ್ಲಿ ನಡೆದ ಪತಂಜಲಿ ಪರಿಧಾನ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. 

ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣ ಮಾಡುವ ಅಗತ್ಯವಿದೆ.  ಹಿಂದೂ ಹಾಗೂ ಮುಸ್ಲಿಂ ಯಾರೇ 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಇಂತಹ ಸೌಲಭ್ಯ ನೀಡಬಾರದು ಎಂದಿದ್ದಾರೆ. 

ಕಳೆದ ವರ್ಷವೂ ಕೂಡ ಯೋಗಗುರು ಇದೇ ರೀತಿಯಾದ ಹೇಳಿಕೆಯೊಂದನ್ನು ನೀಡಿದ್ದರು.  ಇದೀಗ ಮತ್ತೊಮ್ಮೆ ಜನಸಂಖ್ಯೆ ನಿಯಂತ್ರಣಕ್ಕಾಗಿ ಇಂತಹ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. 

click me!